ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ 10 ಅತಿದೊಡ್ಡ ಫ್ಲಾಪ್ ಕಾರುಗಳು: ಮಹೀಂದ್ರಾದಿಂದ ಟಾಟಾವರೆಗೆ..

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅನೇಕ ಕಾರು ತಯಾರಕರು, ಹಲವಾರು ಹೊಸ ಹಾಗೂ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಮಾದರಿಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಅವುಗಳಲ್ಲಿ ಹೆಚ್ಚಿನವು ಯಶಸ್ವಿಯಾದರೆ, ಕೆಲವು ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತವೆ. ಇಲ್ಲಿ ದೇಶದ ವಾಹನ ಇತಿಹಾಸದಲ್ಲಿ ಫ್ಲಾಪ್ ಆಗಿರುವ 10 ಕಾರುಗಳು ಯಾವುದೆಂದು ತಿಳಿಯೋಣ.

ಒಪೆಲ್ ವೆಕ್ಟ್ರಾ:
ಭಾರತದಲ್ಲಿ ಒಪೆಲ್ ಬ್ರ್ಯಾಂಡ್ ಬಹಳ ಕಡಿಮೆ ಅವಧಿ ಅಸ್ತಿತ್ವದಲ್ಲಿತ್ತು. ಆಗ ದೇಶೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಕೊರ್ಸಾ ಮತ್ತು ಅಸ್ಟ್ರಾ ಸೆಡಾನ್‌ನಂತಹ ಮಾದರಿಗಳನ್ನು ಬಿಡುಗಡೆ ಗೊಳಿಸಿತ್ತು. ಬಳಿಕ, ಒಪೆಲ್ ವೆಕ್ಟ್ರಾ ಸೆಡಾನ್ ಅನ್ನು ಲಾಂಚ್ ಮಾಡಿತು. ಆದರೆ, ಬೆಲೆ ರೂ. 16.75 ಲಕ್ಷ ಇತ್ತು. ಆ ಸಮಯದಲ್ಲಿ ಭಾರತೀಯ ಮಾರುಕಟ್ಟೆಗೆ ಇದು ದುಬಾರಿಯಾಗಿತ್ತು. ವೆಕ್ಟ್ರಾ 2.2 ಲೀಟರ್ 146 ಬಿಎಚ್‌ಪಿ ಪೆಟ್ರೋಲ್ ಎಂಜಿನ್‌ ಹೊಂದಿತ್ತು. ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿತ್ತು. ಆದಾಗ್ಯೂ ಹೆಚ್ಚು ವಿಶ್ವಾಸಾರ್ಹವಾಗಿರಲಿಲ್ಲ. ನಿರ್ವಹಣೆಯು ತುಂಬಾ ದುಬಾರಿಯಾಗಿತ್ತು. ಇದೇ ವಿಫಲತೆಗೆ ಕಾರಣವಾಯಿತು.

ಫೋರ್ಡ್ ಫ್ಯೂಷನ್:
ಪ್ರಸ್ತುತ ಭಾರತದಲ್ಲಿ ಕ್ರಾಸ್ಒವರ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇಕೋಸ್ಪೋರ್ಟ್ ಅನ್ನು ಪ್ರಾರಂಭಿಸುವ ಮೊದಲು, ಫೋರ್ಡ್ ಮಾರುಕಟ್ಟೆಯಲ್ಲಿ ಫ್ಯೂಷನ್ ಅನ್ನು ಲಾಂಚ್ ಮಾಡಿತ್ತು. ಬಾಕ್ಸಿ ವಿನ್ಯಾಸ ಮತ್ತು ಫ್ಯೂಷನ್‌ನ ನೇರ ವಿನ್ಯಾಸವು ಭಾರತದಲ್ಲಿ ಅನೇಕರಿಗೆ ಇಷ್ಟವಾಗಲಿಲ್ಲ. ಆ ದಿನಗಳಲ್ಲಿ ಫೋರ್ಡ್ ಕಾರೂಗಳನ್ನು ನಿರ್ವಹಿಸುವುದು ತುಂಬಾ ದುಬಾರಿಯಾಗಿತ್ತು. ಫ್ಯೂಷನ್ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರಲಿಲ್ಲ. ಇದು 1.6 ಲೀಟರ್ 105Ps ಪೆಟ್ರೋಲ್, 1.4 ಲೀಟರ್ 68Ps ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಸಿಗುತಿತ್ತು.

ಷೆವರ್ಲೆ SR-V & ಮಹೀಂದ್ರಾ ನುವೋಸ್ಪೋರ್ಟ್:
ಷೆವರ್ಲೆ SR-V, ಆಪ್ಟ್ರಾ ಸೆಡಾನ್‌ನಂತೆಯೇ 1.6 ಲೀಟರ್ ಎಂಜಿನ್ ಹೊಂದಿತ್ತು. SR-V ದುಬಾರಿ ಕಾರಗಿತ್ತು. ಭಾರತೀಯರು ಹ್ಯಾಚ್‌ಬ್ಯಾಕ್‌ಗೆ ಹೆಚ್ಚು ಖರ್ಚು ಮಾಡಲು ಸಿದ್ಧರಿರಲಿಲ್ಲ. ಇದರಿಂದಾಗಿ ಷೆವರ್ಲೆ ದೇಶದಲ್ಲಿ SR-V ಅನ್ನು ದೀರ್ಘಾವಧಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮಹೀಂದ್ರಾ ತನ್ನ ಪೋರ್ಟ್‌ಫೋಲಿಯೊದಲ್ಲಿ ಹಲವಾರು ಯಶಸ್ವಿ ಎಸ್‌ಯುವಿಗಳನ್ನು ಹೊಂದಿದೆ. ಕ್ವಾಂಟೊ ಎಂದು ಕರೆಯಲ್ಪಡುವ ಕ್ಸೈಲೋ ಸಬ್-4 ಮೀಟರ್ ಆವೃತ್ತಿಯೊಂದಿಗೆ ಮಹೀಂದ್ರಾ ಈ ವಿಭಾಗದಲ್ಲಿ ಅದೃಷ್ಟ ಪರೀಕ್ಷಿಸಿತು. ಜೊತೆಗೆ ಗ್ರಾಹಕರನ್ನು ಆಕರ್ಷಕವಾಗಿಸಲು ನುವೋಸ್ಪೋರ್ಟ್ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ ವಿಫಲವಾಯಿತು.

ಟಾಟಾ ಬೋಲ್ಟ್:
ಟಾಟಾ ಇಂಡಿಕಾ ವಿಸ್ಟಾದ ಮುಂದುವರಿದ ಆವೃತ್ತಿಯಾಗಿ ಬೋಲ್ಟ್ ಅನ್ನು ಪ್ರಾರಂಭಿಸಿತು. ಇದು ಉತ್ತಮ ಕಾರಾಗಿತ್ತು ಎಂದು ಹೇಳಬಹುದು. ಇದರ ವಿನ್ಯಾಸವು ವಿಸ್ಟಾ ಹ್ಯಾಚ್‌ಬ್ಯಾಕ್‌ಗೆ ರೀತಿಯೇ ಇತ್ತು. ಇದೇ ಕಾರಣಕ್ಕೆ ಖರೀದಿದಾರರಿಗೆ ಇಷ್ಟವಾಗಲಿಲ್ಲ. ಟಾಟಾ ನಂತರ ಟಿಯಾಗೊ ಕಾರಿಗೆ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಿತು. ಅದು ಮಾರುಕಟ್ಟೆಯಲ್ಲಿ ಹಿಟ್ ಆಯಿತು. ನಂತರ, ಬೋಲ್ಟ್ ಅನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. ಇದು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿತ್ತು.

ಮಿತ್ಸುಬಿಷಿ ಸೆಡಿಯಾ:
ಲ್ಯಾನ್ಸರ್ ನಂತರ, 'ಮಿತ್ಸುಬಿಷಿ' ಸೆಡಿಯಾ ಸೆಡಾನ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿತ್ತು. ಇದು ಹೋಂಡಾ ಸಿಟಿಯಂತಹ ಕಾರುಗಳಿಗೆ ಭಾರೀ ಪ್ರತಿಸ್ಪರ್ಧಿಯಾಗಿತ್ತು. ಮಿತ್ಸುಬಿಷಿ ಸೆಡಿಯಾವನ್ನು ಲ್ಯಾನ್ಸರ್‌ಗೆ ಪ್ರೀಮಿಯಂ ಮತ್ತು ಸ್ಪೋರ್ಟಿಯರ್ ಪರ್ಯಾಯವಾಗಿ ಪ್ರಾರಂಭಿಸಲಾಯಿತು. ಆದರೆ, ಇದು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಭಿನ್ನ ಕಾರಣಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಗ್ರಾಹರನ್ನು ಸೆಳೆಯಲು ವಿಫಲವಾಯಿತು. ಇದನ್ನು ವಾಸ್ತವವಾಗಿ 2.0 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಖರೀದಿಗೆ ನೀಡಲಾಗಿತ್ತು.

ನಿಸ್ಸಾನ್ ಇವಾಲಿಯಾ:
ಇದು ಅತ್ಯಂತ ವಿಶಾಲವಾದ ಎಂವಿಪಿ (ಬಹುಪಯೋಗಿ ವಾಹನ) ಆಗಿತ್ತು. ಆದರೆ, ಕೆಲವು ಕಾರಣಗಳಿಂದ, ಇದು ಭಾರತೀಯ ಗ್ರಾಹಕರಿಗೆ ಇಷ್ಟವಾಗಲಿಲ್ಲ. ಇದು ತುಂಬಾ ಬಾಕ್ಸಿಯಾಗಿತ್ತು. ಅಲ್ಲದೆ, ಆಂತರಿಕ ಗುಣಮಟ್ಟವು ಅಷ್ಟಾಗಿ ಉತ್ತಮವಾಗಿಲ್ಲ. ಇವೆಲ್ಲದರ ಹೊರತಾಗಿ ನಿಸ್ಸಾನ್ ಇವಾಲಿಯಾ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಎರ್ಟಿಗಾ ಮತ್ತು ರೆನಾಲ್ಟ್ ಲಾಡ್ಜಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿತ್ತು ಎಂದು ಹೇಳಬಹುದು. ಇದು 1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿತ್ತು.

ರೆನಾಲ್ಟ್ ಕ್ಯಾಪ್ಚರ್ & ದಟ್ಸನ್ ಗೋ+:
ರೆನಾಲ್ಟ್ ಕ್ಯಾಪ್ಟರ್, ಫ್ರೆಂಚ್ ಕಾರು ತಯಾರಕರ ಅತಿದೊಡ್ಡ ವೈಫಲ್ಯವಾಗಿದೆ. ಇದು ಪ್ರೀಮಿಯಂ ವಿನ್ಯಾಸ, 1.6 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್‌ ಹೊಂದಿತ್ತು. ಆದರೆ, ಭಾರತೀಯ ಗ್ರಾಹಕರಿಗೆ ಇಷ್ಟವಾಗಲಿಲ್ಲ. ಅಲ್ಲದೆ, ಕಡಿಮೆ ಮಾರಾಟದ ಕಾರಣ, ದಟ್ಸನ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಬ್ರ್ಯಾಂಡ್ ಆರಂಭದಲ್ಲಿ GO ಹ್ಯಾಚ್‌ಬ್ಯಾಕ್‌ನೊಂದಿಗೆ ಪ್ರಾರಂಭವಾಯಿತು. ನಂತರ, ಹ್ಯಾಚ್‌ಬ್ಯಾಕ್‌ನ ವಿಸ್ತೃತ ಆವೃತ್ತಿ ಗೋ ಪ್ಲಸ್ ಪರಿಚಯಿಸಿತು. ಆದಾಗ್ಯೂ, ದಟ್ಸನ್‌ನ ಈ ಕಾರು ಕಡಿಮೆ ಬೆಲೆಯಲ್ಲಿ ಇದ್ದರೂ ಗ್ರಾಹರನ್ನು ಸೆಳೆಯಲು ವಿಫಲವಾಯಿತು.

ಫಿಯೆಟ್ ಅರ್ಬನ್ ಕ್ರಾಸ್:
ಫಿಯೆಟ್ ಅವ್ವೆಂಚುರಾನಂತಹ ಹೊಸ ಕಾರಿನ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸಿತ್ತು. ಆದರೆ, ಇದು ಉತ್ತಮವಾಗಿರಲಿಲ್ಲ. ಈ ಸಮಸ್ಯೆ ಸರಿಪಡಿಸಲು ಅರ್ಬನ್ ಕ್ರಾಸ್ ಲಾಂಚ್ ಮಾಡಿತು. ಆದರೆ, ಫಿಯೆಟ್ ಅರ್ಬನ್ ಕ್ರಾಸ್ ಹೆಚ್ಚುಕಾಲ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಇದನ್ನು 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿತ್ತು. ಒಟ್ಟಾರೆಯಾಗಿ ಕೆಲವೊಂದು ಕಾರಣಗಳಿಗೆ ದೊಡ್ಡ- ದೊಡ್ಡ ಕಂಪನಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ವಿಫಲವಾಗಿವೆ.

Most Read Articles

Kannada
English summary
10 biggest flop cars in indian automobile history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X