ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ ಎಂಜಿ4 ಇವಿ... ಕಡಿಮೆ ಬೆಲೆಗೆ ಸಿಗುತ್ತೆ ಕಾರು!

ಬಹುನಿರೀಕ್ಷಿತ ಆಟೋ ಎಕ್ಸ್‌ಪೋ ಜನವರಿ 13ರಂದು ದೆಹಲಿಯಲ್ಲಿ ಪ್ರಾರಂಭವಾಗಲಿದ್ದು, ಎಂಜಿ ಕಂಪನಿಯು ತನ್ನ ಕಾರುಗಳನ್ನು ಪ್ರದರ್ಶಿಸಲಿದೆ. ಪ್ರಮುಖವಾಗಿ ಅನೇಕ ICE ವಾಹನಗಳು ಅನಾವರಣಗೊಳ್ಳಲಿವೆ. ಆದರೆ, ಎಲ್ಲರ ಗಮನವು ಸದ್ಯ ಎಲೆಕ್ಟ್ರಿಕ್ ಕಾರಿನ ಮೇಲೆ ನೆಟ್ಟಿದೆ ಎಂದು ಹೇಳಬಹುದು. MG4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಇಲ್ಲಿ ಕಾಣಿಸಿಕೊಳ್ಳಲಿದೆ.

ಹೊಸ ಸಣ್ಣ ಎಲೆಕ್ಟ್ರಿಕ್ ಕಾರನ್ನು ಭಾರತದ ಮಾರುಕಟ್ಟೆಗಾಗಿ ವಿಶೇಷವಾಗಿ ಉತ್ಪಾದಿಸಲಾಗುತ್ತದೆ. ಈ MG4 ಇವಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಇದು ಸುಮಾರು ರೂ. 10 ಲಕ್ಷದ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇದು ದೇಶದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಲಿದೆ. ಇದರಿಂದ ಖರೀದಿದಾರರಿಗೆ ಈ ಆಟೋ ಎಕ್ಸ್‌ಪೋ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿವೆ.

ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ ಎಂಜಿ4 ಇವಿ... ಕಡಿಮೆ ಬೆಲೆಗೆ ಸಿಗುತ್ತೆ ಕಾರು!

ಎಕ್ಸ್‌ಪೋದಲ್ಲಿ MGಯ ಪೋರ್ಟ್‌ಫೋಲಿಯೋದಲ್ಲಿ MG4, MG5, MG6 ಹಾಗೂ ಹೊಸ EV ಪರಿಕಲ್ಪನೆಯನ್ನು ಒಳಗೊಂಡಿರುವ ಎಲೆಕ್ಟ್ರಿಕ್ , ಹೈಬ್ರಿಡ್‌ ಮಾದರಿಗಳನ್ನು ಅನಾವರಣಗೊಳಿಸಬಹುದು. ಕುತೂಹಲಕಾರಿಯಾಗಿ, ವಿವಿಧ ಕಾರಣಗಳಿಗೆ ಎಂಜಿ ಏರ್ ಈ ಬಾರಿಯ ಆಟೋ ಎಕ್ಸ್‌ಪೋ ಇರುವುದಿಲ್ಲ. ಎರಡು - ಬಾಗಿಲಿನ ಏರ್ ಇವಿ 2023 ಆಟೋ ಎಕ್ಸ್‌ಪೋದಲ್ಲಿ ಹೆಚ್ಚು ನಿರೀಕ್ಷಿತ ಕಾರುಗಳಲ್ಲಿ ಒಂದಾಗಿತ್ತು. ಆದರೆ, ಕಂಪನಿಯು ಇದನ್ನು ಈ ಎಕ್ಸ್‌ಪೋಗೆ ತರುವುದಿಲ್ಲ ಎಂದು ಇದೀಗ ದೃಢಪಡಿಸಿದೆ. ಬಹುಶಃ ನಂತರದ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಆಟೋ ಎಕ್ಸ್‌ಪೋದಲ್ಲಿ ಇತರೆ MG ಕಾರುಗಳಿಗಿಂತ MG4 ಎಲೆಕ್ಟ್ರಿಕ್ ಕಾರು, ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಸಣ್ಣ ಕಾರು ಏರ್‌ಗಿಂತ MG4 ಕೊಂಚ ಭಿನ್ನವಾಗಿರುತ್ತದೆ ಎಂದು ಹೇಳಬಹುದು. ಇದು ಎಂಜಿ ZS EVಯ ಗಾತ್ರವನ್ನೇ ಹೋಲುತ್ತದೆ. ಆದರೆ, ಸೈಬರ್‌ಸ್ಟರ್ ರೋಡ್‌ಸ್ಟರ್ ಪರಿಕಲ್ಪನೆಯಿಂದ ವಿನ್ಯಾಸವನ್ನು ಪಡೆದುಕೊಂಡಿದೆ. ಹೊಸ MG4 ಎಲೆಕ್ಟ್ರಿಕ್ ಕಾರು, ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಖರೀದಿಗೆ ಸಿಗಲಿದ್ದು, ಇದು ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 452 ಕಿ.ಮೀ ವರೆಗಿನ ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

MG 4 ಇವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 7-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ ಜೊತೆಗೆ ಮೌಂಟೆಡ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಸಿ ವೆಂಟ್‌ ಗಳನ್ನು ಡ್ಯಾಶ್‌ಬೋರ್ಡ್‌ನಲ್ಲಿ ಅಂದವಾಗಿ ಕಾಣದಂತೆ ಮರೆಮಾಡಲಾಗಿದೆ. ಸೆಂಟರ್ ಕನ್ಸೋಲ್ ರೋಟರಿ ಡಯಲ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌, ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಈ ಕಾರು ಒಳಗೊಂಡಿದೆ ಎಂದು ಹೇಳಬಹುದು. ಇದು ಖರೀದಿದಾರರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುವುದರಲ್ಲಿ ತಪ್ಪಿಲ್ಲ.

ಇಷ್ಟೇಅಲ್ಲದೆ, MG4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಯುರೋಪಿಯನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಯುರೋ NCAP)ನಲ್ಲಿನ ಇತ್ತೀಚಿನ ಸುರಕ್ಷತಾ ಪರೀಕ್ಷೆಗಳಲ್ಲಿ 5 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಅತ್ಯಂತ ಉತ್ತಮ ಕಾರು ಎನಿಸಿಕೊಂಡಿದೆ. MG4 ಸ್ಟ್ಯಾಂಡರ್ಡ್, MG4 ಕಂಫರ್ಟ್ ಮತ್ತು MG4 ಲಕ್ಸುರಿ ಸೇರಿದಂತೆ ಕಂಪನಿಯ ಎಲ್ಲಾ ವಿವಿಧ ರೂಪಾಂತರಗಳು 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದು ಹೆಮ್ಮೆಯೇ ಸರಿ. ಇದರಿಂದ ಈ ಕಾರಿನ ಮೇಲೆ ನೀರಿಕ್ಷೆಗಳು ಹೆಚ್ಚಾಗಿವೆ.

MG ಆಟೋ ಎಕ್ಸ್‌ಪೋಗೆ ಮೊದಲು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್‌ಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದ್ದು, ಕಂಪನಿಯು ಎಕ್ಸ್‌ಪೋದಲ್ಲಿ ಎರಡೂ SUVಗಳ ಬೆಲೆಗಳನ್ನು ಘೋಷಿಸಬಹುದು. ಎರಡೂ SUVಗಳು ಮಿಡ್‌ಲೈಫ್ ಮೇಕ್‌ಓವರ್‌ನೊಂದಿಗೆ ಬರಲಿದ್ದು, ಪರಿಷ್ಕೃತ ಡ್ಯಾಶ್‌ಬೋರ್ಡ್ ಮತ್ತು ಬೃಹತ್ 14-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಹೆಚ್ಚು ಗಣನೀಯ ಬದಲಾವಣೆಯು ಒಳಭಾಗದಲ್ಲಿದೆ. MG ತನ್ನ ADAS ತಂತ್ರಜ್ಞಾನವನ್ನು ಎರಡೂ SUVಗಳ ಫೇಸ್‌ಲಿಫ್ಟೆಡ್ ಆವೃತ್ತಿಗಳಲ್ಲಿ ಬಳಕೆ ಮಾಡಿದೆ. ಆದಾಗ್ಯೂ, ಪವರ್‌ಟ್ರೇನ್ ಲೈನ್-ಅಪ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The main attraction at the auto expo will be the mg4 ev
Story first published: Wednesday, January 4, 2023, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X