ಬಹುನಿರೀಕ್ಷಿತ ಸಿಟ್ರನ್ C3 ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ.. ಬೆಲೆ ಕಮ್ಮಿ ಇರುತ್ತೆ..!

ಫ್ರೆಂಚ್ ಮೂಲದ 'ಸಿಟ್ರನ್' ಮುಂಬರುವ ಎಲೆಕ್ಟ್ರಿಕ್ ವಾಹನ (ಇವಿ), ಸಿಟ್ರನ್ ಇಸಿ3 (Citroen eC3) ಕಾರಿನ ಟೀಸರ್ ಅನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಹೊಸ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಯಾವಾಗ ಮಾರಾಟವಾಗಲಿದೆ? ನಿರೀಕ್ಷಿತ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ಸಿಟ್ರನ್ ಕಂಪನಿಯು ಭಾರತದಲ್ಲಿ ಇಂಧನ ಚಾಲಿತ ಎರಡು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೇ C5 ಏರ್‌ಕ್ರಾಸ್ ಮತ್ತು C3 ಕಾರು. ಸಿಟ್ರನ್ C3 ಒಂದು ಕೈಗೆಟುಕುವ ಕಾರಾಗಿದ್ದು, ಇದರ ಬೆಲೆ 6 ಲಕ್ಷಕ್ಕಿಂತ ಕಡಿಮೆಯಿದೆ. ಸದ್ಯ, ಸಿಟ್ರನ್ eC3 ದೇಶದಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಇದು ₹10 ಲಕ್ಷ (ಎಕ್ಸ್ ಶೋರೂಂ) ಪ್ರಾರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುವ ನಿರೀಕ್ಷೆಯಿದೆ. ಮುಂಬರುವ ಸಿಟ್ರನ್ eC3, ಮಾರುಕಟ್ಟೆಗೆ ಬಂದ ಮೇಲೆ ಟಾಟಾ ಟಿಯಾಗೊ ಇವಿಗೆ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಲಾಂಚ್ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಕಾರನ್ನು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಿಗೂ ರಫ್ತು ಮಾಡಲು ಕಂಪನಿಯು ಯೋಜಿಸುತ್ತಿದೆ ಎಂಬುದು ಗಮನಾರ್ಹ ಅಂಶವಾಗಿದೆ. ಕಂಪನಿಯು ಈ ಕಾರನ್ನು CMP ಪ್ಲಾಟ್‌ಫಾರ್ಮ್‌ ಅಡಿ ನಿರ್ಮಾಣ ಮಾಡಿದ್ದು, ಈ ಕಾರಿನ ತಯಾರಿಕೆಯಲ್ಲಿ ಬಳಸಲಾಗಿರುವ ಶೇಕಡ 90 ರಷ್ಟು ಬಿಡಿ ಭಾಗಗಳನ್ನೂ ಭಾರತದಲ್ಲಿ ತಯಾರಿಸಲಾಗಿದೆ.

ಸಿಟ್ರನ್ eC3 ಕಾರು, 28 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಖರೀದಿಗೆ ಬರುವ ನಿರೀಕ್ಷೆಯಿದ್ದು, ಈ ಕಾರು ಒಂದೇ ಚಾರ್ಜ್‌ನಲ್ಲಿ 315 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬರಲಿರುವ ಈ ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಶಾರ್ಟ್ ಮತ್ತು ಲಾಂಗ್-ರೇಂಜ್ ಆವೃತ್ತಿಯಲ್ಲಿ ಸಿಗಬಹುದು. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಎಂಜಿನ್ ಇಮೊಬಿಲೈಜರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸ್ಪೀಡ್ ಸೆನ್ಸಿಟಿವ್ ಆಟೋ ಟೂರ್ ಲಾಕ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

ಹೊಸ ಸಿಟ್ರನ್ eC3 ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಅಲ್ಲದೆ, ಕ್ಯಾಬಿನ್ ಒಳಗೆ 26cm ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಬಹುದು. ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪವರ್ ವಿಂಡೋಗಳೊಂದಿಗೆ ಜೋಡಿಸಿರಬಹುದು. ಈ ಎಲೆಕ್ಟ್ರಿಕ್ ಕಾರು, ಹೈಟ್ ಅಡ್ಜೆಸ್ಟ್ಮೆಂಟ್ ಡ್ರೈವರ್ ಸೀಟಿನೊಂದಿಗೆ ಬರಲಿದೆ. ಜೊತೆಗೆ Apple CarPlay ಮತ್ತು Android Autoಗೆ ಸಪೋರ್ಟ್ ಮಾಡಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸ್ಪೈ ಚಿತ್ರಗಳಲ್ಲಿ eC3 ಕಾರು, ಆರೆಂಜ್ ಕಲರ್ ಅನ್ನು ಹೊಂದಿದೆ. ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಟೈಲ್ ಲ್ಯಾಂಪ್‌ಗಳೊಂದಿಗೆ ICE C3 ಮಾದರಿಗೆ ಹೋಲುತ್ತದೆ. ಇದು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಜೊತೆಗೆ ರೂಫ್ ರೈಲ್‌ಗಳನ್ನು ಹೊಂದಿರುವ ಸ್ಟೀಲ್ ಚಕ್ರಗಳನ್ನು ಈ ಕಾರು ಪಡೆದುಕೊಂಡಿದೆ. ಇನ್ನು, ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನ ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಯು ಯೋಜಿಸಿದೆ. ಗ್ರಾಹಕರು, 'ಮೈ ಸಿಟ್ರನ್ ಕನೆಕ್ಟ್' ಅಪ್ಲಿಕೇಶನ್ ಮೂಲಕ ಈ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಸಿಟ್ರನ್ ಇಸಿ3 ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಿರುವ ಟಾಟಾ ಟಿಯಾಗೊ ಇವಿ ಇತ್ತೀಚಿಗಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನೂ ಹೊಂದಿದೆ. ಅವುಗಳೆಂದರೆ, 19.2kWh ಹಾಗೂ 24kWh ಬ್ಯಾಟರಿ. ಇವು ಕ್ರಮವಾಗಿ 250 km ಮತ್ತು 315 km ರೇಂಜ್ ನೀಡಲಿವೆ. ಚಿಕ್ಕ ಬ್ಯಾಟರಿ ಪ್ಯಾಕ್‌ ಪವರ್‌ಟ್ರೇನ್ 61 PS ಗರಿಷ್ಠ ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ದೊಡ್ಡ ಬ್ಯಾಟರಿ 75 PS ಪವರ್ ಮತ್ತು 114 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಟಾಟಾ ಟಿಯಾಗೊ ಇವಿ ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 - ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಆಟೋ AC, ಫೋಲ್ಡಬಲ್ ORVMಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಹೊಂದಿದ್ದು, ಟೀಲ್ ಬ್ಲೂ, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಮಿಡ್ನೈಟ್ ಪ್ಲಮ್ ಮತ್ತು ಟ್ರಾಪಿಕಲ್ ಮಿಸ್ಟ್ ಬಣ್ಣಗಳ ಆಯ್ಕೆಯಲ್ಲೇ ಖರೀದಿಗೆ ಲಭ್ಯವಿದ್ದು, ಟಿಯಾಗೊ ಇವಿ ಆರಂಭಿಕ ಬೆಲೆ ರೂ.8.49 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷ ಇದೆ.

Most Read Articles

Kannada
English summary
The much awaited citroen c3 electric car teaser released
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X