ಬಹುನಿರೀಕ್ಷಿತ ಸಿಟ್ರೊಯೆನ್ eC3 ಎಲೆಕ್ಟ್ರಿಕ್ ಕಾರು ಈ ತಿಂಗಳು ಲಾಂಚ್: ಬೆಲೆ ಕೈಗೆಟುಕಲಿದೆಯೇ..

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಅಬ್ಬರಿಸುತ್ತಿವೆ. 'ಸಿಟ್ರೊಯೆನ್' ಸಿ3 ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಈ ತಿಂಗಳಿನಲ್ಲಿ ದೇಶದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹಲವು ಬಾರಿ ರಸ್ತೆಯಲ್ಲಿ ಪರೀಕ್ಷೆ ನಡೆಸುವಾಗ ಹೊಸ eC3 ಕಂಡುಬಂದಿದ್ದು, ಅದರ ಬೆಲೆ ಹಾಗೂ ವೈಶಿಷ್ಟ್ಯದ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ಐದು ಆಸನಗಳ ಸಿಟ್ರೊಯೆನ್ eC3 ಎಲೆಕ್ಟ್ರಿಕ್ ಕಾರಿನ ಬೆಲೆ ರೂ.10 ಲಕ್ಷ ಮತ್ತು ರೂ.12.5 ಲಕ್ಷ (ಎಕ್ಸ್ ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಟಿಯಾಗೊ ಇವಿಗೆ ಭಾರೀ ಪೈಪೋಟಿ ನೀಡಲಿದೆ. ಸಿಟ್ರೊಯೆನ್ eC3 ಪ್ರಮಾಣಿತ ICE ಮಾದರಿಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿದೆ ಎಂದು ಹೇಳಬಹುದು. ಮುಂಭಾಗದ ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಅನ್ನು ಸೇರಿಸಲಾಗಿದ್ದು, ಮ್ಯಾನ್ಯುವಲ್ ಸ್ಟಿಕ್ ಶಿಫ್ಟರ್ ಬದಲಿಗೆ ಹೊಸ ಡ್ರೈವ್ ಕಂಟ್ರೋಲ್ ಸೇರಿಸುವುದನ್ನು ಹೊರತುಪಡಿಸಿ, ಒಳಾಂಗಣವು ಪೆಟ್ರೋಲ್ ಚಾಲಿತ C3ಗೆ ಹೋಲುತ್ತದೆ.

ಬಹುನಿರೀಕ್ಷಿತ ಸಿಟ್ರೊಯೆನ್ eC3 ಎಲೆಕ್ಟ್ರಿಕ್ ಕಾರು ಈ ತಿಂಗಳು ಲಾಂಚ್

ಸಿಟ್ರೊಯೆನ್ eC3ನ ಒಳಾಂಗಣದಲ್ಲಿ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ವ್ಯವಸ್ಥೆಯಿಂದ ಹೊರಗುಳಿದಿದೆ ಎಂದು ತೋರುತ್ತದೆ. ಇಷ್ಟೇ ಅಲ್ಲದೆ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು-ಸ್ಪೀಕರ್ ಆಡಿಯೊ ಸಿಸ್ಟಮ್, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು. ಇದು ಈ ಕಾರು ಖರೀದಿಸುವ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುವುದರಲ್ಲಿ ತಪ್ಪಿಲ್ಲ.

eC3ಗಾಗಿ, ಫ್ರೆಂಚ್ ತಯಾರಕ ಕಂಪನಿ ಸಿಟ್ರೊಯೆನ್, ಸ್ವೋಲ್ಟ್ ಎನರ್ಜಿ ಮೂಲದಿಂದ LFP (ಲಿಥಿಯಂ ಐರನ್ ಫಾಸ್ಫೇಟ್) ಸೆಲ್ಸ್ ಅನ್ನು ಪಡೆಯುತ್ತಿದೆ. ಇದು 30.2 kWh ಬ್ಯಾಟರಿ ಪವರ್ ಅನ್ನು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ಗೆ ಕಳುಹಿಸುವ ಶಕ್ತಿಯನ್ನು ಹೊಂದಿದೆ. ಇದು ಸುಮಾರು 84 bhp ಪವರ್ ಮತ್ತು 143 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 3.3 kW ಆನ್‌ಬೋರ್ಡ್ AC ಚಾರ್ಜರ್ ಅನ್ನು ಹೊಂದಿದೆ.

ಮಾರುಕಟ್ಟೆಗೆ ಮುಂಬರಲಿರುವ ಸಿಟ್ರೊಯೆನ್ eC3 ಒಂದೇ ಚಾರ್ಜ್‌ನಲ್ಲಿ ಸುಮಾರು 350 ಕಿ.ಮೀ ಮೈಲೇಜ್ ನೀಡಲಿದೆ. ಈ ವರ್ಷ (2023) ಇವಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾದ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚು ಪ್ರತಿಸ್ಪರ್ಧಿ ಕಾರಿಗಳಿವೆ. ಟಾಟಾ ನೆಕ್ಸಾನ್ ಇವಿಗೆ ಮಹೀಂದ್ರಾ XUV400 ಭಾರೀ ಪೈಪೋಟಿ ನೀಡಲಿದ್ದು, ಎಂಜಿ ಏರ್ ಇವಿ ಹಾಗೂ ಸಿಟ್ರೊಯೆನ್ eC3 ಟಾಟಾದ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಲಿದೆ. ಸಿಟ್ರೊಯೆನ್ ಜುಲೈ 2022ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ ಸಿ3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯೇ ಈ eC3. ಸದ್ಯ ಅಂತಿಮ ಹಂತದಲ್ಲಿ ರೆಡಿಯಾಗುತ್ತಿದೆ.

ಟಾಟಾ ಕಂಪನಿ ಇತ್ತೀಚೆಗೆ ಟಿಯಾಗೊ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ತಿಂಗಳ (ಜನವರಿ) ಮಧ್ಯದ ವೇಳೆಗೆ ಎಲೆಕ್ಟ್ರಿಕ್ ಟಿಯಾಗೊ ಹ್ಯಾಚ್‌ಬ್ಯಾಕ್‌ನ ವಿತರಣೆಯು ಆರಂಭವಾಗಲಿದೆ. ಪ್ರಸ್ತುತ, ಟಿಯಾಗೊ ಇವಿ ಬೆಲೆ ರೂ.8.49 ಲಕ್ಷ-11.49 ಲಕ್ಷ ರೂ. ಇದೆ.ಈ ಕಾರು, ಎರಡು ಬ್ಯಾಟರಿ ಪ್ಯಾಕ್‌ ಹೊಂದಿದ್ದು, 19.2kWh ಬ್ಯಾಟರಿ ಒಂದು ಚಾರ್ಜಿಗೆ 250 ಕಿ.ಮೀ ಮೈಲೇಜ್ ನೀಡಲಿದ್ದು, 60.3 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 24kWh ಬ್ಯಾಟರಿಯು ಒಂದೇ ಚಾರ್ಜ್ ನಲ್ಲಿ 315 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ಟಿಯಾಗೊ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳವುದಾದರೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ABS, ರಿವರ್ಸಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ, ಹೊಸ 14-ಇಂಚಿನ ಹೈಪರ್‌ಸ್ಟೈಲ್ ವೀಲ್ಸ್, ಒಳಭಾಗದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಏರ್-ಕಾನ್ ವೆಂಟ್‌ಗಳಿಗಾಗಿ ಹೊಸ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಟಿಯಾಗೊ ಇವಿಗೆ ಸಿಟ್ರೊಯೆನ್ eC3 ಪೈಪೋಟಿ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The much awaited citroen ec3 electric car will be launched this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X