ಸೂಪರೋ ಸೂಪರ್; ಉಪೇಂದ್ರ ಸ್ಟೈಲಲ್ಲಿ ಬಿಎಂಡಬ್ಲ್ಯು ಎಂಟ್ರಿ

Written By:

ಇಂದೊಂದು ಶೀರ್ಷಿಕೆ ಮಾತ್ರವಷ್ಟೇ. ಯಾಕೆಂದರೆ ಜಗತ್ತಿನ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ತನ್ನ ನೂತನ 2 ಸಿರೀಸ್ ಕಾರಿನ ಅನಾವರಣವನ್ನು ಅಷ್ಟೊಂದು ಸೂಪರ್ ರೀತಿಯಲ್ಲಿ ಮಾಡಿದೆ.

ಅಕ್ಷರಶ 1 ಸಿರೀಸ್ ಕೂಪೆ ಕಾರಿನ ಉತ್ತರಾಧಿಕಾರಿ ಎನಿಸಿಕೊಂಡಿರುವ ಈ ಎರಡು ಸೀಟುಗಳ ಕೂಪೆ, 2014 ಡೆಟ್ರಾಯ್ಟ್ ಆಟೋ ಶೋದಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನ ಕಾಣಲಿದೆ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ, 4 ಸಿರೀಸ್, 6 ಸಿರೀಸ್ ಕಾರುಗಳಂತೆಯೇ ಕೂಪೆ ಕಾರುಗಳು ಸಹ ಸರಪಣಿಯನ್ನು ಪಡೆಯುತ್ತಿದೆ. ಇದರಂತೆ ನೂತನ 2 ಸಿರೀಸ್ ಕೂಪೆ ಎಂದು ಗುರುತಿಸಿಕೊಂಡಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ನಿರ್ವಹಣೆಯಲ್ಲಿ ಕಿಂಚಿತ್ತೂ ರಾಚಿಗೆ ತಯಾರಾಗದ ಬಿಎಂಡಬ್ಲ್ಯು, ನೂತನ 2 ಸಿರೀಸ್ ಕೂಪೆ ರಿಯರ್ ವೀಲ್ ಡ್ರೈವ್ ತಂತ್ರಗಾರಿಕೆಯನ್ನು ಹೊಂದಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

2 ಸಿರೀಸ್ ಕೂಪೆ ಕಾರಿನ ವಿನ್ಯಾಸದ ಸೂತ್ರಧಾರಿ ಬಿಎಂಡಬ್ಲ್ಯು ಡಿಸೈನ್ ಮುಖ್ಯಸ್ಥ ಕರೀಂ ಹಬೀಬ್ ಆಗಿದ್ದಾರೆ. ಇದು ಹೆಚ್ಚು ಪರಿಷ್ಕೃತ ವಿನ್ಯಾಸ ಪಡೆದುಕೊಂಡಿದ್ದು, ಆಧುನಿಕತೆಗೆ ಹೆಚ್ಚು ಆದ್ಯತೆ ಕೊಡಲಾಗಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

2 ಸಿರೀಸ್ ಕೂಪೆ ಕಾರಿನಲ್ಲಿ ಗುರುತಿಸಿಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಹೆಡ್‌ಲ್ಯಾಂಪ್, ಕಿಡ್ನಿ ಲ್ಯಾಂಪ್, ಕೆಳಗಡೆಯ ಬಂಪರ್, ಫಾಗ್ ಲ್ಯಾಂಪ್ ಹಾಗೆಯೇ ಒಆರ್‌ವಿಎಂ. ಹಾಗಿದ್ದರೂ ಕಾರಿನ ಹಿಂದುಗಡೆ ಹೆಚ್ಚಿನ ಬದಲಾವಣೆ ತರಲಾಗಿಲ್ಲ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ಇನ್ನು ಇಂಟಿರಿಯರ್ ಭಾಗಗಳು 1 ಸಿರೀಸ್ ಕೂಪೆ ಆೃತ್ತಿಗೆ ಸಮಾನತೆಯನ್ನು ಪಡೆದುಕೊಂಡಿದೆ. ಹಾಗಿದ್ದರೂ ತಾಜಾ ಫೀಚರುಗಳನ್ನು ಆಳವಡಿಸಲು ಕಂಪನಿ ಮರೆತಿಲ್ಲ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ನೂತನ 2 ಸಿರೀಸ್ ಕೂಪೆ 4432 ಎಂಎಂ ಉದ್ದ, 1774 ಎಂಎಂ ಅಗಲ ಮತ್ತು 1418 ಎಂಎಂ ಎತ್ತರದ ಆಯಾಮವನ್ನು ಹೊಂದಿರಲಿದೆ. ಹಾಗೆಯೇ ಇದರ ವೀಲ್ ಬೇಸ್ 2690 ಎಂಎಂ ಆಗಿದೆ. ಅಂದರೆ 2 ಸಿರೀಸ್ ಕೂಪೆಗಿಂತಲೂ 72 ಎಂಎಂ ಉದ್ದ, 24 ಎಂಎಂ ಅಗಲ, 7 ಎಂಎಂ ಕಡಿಮೆ ಎತ್ತರ ಮತ್ತು 30 ಎಂಎಂ ವೀಲ್ ಬೇಸ್ ಪಡೆದುಕೊಳ್ಳಲಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ಅದೇ ರೀತಿ ನೂತನ 2 ಸಿರೀಸ್ ಕೂಪೆ, 290 ಲೀಟರ್ ಬೂಟ್ ಸ್ಪೇಸ್ ಪಡೆದುಕೊಂಡಿದ್ದು, ಇದು ಹಿಂದಿನ ಆವೃತ್ತಿಗಿಂತಲೂ 20 ಲೀಟರ್ ಲಗ್ಗೇಜ್ ಸ್ಪೇಸ್ ಹೆಚ್ಚಾಗಿರಲಿದೆ. ಹಾಗೆಯೇ ಫ್ರಂಟ್ ಸೀಟಿನಲ್ಲಿ 19ಎಂಎಂ ಅಧಿಕ ಹೆಡ್‌ರೂಂ ಹಾಗೂ ಹಿಂದಿನ ಸೀಟಿನಲ್ಲಿ 21 ಎಂಎಂ ಅಧಿಕ ಲೆಗ್ ರೂ ಲಗತ್ತಿಸಲಾಗಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ನಾಲ್ಕು ವೈಯಕ್ತಿಕ ವೆರಿಯಂಟ್‌ಗಳಲ್ಲಿ ಬಿಎಂಡಬ್ಲ್ಯು 2 ಸಿರೀಸ್ ಕೂಪೆ ಲಭ್ಯವಾಗಲಿದೆ. ಅವುಗಳೆಂದರೆ ಎಸ್‌ಇ, ಸ್ಪೋರ್ಟ್, ಮಾರ್ಡೆನ್ ಆಂಡ್ ಎಂ ಸ್ಪೋರ್ಟ್. ಹಾಗೆಯೇ ಮೂರು ಎಂಜಿನ್ ಆಯ್ಕೆ ಹಾಗೂ ಎರಡು ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಾಗಲಿದೆ.

ಬಿಎಂಡಬ್ಲ್ಯು 220ಐ

ಬಿಎಂಡಬ್ಲ್ಯು 220ಐ

2.0 ಲೀಟರ್ ಟರ್ಬೊ ಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 181 ಅಶ್ವಶಕ್ತಿ (270 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಕೇವಲ 7 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು 220ಡಿ

ಬಿಎಂಡಬ್ಲ್ಯು 220ಡಿ

ಇದು 2.0 ಲೀಟರ್ ಟರ್ಬೊಚಾರ್ಜ್ಡ್ ಇನ್ ಲೈನ್ ಫೋರ್ ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡಲಿದ್ದು, 181 ಅಶ್ವಶಕ್ತಿ (380 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7.2 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ವೇಗವರ್ಧಿಸಲಿದೆ.

ಎಂ235ಐ (ಎ ಸ್ಪೋರ್ಟ್)

ಎಂ235ಐ (ಎ ಸ್ಪೋರ್ಟ್)

ಟಾಪ್ ವೆರಿಯಂಟ್‌ನಲ್ಲಿ ಕಾಣಿಸಿಕೊಂಡಿರುವ ಎಂ235ಐ ಆವೃತ್ತಿಯು 322 ಅಶ್ವಶಕ್ತಿ (450 ಟಾರ್ಕ್) ಉತ್ಪಾದಿಸುವ 3.0 ಲೀಟರ್ ಟರ್ಬೊಚಾರ್ಜ್ಡ್ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ವೇಗವರ್ಧಿಸಲಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ಮೇಲೆ ತಿಳಿಸಲಾದ ಎಲ್ಲ ಮೂರು ಎಂಜಿನ್‌ಗಳು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಪ್ಷನಲ್ ಎನಿಸಿಕೊಳ್ಳಲಿದೆ.

ಬಿಎಂಡಬ್ಲ್ಯು 2 ಸಿರೀಸ್ ಕೂಪೆ

ಇನ್ನು 2 ಸಿರೀಸ್ ಕೂಪೆ ಆವೃತ್ತಿಯ ಕನ್ವರ್ಟಿಬಲ್ ವರ್ಷನ್ ಅನ್ನು ಸಹ 2014ರಲ್ಲಿ ಬಿಎಂಡಬ್ಲ್ಯು ಬಿಡುಗಡೆ ಮಾಡಲಿದೆ. ಹಾಗೆಯೇ ಎಂ235ಐ ಎಕ್ಸ್ ಡ್ರೈವ್ ಲಾಂಚ್ ಮಾಡುವುದನ್ನು ಅಲ್ಲಗಳೆಯುವಂತಿಲ್ಲ.

English summary
BMW has revealed images and details of the first ever 2-Series coupe, the successor to the 1-Series coupe. The compact coupe follows BMW's new naming strategy which names the sporty models with even numbers, like the existing 4-Series and 6-Series.
Story first published: Friday, October 25, 2013, 15:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark