ಬೆಂಗಳೂರಿಗೆ ಫಿಯೆಟ್ ಪುಂಟೊ ಇವೊ ಭರ್ಜರಿ ಎಂಟ್ರಿ

Written By:

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಜಿಎಐಪಿಎಲ್), ಇತ್ತೀಚೆಗಷ್ಟೇ ಬಹುನಿರೀಕ್ಷಿತ ಪುಂಟೊ ಇವೊ ಕಾರನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತ್ತು.

ಇವನ್ನೂ ಓದಿ: ಹ್ಯುಂಡೈ ಎಲೈಟ್ ಐ20 ಭಾರತ ಪ್ರವೇಶ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿನ್ಯಾಸ ಶೈಲಿ ಹೊಂದಿರುವ ಫಿಯೆಟ್ ಪುಂಟೊ ಇವೊ ಕಾರಿನ ಬೆಂಗಳೂರಿನ ಎಕ್ಸ್ ಶೋ ರೂಂ ದರ 4.65 ಲಕ್ಷ ರು.ಗಳಾಗಿದೆ. ಸಮಗ್ರ ಮಾಹಿತಿ ಹಾಗೂ ಆಕರ್ಷಕ ಚಿತ್ರ ಸಂಗ್ರಹಗಳಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ವೆರಿಯಂಟ್

ವೆರಿಯಂಟ್

ಮೂರು ಪೆಟ್ರೋಲ್ ಹಾಗೂ ನಾಲ್ಕು ಡೀಸೆಲ್ ಸೇರಿದಂತೆ ಒಟ್ಟು ಏಳು ವೆರಿಯಂಟ್‌ಗಳಲ್ಲಿ ನೂತನ ಫಿಯೆಟ್ ಪುಂಟೊ ಇವೊ ಆಗಮನವಾಗಿದೆ. ಇವೆಲ್ಲವೂ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಟ್ಟಿದೆ.

ಪೆಟ್ರೋಲ್ ಎಂಜಿನ್

ಪೆಟ್ರೋಲ್ ಎಂಜಿನ್

ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 68 ಅಶ್ವಶಕ್ತಿ (96 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಎರಡನೇ ಪೆಟ್ರೋಲ್ 1.4 ಲೀಟರ್ ಎಂಜಿನ್ 90 ಪಿಎಸ್ ಪವರ್ (115 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಡೀಸೆಲ್ ಎಂಜಿನ್

ಡೀಸೆಲ್ ಎಂಜಿನ್

ಡೀಸೆಲ್ ಎಂಜಿನ್ ಸಹ ಎರಡು ಎಂಜಿನ್ ಟ್ಯೂನ್‌ಗಳಲ್ಲಿ ಲಭ್ಯವಾಗಲಿದೆ. ಇದರ 1.3 ಮಲ್ಟಿಜೆಟ್ ಎಂಜಿನ್ 76 ಅಶ್ವಶಕ್ತಿ (197 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಮಗದೊಂದು ಟಾಪ್ ಎಂಡ್ 1.3 ಲೀಟರ್ ಮಲ್ಟಿಜೆಟ್ ಎಂಜಿನ್ 93 ಅಶ್ವಶಕ್ತಿ (209 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ಆಕ್ಟಿವ್ 1.2 ಲೀಟರ್ - 4.65

ಡೈನಾಮಿಕ್ 1.2 ಲೀಟರ್ - 5.22

ಇಮೋಷನ್ 1.4 ಲೀಟರ್ - 6.78

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ (ಲಕ್ಷ ರು.ಗಳಲ್ಲಿ)

ಆಕ್ಟಿವ್ 1.3 ಲೀಟರ್ - 5.37

ಡೈನಾಮಿಕ್ 1.3 ಲೀಟರ್ - 6.33

ಇಮೋಷನ್ 1.3 ಲೀಟರ್ - 6.96

ಸ್ಪೋರ್ಟ್ 1.3 ಲೀಟರ್ (93 ಪಿಎಸ್) - 7.33

ಬೆಂಗಳೂರಿಗೆ ಫಿಯೆಟ್ ಪುಂಟೊ ಇವೊ ಭರ್ಜರಿ ಎಂಟ್ರಿ

ಔಟ್‌ಸೈಡ್ ವ್ಯೂ ರಿಯರ್ ಮಿರರ್‌ನಲ್ಲೇ ಟರ್ನ್ ಇಂಡಿಕೇಟರ್ ಲಗತ್ತಿಸಿರುವುದು ಮತ್ತು ಹಿಂದುಗಡೆಯ ಎಸಿ ವೆಂಟ್ಸ್‌ಗಳು ಹೊಸ ಫಿಯೆಟ್ ಪುಂಟೊ ಇವೊ ಕಾರನ್ನು ಇತರ ಕಾರುಗಳಿಂದ ಪ್ರತ್ಯೇಕಿಸಲಿದೆ.

ಬೆಂಗಳೂರಿಗೆ ಫಿಯೆಟ್ ಪುಂಟೊ ಇವೊ ಭರ್ಜರಿ ಎಂಟ್ರಿ

ಇನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಗ್ರೌಂಡ್ ಕ್ಲಿಯರನ್ಸ್ (195 ಎಂಎಂ) ವರ್ಧಿಸಲಾಗಿದೆ. ಅಲ್ಲದೆ ಈ ಕಾರಿನಲ್ಲಿ 16 ಇಂಚು ಅಲಾಯ್ ವೀಲ್ಸ್ ಇರಲಿದೆ. ಫಿಯೆಟ್ ಪ್ರಕಾರ ಎತ್ತರ ವರ್ಧಿಸಿರುವ ಹೊರತಾಗಿಯೂ ಹೊಸ ಪುಂಟೊ ಇವೊ ಹಳೆಯ ಮಾದರಿಗಿಂತಲೂ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ ಎಂದಿದೆ.

ಬೆಂಗಳೂರಿಗೆ ಫಿಯೆಟ್ ಪುಂಟೊ ಇವೊ ಭರ್ಜರಿ ಎಂಟ್ರಿ

ಇನ್ನು ಎಬಿಎಸ್, ಇಬಿಡಿ, ಟು ಟೋನ್ ಡ್ಯಾಶ್, ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್, ಸ್ಮಾರ್ಟ್ ವೈಪರ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಲ್ಲದೆ 3 ವರ್ಷಗಳ ವಾರಂಟಿ ಜೊತೆಗೆ 15,000 ಕೀ.ಮೀ.ಗಳಿಗೊಮ್ಮೆ ಸರ್ವಿಸ್ ಇಂಟರ್ವಲ್ ಇರಲಿದೆ.

English summary
The Fiat Group Automobiles India Private India Limited (FGAIPL) has finally launched the much awaited Punto Evo today in Bangalore. The all new premium hatchback's styling is designed exclusively for India.
Story first published: Tuesday, August 12, 2014, 10:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark