Just In
- 16 min ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 31 min ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
- 1 hr ago
ಸಾರ್ವಜನಿಕ ಬಳಕೆಯ ಇವಿ ಬಸ್ಗಳನ್ನು ಉತ್ತೇಜಿಸಲು ಉಚಿತ ಪ್ರಯಾಣದ ಆಫರ್
- 2 hrs ago
ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?
Don't Miss!
- Sports
GT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಮೂವರು ಆಟಗಾರರು
- Finance
ಕಾಣೆಯಾದ ಸರ್ಕಾರಿ ನೌಕರರ ಕುಟುಂಬ ಪಿಂಚಣಿ ನಿಯಮ ಸಡಿಲಿಸಿದ ಕೇಂದ್ರ: ಏನಿದು?
- News
ಆಕ್ರೋಶ ಬೇಡ: ಬೆಂಬಲಿಗರಿಗೆ ಬಿ.ವೈ. ವಿಜಯೇಂದ್ರ ಮನವಿ
- Movies
ಆರ್ಯನ ಅಸಲಿ ಕಥೆ ಮೀರಾ ಮುಂದೆ ಬಯಲು!
- Technology
ಏರ್ಟೆಲ್, ಜಿಯೋ ಮತ್ತು ವಿ ಟೆಲಿಕಾಂ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!
- Lifestyle
ಟೀನೇಜ್ನಲ್ಲೇ ಕೂದಲುದುರುತ್ತಿದೆಯೇ? ಇವೇ ಕಾರಣಗಳಿರಬಹುದು, ನಿರ್ಲಕ್ಷ್ಯ ಬೇಡ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-5 ಕಾರುಗಳಿವು...
ಭಾರತದಲ್ಲಿ ಕಾರು ಖರೀದಿಸುವ ಹೆಚ್ಚಿನ ಗ್ರಾಹಕರು ಮೊದಲು ನೋಡುವುದು ಆ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು. ಇನ್ನು ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ.

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೇ ಇಂಧನ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿರುವುದರಿಂದ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-5 ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೋಂಡಾ ಸಿಟಿ ಇ:ಎಚ್‌ಇವಿ
ಈ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದೆ. ಇವುಗಳು 124 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಿಟಿ ಹೈಬ್ರಿಡ್ ತನ್ನ ಪೆಟ್ರೋಲ್ ಪ್ರತಿರೂಪಕ್ಕಿಂತ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ. ಹೈಬ್ರಿಡ್ ಸಿಟಿಯು ತನ್ನ ಪೆಟ್ರೋಲ್ ಚಾಲಿತ ಆವೃತ್ತಿಗಿಂತ 110 ಕೆಜಿ ಭಾರವಾಗಿದೆ. ಈ ಕಾರಿನಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂದಿಡಿದೆ.

ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಇವಿ, ಹೈಬ್ರಿಡ್ ಮತ್ತು ಪೆಟ್ರೋಲ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಡ್ರೈವಿಂಗ್ ಮೋಡ್‌ಗಳನ್ನು ಸಿಟಿ ಇಹೆಚ್‌ಇವಿಯ ಆನ್‌ಬೋರ್ಡ್ ಎಲೆಕ್ಟ್ರಾನಿಕ್ಸ್ ಸೂಟ್‌ನಿಂದ ಆಟೋಮ್ಯಾಟಿಕ್ ಆಗಿ ನಿಯಂತ್ರಿಸಲಾಗುತ್ತದೆ. ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಸೆಡಾನ್‌ನ ಸುರಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೈಬ್ರಿಡ್ ಕಾರಿನ ಸುರಕ್ಷತಾ ಫೀಚರ್ಸ್ ಗಳಲ್ಲಿ ಕಾಲಿಷನ್ ಮೆಟಿಗೇಷನ್ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ರೋಡ್ ಡಿಪರ್ಚರ್ ಮೆಟಿಗೇಷನ್ ಒಳಗೊಂಡಿವೆ. ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ಹೊಂದಿದೆ.ಇದರೊಂದಿಗೆ ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗೈಲ್ ಹ್ಯಾಂಡ್ಲಿಂಗ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿವೆ. ಸಿಟಿ ಇಹೆಚ್‌ಇವಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ,

ಈ ಹೋಂಡಾ ಹೈಬ್ರಿಡ್ ಕಾರಿನ ಒಳಭಾಗದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಇದು Apple CarPlay ಮತ್ತು Android Auto ಅನ್ನು ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಸರೌಂಡ್ ಸೌಂಡ್ ಸ್ಪೀಕರ್ ಸಿಸ್ಟಂ ಅನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳು ಸ್ಮಾರ್ಟ್ ಕೀ ಸಿಸ್ಟಂ ಹೊಂದಿದೆ.

ಹುಂಡೈ ಔರಾ
ಈ ಹುಂಡೈ ಔರಾ ಕಾರು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಸೆಡಾನ್ ರೂಪಾಂತರವಾಗಿದೆ. ಹ್ಯುಂಡೈ ಔರಾ ಗ್ರ್ಯಾಂಡ್ ಐ10 ನಿಯೋಸ್‌ಗಿಂತ ಹೆಚ್ಚಿನ ಬೂಟ್ ಜಾಗವನ್ನು ನೀಡುತ್ತದೆ ಮತ್ತು ಇದು ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ಈ ಕಾರು 25.50 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇಂಧನ ದಕ್ಷತೆಯ ಅಂಕಿ ಅಂಶದೊಂದಿಗೆ ಅತ್ಯಂತ ಇಂಧನ-ಸಮರ್ಥ ಸೆಡಾನ್‌ಗಳಲ್ಲಿ ಒಂದಾಗಿದೆ. ಔರಾ ಸೆಡಾನ್‌ನ ಡೀಸೆಲ್ ಆವೃತ್ತಿಯು ಹುಂಡೈ ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಅದೇ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಈ ಎಂಜಿನ್ 73.75 ಬಿಹೆಚ್ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಕಾರಿನಲ್ಲಿ ಬೂಮ್‌ಬರ್ಗ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, ಕೀ ಲೆಸ್ ಎಂಟ್ರಿ, 8-0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ವ್ಯಾರ್ಪ್ ಸ್ಟಿರಿಂಗ್ ವ್ಹೀಲ್ ಹೊಂದಿದೆ.

ಹ್ಯುಂಡೈ ಐ20
ಈ ಹುಂಡೈ ಐ20 ಕಾರಿನಲ್ಲಿ 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ, ಈ ಎಂಜಿನ್ 98.63 ಬಿಹೆಚ್ಪಿ ಪವರ್ ಮತ್ತು 98.63 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. , ಎಂಜಿನ್ ಕೇವಲ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿತವಾಗಿದೆ. ಈ ಕಾರು 25.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಈ ಹ್ಯುಂಡೈ ಐ20 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಕಾರಿನ ಹಿಂದಿನ ಮಾದರಿಯು ಕೂಡ ಆಕರ್ಷಕ ಲುಕ್ ಅನ್ನು ಹೊಂದಿತ್ತು. ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.

ಇನ್ನು ಈ ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಹೊಂದಿದೆ. ಕಾರಿನ ಪಿಲ್ಲರ್‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍ನಲ್ಲಿ ಇರುವಂತಹ ಕೆಂಪು ಇಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇಲ್‍ಇಡಿ ಟೇಲ್‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಟಾಟಾ ಆಲ್‌ಟ್ರೊಜ್
ಸ್ವದೇಶಿ ಬ್ರಾಂಡ್ ಆಲ್‌ಟ್ರೊಜ್ ಅನ್ನು 2020ರ ಜನವರಿ ತಿಂಗಳಿನಲ್ಲಿ ALFA ARC (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಆರ್ಕಿಟೆಕ್ಚರ್ ನಿಂದ ಆಧಾರವಾಗಿರುವ ಮೊದಲ ಉತ್ಪನ್ನವಾಗಿ ಪರಿಚಯಿಸಿತು ಮತ್ತು ಇದು ಅತ್ಯಂತ ಆಕರ್ಷಕ ಮತ್ತು ಸುರಕ್ಷಿತ ಕಾರು ಹಣವು ಕೈಗೆಟುಕುವ ಮಾದರಿಯಾಗಿದೆ.

ಈ ಕಾರಿನಲ್ಲಿ 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆಲ್ಟ್ರೋಜ್‌ನ ಡೀಸೆಲ್ ಆವೃತ್ತಿಯು ಇನ್ನೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರಬೇಕಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಟಾಟಾ ಆಲ್ಟ್ರೊಜ್ 25.11 ಕಿಮೀ ಲೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು 25.11 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಈ ಟಾಟಾ ಆಲ್‌ಟ್ರೊಜ್ ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಆಗಿದೆ. ಇ ಟಾಟಾ ಆಲ್‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್
ಈ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಪ್ರಸ್ತುತ ಭಾರತದಲ್ಲಿ ಅತ್ಯಂತ ಕೈಗೆಟುಕುವ ಡೀಸೆಲ್ ಕಾರು. ಇದಲ್ಲದೆ, ಅದರ ಅತ್ಯುತ್ತಮ ಇಂಧನ ದಕ್ಷತೆಯ ಅಂಕಿಅಂಶಗಳು ಮತ್ತು ಪ್ರಯತ್ನವಿಲ್ಲದ ಡ್ರೈವಿಂಗ್ ಗುಣಲಕ್ಷಣಗಳನ್ನು ಹೊಂದಿದೆ.ಹ್ಯಾಚ್‌ಬ್ಯಾಕ್ ಉತ್ತಮ ನಗರ ಕಾರು.

ಇದರ ಜೊತೆಗೆ, ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಜೊತೆಗೆ Apple CarPlay ಮತ್ತು Android Auto, MID ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಕ್ರೂಸ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿ 1.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 73.7 ಬಿಹೆಚ್ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಈ ಕಾರು RAI ಪ್ರಮಾಣೀಕೃತ ಪ್ರಕಾರ 25.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇಂಧನ ದಕ್ಷತೆಯ ಅಂಕಿ ಅಂಶದೊಂದಿಗೆ ಹ್ಯಾಚ್‌ಬ್ಯಾಕ್ ತನ್ನ ವಿಭಾಗದಲ್ಲಿ ಹೆಚ್ಚು ಇಂಧನ-ಸಮರ್ಥ ಹ್ಯಾಚ್‌ಬ್ಯಾಕ್ ಆಗಿದೆ.