Auto Expo 2023: 400 ಕಿ.ಮೀ ರೇಂಜ್ ಹೊಂದಿರುವ MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ 2023ರ ಆಟೋ ಎಕ್ಸ್‌ಪೋದಲ್ಲಿ (Auto expo 2023) ತನ್ನ ಹೊಸ MG5 ಎಲೆಕ್ಟ್ರಿಕ್ ಎಸ್ಟೇಟ್ ಅನ್ನು ಪ್ರದರ್ಶಿಸಿದೆ. ಈ MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರನ್ನು ಯುರೋಪ್‌ನಲ್ಲಿ 2022ರ ಮಾರ್ಚ್ ತಿಂಗಳಿನಲ್ಲಿ ಪರಿಚಯಿಸಿದ್ದರು. MG5 ಎಸ್ಟೇಟ್ ಪ್ರಪಂಚದ ಮೊದಲ ಆಲ್-ಎಲೆಕ್ಟ್ರಿಕ್ ಸ್ಟೇಷನ್ ವ್ಯಾಗನ್ ಆಗಿದೆ.

ಹೊಸ MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಎರಡು ಬ್ಯಾಟರಿ ರೂಪಾಂತರಗಳೊಂದಿಗೆ ಲಭ್ಯವಿದೆ. ಎಂಜಿ5 ಜೊತೆಗೆ ಬ್ರಿಟಿಷ್ ಕಾರು ತಯಾರಕರು ಎಂಜಿ4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಏರ್ ಇವಿ ಅನ್ನು ಪ್ರೀ-ಪ್ರೊಡಕ್ಷನ್ ರೂಪದಲ್ಲಿ ಇಂಡಿಯನ್ ಆಟೋ ಎಕ್ಸ್‌ಪೋದ 16 ನೇ ಆವೃತ್ತಿಯಲ್ಲಿ ಪ್ರದರ್ಶಿಸಿದ್ದಾರೆ. ಎಂಜಿ5 ಎಲೆಕ್ಟ್ರಿಕ್ ಸ್ಟೇಷನ್ ವ್ಯಾಗನ್ ಸಾಕಷ್ಟು ಪ್ರಾಯೋಗಿಕತೆ ಮತ್ತು ಕ್ರಿಯಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರು 4,600 mm ಉದ್ದ, 1,818 mm ವಿಡ್ಟ್ ಮತ್ತು 1,543 mm ಎತ್ತರವನ್ನು ಹೊಂದಿದೆ.

Auto expo 2023: MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಅನಾವರಣ

ಇದರೊಂದಿಗೆ 2,66 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಸ್ಟೇಷನ್ ವ್ಯಾಗನ್ ಮುಂಭಾಗ ಮತ್ತು ಹಿಂಭಾಗದಲ್ಲಿ 27 ಶೇಖರಣಾ ವಿಭಾಗಗಳೊಂದಿಗೆ ವಿಶಾಲವಾದ ಒಳಾಂಗಣವನ್ನು ನೀಡುತ್ತದೆ. ಇದು 479-ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ನೀಡುತ್ತದೆ, ಈ ಕಾರಿನ ಹಿಂದಿನ ಸೀಟ್‌ಗಳನ್ನು ಮಡಿಚಿದರೆ 1,367 ಲೀಟರ್‌ಗಳಿಗೆ ವಿಸ್ತರಿಸಬಹುದು. ಈ ಎಂಜಿ5 ಎಲೆಕ್ಟ್ರಿಕ್ ಗರಿಷ್ಠ 500 kg ಟೋವಿಂಗ್ ತೂಕವನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಕ್ಯಾರಿಯರ್ ಮತ್ತು ರೂಫ್ ಬಾಕ್ಸ್ಗೆ ಸೂಕ್ತವಾಗಿದೆ.

ಈ ಎಂಜಿ ಎಲೆಕ್ಟ್ರಿಕ್ ಕಾರು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಕಾರಿನಲ್ಲಿ 61.1 kWh ಬ್ಯಾಟರಿ ಮತ್ತು 50.3 kWh ಅನ್ನು ಒಳಗೊಂಡಿದೆ. ಇದರಲ್ಲಿ 61.1 kWh ಬ್ಯಾಟರಿ ಪ್ಯಾಕ್ ಸಿಂಗಲ್ 400 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರೊಂದಿಗೆ 156 ಬಿಹೆಚ್‍ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನಿಂದ ನಡೆಸಲ್ಪಡುತ್ತವೆ. ಇನ್ನು 50.3kWh ಬ್ಯಾಟರಿ ಪ್ಯಾಕ್ 320 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಮೋಟಾರ್ 177 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Auto expo 2023: MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಅನಾವರಣ

MG5 ಎಲೆಕ್ಟ್ರಿಕ್ ಎಸ್ಟೇಟ್ 8.3 ಸೆಕೆಂಡ್‌ಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರು 185 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಸ್ಟ್ಯಾಂಡರ್ಡ್ ಮತ್ತು ಲಾಂಗ್ ರೇಂಜ್ ಆವೃತ್ತಿಗಳು 3-ಫೇಸ್ AC ಚಾರ್ಜಿಂಗ್ ಸಾಮರ್ಥ್ಯವನ್ನು ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ನಲ್ಲಿ (AC) 11kW ವರೆಗೆ ನೀಡುತ್ತವೆ. ಎರಡೂ ಬ್ಯಾಟರಿಗಳು 87 kW ವರೆಗೆ DC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ, ಇದು ಸುಮಾರು 40 ನಿಮಿಷಗಳಲ್ಲಿ 80% ವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳಲ್ಲಿ PM2.5 ಏರ್ ಫಿಲ್ಟರ್, LED ಲೈಟಿಂಗ್ ಹಿಟೇಡ್ ಮುಂಭಾಗದ ಸೀಟುಗಳು. ಪಾರ್ಕಿಂಗ್ ನೆರವು, 7-ಇಂಚಿನ ಡಿಜಿಟಲ್ ಕ್ಲಸ್ಟರ್, 16-ಇಂಚಿನ ಅಲಾಯ್ ವ್ಹೀಲ್ ಗಳು, ಕೀಲೆಸ್ ಎಂಟ್ರಿ ಮತ್ತು ಇತರವುಗಳೊಂದಿಗೆ AC ಸೇರಿವೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್‌ನೊಂದಿಗೆ ಮುಂಭಾಗದ ಕೊಲಿಷನ್ ಅಲರ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಟ್ರಾಫಿಕ್ ಜಾಮ್ ಸಹಾಯದಂತಹ ವೈಶಿಷ್ಟ್ಯಗಳೊಂದಿಗೆ ಎಸ್‍ಯುವಿ (ADAS) ಸಿಸ್ಟಂಗಳೊಂದಿಗೆ ಬರುತ್ತದೆ.

Auto expo 2023: MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಅನಾವರಣ

ಇನ್ನು ಈ ಹೊಸ ಎಂಜಿ ಎಲೆಕ್ಟ್ರಿಕ್ ಕಾರಿನ ಟಾಪ್ ರೂಪಾಂತರವು ಕ್ಲೈಮೇಟ್ ಕಂಟ್ರೋಲ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಲುಂಬಾರ್ ಸಪೋರ್ಟ್, ಲೆಥೆರೆಟ್ ಅಪ್ಹೋಲ್ಸ್ಟರಿ ಮತ್ತು 17-ಇಂಚಿನ ಲಾಯ್ ವ್ಹೀಲ್ ಗಳನ್ನು ಒಳಗೊಂಡಂತೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ಬರುತ್ತದೆ. ಇನ್ನು ಈ ಹೊಸ ಎಂಜಿ ಕಾರಿನಲ್ಲಿ ನ್ಯಾವಿಗೇಷನ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಹೊಂದಿಕೊಳ್ಳುತ್ತದೆ.

ಇದು ನಾಲ್ಕು USB ಪೋರ್ಟ್‌ಗಳು, DAB+ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಸಂಪರ್ಕವನ್ನು ಪಡೆಯುತ್ತದೆ, ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು 2023ರ ಆಟೋ ಎಕ್ಸ್‌ಪೋದಲ್ಲಿ ಎಂಜಿ4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಪ್ರದರ್ಶಿಸಿದೆ. ಈ ಹೊಸ ಎಂಜಿ4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಳೆದ ವರ್ಷ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು ಮತ್ತು ಗ್ರಾಹಕರ ಪ್ರತಿಕ್ರಿಯೆ ಪಡೆಯಲು ಮಾತ್ರ ಭಾರತಕ್ಕೆ ತರಲಾಗಿದೆ. MG4 ಎಲೆಕ್ಟ್ರಿಕ್ ಕಾರಿನಲ್ಲಿ AICನ ಬ್ಯಾಟರಿ-ಎಲೆಕ್ಟ್ರಿಕ್ ಮಾಡ್ಯುಲರ್ ಸ್ಕೇಲೆಬಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

Most Read Articles

Kannada
English summary
Auto expo 2023 mg5 electric estate showcased range features details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X