2023 ಆಟೋ ಎಕ್ಸ್‌ಪೋದಲ್ಲಿ ಇನ್ನೋವಾದಿಂದ-XUV700 ವೆರೆಗೆ ಹೊಸ ಲುಕ್‌ನಲ್ಲಿ ಮಿಂಚಲಿರುವ ಕಾರುಗಳು

ಪ್ರಪಂಚದ ಬಹುತೇಕ ಎಲ್ಲಾ ಪ್ರಮುಖ ವಾಹನ ತಯಾರಕರು ನಮ್ಮ ದೇಶದಲ್ಲಿ ಅಸ್ತಿತ್ವವನ್ನು ಹೊಂದಿದ್ದಾರೆ. ಈ ಎಲ್ಲಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಮತ್ತು ಇತರ ಕಂಪನಿಗಳ ಪೈಪೋಟಿಯನ್ನು ಎದುರಿಸಲು ತಮ್ಮ ಕಾರುಗಳನ್ನು ನವೀಕರಣಗೊಳಿಸಿ ಕಾಲಕಾಲಕ್ಕೆ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಹೊಸ ಮಾದರಿಗಳೊಂದಿಗೆ ತಮ್ಮ ಅಸ್ತಿತ್ವದಲ್ಲಿರುವ ಕಾರುಗಳನ್ನು ಹೊಸ ಅವತಾರದಲ್ಲಿ ಪ್ರಸ್ತುತಪಡಿಸಲು ಕೆಲವು ಕಂಪನಿಗಳು ಸಜ್ಜಾಗುತ್ತಿವೆ. ಅಂತಹ ವಾಹನಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಟಾಟಾ ಮೋಟಾರ್ಸ್

ಮಾಧ್ಯಮ ವರದಿಗಳ ಪ್ರಕಾರ, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳ ಹೊರಭಾಗ ಮತ್ತು ಒಳಾಂಗಣವು ಹೊಸ ಡಿಸೈನ್‌ನೊಂದಿಗೆ ಮುಂದಿನ ವರ್ಷ ಟಾಟಾ ಪರಿಚಯಿಸಬಹುದು. ಇವುಗಳಲ್ಲಿ ಅನೇಕ ಹೊಸ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಈ ವೈಶಿಷ್ಟ್ಯಗಳಲ್ಲಿ 360-ಡಿಗ್ರಿ ಕ್ಯಾಮೆರಾ, ADAS, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿವೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರದ ಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟರ್ಸ್, ತನ್ನ ಇನ್ನಿತರ ಕಾರುಗಳನ್ನು ಎಲೆಕ್ಟ್ರಿಕ್ ಲೈನ್‌ ಅಪ್‌ನಲ್ಲಿ ಸೇರಿಸಲಿದೆ. ಅವುಗಳಲ್ಲಿ ಪ್ರಮುಖವಾಗಿ ನೋಡುವುದಾದರೆ, ಪಂಚ್ ಮತ್ತು ಆಲ್ಟ್ರೋಜ್‌ನ ಎಲೆಕ್ಟ್ರಿಕ್ ಆವೃತ್ತಿಗಳನ್ನು ಸಹ ಪರಿಚಯಿಸಬಹುದು.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಮಾರುತಿ ಸುಜುಕಿ

ಕಂಪನಿಯು ಐದು-ಬಾಗಿಲಿನ ಜಿಮ್ನಿ ಮತ್ತು ಬಲೆನೊ ಕ್ರಾಸ್ ಅನ್ನು ಪರಿಚಯಿಸಬಹುದು ಎನ್ನಲಾಗುತ್ತಿದೆ. ಈ ಎರಡು ಹೊಸ ಕಾರುಗಳ ಪರಿಚಯದೊಂದಿಗೆ, ಕಂಪನಿಯು ಸ್ವಿಫ್ಟ್‌ನ ಹೊಸ ಅವತಾರವನ್ನು ಕೂಡ ಪರಿಚಯಿಸಬಹುದು. ಕಂಪನಿಯು ಈ ಹಿಂದೆ ಬ್ರೆಝಾದ ಹೊಸ ಅವತಾರವನ್ನು ಪರಿಚಯಿಸಿತ್ತು.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಕಾಂಪ್ಯಾಕ್ಟ್ SUV ಯ ಹೊಸ ಅವತಾರವು ಭಾರತದಲ್ಲಿ ಉತ್ತಮವಾಗಿ ಓಡುತ್ತಿದೆ. ಇದಲ್ಲದೆ, ಕಂಪನಿಯು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹೊಸ ಗ್ರಾಂಡ್ ವಿಟಾರವನ್ನು ಬಿಡುಗಡೆ ಮಾಡಿದೆ. ಈ ಗ್ರ್ಯಾಂಡ್ ವಿಟಾರಾದೊಂದಿಗೆ ಕಂಪನಿಯ ಮಾರಾಟವು ಮತ್ತಷ್ಟು ಉತ್ತೇಜನವನ್ನು ಪಡೆದಿದೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಮಹೀಂದ್ರಾ

ಭಾರತದಲ್ಲಿ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ ಮುಂದಿನ ವರ್ಷ ಆಟೋ ಎಕ್ಸ್‌ಪೋದಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಬಹುದು. ಕಂಪನಿಯು XUV700 ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪರಿಚಯಿಸಬಹುದು. ಮಹೀಂದ್ರಾ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೊ ಎನ್, ಕ್ಲಾಸಿಕ್ ಸ್ಕಾರ್ಪಿಯೊ, ಎಕ್ಸ್‌ಯುವಿ 700, ಎಕ್ಸ್‌ಯುವಿ 400 ಇವಿಯಂತಹ ಅತ್ಯುತ್ತಮ ಎಸ್‌ಯುವಿಗಳನ್ನು ಪರಿಚಯಿಸಿದೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಹುಂಡೈ

ದಕ್ಷಿಣ ಕೊರಿಯಾದ ಕಾರು ಕಂಪನಿಯಾದ ಹ್ಯುಂಡೈ ಹೊಸ ವರ್ಷದ ಆರಂಭದಲ್ಲಿ ಅಸ್ತಿತ್ವದಲ್ಲಿರುವ ಕೆಲವು ಕಾರುಗಳ ಹೊಸ ಅವತಾರಗಳನ್ನು ಪರಿಚಯಿಸಲಿದೆ. ಇವುಗಳಲ್ಲಿ ಕ್ರೆಟಾ ಮತ್ತು ವೆರ್ನಾದಂತಹ ಕಾರುಗಳು ಸೇರಿವೆ. ಕ್ರೆಟಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹೆಚ್ಚು ಇಷ್ಟಪಟ್ಟ SUV ಗಳಲ್ಲಿ ಒಂದಾಗಿದೆ, ಆದರೆ ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ವೆರ್ನಾ ಸಹ ಹಲವು ವರ್ಷಗಳಿಂದ ಭಾರತೀಯ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇವುಗಳ ಹೊರತಾಗಿ, ಸ್ಟಾರ್‌ಗೇಜರ್ MPV ಅನ್ನು ಕಂಪನಿಯು ಪರಿಚಯಿಸಬಹುದು.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್

ಹ್ಯುಂಡೈನಂತೆ, ಕಿಯಾ ಕೂಡ ಮುಂದಿನ ವರ್ಷದ ಆರಂಭದಲ್ಲಿ ಮಧ್ಯಮ ಗಾತ್ರದ SUV ಸೆಲ್ಟೋಸ್ ಅನ್ನು ನವೀಕರಿಸಬಹುದು. ವರದಿಗಳ ಪ್ರಕಾರ, ಇದನ್ನು ಇತರ ಕಂಪನಿಗಳಂತೆ ಆಟೋ ಎಕ್ಸ್‌ಪೋದಲ್ಲಿ ಸಹ ಪ್ರಸ್ತುತಪಡಿಸಬಹುದು. ಸೆಲ್ಟೋಸ್ ಹೊರತಾಗಿ, ಕಂಪನಿಯು ಹೊಸ ತಲೆಮಾರಿನ ಕಾರ್ನಿವಲ್ ಅನ್ನು ಸಹ ಪರಿಚಯಿಸುವ ನಿರೀಕ್ಷೆಯಿದೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಟೊಯೊಟಾ

ದೇಶದಲ್ಲಿ ಅತ್ಯಂತ ಪ್ರೀತಿಪಾತ್ರ 7-ಸೀಟರ್ MPV ಇನ್ನೋವಾ ಕ್ರಿಸ್ಟಾ ಕೂಡ ನವೀಕರಣ ಪಡೆಯಬಹುದು. ವರದಿಗಳ ಪ್ರಕಾರ, ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಇನ್ನೋವಾ ಕ್ರಿಸ್ಟಾವನ್ನು ಹೊಸ ಅವತಾರದಲ್ಲಿ ಪ್ರಸ್ತುತಪಡಿಸಬಹುದು. ಕಂಪನಿಯು ಈ ಹಿಂದೆ ಡೀಸೆಲ್ ರೂಪಾಂತರದ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಈಗ ಕಂಪನಿಯು ಹೊಸ ತಲೆಮಾರಿನ ಇನ್ನೋವಾ ಹೈಬ್ರಿಡ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಹೋಂಡಾ

ಟೊಯೊಟಾ ಮತ್ತು ಸುಜುಕಿಯಂತೆ ಜಪಾನಿನ ಕಾರು ಕಂಪನಿಯಾದ ಹೋಂಡಾ ಕೂಡ ಮುಂದಿನ ವರ್ಷಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ಎರಡು ಎಸ್‌ಯುವಿಗಳನ್ನು ಪ್ರಸ್ತುತಪಡಿಸಬಹುದು. ಈ SUV ಗಳಲ್ಲಿ ಒಂದನ್ನು ಕಾಂಪ್ಯಾಕ್ಟ್ ವಿಭಾಗದಲ್ಲಿ ಇರಿಸಬಹುದು. ಈ ವಿಭಾಗದಲ್ಲಿ ಈಗಾಗಲೇ ಟಾಟಾ, ಮಹೀಂದ್ರಾ, ಮಾರುತಿ ಮತ್ತು ಹ್ಯುಂಡೈ ಪ್ರಾಬಲ್ಯ ಹೊಂದಿವೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಎಂಜಿ, ರೆನಾಲ್ಟ್ ಮತ್ತು ನಿಸ್ಸಾನ್

ಮುಂದಿನ ಆಟೋ ಎಕ್ಸ್‌ಪೋದಲ್ಲಿ MG ಸಹ ಕೈಗೆಟುಕುವ EV ಅನ್ನು ಪ್ರಸ್ತುತಪಡಿಸಬಹುದು. ಈ ಚಿಕ್ಕ EV ಎರಡು-ಬಾಗಿಲಿನ ಹ್ಯಾಚ್‌ಬ್ಯಾಕ್ ಆಗಿರಬಹುದು. MG ಹೊರತಾಗಿ, ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಎರಡು ಹೊಸ SUV ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

2023 ಆಟೋ ಎಕ್ಸ್‌ಪೋದಲ್ಲಿ ಹೊಸ ಅವತಾರದಲ್ಲಿ ಮಿಂಚಲಿರುವ ಟಾಪ್ 10 ಕಂಪನಿಗಳ ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರತಿ ಬಾರಿಯ ಆಟೋ ಎಕ್ಸ್‌ಪೋದಲ್ಲಿ ತಮ್ಮ ಹೊಸ ಮಾದರಿಗಳು ಹಾಗೂ ನವೀಕೃತ ಮಾದರಿಗಳನ್ನು ಪರಿಚಯಿಸಲು ಬಹುತೇಕ ಎಲ್ಲಾ ಕಂಪನಿಗಳು ಕೂಡ ಕಾತುರದಿಂದ ಕಾಯುತ್ತವೆ. ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಲು ಇದೊಂದು ಉತ್ತಮ ಅವಕಾಶವಾಗಿರುವುದರಿಂದ ಎಲ್ಲಾ ಕಂಪನಿಗಳು ಸದುಪಯೋಗಪಡಿಸಿಕೊಳ್ಳುತ್ತವೆ. ಮೇಲಿನ ಯಾವ ಕಾರುಗಳನ್ನು ಹೊಸ ಅವತಾರದಲ್ಲಿ ನೋಬಹಯಸಿವಿರಿ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

Most Read Articles

Kannada
English summary
Top 10 Companies Cars to Shine in New Avatar at 2023 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X