ಭಾರತದಲ್ಲಿ ಖರೀದಿಗೆ ಸಿಗುವ ಅಗ್ಗದ ಡೀಸೆಲ್ ಕಾರುಗಳು: ಇಷ್ಟೇನಾ ಬೆಲೆ...

ಭಾರತೀಯ ಗ್ರಾಹಕರು ಹಿಂದಿನಿಂದಲೂ ಡೀಸೆಲ್ ಕಾರುಗಳನ್ನು ಇಷ್ಟಪಡುತ್ತಿದ್ದಾರೆ. ಅವು ಹೆಚ್ಚಿನ ಮೈಲೇಜ್, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. ಆದರೆ, ಇತ್ತೀಚಿಗೆ ಅನೇಕರು ಪೆಟ್ರೋಲ್ ಎಂಜಿನ್ ಕಾರುಗಳ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಎಮಿಷನ್ ಮಾನದಂಡಗಳ ಅನ್ವಯ, ಡೀಸೆಲ್ ಕಾರು ತಯಾರಿಸಲು ದೇಶದ ಆಟೋಮೊಬೈಲ್ ತಯಾರಕರು ಸಜ್ಜಾಗುತ್ತಿದ್ದಾರೆ.

ಆದರೆ, ಡೀಸೆಲ್ ಎಂಜಿನ್ ತಯಾರಿಕೆಗೆ ಹೆಚ್ಚಿನ ವೆಚ್ಚವಾಗುವ ಕಾರಣ, ಕೈಗೆಟುಕುವ ಬೆಲೆಯ ಡೀಸೆಲ್ ಕಾರುಗಳನ್ನು ನಿಲ್ಲಿಸಲು ಅನೇಕ ಕಾರು ತಯಾರಕರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಏಪ್ರಿಲ್ 2020ರಲ್ಲಿ BS-VI ಮಾನದಂಡಗಳ ಅನುಷ್ಠಾನದೊಂದಿಗೆ, ಮಾರುತಿ ಸುಜುಕಿ ಎಲ್ಲಾ ಡೀಸೆಲ್ ಎಂಜಿನ್‌ ಕಾರುಗಳಿಗೆ ಬೈ-ಬೈ ಹೇಳಿದೆ. ಏಪ್ರಿಲ್ 2023 ರಲ್ಲಿ ಎರಡನೇ ಹಂತದ ಎಮಿಷನ್ ಮಾನದಂಡದ ಅನುಷ್ಠಾನದೊಂದಿಗೆ, ಡೀಸೆಲ್ ಎಂಜಿನ್‌ಗಳು ಹೆಚ್ಚಿನ ಕಾರುಗಳಿಂದ ಹಂತಹಂತವಾಗಿ ಹೊರಗುಳಿಯುವ ಸಾಧ್ಯತೆಯಿದೆ.

ಡೀಸೆಲ್ ಕಾರುಗಳನ್ನು ಹುಡುಕುತ್ತಿರುವವರು BS-VI ಹಂತ 2ರ ಅನುಷ್ಠಾನದ ಮೊದಲು, ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಕೈಗೆಟುಕುವ ಬೆಲೆಯ ಡೀಸೆಲ್ ಕಾರನ್ನು ಖರೀದಿಸಬಹುದು. ನೀವು 2023ರಲ್ಲಿ ಹೊಸ ಡೀಸೆಲ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಲ್ಲಿ ನೀಡಲಾದ 5 ಅಗ್ಗದ ಡೀಸೆಲ್ ಕಾರುಗಳನ್ನು ಆಯ್ಕೆಯಾಗಿ ಪರಿಗಣಿಸಬಹುದು. ಅವುಗಳಲ್ಲಿ ಟಾಟಾ ಆಲ್ಟ್ರೋಜ್, ಹ್ಯುಂಡೈ i20, ಹೋಂಡಾ ಅಮೇಜ್, ಕಿಯಾ ಸೋನೆಟ್ ಹಾಗೂ ಮಹೀಂದ್ರಾ ಬೊಲೆರೊ ನಿಯೋ ಪ್ರಮುಖ ಕಾರುಗಳಾಗಿವೆ.

ಟಾಟಾ ಆಲ್ಟ್ರೋಜ್:
ಭಾರತದ ಅತ್ಯಂತ ಕೈಗೆಟುಕುವ ಡೀಸೆಲ್ ಕಾರು ಟಾಟಾ ಆಲ್ಟ್ರೋಜ್ ಆಗಿದೆ. ಎಕ್ಸ್ ಶೋರೂಂ ಬೆಲೆಗಳು ರೂ.7.90 ಲಕ್ಷದಿಂದ ಪ್ರಾರಂಭವಾಗುತ್ತದೆ. ನೀವು ಉತ್ತಮ ರೂಪಾಂತರಗಳನ್ನು ಆಯ್ಕೆ ಮಾಡಿಕೊಂಡರೆ ಈ ಬೆಲೆ ಹೆಚ್ಚಾಗಬಹುದು. ಪ್ರೀಮಿಯಂ ಹ್ಯಾಚ್‌ಬ್ಯಾಕ್ 1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದ್ದು, ಇದು 90 bhp ಗರಿಷ್ಠ ಪವರ್ ಮತ್ತು 200 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಹ್ಯುಂಡೈ i20:
ಐ20ಯ ಎಂಟ್ರಿ ಲೆವೆಲ್ ಮ್ಯಾಗ್ನಾ ಡೀಸೆಲ್ ರೂಪಾಂತರದ ಬೆಲೆ ಇದೀಗ ಎಕ್ಸ್ ಶೋರೂಂ ಬೆಲೆ ಪ್ರಕಾರ, 8.43 ಲಕ್ಷ ರೂ. ಇದ್ದು, ಭಾರತದಲ್ಲಿ ಎರಡನೇ ಅತ್ಯಂತ ಕೈಗೆಟುಕುವ ಡೀಸೆಲ್ ಕಾರು ಎಂದು ಹೇಳಬಹುದು. ಇದು 1.5 ಲೀಟರ್ ಎಂಜಿನ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಇದು 100 bhp ಗರಿಷ್ಠ ಪವರ್ ಮತ್ತು 240 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಆರು-ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಗೇರ್ ಬಾಕ್ಸ್ ಜೊತೆಯಲ್ಲಿ ಖರೀದಿಗೆ ಲಭ್ಯವಿದೆ. ಆಟೋಮೆಟಿಕ್ ಗೇರ್ ಬಾಕ್ಸ್ ದೊರೆಯುವುದಿಲ್ಲ.

ಹೋಂಡಾ ಅಮೇಜ್:
ಪ್ರಸ್ತುತ ಭಾರತದಲ್ಲಿನ ಅತ್ಯಂತ ಅಗ್ಗದ ಸೆಡಾನ್ ಹೋಂಡಾ ಅಮೇಜ್ ಆಗಿದ್ದು, ಡೀಸೆಲ್ ಆಯ್ಕೆಯ ಕಾರು 9.02 ಲಕ್ಷದಿಂದ 11.50 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹೋಂಡಾ ಅಮೇಜ್ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು 100 bhp ಪವರ್ ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಮೇಜ್ 5-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿದೆ. ಆದಾಗ್ಯೂ, ಅಮೇಜ್ ಡೀಸೆಲ್ CVT ಎಂಜಿನ್ 80 bhp ಪವರ್ ಮತ್ತು 160 Nm ಟಾರ್ಕ್ ಉತ್ಪಾದಿಸುವಂತೆ ರೆಡಿ ಮಾಡಲಾಗಿದೆ.

ಕಿಯಾ ಸೋನೆಟ್:
ಇತ್ತೀಚಿನ ಬೆಲೆ ಏರಿಕೆಯೊಂದಿಗೆ, ಕಿಯಾ ಸೋನೆಟ್ ಡೀಸೆಲ್ ಆವೃತ್ತಿಯನ್ನು ಇದೀಗ ರೂ.9.45 ಲಕ್ಷದಿಂದ ರೂ.14.39 ಲಕ್ಷದವರೆಗೆ ಖರೀದಿಸಬಹುದು. ಕಿಯಾ ಸೋನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಡೀಸೆಲ್ SUV ಆಗಿದೆ ಎಂದು ಹೇಳಬಹುದು. ಇದು ಸಬ್-ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಂತೆಯೇ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಆದರೆ, bhp ಪವರ್ ಹಾಗೂ ಪೀಕ್ ಟಾರ್ಕ್ ಲೆಕ್ಕಾಚಾರದಲ್ಲಿ ದೊಡ್ಡಮಟ್ಟದ ವ್ಯತ್ಯಾಸವಾಗಬಹುದು.

ಮಹೀಂದ್ರಾ ಬೊಲೆರೊ ನಿಯೋ:
ಈ ಪಟ್ಟಿಯಲ್ಲಿರುವ ಮತ್ತೊಂದು ಡೀಸೆಲ್ ಎಸ್‌ಯುವಿ ಮಹೀಂದ್ರಾ ಬೊಲೆರೊ ನಿಯೋ ಆಗಿದೆ. ಕಂಪನಿಯು ಈ ಮಾದರಿಯನ್ನು 1.5-ಲೀಟರ್ ಎಂಜಿನ್‌ನೊಂದಿಗೆ 9.48 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯೊಂದಿಗೆ ಖರೀದಿಗೆ ನೀಡುತ್ತದೆ. ಇದು ಗರಿಷ್ಠ 100 bhp ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು, ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದ್ದು, ಮೊನೊಕಾಕ್ ಫ್ರಂಟ್-ವೀಲ್ ಡ್ರೈವ್ ಅನ್ನು ಹೊಂದಿದೆ ಎಂದು ಹೇಳಬಹುದು.

Most Read Articles

Kannada
English summary
Cheapest diesel cars available in india
Story first published: Wednesday, January 4, 2023, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X