ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಇಟಲಿ ಮೂಲದ ಐಷಾರಾಮಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ (Lamborghini) ತನ್ನ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ (Lamborghini Huracán EVO Fluo Capsule ) ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಐದು ಹೊಸ ಬಣ್ಣಗಳ ಆಯ್ಕೆಗಳು ಮತ್ತು ಒಳಾಂಗಣಕ್ಕೆ ಕೆಲವು ನವೀಕರಣಗಳೊಂದಿಗೆ ನೀಡಲಾಗುವುದು. ಈ ಹೊಸ ಮಾದರಿಯು ವರ್ಡೆ ಶಾಕ್ (ಗ್ರೀನ್), ಅರಾನ್ಸಿಯೊ ಲಿವ್ರಿಯಾ (ಆರೇಂಜ್), ಅರಾನ್ಸಿಯೊ ಡಾಕ್ (ಆರೆಂಜ್‌ನ ಇನ್ನೊಂದು ಶೇಡ್), ಸೆಲೆಸ್ಟ್ ಫೆಡ್ರಾ (ಬ್ಲೂ), ಮತ್ತು ಜಿಯಾಲೊ ಕ್ಲಾರಸ್ (ಯೆಲ್ಲೋ) ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಮುಂಭಾಗದ ಬಂಪರ್ ಮತ್ತು ಸೈಡ್ ಸ್ಕರ್ಟ್‌ಗಳು, ಆಡ್ ಪರ್ಸನಮ್ ಪ್ರೋಗ್ರಾಂಗಳನ್ನು ಒಳಗೊಂಡಿವೆ. ಈ ಹೊಸ ಕಾರು ಆಕರ್ಷಕ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಇನ್ನು ಮ್ಯಾಟ್ ಬ್ಲ್ಯಾಕ್ ಕಾಂಪೊನೆಂಟ್‌ಗಳ ವಿವರಗಳನ್ನು ಹೊಸ ಫ್ಲೂ ಬಣ್ಣಗಳಲ್ಲಿ ಆಯ್ಕೆಮಾಡಲಾಗಿದೆ, ಉದಾಹರಣೆಗೆ ಬ್ಲ್ಯಾಕ್ ವಿಂಗ್ ಮೀರರ್ಸ್ ಮೇಲೆ ಬಣ್ಣದ ಲೈನ್ ಮತ್ತು ಹಿಂಭಾಗದ ಸ್ಪ್ಲಿಟರ್‌ನಲ್ಲಿ ವರ್ಟಿಕಲ್ ಬಣ್ಣದ ಲೈಣ್ ಗಳು, ಕಾರಿಗೆ ಸ್ಪೋರ್ಟಿ ಮತ್ತು ಗ್ಲಾಮರಸ್ ಲುಕ್ ಅನ್ನು ನೀಡಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಭಾರತದ ಮೊದಲ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರನ್ನು ವಿತರಿಸಲಾಗಿದೆ. ಪ್ರೇಮಿಗಳ ದಿನದಂದು ಈ ವಿಶೇಷವಾದ ಇಟಾಲಿಯನ್ ಸೂಪರ್‌ಕಾರ್ ತನ್ನ ಪ್ರೀತಿಯ ಮಗಳಿಗೆ ತಂದೆಯಿಂದ ಉಡುಗೊರೆಯಾಗಿ ನೀಡಿದ್ದಾರೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರಿನಲ್ಲಿ 5.2-ಲೀಟರ್ V10 ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 631 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಇನ್ನು ಸೂಪರ್‌ಕಾರ್ ಕೇವಲ 2.9 ಸೆಕೆಂಡ್‌ಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳುತ್ತದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಇಂಟಿರಿಯರ್ ನಲ್ಲಿ, ಹೊಸ ಸ್ಪೋರ್ಟ್ಸ್ ಸೀಟುಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಆಯ್ಕೆಯನ್ನು ನೀಡಲಾಗಿದೆ. ಲೆದರ್ ಯುನಿಕಲರ್. ಸ್ಟಾರ್ಟ್ & ಸ್ಟಾಪ್ ಬಟನ್ ಕವರ್ ಮತ್ತು ಹೆಡ್‌ರೆಸ್ಟ್‌ನಲ್ಲಿ ಲ್ಯಾಂಬೊರ್ಗಿನಿ ಶೀಲ್ಡ್ ಅನ್ನು ಬಾಹ್ಯ ಟೋನ್‌ಗಳಿಗೆ ಹೊಂದಿಕೆಯಾಗುವ ಬಣ್ಣದಲ್ಲಿ ಫಿನಿಶಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಲ್ಯಾಂಬೊರ್ಗಿನಿ ಇಂಡಿಯಾದ ಮುಖ್ಯಸ್ಥರಾದ ಶರದ್ ಅಗರ್ವಾಲ್ ಅವರು ಮಾತನಾಡಿ, ನಮ್ಮ V10 ಸೂಪರ್ ಸ್ಪೋರ್ಟ್ಸ್ ಕಾರನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಉತ್ಸುಕರ ಮತ್ತು ಉತ್ತಮ ರೋಡ್ ಉಪಸ್ಥಿತಿಯನ್ನು ಕೂಡ ಹೊಂದಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಹುರಾಕನ್ ಸರಣಿಯು ನಮ್ಮ ಗ್ರಾಹಕರ ವಿಭಾಗದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿದೆ.ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಸೇರ್ಪಡೆಯೊಂದಿಗೆ, ಇದು ನಮ್ಮ ಗ್ರಾಹಕರಿಗೆ ಲ್ಯಾಂಬೊರ್ಗಿನಿಯಲ್ಲಿ ಕಸ್ಟಮೈಸ್ ಮಾಡಲು ಮತ್ತು ಸ್ಟಾಂಪ್ ಮಾಡಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಒಟ್ಟಾರೆಯಾಗಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಟಾಲಿಯನ್ ಸೂಪರ್‌ಕಾರ್ ಆಗಿದ್ದು, ನೋಡುಗರನ್ನು ಗಮನಸೆಳೆಯುವಂತಹ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಪವರ್ ಫುಲ್ ಎಂಜಿನ್ ನೊಂದಿಗೆ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಲ್ಯಾಂಬೊರ್ಗಿನಿ ಕಂಪನಿಯು ಕಳೆದ ವರ್ಷ 8,405 ಕಾರುಗಳನ್ನು ಮಾರಾಟ ಮಾಡಿದೆ ಎಂದು ಘೋಷಿಸಿದೆ. ಇದು ಅದರ 59 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಕಾರು ಮಾರಾಟವಾಗಿದೆ. 202ರ ಕಾರು ಮಾರಾಟಕ್ಕೆ ಹೋಲಿಸಿದರೆ ಶೇ.13 ರಷ್ಟು ಬೆಳವಣಿಗೆಯಾಗಿದೆ, ಉರುಸ್ ಎಸ್‍ಯುವಿ ಲ್ಯಾಂಬೊರ್ಗಿನಿಯ ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ಮಾದರಿಯಾಗಿ ಉಳಿದಿದೆ. ಕಾರು ತಯಾರಕ ಸಂಸ್ಥೆಯು ಕಳೆದ ವರ್ಷ 5,021 ಯುನಿಟ್ ಉರುಸ್‌ಗಳನ್ನು ಮಾರಾಟ ಮಾಡಿದೆ. 2,586 ಯುನಿಟ್‌ಗಳೊಂದಿಗೆ ಹುರಾಕನ್ ಲ್ಯಾಂಬೊರ್ಗಿನಿಯ ಎರಡನೇ ಅತ್ಯುತ್ತಮ ಮಾರಾಟವಾಗಿದೆ ಮತ್ತು ಅವೆಂಟಡಾರ್ ವಿ12 ಮಾದರಿಯ 798 ಯುನಿಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಭಾರತದಲ್ಲಿ ಲ್ಯಾಂಬೊರ್ಗಿನಿಯು ಕಳೆದ ವರ್ಷ 100 ನೇ ಉರುಸ್ ಎಸ್‍ಯುವಿಯನ್ನು ವಿತರಿಸಿತು, ಭಾರತದಲ್ಲಿ Huracan Evo RWD Spyder, Huracan STO, Urus Pearl Capsule ಮತ್ತು Urus Graphite Capsule ಕಾರುಗಳು ಬಿಡುಗಡೆಯಾದಾಗಿನಿಂದ ಭಾರತದಲ್ಲಿ 300 ಯುನಿಟ್‌ಗಳ ಸಂಚಿತ ಮಾರಾಟದ ಮೈಲಿಗಲ್ಲನ್ನು ಆಚರಿಸಿತು. ವರದಿಗಳ ಪ್ರಕಾರ, ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಜಿಟಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರು 4 ಸೀಟರ್ ಆಗಿರಲಿದೆ. ಈ ಮಾದರಿಯನ್ನು ಅಭಿವೃದ್ಧಿಪಡಿಸಲು ಪೋರ್ಷೆ ಕಂಪನಿಯು ಲ್ಯಾಂಬೊರ್ಗಿನಿ ಕಂಪನಿಗೆ ನೆರವಾಗುತ್ತದೆ.

ಭಾರತದಲ್ಲಿ ಹೊಸ Lamborghini Huracan EVO Fluo Capsule ಕಾರು ಬಿಡುಗಡೆ

ಕಂಪನಿಯು ತನ್ನ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಾಗಿ ಪರಿವರ್ತಿಸಲಿದೆ ಎಂದು ಹೇಳಲಾಗಿದೆ. ಲ್ಯಾಂಬೊರ್ಗಿನಿ ಕಂಪನಿ ಸಿಇಒ ಸ್ಟೀಫನ್ ವಿಂಕೆಲ್‌ಮನ್ ರವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಮೊದಲ ಎಲೆಕ್ಟ್ರಿಕ್ ಲ್ಯಾಂಬೊರ್ಗಿನಿ ಕಾರ್ ಅನ್ನು 2027 ಅಥವಾ 2028 ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ,

Most Read Articles

Kannada
English summary
New lamborghini huracan evo fluo capsule launched design features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X