ಹೊಸ ವರ್ಷದಿಂದ ಎಂಜಿ ಕಾರುಗಳ ಬೆಲೆ ಭಾರೀ ಏರಿಕೆ

ಭಾರತದ ಮಾರುಕಟ್ಟೆಯಲ್ಲಿ ಹಲವು ವಾಹನ ತಯಾರಿಕ ಕಂಪನಿಗಳು, ಮುಂಬರುವ ಹೊಸ ವರ್ಷದ (2023 ಜನವರಿ) ಪ್ರಾರಂಭದಿಂದ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧತೆಯನ್ನು ನಡೆಸುತ್ತಿವೆ. ಇದೀಗ ಆ ಪಟ್ಟಿಗೆ ಪ್ರಸಿದ್ಧ ಬ್ರಿಟಿಷ್ ವಾಹನ ತಯಾರಿಕ ಕಂಪನಿ ಎಂಜಿ ಮೋಟಾರ್ ಸೇರಿದ್ದು, ಈ ಬಗ್ಗೆ ಹೆಚ್ಚಿನ ವಿವರವನ್ನು ಇಲ್ಲಿ ತಿಳಿಸಿಕೊಡಲಾಗಿದೆ.

MG ಮೋಟಾರ್ ಇಂಡಿಯಾ ಜನವರಿ 1, 2023 ರಿಂದ ಎಲ್ಲಾ ಮಾದರಿಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಬೆಲೆ ಏರಿಕೆಯು ಭಾರಿಯಾಗಿಯೇ ಇದ್ದು, 90,000 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ, ಎಂಜಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಐದು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ ಹೆಕ್ಟರ್, ಹೆಕ್ಟರ್ ಪ್ಲಸ್, ZS EV, ಆಸ್ಟರ್ ಮತ್ತು ಗ್ಲೋಸ್ಟರ್. ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲು MG ಮೋಟಾರ್ ಯೋಜಿಸುತ್ತಿದೆ ಎಂದು ವರದಿಯಾಗಿದೆ.

ನೆಕ್ಸ್ಟ್-ಜೆನೆರೇಷನ್ ಹೆಕ್ಟರ್ ಎಸ್‌ಯುವಿ ಇತ್ತೀಚೆಗೆ ದೇಶದಲ್ಲಿ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿತ್ತು. ಬೋಲ್ಡ್ ನ್ಯೂ ಡೈಮಂಡ್-ಆಕಾರದ ಗ್ರಿಲ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಒಳಗೊಂಡಿರುವ ಈ ಎಸ್‌ಯುವಿ ಹಿಂಭಾಗದಲ್ಲಿ ಕೆಲವು ಸಣ್ಣ ನವೀಕರಣಗಳನ್ನು ಪಡೆಯುತ್ತದೆ. ಒಳಾಂಗಣ ಅಪ್ಡೇಟ್ ಬಗ್ಗೆ ಹೇಳುವುದಾದರೆ ಮುಂಬರುವ ಎಂಜಿ ಹೆಕ್ಟರ್ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಸುಸಜ್ಜಿತವಾಗಿ ಖರೀದಿಗೆ ಸಿಗಲಿದೆ.

ಸುರಕ್ಷತೆಯ ವಿಚಾರಗಳ ಬಗ್ಗೆ ಹೇಳುವುದಾದರೆ, ಮುಂಬರಲಿರುವ ಹೊಸ ಹೆಕ್ಟರ್ ಎಸ್‌ಯುವಿಯನ್ನು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ. ಎಂಜಿ ಹೆಕ್ಟರ್ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆಯಂತೆ. ಅವುಗಳೆಂದರೆ 2.0-ಲೀಟರ್ ಡೀಸೆಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಮೈಲ್ಡ್-ಹೈಬ್ರಿಡ್. ಟ್ರಾನ್ಸ್ಮಿಷನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, 6-ಸ್ವೀಡ್ ಮ್ಯಾನುಯೆಲ್ ಮತ್ತು DCT ಯುನಿಟ್ ಅನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಅಮೆರಿಕದ ಪ್ರಮುಖ ಕಾರು ತಯಾರಿಕ ಕಂಪನಿ ಜೀಪ್, ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಎಸ್‌ಯುವಿಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದ್ದು, ನೂತನ ದರಗಳು ಜನವರಿ 1, 2023ರಿಂದ ಜಾರಿಗೆ ಬರಲಿವೆ, ಬೆಲೆ ಏರಿಕೆಯು ಶೇಕಡ 2 ರಿಂದ 4 ರವರೆಗೆ ಇರಲಿದೆ. ಮೂರು ತಿಂಗಳೊಳಗೆ ಜೀಪ್, ದೇಶದಲ್ಲಿ ತನ್ನ ಎಸ್‌ಯುವಿಗಳ ಬೆಲೆಯನ್ನು ಎರಡನೇ ಬಾರಿಗೆ ಏರಿಕೆ ಮಾಡಿದ್ದು, ಕಂಪನಿಯು ನವೆಂಬರ್‌ನಲ್ಲಿ 'ಕಂಪಾಸ್‌' ಮಾದರಿ ಬೆಲೆಯನ್ನು 1.8 ಲಕ್ಷ ರೂ.ವರೆಗೆ ಹೆಚ್ಚಿಸಿತ್ತು. ಕಂಪಾಸ್ ಪ್ರಸ್ತುತ ರೂ.20.89 ಲಕ್ಷದಿಂದ ಪ್ರಾರಂಭವಾಗುತ್ತದೆ.

ದಕ್ಷಿಣ ಕೊರಿಯಾದ ಪ್ರಸಿದ್ಧ ವಾಹನ ತಯಾರಿಕ ಕಂಪನಿ 'ಕಿಯಾ ಮೋಟಾರ್ಸ್‌' ಸಹ ಹೊಸ ವರ್ಷದಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ. ಕಂಪನಿಯು ತನ್ನ ಕಾರುಗಳ ಬೆಲೆಯನ್ನು ರೂ.50,000 ಹೆಚ್ಚಿಸಲಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಜಾರಿಯಾಗಲಿರುವ ಕಡ್ಡಾಯ ಎಮಿಷನ್ ಮಾನದಂಡಗಳಿಂದಾಗಿ ಇನ್‌ಪುಟ್ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕಿಯಾ ಕಂಪನಿಯು ತನ್ನ ವಿವಿಧ ಮಾದರಿ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿದೆ ಎಂದು ಸದ್ಯ ವರದಿಯಾಗಿದೆ.

ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದೆ. ಆದರೆ, ಬೆಲೆ ಏರಿಕೆಯು ಮಾದರಿಯನ್ನು ಅವಲಂಬಿಸಿ, ಬೇರೆ-ಬೇರೆಯಾಗಿರುತ್ತದೆ ಇರುತ್ತದೆ ಎಂಬುದು ಸದ್ಯದ ಮಾಹಿತಿ. ಸರಕುಗಳ ಬೆಲೆ ಹೆಚ್ಚಳ ಹೊರತಾಗಿಯು ವಿವಿಧ ಕಾರಣಗಳಿಗೆ ಬೆಲೆ ಏರಿಕೆಯಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಅಲ್ಲದೆ, ಮುಂಬರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ವಾಹನಗಳನ್ನು ತಯಾರಿಸಬೇಕಾಗಿರುವುದರಿಂದ ಬೆಲೆ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ ಎಂದು ವರದಿಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಜೀಪ್, ಮಾರುತಿ ಸುಜುಕಿ, ಟಾಟಾ, ಕಿಯಾ, ಆಡಿ, ಮರ್ಸಿಡಿಸ್-ಬೆನ್ಜ್, ರೆನಾಲ್ಟ್ ಈಗ ಎಂಜಿ ಮೋಟಾರ್ ಸೇರಿದಂತೆ ಬಹುತೇಕ ಕಂಪನಿಗಳು, ತಮ್ಮ ಕಾರು ಮತ್ತು ಎಸ್‌ಯುವಿಗಳ ಬೆಲೆ ಹೆಚ್ಚಳವನ್ನು ಜನವರಿ 2023ರಿಂದ ಜಾರಿಗೊಳಿಸಲಿವೆ. ಎಲ್ಲ ತಯಾರಕರು ಇನ್ ಪುಟ್ ಹೆಚ್ಚಳದಿಂದಲೇ ಈ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ದುಬಾರಿ ದರದ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಕೊಂಚ ಕಡಿಮೆ ಬೆಲೆಯ ಕಾರುಗಳನ್ನು ಖರೀದಿಸುವವರ ಮೇಲೆ ಪರಿಣಾಮ ಬೀರಬಹುದು.

Most Read Articles

Kannada
English summary
The price of mg cars has increased drastically since the new year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X