Just In
- 1 min ago
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- 50 min ago
ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!
- 1 hr ago
ಟಾಟಾ ನೆಕ್ಸಾನ್ಗೆ ಸೆಡ್ಡು ಹೊಡೆಯಲು ಹೊಸ ನವೀಕರಣಗಳೊಂದಿಗೆ ಹ್ಯುಂಡೈ ವೆನ್ಯೂ ಬಿಡುಗಡೆ
- 2 hrs ago
ಭಾರತದಲ್ಲಿ ಭಾರೀ ವೇಗವಾಗಿ ಮುನ್ನುಗುತ್ತಿದೆ ಟಾಟಾ.. ನಂಬರ್ 1 ಆಗುತ್ತಾ?
Don't Miss!
- Movies
ರಾಜ್ ಬಿ ಶೆಟ್ಟಿಯ 'ಬಿಗ್ ಬಜೆಟ್' ಸಿನಿಮಾ 90% ಮುಗಿದೇ ಹೋಗಿದೆಯಂತೆ:'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?
- News
GATE Exam 2023: ದೇಶದ 29 ನಗರಗಳಲ್ಲಿ ಪರೀಕ್ಷೆ, ವೇಳಾಪಟ್ಟಿ ಮಾಹಿತಿ ತಿಳಿಯಿರಿ
- Technology
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Sports
ಸರಣಿ ಗೆದ್ದ ಬಳಿಕ ನಾಯಕನ ಮಾತು: ಯುವ ಆಟಗಾರರ ಪ್ರದರ್ಶನಕ್ಕೆ ಹಾರ್ದಿಕ್ ವಿಶೇಷ ಮೆಚ್ಚುಗೆ
- Finance
Tax Regime: ಹಳೆ ತೆರಿಗೆ ಪದ್ಧತಿ Vs ಹೊಸ ತೆರಿಗೆ ಪದ್ಧತಿ, 2023ರಲ್ಲಿ ಯಾವುದು ಬೆಸ್ಟ್?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೊಂದಾಗಿ ರಷ್ಯಾವನ್ನು ತೊರೆಯುತ್ತಿರುವ ಕಾರ್ ಕಂಪನಿಗಳು: ರೆನಾಲ್ಟ್, ನಿಸ್ಸಾನ್ ಆಯ್ತು ಇದೀಗ ಬೆಂಝ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ 'ಮರ್ಸಿಡಿಸ್ ಬೆಂಝ್' ರಷ್ಯಾದಲ್ಲಿ ತನ್ನ ವ್ಯಾಪಾರ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯನ್ನು ಹೊಂದಿರುವ ರಷ್ಯಾದಲ್ಲಿ ನಿಸ್ಸಾನ್, ರೆನಾಲ್ಟ್ ಮತ್ತು ಟೊಯೋಟಾ ನಂತರ ಮರ್ಸಿಡಿಸ್-ಬೆಂಝ್ ಆ ದೇಶಕ್ಕೆ ಹೋದ ನಾಲ್ಕನೇ ಬೃಹತ್ ಕಂಪನಿಯಾಗಿದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಕಳೆದ ವರ್ಷಕ್ಕಿಂತಲೂ ಈ ವರ್ಷ ವ್ಯಾಪಾರದಲ್ಲಿ ಕಂಪನಿಯು ಭಾರೀ ಹಿನ್ನಡೆ ಅನುಭವಿಸಿದೆ.

ಈ ಹಿನ್ನೆಲೆಯಲ್ಲಿ ಮರ್ಸಿಡಿಸ್-ಬೆಂಝ್ ಸ್ಥಳೀಯ ಹೂಡಿಕೆದಾರರಿಗೆ ಮಾಸ್ಕೋ ಬಳಿಯ ಕಂಪನಿಯ ಕಾರ್ಖಾನೆ ಸೇರಿದಂತೆ ರಷ್ಯಾದಲ್ಲಿ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಕಂಪನಿ ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಸುಮಾರು 2 ಬಿಲಿಯನ್ ಯೂರೋ ನಷ್ಟವನ್ನು ಎದುರಿಸಬೇಕಾಗುತ್ತದೆ.

ಕಂಪನಿಯು ತನ್ನ ರಷ್ಯಾದ ಸ್ಥಾವರದಲ್ಲಿ Benz E-ಕ್ಲಾಸ್ ಸೆಡಾನ್ ಅನ್ನು ಉತ್ಪಾದಿಸುತ್ತದೆ. ಆದರೆ, ಈ ವರ್ಷದ ಮಾರ್ಚ್‌ನಿಂದ ಅಲ್ಲಿ ಉತ್ಪಾದನೆಯನ್ನೂ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಕಂಪನಿಯ ಈ ಕಾರ್ಖಾನೆಯಲ್ಲಿ 1,000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ.

ಇದೀಗ ಕಂಪನಿಯ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಅವರೂ ಕೆಲಸ ಕಳೆದುಕೊಂಡಿದ್ದಾರೆ. ಮಾರಾಟದಲ್ಲಿ ತೀವ್ರ ಕುಸಿತದಿಂದಾಗಿ ರಷ್ಯಾದಲ್ಲಿ ಕಂಪನಿಯ ಮಾರಾಟವೂ ತೀವ್ರವಾಗಿ ಕುಸಿದಿದೆ. ಕಂಪನಿಯು ಜನವರಿಯಿಂದ ಸೆಪ್ಟೆಂಬರ್ 2022 ರವರೆಗೆ ರಷ್ಯಾದಲ್ಲಿ ಕೇವಲ 9,558 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ.

ಕಳೆದ ವರ್ಷಕ್ಕಿಂತ ಈ ಮಾರಾಟವು ಶೇಕಡಾ 70 ರಷ್ಟು ಕಡಿಮೆಯಾಗಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಮುಂದಿನ ದಿನಗಳಲ್ಲಿ ಈ ಮಾರಾಟ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಕಂಪನಿಯು ತನ್ನ ಸ್ಥಳೀಯ ಅಂಗಸಂಸ್ಥೆಯಾದ Awodom ಗೆ ಮಾರಾಟ ಮಾಡುವುದಾಗಿ ಹೇಳಿದೆ. ರಷ್ಯಾದ ಗ್ರಾಹಕರು ತಮ್ಮ ದೇಶದಲ್ಲಿ ಮರ್ಸಿಡಿಸ್-ಬೆಂಝ್ ಕಾರುಗಳನ್ನು ಉತ್ಪಾದಿಸಲು ಬಯಸುತ್ತಾರೆ. ಆದರೆ ಕಂಪನಿಯು ಹಿಂದೇಟು ಹಾಕುತ್ತಿದ್ದು, ಕೇವಲ ಕೆಲ ಗ್ರಾಹಕರಿಗಾಗಿ ಮುಂದುವರಿಸಿದರೆ ಕಂಪನಿಗೆ ಭಾರೀ ನಷ್ಟವಾಗಲಿದೆ ಎಂದು ಹೇಳಿದೆ.

ಮರ್ಸಿಡಿಸ್-ಬೆಂಝ್ ಪ್ರಸ್ತುತ ರಷ್ಯಾದ ಟ್ರಕ್ ಕಂಪನಿ Kamaz ನಲ್ಲಿ 15% ಪಾಲನ್ನು ಹೊಂದಿದೆ, ಮುಂದಿನ ವರ್ಷ ಡೈಮ್ಲರ್ ಟ್ರಕ್ಸ್‌ಗೆ ಮಾರಾಟವಾಗುವ ನಿರೀಕ್ಷೆಯೂ ಇದೆ. ವಿಶ್ವ ಮಾರುಕಟ್ಟೆಯಲ್ಲಿ ಬಹಳ ಪ್ರಸಿದ್ಧವಾಗಿರುವ ಈ ಕಂಪನಿಯ ಐಷಾರಾಮಿ ಕಾರುಗಳು ಈ ಹಿಂದೆ ರಷ್ಯಾದಲ್ಲಿ ಉತ್ತಮ ಮಾರಾಟವನ್ನು ಹೊಂದಿದ್ದವು.

ಆದರೆ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ನಂತರ ಕಂಪನಿಯು ಹೆಚ್ಚು ನಷ್ಟವನ್ನು ಅನುಭವಿಸಬೇಕಾಯಿತು. ಯುದ್ಧದ ಪ್ರಭಾವ ರಷ್ಯಾದಲ್ಲಿನ ಎಲ್ಲಾ ವಲಯಗಳಿಗೂ ಆಘಾತ ನೀಡಿದೆ. ಅಲ್ಲಿನ ಬಹುತೇಕ ಎಲ್ಲಾ ರಂಗಗಳು ಸ್ಥಗಿತಗೊಂಡು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು.

ರೆನಾಲ್ಟ್ & ನಿಸ್ಸಾನ್‌ಗೂ ಇದೇ ಪರಿಸ್ಥಿತಿ
ಈ ತಿಂಗಳ ಆರಂಭದಲ್ಲಿ ರೆನಾಲ್ಟ್ ಕಂಪನಿಯು ರಷ್ಯಾದಲ್ಲಿ ತನ್ನ ವ್ಯವಹಾರವನ್ನು ನಿಲ್ಲಿಸಿತು. ಇದರ ಭಾಗವಾಗಿ, ಕಂಪನಿಯು ತನ್ನ ಸಂಪೂರ್ಣ ರಷ್ಯಾದ ವ್ಯವಹಾರವನ್ನು ಸರ್ಕಾರಿ ಸ್ವಾಮ್ಯದ NAMI ಗೆ ಮಾರಾಟ ಮಾಡಿತು.

ನಿಸ್ಸಾನ್ ಕಂಪನಿ ಕೂಡ ತನ್ನ ಎಲ್ಲಾ ವ್ಯವಹಾರಗಳನ್ನು ಕೇವಲ 1 ಯೂರೋ ($0.97)ಗೆ NAMI ಗೆ ಮಾರಾಟ ಮಾಡುತ್ತಿರುವುದಾಗಿ ಘೋಷಿಸುವ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಏಕೆಂದರೆ ಅದು ಅಷ್ಟೊತ್ತಿಗಾಗಲೇ ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು.

ಈ ಪ್ರಕ್ರಿಯೆಯಲ್ಲಿ ಕಂಪನಿಯು ಭಾರೀ ನಷ್ಟವನ್ನು ಅನುಭವಿಸಬೇಕಾಯಿತು. ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದರೆ ಕಂಪನಿಯು ಸುಮಾರು $ 687 ಮಿಲಿಯನ್ ನಷ್ಟವನ್ನು ಎದುರಿಸಬೇಕಾಗುತ್ತದೆ. ಇದರಿಂದ ಅಲ್ಲಿನ ನೌಕರರ ಮೇಲೂ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೆ ಕಂಪನಿಯು ರಷ್ಯಾ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕಂಪನಿಯು ತನ್ನ 2,000 ಉದ್ಯೋಗಿಗಳಿಗೆ 12 ತಿಂಗಳ ಉದ್ಯೋಗ ಭದ್ರತೆಯನ್ನು ನೀಡುತ್ತದೆ. ಈ ಮೂಲಕ ರಷ್ಯಾದಲ್ಲಿ ಕಂಪನಿಯನ್ನು ನಂಬಿಕೊಂಡಿದ್ದ ಕಾರ್ಮಿಕರಿಗೆ ಸದ್ಯಕ್ಕೆ ಕೈಹಿಡಿದರೂ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುವುದಂತೂ ಸತ್ಯ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪ್ರಾರಂಭವಾದ ತಕ್ಷಣ ಮರ್ಸಿಡಿಸ್-ಬೆಂಝ್ ಕಂಪನಿಯು ತನ್ನ ಉತ್ಪಾದನೆಯನ್ನು ನಿಲ್ಲಿಸಿತು. ಆದರೆ ಈಗ ಅದು ತನ್ನ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಿದ್ಧವಾಗಿದೆ. ಕಂಪನಿಗಳ ಅನುಕ್ರಮವಾಗಿ ರಷ್ಯಾದಲ್ಲಿ ತಮ್ಮ ವ್ಯವಹಾರಗಳನ್ನು ಮುಚ್ಚುವುದರಿಂದ ಕಂಪನಿಗಳು ಮತ್ತು ಕಾರ್ಮಿಕರು ಹೆಚ್ಚು ಬಳಲುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸುಧಾರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.