ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಜನಪ್ರಿಯ ವಾಹನ ತಯಾರಕ ಕಂಪನಿಗಳಾದ ಟೊಯೋಟಾ ಮತ್ತು ಮಾರುತಿ ಸುಜುಕಿ ಈ ವರ್ಷದಲ್ಲಿ ಮುಂಬರಲಿರುವ ಹಬ್ಬದ ವೇಳೆಗೆ ಹೊಸ ಮಧ್ಯಮ ಗಾತ್ರದ SUV ಅನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಈ ಎರಡು ಬ್ರಾಂಡ್‌ಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸ್ಪೋರ್ಟಿ ವಾಹನಕ್ಕಾಗಿ ಮಾರುಕಟ್ಟೆ ಎದುರು ನೋಡುತ್ತಿದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಟೊಯೊಟಾ D22 ಮತ್ತು ಮಾರುತಿ ಸುಜುಕಿ YFG ಎಂಬ ಸಂಕೇತನಾಮ ಹೊಂದಿರುವ ಮಾದರಿಯು ಎರಡು ಬ್ರಾಂಡ್‌ಗಳ ನಡುವಿನ ಜಂಟಿ ಉದ್ಯಮದಲ್ಲಿ ಮೂಡಿ ಬಂದಿರುವ ವಾಹನವಾಗಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಮತ್ತು ಫೋಕ್ಸ್‌ವ್ಯಾಗನ್ ಟಿಗೂನ್‌ಗಳಿಗೆ ಪೈಪೋಟಿ ನೀಡಲು ಸಾಕಷ್ಟು ಹೊಸತನಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಮುಂಬರುವ ಟೊಯೊಟಾ-ಮಾರುತಿ ಎಸ್‌ಯುವಿ ತಂತ್ರಜ್ಞಾನದಲ್ಲೂ ರಾಜಿಯಿಲ್ಲದೇ ಹೆಚ್ಚುವರಿ ಫೀಚರ್ಸ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ನಿಟ್ಟಿನಲ್ಲಿ ಈ ವಾಹನದ ಕುರಿತು ನೀವು ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ವಿಷಯಗಳು ಇಲ್ಲಿವೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ವಿನ್ಯಾಸ

ವಿನ್ಯಾಸವು ಟೊಯೊಟಾ D22 ಯಾರಿಸ್ ಕ್ರಾಸ್, RAV4 ಮತ್ತು ಕೊರೊಲ್ಲಾ ಕ್ರಾಸ್‌ನಿಂದ ಸ್ಫೂರ್ತಿ ಪಡೆದಿದೆ, ಇದನ್ನು ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಪರೀಕ್ಷಿಸಲಾಗಿದೆ. ಹಿಂದಿನ ಸ್ಪೈ ಚಿತ್ರಗಳಲ್ಲಿ ನೋಡಿದಂತೆ, SUV ಡ್ಯುಯಲ್ LED DRL ಗಳೊಂದಿಗೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ಸಿಗ್ನೇಚರ್ ಟೊಯೋಟಾ ಗ್ರಿಲ್ ಅನ್ನು ಹೊಂದಿರುತ್ತದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

SUV ಯ ಮುಂಭಾಗದ ಬಂಪರ್ ಮೆಶ್ ಮಾದರಿಯೊಂದಿಗೆ ಏರ್-ಡ್ಯಾಮ್ ಅನ್ನು ಪಡೆಯುತ್ತದೆ. ನೀವು ಎರಡು ಬದಿಗಳ ಸುತ್ತಲೂ ಚೌಕಾಕಾರದ ಚಕ್ರ ಕಮಾನುಗಳನ್ನು ಸಹ ನೋಡಬಹುದು. ಇವು ಕಾರಿಗೆ ಆಕರ್ಷಣೀಯ ಲುಕ್ ನೀಡುವ ಜೊತೆಗೆ ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತವೆ. ಇದು ವಾಹನಕ್ಕೆ ಪ್ಲಸ್‌ ಪಾಯಂಟ್‌ ಎಂದೇ ಹೇಳಬಹುದು.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ವೈಶಿಷ್ಟ್ಯಗಳು

ಒಳಗೆ, SUV ಟೊಯೊಟಾ ಕೊರೊಲ್ಲಾ ಕ್ರಾಸ್‌ನೊಂದಿಗೆ ಬಹಳಷ್ಟು ಹೋಲಿಕೆಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸ್ವಯಂಚಾಲಿತ ಎಸಿ, ಸಂಪರ್ಕಿತ ಕಾರ್ ತಂತ್ರಜ್ಞಾನ, ಸ್ವಯಂಚಾಲಿತ ವೈಪರ್‌ಗಳು ಮತ್ತು ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುವು ನಿರೀಕ್ಷೆ ಇದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಟೊಯೊಟಾ D22 ಆವೃತ್ತಿಯು ORVM ಗಳು, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಒಳಗೊಂಡಿರುತ್ತದೆ. ಟೊಯೊಟಾ ಬಹು ನಿರೀಕ್ಷಿತ ಎಸ್‌ಯುವಿಯಲ್ಲಿ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ವೈಶಿಷ್ಟ್ಯಗಳನ್ನು (ಎಡಿಎಎಸ್) ನೀಡುವ ನಿರೀಕ್ಷೆಯಿದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಟೊಯೋಟಾ ಹೈಬ್ರಿಡ್ ಸಿಸ್ಟಮ್

ಮಾರುತಿ ಸುಜುಕಿ ಮತ್ತು ಟೊಯೋಟಾ ಎಲೆಕ್ಟ್ರಿಕ್ ವಾಹನಗಳಿಗಿಂತ ಮುಂಚಿತವಾಗಿ ಭಾರತೀಯ ಮಾರುಕಟ್ಟೆಗೆ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ತರಲು ಯೋಜಿಸುತ್ತಿವೆ. ಮುಂಬರುವ ಟೊಯೋಟಾ-ಮಾರುತಿ SUV ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅವುಗಳನ್ನು ಸೌಮ್ಯ ಹೈಬ್ರಿಡ್ ಮತ್ತು ಬಲವಾದ ಹೈಬ್ರಿಡ್ ಘಟಕಗಳಾಗಿ ವಿಂಗಡಿಸಬಹುದು.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಮೊದಲನೆಯದು 1.5-ಲೀಟರ್ K15 C ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್ ಅನ್ನು SHVS ಸೌಮ್ಯ-ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ. ಎರಡನೆಯದು ವಿದ್ಯುತ್ ವ್ಯವಸ್ಥೆಯೊಂದಿಗೆ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ. ಇದು ತನ್ನ ಹಿಂದಿನ ಮಾದರಿಗಳಿಗಿಂತ ಗರಿಷ್ಟ ಫೀಚರ್ಸ್‌ ಒಳಗೊಂಡಿರಲಿದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

ಪ್ಲಾಟ್‌ಫಾರ್ಮ್

ಕೆಲವು ವರದಿಗಳ ಪ್ರಕಾರ, ಹೊಸ ಮಾರುತಿ-ಟೊಯೊಟಾ SUV ಟೊಯೊಟಾದ ಡೈಹಟ್ಸು ನ್ಯೂ ಜನರೇಷನ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ (DNGA) ನ ನವೀಕರಿಸಿದ ಆವೃತ್ತಿಯನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ ವಿವಿಧ ಟೊಯೋಟಾ ಎಸ್‌ಯುವಿಗಳಿಗೆ ಆಧಾರವಾಗಿರುವ ಡಿಎನ್‌ಜಿಎ ಪ್ಲಾಟ್‌ಫಾರ್ಮ್ ವಿಭಿನ್ನ ಬಾಡಿ ಶೈಲಿಗಳಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

 ಟೊಯೊಟಾ-ಮಾರುತಿ ಜಂಟಿಯಾಗಿ ನಿರ್ಮಿಸುತ್ತಿರುವ ಹೊಸ SUV ಕುರಿತ ಆಸಕ್ತಿಕರ ವಿಷಯಗಳು!

2022 ರ ಮಧ್ಯದಲ್ಲಿ ಪ್ರಸ್ತುತಿ

ಟೊಯೊಟಾ-ಮಾರುತಿ ಎಸ್‌ಯುವಿಯ ಪರೀಕ್ಷಾ ಮಾದರಿಯನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಹಲವಾರು ಬಾರಿ ಪರೀಕ್ಷಿಸಲಾಗಿದೆ. ಟೊಯೋಟಾ D22 SUV ಯ ಅಧಿಕೃತ ಬಿಡುಗಡೆಯನ್ನು ಜೂನ್-ಜುಲೈ 2022 ರಲ್ಲಿ ನಿರೀಕ್ಷಿಸಲಾಗಿದೆ. ನಂತರ ಕಂಪನಿಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ವಾಹನದ ಬೆಲೆ ಮತ್ತು ವಿತರಣೆಯನ್ನು ಘೋಷಿಸಲು ಪ್ರಾರಂಭಿಸಲಿವೆ.

Most Read Articles

Kannada
English summary
Top things to know about the upcoming toyota maruti mid size suv details
Story first published: Tuesday, May 17, 2022, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X