ದೆಹಲಿ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಹೈಬ್ರಿಡ್ ಕಾರು ಡೆಬ್ಯುಟ್

Written By:

ಈ ಬಾರಿಯ ಇಂಡಿಯಾ ಆಟೋ ಎಕ್ಸೋ ಪೋ ಹಲವು ಕಾರಣಗಳಿಂದಾಗಿ ಸ್ಮರಣೀಯವೆನಿಸಲಿದೆ. ಅನೇಕ ವಾಹನ ತಯಾರಕ ಸಂಸ್ಥೆಗಳು ತಮ್ಮ ನೂತನ ಕಾನ್ಸೆಪ್ಟ್‌ಗಳೊಂದಿಗೆ ದೆಹಲಿ ಆಟೋ ಎಕ್ಸ್ ಪೋ ಬರಮಾಡಿಕೊಳ್ಳಲು ಸಜ್ಜಾಗಿ ನಿಂತಿದೆ.

ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನ ಲಕ್ಷ ಬುಕ್ಕಿಂಗ್ಸ್

ಈ ಪೈಕಿ ಬಿಡಬ್ಲ್ಯು ಐ8 ಹೈಬ್ರಿಡ್ ಕಾರು ಅತಿ ಹೆಚ್ಚು ಮಹತ್ವವನ್ನು ಗಿಟ್ಟಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಈ ಬಹುನಿರೀಕ್ಷಿತ ಕಾರು ದೇಶ ಪ್ರವೇಶ ಪಡೆದಲಿದೆ. 'ಐ' ಸಬ್ ಬ್ರಾಂಡ್‌ನಲ್ಲಿ ಈ ಹಸಿರು ಕಾರು ಗುರುತಿಸಿಕೊಳ್ಳಲಿದ್ದು, ಪ್ರಸ್ತುತ ಪರಿಸರ ಸ್ನೇಹಿ ಕಾರು ಗರಿಷ್ಠ ನಿರ್ವಹಣೆ ನೀಡಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಇತರೆಲ್ಲ ಬಿಎಂಡಬ್ಲ್ಯು ವಾಹನಗಳಿಗಿಂತ ಭಿನ್ನವಾಗಿ ಐ8 ಹೈಬ್ರಿಡ್ ಕಾರಿನಲ್ಲಿ ಕಾರ್ಬನ್, ಅಲ್ಯೂಮಿನಿಯಂ ಹಾಗೂ ಇತರ ಸಮ್ಮಿಶ್ರ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಇದು ಭಾರ ಕಡಿಮೆ ಮಾಡಲು ನೆರವಾಗಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಇದರಲ್ಲಿ 1.5 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಜತೆ ಎಲೆಕ್ಟ್ರಿಕ್ ಮೋಟಾರು ಲಗತ್ತಿಸಲಾಗಿದ್ದು, ಜಂಟಿಯಾಗಿ 357 ಬಿಎಚ್‌ಪಿ ಪವರ್ (569 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಅಂದ ಹಾಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಏತನ್ಮಧ್ಯೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ದೇಶದಲ್ಲಿ ಅತ್ಯಂತ ದುಬಾರಿಯೆನಿಸಲಿದೆ. ಬಲ್ಲ ಮೂಲಗಳ ಪ್ರಕಾರ ಇದು ಎರಡು ಕೋಟಿ ರು.ಗಳಷ್ಟು ದುಬಾರಿಯಾಗಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಇನ್ನು ದೇಶದಲ್ಲಿ ಕೇವಲ ಸೀಮಿತ 10 ಯುನಿಟ್‌ಗಳಷ್ಟೇ ಮಾರಾಟಕ್ಕೆ ಲಭ್ಯವಿರಲಿದ್ದು, 2014ರ ವರ್ಷಾಂತ್ಯದಲ್ಲಿ ವಿತರಣೆ ಕಾರ್ಯ ಆರಂಭಗೊಳ್ಳಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಡೆಬ್ಯುಟ್

ಹಾಗಿದ್ದರೂ ಕೆಲವು ತಿಂಗಳುಗಳ ಹಿಂದೆಯಷ್ಟೇ ಜಾಗತಿಕ ಪ್ರದರ್ಶನ ಕಂಡಿದ್ದ ಐ3 ಹೈಬ್ರಿಡ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಬಿಎಂಡಬ್ಲ್ಯು ಹೊಂದಿಲ್ಲ.

English summary
This year's edition of the Indian Auto Expo promises to bring several new and exciting models to India, both two wheeled and four wheeled ones, but arguably the most exciting of the new launches will be the one from BMW.
Story first published: Friday, January 3, 2014, 12:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark