ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

Written By:

ನಿರೀಕ್ಷೆಯಂತೆಯೇ ಹಲವಾರು ಜಾಗತಿಕ ಹಾಗೂ ದೇಶಿಯ ಲಾಂಚ್‌ಗಳಿಗೆ ಕಾರಣವಾಗಿರುವ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 12ನೇ ಆಟೋ ಎಕ್ಸ್ ಪೋ ಸಂಪನ್ನಗೊಂಡಿದೆ. ಫೆಬ್ರವರಿ 5ರಿಂದ 11ರ ವರೆಗೆ ನಡೆದ ಈ ಮಹತ್ತರ ಆಟೋ ಶೋದಲ್ಲಿ ಹಲವಾರು ನೂತನ ಕಾನ್ಸೆಪ್ಟ್ ಕಾರುಗಳು ಪ್ರದರ್ಶನಗೊಂಡಿದ್ದವು.

2014 ಆಟೋ ಎಕ್ಸ್ ಪೋ ಹೈಲೆಟ್ಸ್

ಈ ಎಲ್ಲ ಬೆಳವಣಿಗೆಯೊಂದಿಗೆ ಕಳೆಗುಂದಿರುವ ಭಾರತದ ದೇಶಿಯ ಕಾರು ಮಾರುಕಟ್ಟೆಯು ಪುನರುಜ್ಜೀವನ ಪಡೆಯುವ ಭರವಸೆಯಲ್ಲಿದೆ ಆಟೋ ಜಗತ್ತು. 2014 ಆಟೋ ಎಕ್ಸ್ ಪೋದ ಮೊದಲೆರಡು ದಿನ ಸಂಪೂರ್ಣವಾಗಿಯೂ ಮಾಧ್ಯಮದವರಿಗೆ ಮೀಸಲಾಗಿಡಲಾಗಿತ್ತು. ಬಳಿಕ ಫೆಬ್ರವರಿ 7ರಿಂದ 11ರ ವರೆಗೆ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಇದರಂತೆ ಈ ಪ್ರತಿಷ್ಠಿತ ಆಟೋ ಎಕ್ಸ್‌ಪೋದಲ್ಲಿ 26 ಜಾಗತಿಕ ಮಾದರಿಗಳು ಸೇರಿದಂತೆ 70 ನೂತನ ಕಾರುಗಳ ಅನಾವರಣ ಕಂಡಿದ್ದವು. ಹಾಗೆಯೇ ಒಟ್ಟಾರೆಯಾಗಿ 5.61 ಲಕ್ಷ ಮಂದಿ ಇಲ್ಲಿಗೆ ಭೇಟಿ ಕೊಟ್ಟಿದ್ದರು. ಈ ಪೈಕಿ ಅಂತಿಮ ದಿನದಂದು 90,000ರಷ್ಟು ಮಂದಿ ಆಗಮಿಸಿದ್ದರು.

To Follow DriveSpark On Facebook, Click The Like Button
ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಇದು 2012ರಲ್ಲಿ ಪ್ರಗತಿ ಮೈದಾನದಲ್ಲಿ ನಡೆದ ಆಟೋ ಎಕ್ಸ್ ಪೋಗೆ ಹೋಲಿಸಿದರೆ ತುಂಬಾನೇ ಕಡಿಮೆಯಾಗಿದೆ. ಯಾಕೆಂದರೆ ಕಳೆದ ಬಾರಿ ಒಟ್ಟು ಏಳು ಲಕ್ಷಗಳಷ್ಟು ಮಂದಿ ಭೇಟಿ ಕೊಟ್ಟಿದ್ದರು. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿಯ ಆಟೋ ಎಕ್ಸ್ ಪೋ ಹೆಚ್ಚು ಅಚ್ಚುಕಟ್ಟಾಗಿ ಆಯೋಜನೆಯಾಗಿತ್ತಲ್ಲದೆ ವಿಶ್ವದರ್ಜೆಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಈ ಎಲ್ಲದರ ನಡುವೆಯೂ ದೇಶದ ಕಾರು ವಹಿವಾಟು ಕುಸಿತದಲ್ಲಿದೆ. ಹಾಗಿರುವಾಗ ಆಟೋ ಎಕ್ಸ್ ಪೋ ಸ್ಫೂರ್ತಿ ತುಂಬುವ ನಿರೀಕ್ಷೆಯನ್ನು ವಾಹನ ತಯಾರಿಕ ಸಂಸ್ಥೆಗಳು ವ್ಯಕ್ತಪಡಿಸಿವೆ.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಈ ನಡುವೆ ಕಾರು ಮಾರಾಟವು ಸತ್ತ ನಾಲ್ಕನೇ ತಿಂಗಳು ಕುಸಿತದತ್ತ ಮುಖ ಮಾಡಿದ್ದು, ಜನವರಿ ತಿಂಗಳಲ್ಲೂ ಶೇಕಡಾ 7.59ರಷ್ಟು ಕುಸಿತ ದಾಖಲಿಸಿದೆ. ಸಿಯಾಮ್ ವರದಿ ಪ್ರಕಾರ, ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 1,60,289 ಕಾರುಗಳನ್ನು ಮಾರಾಟ ಮಾಡಿವೆ. ಈ ಸಂಖ್ಯೆ ಕಳೆದ ವರ್ಷ 1,73,449 ಯುನಿಟ್‌ಗಳಿಷ್ಟಿತ್ತು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಒಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್‌ನಿಂದ ದೇಶದ ವಾಹನೋದ್ಯಮ ಸಹ ಸಹಾಯವನ್ನು ನಿರೀಕ್ಷೆ ಮಾಡುತ್ತಿದೆ ಎಂದು ಭಾರತೀಯ ವಾಹನೋದ್ಯಮ ತಯಾರಕರ ಒಕ್ಕೂಟ (ಸಿಯಾಮ್) ತಿಳಿಸಿದೆ. ಅಷ್ಟೇ ಅಲ್ಲದೆ ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರ್ಷಿಕ ಕಾರು ಮಾರಾಟವು (ಶೇಕಡಾ 9.59ರಷ್ಟು) ಕುಸಿತ ಕಂಡಿದೆ. ಆರ್ಥಿಕ ಪ್ರಗತಿ ಕುಸಿತವೇ ಇದರ ಹಿಂದಿನ ಪ್ರಮುಖ ಕಾರಣವಾಗಿದೆ.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಇಂಧನ ದರ ಏರಿಕೆಗೊಳ್ಳುತ್ತಿರುವುದು ಹಾಗೂ ಸಾಲದ ಮೆರೆಗೆ ಕಾರು ಖರೀದಿಸುವಾಗ ಅತ್ಯಧಿಕ ಬಡ್ಡಿದರ ವಿಧಿಸುತ್ತಿರುವುದು ಖರೀದಿಗಾರರನ್ನು ಹಿಂಬಡ್ತಿಗೆ ತಳ್ಳುತ್ತಿದೆ.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಇನ್ನು 2014 ಆಟೋ ಎಕ್ಸ್ ಬಗ್ಗೆ ಮಾತನಾಡುವುದಾದ್ದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನೂತನ ಸೆಲೆರಿಯೊ ಲಾಂಚ್ ಮಾಡಿತ್ತು. ಇದೇ ಸಂದರ್ಭದಲ್ಲಿ ಸಿಯಾಜ್ ಸೆಡಾನ್ ಮತ್ತು ಎಸ್‌ಎಕ್ಸ್4ಎಸ್ ಕ್ರಾಸ್ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿತ್ತು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಅದೇ ಹೊತ್ತಿಗೆ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸಂಸ್ಥೆಯು, ಹೊಸ ಜನಾಂಗದ ಸಾಂಟಾಫೆ ಲಾಂಚ್ ಮಾಡಿತ್ತು. ಅಂದ ಹಾಗೆ ಈ ಬಾರಿಯ ಆಟೋ ಶೋದಲ್ಲಿ ಕಾಂಪಾಕ್ಟ್ ಎಸ್‌ಯುವಿಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಇನ್ನುಳಿದಂತೆ ಹ್ಯುಂಡೈ ಎಕ್ಸ್‌ಸೆಂಟ್, ಫೋರ್ಡ್ ಫಿಗೊ ಕಾನ್ಸೆಪ್ಟ್ ಮತ್ತು ಟಾಟಾ ಮೋಟಾರ್ಸ್ ಜೆಸ್ಟ್ ಹಾಗೂ ಬೋಲ್ಟ್ ಆವೃತ್ತಿಗಳು ಗಮನಸೆಳೆದಿದ್ದವು. ಎರಡನೇ ದಿನದಲ್ಲಿ ಸೂಪರ್ ಬೈಕ್‌ಗಳ ಕಾರುಬಾರು ಜಾರಿಯಲ್ಲಿತ್ತು. ಇಲ್ಲಿ ಹರ್ಲಿ ಡೇವಿಡ್ಸನ್, ಟ್ರಯಂಪ್, ಡಿಎಸ್‌ಕೆ ಹ್ಯೊಸಂಗ್, ಹೀರೊ ಮೊಟೊಕಾರ್ಪ್ ಮತ್ತು ಜಪಾನ್‌ನ ಟೆರ್ರಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರದರ್ಶಿಸುವುದರಲ್ಲಿ ತಲ್ಲೀನವಾಗಿದ್ದವು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಇವೆಲ್ಲದಕ್ಕೂ ಮೆರಗು ತುಂಬಲು ಕ್ರಿಕೆಟ್‌ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ (ಬಿಎಂಡಬ್ಲ್ಯು) ಸೇರಿದಂತೆ, ಬಾಲಿವುಡ್ ದಿಗ್ಗಜ ನಟಿ-ನಟಿಯರಾದ ಪ್ರಿಯಾಂಕಾ ಚೋಪ್ರಾ (ಜಾಗ್ವಾರ್), ಕರೀನಾ ಕಪೂರ್ (ಡಿಸಿ ಡಿಸೈನ್), ಜಾನ್ ಅಬ್ರಾಹಾಂ (ಯಮಹಾ), ಅಕ್ಷಯ್ ಕುಮಾರ್ (ಹೋಂಡಾ) ಮತ್ತು ರಣಬೀರ್ ಕಪೂರ್ (ಹೀರೊ) ಆಗಮಸಿದ್ದರು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಈ ಹಿಂದಿನ ಆವೃತ್ತಿಗಿಂತಲೂ ಭಿನ್ನವಾಗಿ ಈ ಬಾರಿಯ ಆಟೋ ಎಕ್ಸ್ ಪೋವನ್ನು ಸ್ಥಳಾವಕಾಶದ ಕೊರತೆಯಿಂದಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಮೋಟಾರು ಶೋ ಗ್ರೇಟರ್ ನೋಯ್ಡಾದಲ್ಲೂ ಆಟೋ ಬಿಡಿಭಾಗಗಳ ಪ್ರದರ್ಶನ ಪ್ರಗತಿ ಮೈದಾನದಲ್ಲೂ ಆಯೋಜನೆಯಾಗಿದ್ದವು.

ಕಾರು ಬೇಡಿಕೆ ಪುನರುಜ್ಜೀವನದ ಭರವಸೆಯೊಂದಿಗೆ ಆಟೋ ಎಕ್ಸ್‌ಪೋ ಸಂಪನ್ನ

ಅಂತಿಮ ದಿನದಲ್ಲಂತೂ ಭಾರಿ ಜನಪ್ರವಾಹವೇ ಹರಿದು ಬಂದಿತ್ತು. ಆದರೆ ಕೆಲವರು ಸಂಪೂರ್ಣ ಆಟೋ ಎಕ್ಸ್ ಪೋವನ್ನು ನೋಡಲಾಗದೇ ಕೊರಗುತ್ತಲೇ ಜಾಗ ಖಾಲಿ ಮಾಡಿದರು. ಒಟ್ಟಿನಲ್ಲಿ ಈ ಬಾರಿಯ ಆಟೋ ಎಕ್ಸ್ ಪೋದ ಮೂಲಕ ಜಾಗತಿಕ ವಾಹನೋದ್ಯಮದಲ್ಲಿ ಉತ್ತಮ ಹೆಸರು ಕಾಪಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿದೆ.

English summary
The week-long 2014 Auto Expo witnessed 70 unveilings, of which 26 were global models. A total of 5.61 lakh people visited the show, with 90,000 attending on the last day.
Story first published: Thursday, February 13, 2014, 7:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark