ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಬಿವೈಡಿ ತನ್ನ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.99 ಲಕ್ಷವಾಗಿದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಆಸಕ್ತ ಖರೀದಿದಾರರು ಈಗ 50,000 ರೂಪಾಯಿಗಳನ್ನು ಪಾವತಿಸಿ ಬುಕ್ ಮಾಡಬಹುದು. ಮೊದಲ 500 ಯುನಿಟ್‌ಗಳ ವಿತರಣೆಯು ಜನವರಿ 2023 ರಿಂದ ಪ್ರಾರಂಭವಾಗಲಿದೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ. ಬಿವೈಡಿ ಕಂಪನಿಯು ಈ ಹೊಸ ಎಸ್‍ಯುವಿಗಾಗಿ 1,500 ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಚೀನಾದ ತಯಾರಕರು ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. 3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಇ6 ಎಂಪಿವಿಯ ನಂತರ ಬ್ರ್ಯಾಂಡ್‌ನ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಇದು SKD (ಸೆಮಿ-ನಾಕ್ಡ್ ಡೌನ್) ಮಾರ್ಗದ ಮೂಲಕ ಬರುತ್ತದೆ ಮತ್ತು ಚೆನ್ನೈ ಬಳಿಯ ಬ್ರ್ಯಾಂಡ್‌ನ ಶ್ರೀಪೆರಂಬದೂರ್ ಮೂಲದ ಸ್ಥಾವರದಲ್ಲಿ ಜೋಡಿಸಲಾಗಿದೆ. ಇದು 60kWh ಬಿವೈಡಿ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ ARAI- ಪ್ರಮಾಣೀಕರಿಸಿದ ಪ್ರಕಾರ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಈ ಎಂಜಿನ್ 201 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಅನ್ನು 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ತನ್ನ ದೊಡ್ಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಇದದರ ಜೊತೆಗೆ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಸೇರಿದಂತೆ 4 ವಿಭಿನ್ನ ಬಾಹ್ಯ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ನಿಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಬರುತ್ತದೆ, ಇದನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್ ಅಥವಾ ಪೋಟ್ರೇಟ್ ಓರಿಯಂಟೇಶನ್‌ಗೆ ತಿರುಗಿಸಬಹುದು. ಮುಂಬರುವ ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿನ ಇತರ ಗಮನಾರ್ಹ ವೈಶಿಷ್ಟ್ಯಗಳು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಹೊಂದಿದೆ,

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಇದರೊಂದಿಗೆ ಡಿಜಿಟಲ್ ಡ್ರೈವರ್ಸ್ ಡಿಸ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, 8-ಸ್ಪೀಕರ್ ಆಡಿಯೋ ಸಿಸ್ಟಮ್, ಪನೋರಮಿಕ್ ಸನ್‌ರೂಫ್, CN95 ಏರ್ ಫಿಲ್ಟರ್, ವಾಯ್ಸ್ ಕಂಟ್ರೋಲ್, ಹಿಂಭಾಗದ AC ವೆಂಟ್ ಗಳು ಮತ್ತು ಇನ್ನಷ್ಟು.ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಈ ವೈಶಿಷ್ಟ್ಯಗಳ ಜೊತೆಗೆ, ಈ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಲೆವೆಲ್-2 ಆಟೋನೊಮಸ್ ಡ್ರೈವಿಂಗ್ ಸಿಸ್ಟಂ ಅನ್ನು ಹೊಂದಿದೆ. ಈ ಆಕ್ಟಿವ್ ಸೇಫ್ಟಿ ಸಿಸ್ಟಂ ಮತ್ತು ಗೋ ಫಂಕ್ಷನ್‌ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಫ್‌ಸಿಡಬ್ಲ್ಯೂ, ಲೇನ್ ಕೀಪಿಂಗ್ ಅಸಿಸ್ಟ್, ಡೋರ್ ಓಪನ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ರಿಯರ್ ಕ್ರಾಸ್-ಟ್ರಾಫಿಕ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಪ್ರಸ್ತುತ, ಭಾರತದಲ್ಲಿ ಬಿವೈಡಿಗಾಗಿ 24 ಶೋರೂಮ್‌ಗಳು 21 ನಗರಗಳಲ್ಲಿವೆ. ಇದಲ್ಲದೆ, ವಾಹನ ತಯಾರಕರು 2023ರ ಅಂತ್ಯದ ವೇಳೆಗೆ ಕನಿಷ್ಠ 53 ಶೋರೂಮ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದಾರೆ. ಅದರ ಜೊತೆಗೆ, ಕಂಪನಿಯು 2023 ರಲ್ಲಿ 15,000 ಯುನಿಟ್ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಇನ್ನು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಯು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ.

ಭಾರತದಲ್ಲಿ ಗರಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಬಿಡುಗಡೆಗೊಳಿಸಿದ ಚೀನಾ ಕಂಪನಿ: 521 ಕಿ.ಮೀ ಮೈಲೇಜ್

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಇದಲ್ಲದೆ, ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಯ ಬಿಡುಗಡೆಯು ಭಾರತದಲ್ಲಿ ಇವಿಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಾವು ನಿರೀಕ್ಷಿಸುತ್ತೇವೆ ವೈಶಿಷ್ಟ್ಯ-ಲೋಡ್ ಮತ್ತು ಆಕರ್ಷಕವಾಗಿ ಕಾಣುವ ಎಲೆಕ್ಟ್ರಿಕ್ಎಸ್‍ಯುವಿ ಆಗಿದ್ದರೂ, ಯಶಸ್ಸು ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ.

Most Read Articles

Kannada
English summary
New byd atto 3 electric suv launched range details
Story first published: Monday, November 14, 2022, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X