ಜುಲೈ ಡಿಸ್ಕೌಂಟ್ ಮೇಳ; ಆಯ್ಕೆ ನಿಮ್ಮದು

Written By:

ಕಾರು ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಎದುರು ನೋಡುತ್ತಿರುವ ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ತಮ್ಮ ತಮ್ಮ ಮಾಡೆಲ್‌ಗಳಿಗೆ ಭರ್ಜರಿ ಆಫರ್ ಪ್ರಕಟಿಸುವ ಮೂಲಕ ಜುಲೈ ತಿಂಗಳಲ್ಲೂ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ನೂತನ ಕಾರು ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಚಾಲ್ತಿಯಲ್ಲಿರುವ ಮಾಡೆಲ್‌ಗಳು ತನ್ನ ಬೇಡಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಆಫರ್‌ಗಳನ್ನು ಘೋಷಿಸುತ್ತಿವೆ.

ಹೀಗೆ ಪಟ್ಟಿ ಮಾಡ ತೆರಳಿದಾಗ ಜುಲೈ ತಿಂಗಳಲ್ಲೂ ಕಾರು ಖರೀದಿಗೆ ಉತ್ತಮ ವಾತಾವರಣ ಮೂಡಿಬಂದಿದೆ. ಹಾಗಿದ್ದರೆ ನೋಡೋಣ ಬನ್ನಿ ಪ್ರಸಕ್ತ ತಿಂಗಳಲ್ಲಿ ಯಾವೆಲ್ಲ ಕಾರುಗಳಿಗೆ ಆಫರ್‌ಗಳಿಗೆ ಎಂಬುದನ್ನು ಸ್ಲೈಡರ್ ಮೂಲಕ ಗಮನಿಸೋಣವೇ.

ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್

ಇತ್ತೀಚೆಗಷ್ಟೇ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಫೇಸ್‌‍ಲಿಫ್ಟ್ ವರ್ಷನ್ ಲಾಂಚ್ ಆಗಿತ್ತು. ಇದರಂತೆ ಹಳೆಯ ಇ ಕ್ಲಾಸ್ ಸ್ಟಾಕುಗಳನ್ನು ಖಾಲಿ ಮಾಡುವ ನಿಟ್ಟಿನಲ್ಲಿ ಆಫರ್‌ಗಳನ್ನು ಮುಂದುರಿಸಿದ್ದು, ಗ್ರಾಹಕರು 7 ಲಕ್ಷ ರು.ಗಳ ವರೆಗೆ ಉಳಿಸಿಕೊಳ್ಳಬಹುದಾಗಿದೆ.

ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್

ಪೊಲೊ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಿಗೆ ಉಚಿತ ವಿಮಾ ಸೌಲಭ್ಯ ಲಭ್ಯವಿದೆ. ಇದರ ಹೊರತಾಗಿ ಪೆಟ್ರೋಲ್ ವೆರಿಯಂಟ್‌ನಲ್ಲಿ 10 ಸಾವಿರ ರು. ವರೆಗೂ ಉಳಿತಾಯ ಮಾಡಬಹುದಾಗಿದ್ದು, ಎಕ್ಸ್‌ಜೇಂಚ್ ಬೋನಸ್ ವೇಳೆಯೂ ಅಷ್ಟೇ ಮೊತ್ತ ಉಳಿತಾಯ ಮಾಡುವ ಅವಕಾಶವಿರುತ್ತದೆ. ಇನ್ನು 2012ರ ಪ್ಯಾಸೆಟ್ ಟ್ರೆಂಡ್‌ಲೈನ್ ಮಾಡೆಲ್‌ಗಳಿಗೆ 2.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಿದೆ.

ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್

ಇನ್ನು 2012ರ ಪ್ಯಾಸೆಟ್ ಟ್ರೆಂಡ್‌ಲೈನ್ ಮಾಡೆಲ್‌ಗಳಿಗೆ 2.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಿದೆ.

ಷೆವರ್ಲೆ

ಷೆವರ್ಲೆ

ಷೆವರ್ಲೆ ಬೀಟ್ ಎಲ್ಲ ವರ್ಷನ್‌ಗಳಿಗೆ ಉಚಿತ ವಿಮಾ ಸೌಲಭ್ಯ.

ಎಕ್ಸ್‌ಚೇಂಜ್ ಬೋನಸ್ ರು. 15,000

ಷೆವರ್ಲೆ

ಷೆವರ್ಲೆ

ಕೆಲವು ಡೀಲರ‌್‌ಗಳು ಕ್ರೂಜ್‌ಗೆ 60 ಸಾವಿರ ರು. ತನಕ ಆಫರ್ ಮುಂದಿಡುತ್ತಿದೆ.

ಮಿಟ್ಸುಬಿಸಿ

ಮಿಟ್ಸುಬಿಸಿ

ಇತರ ಕಾರು ಕಂಪನಿಗಳ ರೀತಿಯಲ್ಲಿಯೇ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಆವೃತ್ತಿಗೂ ಉಚಿತ ವಿಮಾ ಸೌಲಭ್ಯವಿದೆ. ಅಂದರೆ ಈ ಎಸ್‌ಯುವಿ ಖರೀದಿ ವೇಳೆ ನಿಮಗೆ ರು. 63,000 ವರೆಗೂ ಉಳಿಸಿಕೊಳ್ಳಬಹುದಾಗಿದೆ.

ಟೊಯೊಟಾ

ಟೊಯೊಟಾ

ಟೊಯೊಟಾ ದೇಶದ ಹೆಸರಾಂತ ಬ್ರಾಂಡ್. ಅಂದರೆ ಜನಪ್ರಿಯ ಇನ್ನೋವಾ ಖರೀದಿ ವೇಳೆ 20,000 ರು. ಹಾಗೂ 3,000 ಕಾರ್ಪೋರೇಟ್ ಡಿಸ್ಕೌಂಟ್ ಕೇಳಿ ಪಡೆದುಕೊಳ್ಳಿರಿ. ಹಾಗೆಯೇ 10,000 ರು. ವರೆಗೆ ಎಕ್ಸ್‌ಚೇಂಜ್ ಬೋನಸ್ ಪಡೆದುಕೊಳ್ಳಬಹುದು.

ಸ್ಕೋಡಾ

ಸ್ಕೋಡಾ

ಯೆಟಿ ಆವೃತ್ತಿಗೆ 71,000 ರು. ವರೆಗೆ ಆಫರ್ ನೀಡುವ ಮೂಲಕ ಮಾರಾಟ ಕುದುರಿಸಿಕೊಳ್ಳಲು ಸ್ಕೋಡಾ ಗುರಿಯಿರಿಸಿಕೊಂಡಿದೆ. ಹಾಗೆಯೇ 17,500 ರು. ಕಾರ್ಪೋರೇಟ್ ಡಿಸ್ಕೌಂಟ್ ಲಭ್ಯವಿರುತ್ತದೆ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ತನ್ನ 3 ಸಿರೀಸ್ ಆವೃತ್ತಿಗಳಿಗೆ 2 ಲಕ್ಷ ರು.ಗಳಿಂದ 4 ಲಕ್ಷ ರು.ಗಳ ವರೆಗೆ ರಿಯಾಯಿತಿ ದರ ನೀಡುವುದರ ಬಗ್ಗೆ ಮಾಹಿತಿ ಲಭಿಸಿದೆ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಹಾಗೆಯೇ 5 ಸಿರೀಸ್ ಕಾರುಗಳಿಗೆ 3ರಿಂದ 5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

English summary
If you are thinking of getting a new car, read on to find out about what some of the best offers available in the month of july 2013
Story first published: Saturday, July 13, 2013, 16:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark