ಫಿಯೆಟ್‌ನಿಂದ ನೀವು ಬಯಸಿದ ಹ್ಯಾಚ್‌ಬ್ಯಾಕ್ ಕಾರು

Written By:

ದೇಶದಲ್ಲಿ ತಪ್ಪು ಕಾರಣಕ್ಕಾಗಿಯೇ ಫಿಯೆಟ್ ಹೆಚ್ಚು ಹೈಲೈಟ್ ಆಗುತ್ತಿದೆ. ಇದು ಈ ಜನಪ್ರಿಯ ಕಾರಿನ ಮಾರುಕಟ್ಟೆಗೂ ವ್ಯತಿರಿಕ್ತವಾಗಿವಾಗಿ ಬಾಧಿಸಿತ್ತು. ಹಾಗಿದ್ದರೂ ಫಿಯೆಟ್ ಅಭಿಮಾನಿಗಳು ಖುಷಿಪಡುವಂತಹ ಸುದ್ದಿ ಬಂದಿದೆ.

ನೀವು ಬಯಸುವ ದೇಶದ ಬಹುನಿರೀಕ್ಷಿತ ಫಿಯೆಟ್ ಪುಂಟೊ ಅಬಾರ್ತ್ ಕಾರನ್ನು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಗೊಳಿಸುವುದಾಗಿ ಇಟಲಿಯ ಈ ದೈತ್ಯ ಕಾರು ತಯಾರಕ ಸಂಸ್ಥೆ ಘೋಷಿಸಿದೆ. ಈ ಮೂಲಕ ದೇಶದಲ್ಲಿ ಫಿಯೆಟ್ ಬ್ರಾಂಡ್ ಹೆಚ್ಚು ಜನಪ್ರಿಯಗೊಳ್ಳುವ ಸಾಧ್ಯತೆಯಿದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 2013 ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಫಿಯೆಟ್ ಅಬಾರ್ತ್ ದೇಶದ ರಸ್ತೆಗಿಳಿಯುವ ಸಾಧ್ಯತೆಯಿದೆ. ನಿಜಕ್ಕೂ ಫಿಯೆಟ್‌ನ ಈ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ದೇಶದ ಗ್ರಾಹಕರ ಫೇವರಿಟ್ ಎನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಬನ್ನಿ ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

ನಿರ್ವಹಣೆ:ಫಿಯೆಟ್ ಪುಂಟೊ ಅಬಾರ್ತ್ ಕಾರು ಉತ್ತಮ ನಿರ್ವಹಣೆಯನ್ನು ಹೊಂದಿರಲಿದೆ. ಹಾಗೆಯೇ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

ಅಬಾರ್ತ್ ಮೂಲಕ ತನ್ನ ಬ್ರಾಂಡ್ ಹೆಸರನ್ನು ಇನ್ನಷ್ಟು ಪಸರಿಸುವ ನಂಬಿಕೆಯನ್ನು ಫಿಯೆಟ್ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ನಿರ್ವಹಣೆಗಾಗಿ ಫಿಯೆಟ್ ಮನ್ನಣೆ ಗಿಟ್ಟಿಸಿಕೊಂಡಿದೆ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಅಬಾರ್ತ್ 1.4 ಲೀಟರ್ ಟಿ-ಜೆಟ್ ಎಂಜಿನ್ 165 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಡಿಸ್ಕ್ ಬ್ರೇಕ್‌ಗಳಂತಹ ಸುರಕ್ಷಾ ಮಾನದಂಡಗಳನ್ನು ಹೊಂದಿರಲಿದೆ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

ಜಾಗತಿಕ ಮಾರುಕಟ್ಟೆಯಲ್ಲಿ ಫಿಯೆಟ್ ಪುಂಟೊ ಅಬಾರ್ತ್ ಟು ಡೋರ್ ಆವೃತ್ತಿಯಲ್ಲಿ ಬಿಡುಗಡೆಗೊಂಡಿತ್ತು. ಆದರೆ ಭಾರತದಲ್ಲಿ ನಾಲ್ಕು ಡೋರ್ ವರ್ಷನ್ ಬಿಡುಗಡೆಯಾಗಲಿದೆ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಫಿಯೆಟ್ ಪುಂಟೊ ಅಬಾರ್ತ್ ದರ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಸ್ಪರ್ಧಾತ್ಮಕ ದರದಲ್ಲಿ ಕಾರು ರಸ್ತೆಗಿಳಿಸುವ ನಿಟ್ಟಿನಲ್ಲಿ ಉತ್ಪಾದನೆಗಳನ್ನು ಸ್ಥಳೀಯವಾಗಿಸುವ ಅಗತ್ಯವಿದೆ.

ಫಿಯೆಟ್ ಪುಂಟೊ ಅಬಾರ್ತ್

ಫಿಯೆಟ್ ಪುಂಟೊ ಅಬಾರ್ತ್

2011ನೇ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಪ್ರದರ್ಶನಗೊಂಡಿದ್ದ ಫಿಯೆಟ್‌ ಪುಂಟೊ ಅಬಾರ್ತ್ ಅನಾವರಣಗೊಂಡಿತ್ತು.

English summary
The Italian manufacturer has announced that India will soon receive the Fiat Punto Abarth by Q3 of 2013 and expects the Fiat brand to grow in India with an onslaught of new car launches in the coming years.
Story first published: Saturday, January 12, 2013, 10:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark