ಏನ್ ಗುರು... ಹೆಲಿಕಾಪ್ಟರ್‌ಗಿಂತ ದುಬಾರಿ 'ರೋಲ್ಸ್ ರಾಯ್ಸ್ ಫ್ಯಾಂಟಮ್'

ಹಲವು ದಶಕಗಳಿಂದ 'ರೋಲ್ಸ್ ರಾಯ್ಸ್' ಕಂಪನಿ ಐಷಾರಾಮಿ ಕಾರುಗಳ ತಯಾರಿಕೆಯಿಂದ ಸಾಕಷ್ಟು ಖ್ಯಾತಿಗಳಿಸಿದೆ. ವಿಶ್ವಾದ್ಯಂತ ಶ್ರೀಮಂತರ ಅಚ್ಚುಮೆಚ್ಚಿನ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ.

ಬ್ರಿಟಿಷ್ ಐಷಾರಾಮಿ ಕಾರ್ ಬ್ರಾಂಡ್ ಆಗಿರುವ 'ರೋಲ್ಸ್ ರಾಯ್ಸ್' ಹೊಸ ಫ್ಯಾಂಟಮ್ VIII ಆವೃತ್ತಿಯನ್ನು 2019ರಲ್ಲಿ ಪರಿಚಯಿಸಿತ್ತು. ಇದರ ಬೆಲೆಗೆ ಗ್ರಾಹಕ ಹೆಲಿಕಾಪ್ಟರ್‌ವೊಂದನ್ನು ಖರೀದಿಸಬಹುದು. ಫ್ಯಾಂಟಮ್ VIII ಬೆಲೆ ಬರೋಬ್ಬರಿ 10 ಕೋಟಿ ರೂ. ಇದೆ.

ಜನಪ್ರಿಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್ VIII ಎಕ್ಸ್‌ಟೆಂಡೆಡ್ ವೀಲ್ ಬೇಸ್ (EWB) ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಯಾವುದೇ ಕಸ್ಟಮ್ ಸೇರಿದಂತೆ ಹೆಚ್ಚುವರಿ ಶುಲ್ಕಗಳಿಲ್ಲದೆ ಮುಂಬೈ ಮಹಾನಗರಿಯಲ್ಲಿ ಈ ವಾಹನದ ಆನ್ ರೋಡ್ ಮೂಲ ಬೆಲೆ ಬರೋಬ್ಬರಿ 13.5 ಕೋಟಿ ರೂ. ಇದ್ದು, ಖರೀದಿಸಲು ತುಂಬಾ ದುಬಾರಿ ಎಂದು ಹೇಳಬಹುದು.

ಇತ್ತೀಚಿನ ನೂತನ ರೋಲ್ಸ್ ರಾಯ್ಸ್ ಫ್ಯಾಂಟಮ್ ಮಾದರಿ ಕಾರುಗಳು ಅಲ್ಯೂಮಿನಿಯಂ ಸ್ಪೇಸ್‌ಫ್ರೇಮ್ ಪ್ಲಾಟ್‌ಫಾರ್ಮ್ ಹೊಂದಿರುತ್ತವೆ. ಇದನ್ನು ರೋಲ್ಸ್ ರಾಯ್ಸ್ 'ಆರ್ಕಿಟೆಕ್ಚರ್ ಆಫ್ ಲಕ್ಸುರಿ' ಎಂದೇ ಬಿಂಬಿಸಲಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ 'ಫ್ಯಾಂಟಮ್ VIII' ಶೇ30 ಹಗುರವಾಗಿದ್ದು, ಇದು ಈವರೆಗಿನ ಅತಿದೊಡ್ಡ ರೋಲ್ಸ್ ರಾಯ್ಸ್‌ ಕಾರುಗಳಲ್ಲಿ ಒಂದಾಗಿದೆ. ಆದರೆ, ಹಳೆಯ ಆವೃತ್ತಿಗಳಿಗಿಂತ 77 ಎಂಎಂ ಚಿಕ್ಕದಾಗಿದ್ದು, 8 ಎಂಎಂ ಎತ್ತರ ಹಾಗೂ 29 ಎಂಎಂ ಅಗಲವಿದೆ.

'ರೋಲ್ಸ್ ರಾಯ್ಸ್ ಫ್ಯಾಂಟಮ್ VIII' ಕಾರಿಗೆ ಉತ್ತಮ ಬೇಡಿಕೆ ಇದ್ದು, ಅದರಂತೆ ದೊಡ್ಡದಾದ 24-ಸ್ಲಾಟ್ ಕ್ರೋಮ್ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಜೊತೆಗೆ ಎಲ್‌ಇಡಿ ಡಿಆರ್‌ಎಲ್‌ ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್‌ ಅನ್ನು ಹೊಂದಿದೆ. ಅಲ್ಲದೆ, ಡ್ಯುಯಲ್-ಟೋನ್ ಶೇಡ್ ವಿನ್ಯಾಸದೊಂದಿಗೆ ಅದ್ಭುತವಾಗಿ ಕಾಣುತ್ತದೆ. ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಐಷಾರಾಮಿ ಹಡಗಿನಲ್ಲಿ ಪ್ರಯಾಣಿಸಿದ ಅನುಭವಾಗುತ್ತದೆ.

ಈ ಕಾರು ಸೌಂಡ್ ಇನ್ಸುಲೇಷನ್ ಅನ್ನು ಹೊಂದಿದ್ದು, ಇದನ್ನು ವಿಶ್ವದ ಅತ್ಯಂತ ಸೈಲೆಂಟ್ ವಾಹನ ಎಂದೇ ಹೇಳಲಾಗುತ್ತದೆ. ಕಾರಿನ ಪ್ರತಿ ವಿಂಡೋ ಮೇಲೆ 6 ಎಂಎಂ ಡಬಲ್-ಲೇಯರ್ಡ್ ಸೌಂಡ್ ಪ್ರೊಫ್ ಅನ್ನು ನೀಡಲಾಗಿದೆ. ಈ ದುಬಾರಿ ಐಷಾರಾಮಿ ಕಾರು 22-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. 'ಫ್ಯಾಂಟಮ್ VIII' 100-ಲೀಟರ್ ಇಂಧನ ಟ್ಯಾಂಕ್‌ ಹೊಂದಿದ್ದು, 1 ಲೀ.ಗೆ ಸುಮಾರು 9.8 ಕಿ.ಮೀ ಮೈಲೇಜ್ ನೀಡುತ್ತದೆ. ಒಂದು ಬಾರಿ ಫುಲ್ ಟ್ಯಾಂಕ್‌ ಮಾಡಿದರೆ ಸುಮಾರು 1,000 ಕಿ.ಮೀ ಕ್ರಮಿಸಬಹುದು.

ಈ ಐಷಾರಾಮಿ ಕಾರಿನ ಹಿಂಬದಿಯ ಪ್ರಯಾಣಿಕ ಸೀಟ್ ಬಳಿ ಸ್ಕ್ರೀನ್‌ಗಳನ್ನು ನೀಡಲಾಗಿರುತ್ತದೆ. ಡೋರ್‌ಗಳಲ್ಲಿ ಛತ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ವಿದ್ಯುತ್ ಚಾಲಿತ ತೆರೆಯುವ ಹಾಗೂ ಮುಚ್ಚುವ ಡೋರ್‌ಗಳಿಂದ ವಿನ್ಯಾಸ ಅತ್ಯುನ್ನತವಾಗಿ ಮಾಡಲಾಗಿದೆ. ಆರಾಮದಾಯಕ ಆಸನಗಳು, ಕ್ಲೈಮೆಂಟ್ ಕಂಟ್ರೋಲ್ ಸೇರಿದಂತೆ ಇನ್ನೂ ವಿವಿಧ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ಈ 'ಫ್ಯಾಂಟಮ್ VIII' ಸಹ ಸ್ಟಾರ್‌ಲಿಟ್ ಹೆಡ್‌ಲೈನರ್‌ನೊಂದಿಗೆ ಬರುತ್ತದೆ. ಇದು ರೋಲ್ಸ್ ರಾಯ್ಸ್ ಸಿಗ್ನೇಚರ್ ಫೀಚರ್ ಎಂದೇ ಹೇಳಬಹುದು. ಆದರೆ, ಇದು ಖರೀದಿ ಮಾಡುವವರಿಗೆ ಆಯ್ಕೆ ಮಾತ್ರ ಆಗಿದೆ. ಹಿಂಭಾಗದ ಆರ್ಮ್‌ರೆಸ್ಟ್‌ನ ಕೆಳಗೆ 'ಷಾಂಪೇನ್ ಚಿಲ್ಲರ್' (ಸಣ್ಣ ರೆಫ್ರಿಜರೇಟರ್) ಇದ್ದು, ಎರಡು ಬಾಟೆಲ್ ಇಡಲು ಸಾಧ್ಯವಾಗುತ್ತದೆ. ಅಲ್ಲದೆ, ಖಾಸಗಿತನಕ್ಕಾಗಿ ಚಾಲಕ ಮತ್ತು ಪ್ರಯಾಣಿಕರ ಕ್ಯಾಬಿನ್ ನಡುವೆ ಡಿವೈಡರ್ ಕೂಡ ನೀಡಿರುವುದು ಮತ್ತೊಂದು ವಿಶೇಷತೆಯಾಗಿದೆ

ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರೀಸ್ VIII ಕಾರಿನ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, EWB ಸಾಮರ್ಥ್ಯದ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಎಂಜಿನ್ ಹೊಂದಿದ್ದು, ಇದು 563 Bhp & 900 Nmನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 8-ಸ್ಪೀಡ್ ಸ್ಯಾಟಲೈಟ್ ಅಟಾಚ್ಡ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಮೂಲಕ ವೀಲ್‌ಗಳಿಗೆ ಪವರ್ ಬೂಸ್ಟ್ ಮಾಡಲಾಗುತ್ತದೆ. ಈ ವಾಹನವು ಕೇವಲ 5.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಈ ರೋಲ್ಸ್ ರಾಯ್ಸ್ ಬ್ರ್ಯಾಂಡ್ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆಯನ್ನು ದಿನದಿಂದ ದಿನಕ್ಕೆ ಪಡೆದುಕೊಳ್ಳುತ್ತಿದೆ. 'ಫ್ಯಾಂಟಮ್ VIII' ಖರೀದಿಸುವ ಗ್ರಾಹಕರಿಗೆ ಕಂಪನಿಯು 24 ಗಂಟೆ ನೆರವಿನೊಂದಿಗೆ ನಾಲ್ಕು ವರ್ಷಗಳ ಸರ್ವಿಸ್ ಪ್ಯಾಕೇಜ್ ಹಾಗೂ ರೀಜನಲ್ ವಾರೆಂಟಿಯನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು.

Most Read Articles

Kannada
English summary
Rolls royce phantom more expensive than helicopter
Story first published: Tuesday, November 22, 2022, 14:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X