ಚೀನಾ ಕಾರಿಗೆ ಬೇಡಿಕೆ ಹೆಚ್ಚಳ...ಬೆಂಗಳೂರಿನಲ್ಲಿ 2ನೇ ಶೋರೂಂ ತೆರೆದ BYD ಇಂಡಿಯಾ

ವಿಶ್ವದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ BYD ಬೆಂಗಳೂರಿನಲ್ಲಿ ತನ್ನ ಎರಡನೇ ಪ್ರಯಾಣಿಕ ವಾಹನ ಶೋರೂಂ ಅನ್ನು ಉದ್ಘಾಟಿಸಿದ್ದು, ಈ ಹೊಸ ಶೋರೂಮ್ ಅನ್ನು ಪಿಪಿಎಸ್ ಮೋಟಾರ್ಸ್ ನಿರ್ವಹಿಸಲಿದೆ. ದೇಶದಲ್ಲಿ ಬಿವೈಡಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ನಗರಗಳಲ್ಲೂ ಶೋರೂಂಗಳು ತೆರೆಯುವುದಾಗಿ ಕಂಪನಿ ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಹೊಸದಾಗಿ ತೆರೆಯಲಾಗಿರುವ ಶೋರೂಂ ಬಗ್ಗೆ ಮಾತನಾಡುವುದಾದರೆ, ಹೆಚ್ಚಿನ ಆಟೋಮೊಬೈಲ್ ಡೀಲರ್‌ಗಳು ಇರುವ ನಗರದ ಮಹದೇವಪುರದ ಸಾಫ್ಟ್‌ವೇರ್ ಹಬ್‌ನಲ್ಲಿನ ಪಿಪಿಎಸ್ ಮೋಟಾರ್ಸ್ ಕರ್ನಾಟಕದಲ್ಲಿರುವ ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳೊಂದಿಗೆ BYD ಎಲೆಕ್ಟ್ರಿಕ್ ವಾಹನಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ಕಂಪನಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಬೆಂಗಳೂರಿನಲ್ಲಿಯೇ ಅತ್ಯಧಿಕ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಮಾರಾಟವಾಗಿರುವುದು ಗಮನಿಸಬೇಕಾದ ಸಂಗತಿ.

ಚೀನಾ ಕಾರಿಗೆ ಬೇಡಿಕೆ ಹೆಚ್ಚಳ...ಬೆಂಗಳೂರಿನಲ್ಲಿ 2ನೇ ಶೋರೂಂ ತೆರೆದ BYD ಇಂಡಿಯಾ

ಇನ್ನು ಹೊಸ ಶೋರೂಂ 4,300 ಚ.ಅಡಿಯಲ್ಲಿ ಹರಡಿದ್ದು ಸುಶಿಕ್ಷಿತ ತಂತ್ರಜ್ಞರು, ಸೇವಾ ಸಲಕರಣೆಗಳು, ಸೇವಾ ಬೇಗಳು, ಗ್ರಾಹಕರ ಕೋಣೆ ಮತ್ತು ಶೋರೂಂ ಡಿಸ್ಪ್ಲೇ ಫ್ಲೋರ್ ಅನ್ನು ಹೊಂದಿದೆ. ಗ್ರಾಹಕರಿಗೆ ಅತ್ಯುತ್ತಮ ಇನ್-ಸ್ಟೋರ್ ಅನುಭವವನ್ನು ನೀಡುತ್ತದೆ. ಪಿಪಿಎಸ್ ಮೋಟಾರ್ಸ್ ಕರ್ನಾಟಕದಾದ್ಯಂತ ದೊಡ್ಡದಾದ, ಸುಸ್ಥಾಪಿತವಾದ ಆಟೋಮೋಟಿವ್ ಡೀಲರ್ ನೆಟ್‌ವರ್ಕ್ ಅನ್ನು ಹೊಂದಿದೆ. ಇದರ ಮಾರಾಟ ಮತ್ತು ಮಾರಾಟದ ನಂತರದ ಗ್ರಾಹಕರ ತೃಪ್ತಿಗೆ ಹೆಸರುವಾಸಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಮಾತನಾಡಿ, "ಪಿಪಿಎಸ್ ಮೋಟಾರ್ಸ್‌ನೊಂದಿಗೆ ಬೆಂಗಳೂರಿನಲ್ಲಿ ನಮ್ಮ 2 ನೇ ಪ್ರಯಾಣಿಕ ಕಾರು ಡೀಲರ್‌ಶಿಪ್ ಉದ್ಘಾಟನೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಬೆಂಗಳೂರು ಮಾರುಕಟ್ಟೆಯನ್ನು ಆಳವಾಗಿ ಭೇದಿಸಲು ಸಹಾಯ ಮಾಡುತ್ತದೆ. ನಾವು ಪ್ರಸ್ತುತ ರಾಷ್ಟ್ರದಾದ್ಯಂತ ನಮ್ಮ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಶೀಘ್ರದಲ್ಲೇ ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಒದಗಿಸಲಾಗುವುದು ಎಂದರು.

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಇವಿ ಚಾರ್ಜಿಂಗ್ ಪಾಯಿಂಟ್‌ಗಳಿಗಾಗಿ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಸಜ್ಜಾಗುತ್ತಿದ್ದು, ಅನೇಕ ಇವಿ ಬಳಕೆದಾರರಿಗೆ ಅನುಕೂಲವಾಗುತ್ತದೆ. ಈ ಡೀಲರ್‌ಶಿಪ್ ಈ ಪ್ರದೇಶದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ನಾವು ಸಕಾರಾತ್ಮಕವಾಗಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಬೆಳವಣಿಗೆಗೆ ಅನುಗುಣವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಶೋರೂಂ ಸೇರಿದಂತೆ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಂಜಯ್ ಗೋಪಾಲಕೃಷ್ಣನ್ ವಿಶ್ವಾಸ ವ್ಯಕ್ತಪಡಿಸಿದರು.

PPS Motors ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಸಾಂಘ್ವಿ ಮಾತನಾಡಿ, "ನಾವು ಜಾಗತಿಕವಾಗಿ ಮತ್ತು ಭಾರತದಲ್ಲಿ BYD ಯ ಯಶಸ್ಸಿನ ಪ್ರಯಾಣವನ್ನು ವೀಕ್ಷಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮಹದೇವಪುರದಲ್ಲಿ ನಮ್ಮ 2ನೇ ಶೋರೂಂ ತೆರೆಯುವುದರೊಂದಿಗೆ BYD ಇಂಡಿಯಾದೊಂದಿಗೆ ಸಹಯೋಗ ಹೊಂದಲು ಮತ್ತು ಕರ್ನಾಟಕದಲ್ಲಿ ನಮ್ಮ ಒಡನಾಟವನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ನಾವು ಕರ್ನಾಟಕದಲ್ಲಿ ಬ್ರ್ಯಾಂಡ್‌ಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ, ಈಗಾಗಲೇ 100 ಕಾರುಗಳನ್ನು ವಿತರಿಸಿದ್ದೇವೆ ಎಂದರು.

ಜೊತೆಗೆ 300 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಳಿಸಿದ್ದು, BYD ಯಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ, ಗ್ರಾಹಕರ ಅಗತ್ಯತೆಗಳ ಬಗ್ಗೆ ನಮ್ಮ ಆಳವಾದ ತಿಳುವಳಿಕೆಯೊಂದಿಗೆ, ನಮ್ಮ ಗ್ರಾಹಕರಿಗೆ ಉತ್ತಮ ಮಾಲೀಕತ್ವದ ಅನುಭವವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ಈಗಾಗಲೇ ನಗರ ಗ್ರಾಹಕರು ಹೊಸ ಶೋರೂಂ ಬಗ್ಗೆ ಉತ್ಸುಕತೆ ವ್ಯಕ್ತಪಡಿಸುತ್ತಿದ್ದು, ಬಿವೈಡಿ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೊಸ ಮಾದರಿಗಳ ಕುರಿತು ತಿಳಿಯಲು ಹಾಗೂ ಬುಕ್ ಮಾಡಲು ಇಲ್ಲಿಗೆ ಬೇಟಿ ನೀಡಬಹುದು ಎಂದು ಹೇಳಿದರು.

BYD ಇಂಡಿಯಾ 2023 ರ ಅಂತ್ಯದ ವೇಳೆಗೆ ಕನಿಷ್ಠ 53 ಶೋರೂಮ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಜೊತೆಗೆ BYD ಇಂಡಿಯಾ ಈ ಬಾರಿಯ ಆಟೋ ಎಕ್ಸ್‌ಪೋ 2023 ನಲ್ಲಿ ಭಾಗವಹಿಸಲು ಸಜ್ಜಾಗಿದೆ. ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರಾರಂಭಿಸುತ್ತದೆ. BYD ಉತ್ತಮ ಜೀವನಕ್ಕಾಗಿ ತಾಂತ್ರಿಕ ಆವಿಷ್ಕಾರಗಳನ್ನು ಹತೋಟಿಗೆ ತರುವುದನ್ನು ಮುಂದುವರಿಸಲಿದೆ. ಹಾಗೆಯೇ ತನ್ನ 1° C ಮೂಲಕ ಭೂಮಿಯನ್ನು ತಂಪಾಗಿಸುವ ಉಪಕ್ರಮವನ್ನು ಕಾರ್ಯಗತಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Most Read Articles

Kannada
Read more on ಬಿವೈಡಿ byd
English summary
Byd India opens second showroom in bangalore
Story first published: Saturday, January 7, 2023, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X