ದುಬಾರಿ ಬೆಲೆಯ ಬಿಎಂಡಬ್ಲ್ಯೂ 7 ಸೀರಿಯಸ್, i7 ಬಿಡುಗಡೆ.. ಬೆಲೆ, ವೈಶಿಷ್ಟ್ಯಗಳೇನು?

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಎರಡು ಹೊಸ ಮಾದರಿಗಳನ್ನು ಭಾರತದಲ್ಲಿ ಶನಿವಾರ (ಜನವರಿ 07) ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಹೊಸ 7 ಸೀರಿಯಸ್ ಮತ್ತು i7 ಅನ್ನು ದೇಶೀಯ ಮಾರುಕಟ್ಟೆಗೆ ತಂದಿದೆ. ಬಿಎಂಡಬ್ಲ್ಯು 7 ಸೀರಿಯಸ್ ರೂ.1.70 ಕೋಟಿ ಬೆಲೆಗೆ ಖರೀದಿಗೆ ಸಿಗಲಿದೆ (ಎಕ್ಸ್ ಶೋರೂಂ).

ಮೊದಲಿಗೆ ನೂತನ ಬಿಎಂಡಬ್ಲ್ಯು 7 ಸೀರಿಯಸ್ ಹೊರಭಾಗ, ಒಳಭಾಗ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ. 7 ಸೀರಿಯಸ್ ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗವನ್ನು ಪಡೆದಿದೆ. ಇದು ಸ್ಪ್ಲಿಟ್-ಎಲ್ಇಡಿ ಹೆಡ್‌ಲೈಟ್ ಸೆಟಪ್ ಮತ್ತು ದೊಡ್ಡದಾದ ಗ್ರಿಲ್ ಅನ್ನು ಸುತ್ತುವರೆದಿರುವ ಇಲ್ಯುಮಿನೇಟ್ ಲೈಟಿಂಗ್ ಎಲಿಮೆಂಟ್ ಅನ್ನು ಪಡೆದುಕೊಂಡಿದೆ. 19 ಇಂಚಿನ ವೀಲ್ಸ್ ಹೊಂದಿದ್ದು, ಇದನ್ನು 22 ಇಂಚುಗಳಿಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯು ಲಭ್ಯವಿದೆ. 7 ಸೀರಿಯಸ್ ಹಿಂಭಾಗವು ಸಮಾನಾಂತರ ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ಬಂಪರ್ ರೂಪದಲ್ಲಿ ಕೆಲವು ಟ್ವೀಕ್‌ಗಳನ್ನು ಪಡೆದುಕೊಂಡಿದ್ದು, ನವೀಕರಿಸಿದ ಕ್ಯಾಬಿನ್ ಹೊಂದಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯೂ 7 ಸೀರಿಯಸ್, i7 ಬಿಡುಗಡೆ.. ಬೆಲೆ, ವೈಶಿಷ್ಟ್ಯಗಳೇನು?

ಇದು ಇತ್ತೀಚಿನ ಬಿಎಂಡಬ್ಲ್ಯು iX ಮತ್ತು i4 ಮಾದರಿಗಳಂತೆಯೇ ಬಾಗಿದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿದ್ದು, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಜೊತೆಗೆ ಹಿಂದಿನ ಸೀಟ್ ನಲ್ಲಿ Amazon Fire TV ಮೂಲಕ ವೀಡಿಯೊ ಸ್ಟ್ರೀಮಿಂಗ್ ಆಗಲು 7 ಸೀರಿಯಸ್, ಈಗ 31.3-ಇಂಚಿನ 8K 'ಸಿನಿಮಾ' ಸ್ಕ್ರೀನ್ ಪಡೆದುಕೊಂಡಿದೆ. ಇತರೆ ವೈಶಿಷ್ಟ್ಯಗಳೆಂದರೆ, ಹಿಂಭಾಗದ ಡೋರ್ ಪ್ಯಾಡ್‌ಗಳಲ್ಲಿ 5.5-ಇಂಚಿನ ಟಚ್‌ಸ್ಕ್ರೀನ್‌ಗಳು, ಸಾಫ್ಟ್-ಕ್ಲೋಸ್ ಡೋರ್ ಗಳು, ಎಲ್‌ಇಡಿ ಲೈಟಿಂಗ್ ಎಲಿಮೆಂಟ್‌ಗಳೊಂದಿಗೆ ದೊಡ್ಡದಾದ ಸನ್‌ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು 7 ಸೀರಿಯಸ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್, ಡೀಸೆಲ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ ಎಂಬ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ. ಬಿಎಂಡಬ್ಲ್ಯು ಭಾರತದಲ್ಲಿ ಕೇವಲ ಒಂದು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅದು 380 bhp ಪವರ್ ಉತ್ಪಾದಿಸುವ 3.0 ಲೀಟರ್, ಇನ್‌ಲೈನ್ 6 ಸಿಲಿಂಡರ್ ಪೆಟ್ರೋಲ್ (740i) ಎಂಜಿನ್. ಈ ಎಂಜಿನ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದಿಂದ ಚಾಲಿತವಾಲಿದ್ದು, 8-ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೊಂದಿದೆ. ಕಾರು 5.4 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆಯಲಿದ್ದು, ಟಾಪ್ ಸ್ವೀಡ್ ಗಂಟೆಗೆ 250 ಕಿ.ಮೀ ಇದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯೂ 7 ಸೀರಿಯಸ್, i7 ಬಿಡುಗಡೆ.. ಬೆಲೆ, ವೈಶಿಷ್ಟ್ಯಗಳೇನು?

ಬಿಎಂಡಬ್ಲ್ಯು ಹೊಸ i7 ಸೆಡಾನ್ ಅನ್ನು ಭಾರತದಲ್ಲಿ 1.95 ಕೋಟಿ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆ ಮಾಡಿದೆ. ಇದು ಹೊಸ 7 ಸೀರಿಯಸ್ ನ ಆಲ್-ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಇದನ್ನು xDrive 60 ಎಂಬ ಒಂದೇ ರೂಪಾಂತರದಲ್ಲಿ ಖರೀದಿಗೆ ನೀಡಲಾಗುತ್ತಿದೆ. 7 ಸೀರಿಯಸ್ ಆಧಾರದ ಮೇಲೆ ರೆಡಿಯಾಗಿರುವ ಈ ಕಾರು, ಹೊಸ ಅಲಾಯ್ ವೀಲ್ಸ್ ಹಾಗೂ ಸ್ಪ್ಲಿಟ್ ಹೆಡ್‌ಲ್ಯಾಂಪ್ ಹೊಂದಿದ್ದು, ಬಿಎಂಡಬ್ಲ್ಯೂ iX ಮತ್ತು 7 ಸೀರಿಯಸ್ ನಲ್ಲಿ ಕಂಡುಬರುವ ಒಂದೇ ರೀತಿಯ ಡೋರ್ ಹ್ಯಾಂಡಲ್‌ಗಳು ಮತ್ತು ಉದ್ದವಾದ, ಕ್ಲೀನ್ ವೀಲ್‌ಬೇಸ್ ಡಿಸೈನ್ ಹೊಂದಿದೆ.

i7 ಕಾರು, ಬಹುತೇಕ 7 ಸೀರಿಯಸ್ ಮಾದರಿಯಂತೆ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಬಾಗಿದ ಡಿಸ್ಪ್ಲೇ ಹೊಂದಿದೆ. ಜೊತೆಗೆ ಬಿಎಂಡಬ್ಲ್ಯೂದ iDrive 8 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.
ಹೆಚ್ಚುವರಿಯಾಗಿ, i7 ಕಾರು, 31.3-ಇಂಚಿನ, 8K 'ಸಿನಿಮಾ' ಸ್ಕ್ರೀನ್ ಹೊಂದಿದೆ. ಅಲ್ಲಿ ಅಮೆಜಾನ್ ಫೈರ್ ಟಿವಿ ಮೂಲಕ ವೀಡಿಯೊ ಸ್ಟ್ರೀಮಿಂಗ್ ಆಗಲಿದೆ. ಇಷ್ಟೇ ಅಲ್ಲದೆ, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

i7 xDrive 60 ರೂಪಾಂತರವು 544 bhp ಪವರ್ ಮತ್ತು 745 Nm ಟಾರ್ಕ್ ಅದರ ಪ್ರತಿಯೊಂದು ಆಕ್ಸಲ್‌ಗಳಲ್ಲಿ ಅಳವಡಿಸಲಾಗಿರುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಉತ್ಪಾದಿಸುತ್ತದೆ. ಇದು 591 ರಿಂದ 625 ಕಿ.ಮೀ ರೇಂಜ್ ನೀಡಲು ಸಾಮರ್ಥ್ಯವಿರುವ 101.7kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಕೇವಲ 4.7 ಸೆಕೆಂಡುಗಳಲ್ಲಿ i7 ಕಾರು, ಗಂಟೆಗೆ 0 -100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಬಿಎಂಡಬ್ಲ್ಯೂ ಹೇಳಿಕೊಂಡಿದೆ. ಅಲ್ಲದೆ, ಈ ಕಾರಿನ ಟಾಪ್ ಸ್ವೀಡ್ ಗಂಟೆಗೆ 239 ಕಿ.ಮೀ. ಇದೆ.

ನೂತನ ಬಿಎಂಡಬ್ಲ್ಯೂ i7 ಕಾರು, AC ವ್ಯವಸ್ಥೆಯಲ್ಲಿ 11 kW ಮತ್ತು DC ವ್ಯವಸ್ಥೆಯಲ್ಲಿ 195 kWವರೆಗೆ ಚಾರ್ಜ್ ಮಾಡಬಹುದು. i7ನ ಬ್ಯಾಟರಿಗಳನ್ನು 34 ನಿಮಿಷಗಳಲ್ಲಿ ಶೇಕಡ 10 ರಿಂದ 80 ವರೆಗೆ ಚಾರ್ಜ್ ಮಾಡಬಹುದು. Mercedes-Benz EQS 580, ಹೊಸ ಬಿಎಂಡಬ್ಲ್ಯೂ i7ಗೆ ನೇರ ಪ್ರತಿಸ್ಪರ್ಧಿಯಾಗಿದ್ದು. ಐ7 ಮಾರುಕಟ್ಟೆಯಲ್ಲಿ ಪೋರ್ಷೆ Taycan ಮತ್ತು Audi e-tron GT ಜೊತೆಗೆ ಸ್ಪರ್ಧಿಸಲಿದೆ ಎಂದು ಹೇಳಬಹುದು.

Most Read Articles

Kannada
English summary
Expensive bmw 7 series i7 launched
Story first published: Saturday, January 7, 2023, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X