ಬಹುನಿರೀಕ್ಷಿತ ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್, ತನ್ನ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಬೈಕ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೀರೋ ಗ್ಲಾಮರ್ Xtec ಇನ್ಮುಂದೆ ಫ್ಲೆಕ್ಸ್ ಫ್ಯುಯೆಲ್ ಮಾದರಿಯಾಗಿ ಖರೀದಿಗೆ ಸಿಗಲಿದೆ.

ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಮಾದರಿಯು ಬಹುತೇಕ ನೋಡಲು ಹಿಂದಿನ ಮಾದರಿಯಂತೆ ಕಾಣಲಿದ್ದು, ಅದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಎಥೆನಾಲ್ ಆಧಾರಿತ ಫ್ಯುಯೆಲ್ ಮೂಲಕ ಕಾರ್ಯ ನಿರ್ವಹಿಸಲಿದೆ (E20 ರಿಂದ E85: ಅಂದರೆ ಕಾಲು ಭಾಗದಷ್ಟು ಎಥೆನಾಲ್ ಹಾಗೂ ಮುಕ್ಕಾಲು ಭಾಗದಷ್ಟು ಪೆಟ್ರೋಲ್). ಮುಂಬರುವ ದಿನಗಳಲ್ಲಿ ಆಕರ್ಷಕ ಲುಕ್ ಹೊಂದಿರುವ ಈ ಬೈಕ್ ಖರೀದಿಸಲು ಗ್ರಾಹಕರು ಆಸಕ್ತಿ ತೋರಬಹುದು.

ಬಹುನಿರೀಕ್ಷಿತ ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 124.7 ಸಿಸಿ, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6,000 rpm ನಲ್ಲಿ 10.06 bhp ಗರಿಷ್ಠ ಪವರ್ ಮತ್ತು 7,500 rpm ನಲ್ಲಿ 10.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಎಂಜಿನ್ ಅನ್ನು 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹಾಗಾಗಿ, ಕಾರ್ಯಕ್ಷಮತೆಯ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ ಎಂದು ಹೇಳಬಹುದು.

ಈ ಹೊಸ ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಮೋಟಾರ್ ಸೈಕಲ್, ಸವಾರರಿಗೆ ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ. ಈ ಬೈಕ್ 2,051 ಎಂಎಂ ಉದ್ದ, 743 ಎಂಎಂ ಅಗಲ, 1,074 ಎಂಎಂ ಎತ್ತರ ಮತ್ತು 1,273 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ ವಿಚಾರಕ್ಕೆ ಬಂದರೆ, ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯೂಯಲ್ ಮೋಟಾರ್‌ಸೈಕಲ್ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ. ಜೊತೆಗೆ 198 ಕೆಜಿ ತೂಕವನ್ನು ಹೊಂದಿದೆ.

ಬಹುನಿರೀಕ್ಷಿತ ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಬೈಕ್ ನ ಕಾರ್ಯಕ್ಷಮತೆ ಮತ್ತು ಮೈಲೇಜ್ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ವಿವರ ಲಭ್ಯವಾಗುವ ಸಾಧ್ಯತೆ ಇದೆ. ಈ ನೂತನ ಬೈಕ್, ಭಾರತದ ಮಾರುಕಟ್ಟೆಗೆ ಬಂದ ಮೇಲೆ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡು ಮುಂಬರಲಿರುವ ಫ್ಲೆಕ್ಸ್ ಫ್ಯುಯೆಲ್ ಬೈಕ್ ಗಳಾದ ಸುಜುಕಿ Gixxer 250 ಫ್ಲೆಕ್ಸ್ ಫ್ಯುಯೆಲ್ ಮತ್ತು ಹೋಂಡಾ XRE 300 ಫ್ಲೆಕ್ಸ್ ಫ್ಯುಯೆಲ್ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಹೀರೋ ಗ್ಲಾಮರ್ Xtec ಆರಂಭಿಕ ಬೆಲೆ ರೂ.86,448 ಇದ್ದು, 2 ರೂಪಾಂತರಗಳು ಮತ್ತು 4 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಬ್ಲ್ಯಾಕ್, ರೆಡ್ ಮತ್ತು ಗ್ರೇ. ಟಾಪ್ ಎಂಡ್ ಮಾದರಿ ಬೆಲೆ ರೂ. 91,035 ಇದೆ. ಈ ಬೈಕ್, 124.7ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 10.72 bhp ಗರಿಷ್ಠ ಪವರ್ ಮತ್ತು 10.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಫ್ರಂಟ್ ಮತ್ತು ರೇರ್ ಎರಡೂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಬಹುನಿರೀಕ್ಷಿತ ಹೀರೋ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ಈ ಬೈಕ್ 122 ಕೆಜಿ ತೂಕವಿದೆ. 10 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿದೆ. ಬ್ಲೂಟೂತ್ ಇಂಟಿಗ್ರೇಷನ್ ಇರುವುದರಿಂದ ರೈಡರ್, SMS ಮತ್ತು ಕಾಲ್ ಅಲರ್ಟ್ ಪಡೆಯಬಹುದು. USB ಫೋನ್ ಚಾರ್ಜರ್ ಸಹ ಇದೆ. ಹೆಡ್‌ಲೈಟ್ ಹೆಚ್ಚು ಬ್ರೈಟ್ನೆಸ್ ಹೊಂದಿದೆ ಎಂದು ಹೇಳಬಹುದು. ಇದು ಹೋಂಡಾ ಗ್ಲಾಮರ್ SP 125 ಮತ್ತು ಬಜಾಜ್ ಪಲ್ಸರ್ 125ಗೆ ಭಾರೀ ಪೈಪೋಟಿ ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Auto expo 2023 hero glamor xtec flex fuel unveiled
Story first published: Sunday, January 15, 2023, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X