YouTube

ವಿಶ್ವದ ಅತ್ಯಂತ ದುಬಾರಿ ಕಾರು: ಬೆಲೆ ಬರೋಬ್ಬರಿ 225 ಕೋಟಿ.. ಅಂತಹದ್ದೇನಿದೆ ಈ ಕಾರಿನಲ್ಲಿ ಒಮ್ಮೆ ನೋಡಿ

ರೋಲ್ಸ್ ರಾಯ್ಸ್ ವಿಶ್ವದ ಅತ್ಯಂತ ಐಷಾರಾಮಿ ಕಾರು ತಯಾರಕ ಕಂಪನಿಯಾಗಿದೆ. ಇದರಿಂದ ಹೊರಬರುವ ಪ್ರತಿ ಕಾರು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ.

ಈ ಕಾರುಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಖರೀದಿಸುತ್ತಾರೆ. ಆದರೆ ಇದೀಗ ವಿಶ್ವ ಮಾರುಕಟ್ಟೆಯಲ್ಲಿ ಕುಬೇರರು ಕೂಡ ಖರೀದಿಸಲು ಯೋಚಿಸುವಂತಹ ಐಷಾರಾಮಿ ಕಾರನ್ನು ರೋಲ್ಸ್ ರಾಯ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದೆ.

ರೋಲ್ಸ್ ರಾಯ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಅತ್ಯಂತ ದುಬಾರಿ ಕಾರು 'ಬೋಟ್ ಟೈಲ್'. ಈ ಕಾರಿಗೆ 'ಬೋಟ್ ಟೈಲ್' ಎಂದು ಹೆಸರಿಸಲು ಮುಖ್ಯ ಕಾರಣವೆಂದರೆ ಇದರ ವಿನ್ಯಾಸವು ಬಹುತೇಕ ರೇಸಿಂಗ್ ಬೋಟ್ ಅನ್ನು ಹೋಲುತ್ತದೆ. ಅಷ್ಟೇ ಅಲ್ಲ, ಕಾರಿನ ಹಿಂಭಾಗದ ಡೆಕ್ ಅನ್ನು ಸಹ ಪಿಕ್‌ನಿಕ್ ಟೇಬಲ್ ಆಗಿ ಪರಿವರ್ತಿಸಬಹುದು.

ರೋಲ್ಸ್ ರಾಯ್ಸ್ ತಯಾರಿಸಿರುವ ಈ ಬೋಟ್ ಟೇಲ್ ಕಾರಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 28 ಮಿಲಿಯನ್ ಡಾಲರ್. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 225 ಕೋಟಿ ರೂಪಾಯಿ. ರೋಲ್ಸ್ ರಾಯ್ಸ್ ಕಂಪನಿಯ ಅತ್ಯಂತ ದುಬಾರಿ ಕಾರು ಈಗ ಈ ಬೋಟ್ ಟೈಲ್ ಆಗಿದೆ.

ಬೆಲೆ ಮಾತ್ರವಲ್ಲದೆ ಈ ಬೋಟ್ ಟೈಲ್ ಐಷಾರಾಮಿ ಕಾರಿನಲ್ಲಿರುವ ಫೀಚರ್ ಗಳನ್ನು ರೋಲ್ಸ್ ರಾಯ್ಸ್ ಕಂಪನಿ ಇದುವರೆಗೂ ಯಾವುದೇ ಕಾರಿನಲ್ಲಿ ಪರಿಚಯಿಸಿಲ್ಲ. ಹಾಗಾಗಿ ಈ ಕಾರನ್ನು ಕಂಪನಿಯ ವಿಶೇಷ ಕಾರು ಎಂದೂ ಕರೆಯುತ್ತಾರೆ. ಏಕೆಂದರೆ ಇದು ಇತರ ರೋಲ್ಸ್ ರಾಯ್ಸ್ ಕಾರುಗಳಿಗಿಂತ ಹೆಚ್ಚು ವಿಶೇಷವಾಗಿದೆ.

ಈ ರೋಲ್ಸ್ ರಾಯ್ಸ್ ಕಾರಿನ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಅದರ ಹಿಂಭಾಗದ ಡೆಕ್‌ನಲ್ಲಿರುವ ಕಾಕ್‌ಟೈಲ್ ಷಾಪ್. ಇದರಲ್ಲಿ ಅನೇಕ ರೀತಿಯ ಪಾನೀಯಗಳನ್ನು ಸಂಗ್ರಹಿಸಬಹುದು. ಇದಲ್ಲದೆ, ಕನ್ವರ್ಟಬಲ್ ಟೇಬಲ್‌ಗಳು ಮತ್ತು ಕುರ್ಚಿಗಳೂ ಇವೆ. ಪಿಕ್ನಿಕ್ ಅಥವಾ ವಿಹಾರಕ್ಕೆ ಹೋಗುವಾಗ ಇದೆಲ್ಲವೂ ತುಂಬಾ ಉಪಯುಕ್ತವಾಗಿರುತ್ತವೆ.

ವರದಿಗಳ ಪ್ರಕಾರ, ರೋಲ್ಸ್ ರಾಯ್ಸ್ ಕಂಪನಿಯು 2017 ರಲ್ಲಿ ಸ್ವೆಪ್ಟೈಲ್ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ 12.8 ಮಿಲಿಯನ್ ಪೌಂಡ್. ಇಂದು ನಮಗೆ ತಿಳಿದಿರುವ ಹೊಸ ಬೋಟ್ ಟೈಲ್ ಕಾರು ಇದರಿಂದ ಪ್ರೇರಿತವಾಗಿದೆ. ಯುರೋಪಿನ ಕೆಲವು ಶ್ರೀಮಂತ ಉದ್ಯಮಿಗಳ ಆದೇಶದ ಮೇರೆಗೆ ಕಂಪನಿಯು ಈ ಕಾರುಗಳನ್ನು ತಯಾರಿಸಿದೆ ಎಂಬ ವರದಿಗಳೂ ಇವೆ.

ಕಂಪನಿಯು ಎಲ್ಲಾ ರೋಲ್ಸ್ ರಾಯ್ಸ್ ಕಾರುಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಕಾರನ್ನು ಬಯಸಿದ್ದರಿಂದ ಇದನ್ನು ತಯಾರಿಸಿದೆ. ಉದ್ಯಮಿಯ ಬೇಡಿಕೆಯಂತೆ ಕಂಪನಿಯ ಎಂಜಿನಿಯರ್ ಗಳು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಶ್ರಮವಹಿಸಿ ಈ ಕಾರನ್ನು ತಯಾರಿಸಿದ್ದಾರೆ.

ವರದಿಗಳ ಪ್ರಕಾರ, ಕಂಪನಿಯು ಕೇವಲ 3 ಯುನಿಟ್ ಬೋಟ್ ಟೈಲ್ ಕಾರುಗಳನ್ನು ಮಾತ್ರ ತಯಾರಿಸಲಿದೆ. ಬೋಟ್ ಟೈಲ್ ಖರೀದಿಸುವ ಗ್ರಾಹಕರು ಕಾರನ್ನು ತಮಗೆ ಇಷ್ಟ ಬಂದಂತೆ ಮಾರ್ಪಡಿಸಿಕೊಳ್ಳಬಹುದು. ರೋಲ್ಸ್ ರಾಯ್ಸ್ ಬಿಡುಗಡೆ ಮಾಡಿರುವ ಈ ಹೊಸ ಕಾರು ನಾಲ್ಕು ಸೀಟುಗಳನ್ನು ಹೊಂದಿದೆ.

ಆದರೆ ಅದರ ಬೂಟ್ ಸ್ಪೇಸ್ ಒಳಗೆ ಡ್ರಿಂಕ್ಸ್ ಕ್ಯಾಬಿನ್ ಇದ್ದು, ಇದರಲ್ಲಿ ಷಾಂಪೇನ್ ಮತ್ತು ಇತರ ವಿವಿಧ ಪಾನೀಯಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದರ ಬೂಟ್ ಡೋರ್‌ಗಳು 'ಚಿಟ್ಟೆ' ರೆಕ್ಕೆಗಳಂತೆ ಮೇಲ್ಮುಖವಾಗಿ ತೆರೆದುಕೊಳ್ಳುತ್ತವೆ. ರೋಲ್ಸ್ ರಾಯ್ಸ್‌ನ ಈ ಬೋಟ್ ಟೈಲ್ ಕಾರು ಹೆಚ್ಚಾಗಿ ಕಾರ್ಬನ್ ಫೈಬರ್ ಕವರ್‌ನೊಂದಿಗೆ ಕನ್ವರ್ಟಿಬಲ್ ಓಪನ್ ಟಾಪ್ ರೂಫ್‌ನೊಂದಿಗೆ ಬರುತ್ತದೆ.

ರೋಲ್ಸ್ ರಾಯ್ಸ್ ಬೋಟ್ ಟೈಲ್‌ನ ಎಂಜಿನ್‌ ಬಗ್ಗೆ ಹೇಳುವುದಾದರೆ, ಇದು V12 6.75-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ರೋಲ್ಸ್ ರಾಯ್ಸ್ ಬ್ರಾಂಡ್ ಕಲಿನನ್, ಫ್ಯಾಂಟಮ್ ಮತ್ತು ಬ್ಲ್ಯಾಕ್‌ಬ್ರಿಡ್ಜ್‌ನಲ್ಲಿಯೂ ಬಳಸಲಾಗಿದೆ. ಈ ಎಂಜಿನ್ ಗರಿಷ್ಠ 563 bhp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿದಿಂತೆ ಈ ಕಾರಿನ ಬಗ್ಗೆ ವಿವಿರವಾದ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ.

Most Read Articles

Kannada
English summary
The most expensive car in the world the price is 225 crores
Story first published: Monday, November 14, 2022, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X