ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ಕಂಪನಿಯಾದ ಟೆಸ್ಲಾ, ತನ್ನ ಮೂಲ ಸ್ಥಳವಾದ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಯಶಸ್ವಿಯಾಗಿ ಮಾರಟ ಮಾಡುತ್ತಿದೆ. ಆದರೆ ಭಾರತಕ್ಕೆ ಲಗ್ಗೆಯಿಡಲು ಮಾತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ವಿಶ್ವದ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವು ಅತಿ ಪ್ರಮುಖ ದೇಶವಾಗಿ ಗುರುತಿಸಿಕೊಂಡಿದ್ದು, ಟೆಸ್ಲಾ ಕೂಡ ತನ್ನ ವ್ಯಾಪಾರವನ್ನು ಭಾರತದಲ್ಲಿ ವಿಸ್ತರಿಸಲು ಯೋಜನೆ ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಟೆಸ್ಲಾ ಕಂಪನಿಯ ಪ್ರಮುಖರು ಭಾರತಕ್ಕೆ ಭೇಟಿ ನೀಡಿದ್ದು, ಇಲ್ಲಿನ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟಿಹಾಕಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಈ ನಡುವೆಯೂ ಹಲವರಲ್ಲಿ ಟೆಸ್ಲಾ ಭಾರತಕ್ಕೆ ಬರುತ್ತದೆಯೇ ಎಂಬ ಗೊಂದಲ ಕಾಡುತ್ತಿದೆ. ಇದಕ್ಕೆ ಕಾರಣ ಟೆಸ್ಲಾ ಮತ್ತು ಕೇಂದ್ರ ಸರ್ಕಾರದ ನಡುವಿನ ಅಂತ್ಯಗೊಳ್ಳದ ತೆರಿಗೆ ಒಪ್ಪಂದ. ಹೌದು.. ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಆಮದು ಮಾಡಿ ಮಾರಾಟ ಮಾಡಬೇಕೆಂದು ಬಯಸುತ್ತಿದೆ. ಆದರೆ ವಿದೇಶದಿಂದ ಆಮದಾಗುವ ಕಾರುಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಇದನ್ನು ಕಡಿಮೆ ಮಾಡಲು ಟೆಸ್ಲಾ ಒತ್ತಾಯಿಸಿದೆ. ಈ ಬಗ್ಗೆ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್‌ ಅವರೇ ನೇರವಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಟೆಸ್ಲಾ ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲೇ ತನ್ನ ಕಾರುಗಳನ್ನು ತಯಾರಿಸಬೇಕು ಎಂದು ಕೇಂದ್ರ ಸರ್ಕಾರ ಬಯಸುತ್ತಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಈ ಮೂಲಕ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಜೊತೆಗೆ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂಬುದು ಸರ್ಕಾರದ ನಿಲುವು. ಆದ್ದರಿಂದಲೇ ಟೆಸ್ಲಾ ಕಾರುಗಳ ಆಮದಿನ ಮೇಲೆ ತೆರಗೆ ರಿಯಾಯಿತಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ರಿಯಾಯಿತಿಗಳ ಬಗ್ಗೆ ಯೋಚಿಸಬಹುದು ಎಂದು ಕೇಂದ್ರ ಸ್ಪಷ್ಟಪಡಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಈಗಿನ ಕೇಂದ್ರ ಸರ್ಕಾರ ಟೆಸ್ಲಾ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಬದಲಾಗಿ ಕೇಂದ್ರವು ತನ್ನ ನಿರ್ಧಾರದಲ್ಲಿ ಬಹಳ ದೃಢವಾಗಿದೆ. ಹಾಗಾಗಿ ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವುದೊಂದೇ ಟೆಸ್ಲಾಗೆ ಸದ್ಯಕ್ಕೆ ಇರುವ ಏಕೈಕ ಅವಕಾಶವೆಂದು ಹೇಳಬಹುದು. ಆದರೆ ಭವಿಷ್ಯದಲ್ಲಿ ಟೆಸ್ಲಾ ಕಂಪನಿಯ ಯೋಜನೆ ಕೇಂದ್ರವನ್ನು ಅಸಮಾಧಾನಗೊಳಿಸುವ ಸಾಧ್ಯತೆ ಇದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಇದಕ್ಕೆ ಕಾರಣವೆಂದರೆ ಟೆಸ್ಲಾ ಚೀನಾದ ಶಾಂಘೈನಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಮುಂದಾಗಿರುವುದು. ಚೀನಾದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಭಾರತೀಯ ಮಾರುಕಟ್ಟೆಯಲ್ಲಿ ಲಾಭ ಪಡೆಯಲು ಬಯಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಬಗ್ಗೆ ಅಸಮಾಧಾನಗೊಂಡಿದ್ದು, ಭಾರತಕ್ಕೆ ಟೆಸ್ಲಾ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಟೆಸ್ಲಾ, ಶಾಂಘೈನಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಕೂಡ ಕಾರಣವಿದೆ. ಚೀನಾದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚುತ್ತಿದೆ. ಇದಕ್ಕೆ ಸ್ಥಳೀಯ ಸರ್ಕಾರ ಕೂಡ ಬೆಂಬಲ ನೀಡಿ ಉತ್ತೇಜಿಸುತ್ತಿದೆ. ಮೂಲಗಳ ಪ್ರಕಾರ, ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಶಾಂಘೈನಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ..

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಇದು ಸಂಭವಿಸಿದರೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಮೂಲಕ ಏಷ್ಯಾದಾ ಹಲವು ದೇಶಗಳಗೆ ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಚೀನಾದಿಂದ ಪೂರೈಸುವ ನಿರೀಕ್ಷೆಯಲ್ಲಿದೆ. ಆದರೆ ಶಾಂಘೈನಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸುವ ಬಗ್ಗೆ ಟೆಸ್ಲಾ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಭಾರತಕ್ಕೆ ಕಾಲಿಡಲು ಟೆಸ್ಲಾಗಿರುವ ಸಮಸ್ಯೆಗಳೇನು? ಚೀನಾ ಮಧ್ಯಂತರವೇ ಕಾರಣವೆ?

ಈ ಕಾರಣಗಳಿಂದ ಭಾರತದಲ್ಲಿ ಟೆಸ್ಲಾ ನೆಲೆಯೂರಲು ತಡಬಡಿಸುತ್ತಿದೆ. ಈ ನಡುವೆಯೂ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಅಸ್ತಿತ್ವಕ್ಕೆ ತರಲು ಎಲಾನ್ ಮಸ್ಕ್‌ ಅವರು ಉತ್ಸಾಹ ತೋರುತ್ತಿದ್ದು, ಈ ಸಂಬಂಧ ಅಧಿಕೃತ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla to set up new ev car manufacturing plant in shanghai china details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X