2ನೇ ಬಾರಿಗೆ ಫೋರ್ಡ್ ಇಕೊಸ್ಪೋರ್ಟ್ ದರ ಏರಿಕೆ

By Nagaraja

ದೇಶದ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಪೈಕಿ ಅತಿ ಹೆಚ್ಚು ಯಶಸ್ಸು ಗಳಿಸಿರುವ ಫೋರ್ಡ್ ಇಕೊಸ್ಪೋರ್ಟ್ ದರಗಳಲ್ಲಿ ಎರಡನೇ ಬಾರಿಗೆ ವರ್ಧನೆ ಕಂಡುಬಂದಿದೆ. ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಿರುವುದು ಇಕೊಸ್ಪೋರ್ಟ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಇದೀಗ ಲಾಂಚ್ ಆದ ಬಳಿಕ ಎರಡನೇ ಬಾರಿಗೆ ಬೆಲೆ ಹೆಚ್ಚಳಗೊಳಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್‌ಗೆ 'ವರ್ಷದ ಕಾರು' ಗೌರವ

2013 ಜೂನ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಇಕೊಸ್ಪೋರ್ಟ್, ಎಲ್ಲ ಹಂತದಲ್ಲಿಯೂ ರೆನೊ ಡಸ್ಟರ್ ಮಾರಾಟವನ್ನು ಹಿಂದಿಕ್ಕುವಲ್ಲಿ ಯಶಸ್ವಿ ಕಂಡಿತ್ತು. ಇದರ ಫಲವಾಗಿ ಬಿಡುಗಡೆ ಅವಧಿಯಲ್ಲಿ ಅತಿ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ಗ್ರಾಹಕರಿಂದ ಮಿತಿ ಮೀರಿದ ಬೇಡಿಕೆ ಕಂಡುಬಂದಿದ್ದರ ಹಿನ್ನಲೆಯಲ್ಲಿ ಎಲ್ಲ ವೆರಿಯಂಟ್‌ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಇಕೊಸ್ಪೋರ್ಟ್ ಪ್ರೇರಿತವಾಗಿತ್ತು. ಇನ್ನು ಕೆಲವು ಬಾರಿ ಕಾಯುವಿಕೆ ಅವಧಿಯನ್ನು ಒಂದು ವರ್ಷದ ವರೆಗೂ ವಿಸ್ತರಿಸಿತ್ತು. ಪ್ರಕಟಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್‌ಗೆ 60,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದೆ. ಹೀಗಾಗಿ ಬೇಡಿಕೆ ಮಿತಿ ಮೀರಿದ ಹಿನ್ನಲೆಯಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸುತ್ತಿದ್ದೇವೆ ಎಂದಿತ್ತು.

ಫೋರ್ಡ್ ಇಕೊಸ್ಪೋರ್ಟ್ ದರಗಳಲ್ಲಿ 2ನೇ ಬಾರಿಗೆ ಏರಿಕೆ

2013 ಸೆಪ್ಟೆಂಬರ್ ತಿಂಗಳಲ್ಲಿ ಇಕೊಸ್ಪೋರ್ಟ್ ದರಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡುಬಂದಿತ್ತು. ಇದು ಮೊದಲೇ ಬುಕ್ಕಿಂಗ್ ಮಾಡಿದ ಗ್ರಾಹಕರಿಗೂ ಅನ್ವಯವಾಗುವಂತಿತ್ತು.

ಇಕೊಸ್ಪೋರ್ಟ್ ದರ ಏರಿಕೆ ಅಂಕಿಗಳಲ್ಲಿ

ಇಕೊಸ್ಪೋರ್ಟ್ ದರ ಏರಿಕೆ ಅಂಕಿಗಳಲ್ಲಿ

  • ಇದೀಗ ಇಕೊಸ್ಪೋರ್ಟ್ ಬೇಸ್ ವೆರಿಯಂಟ್, ಬಿಡುಗಡೆ ದರಗಿಂತಲೂ 60,000 ರು.ಗಳಷ್ಟು ದುಬಾರಿಯಾಗಲಿದೆ.
  • ಹಾಗೆಯೇ ಬೇಸ್ ವೆರಿಯಂಟ್ ಜತೆ ಇಕೊಬೂಸ್ಟ್ ಎಂಜಿನ್, ಲಾಂಚ್ ಬೆಲೆಗಿಂತಲೂ 61,000 ರು.ಗಳಷ್ಟು ದುಬಾರಿಯಾಗಲಿದೆ.
  • ಎಂಟ್ರಿ ವೆವೆಲ್ ಆಟೋಮ್ಯಾಟಿಕ್ ವೆರಿಯಂಟ್ ದರವು ಲಾಂಚ್ ಬಳಿಕ 59,000 ರು.ಗಳಷ್ಟು ವರ್ಧಿಸಿದೆ.
  • ಅದೇ ರೀತಿ ಬೇಸ್ ಡೀಸೆಲ್ ವೆರಿಯಂಟ್ ಬಿಡುಗಡೆ ದರಗಿಂತಲೂ 69,000 ರು.ಗಳಷ್ಟು ದುಬಾರಿಯಾಗಲಿದೆ.
  • ಫೋರ್ಡ್ ಇಕೊಸ್ಪೋರ್ಟ್ ದರಗಳಲ್ಲಿ 2ನೇ ಬಾರಿಗೆ ಏರಿಕೆ

    ಮೇಲ್ದರ್ಜೆಯ ವೆರಿಯಂಟ್ ಆಯ್ಕೆ ಮಾಡಿದ ರೀತಿಯಲ್ಲೇ ಬೆಲೆಯಲ್ಲೂ ವರ್ಧನೆ ಕಂಡುಬಂದಿದೆ. ಇದೀಗ ಟಾಪ್ ಎಂಡ್ ಡೀಸೆಲ್ ಟೈಟಾನಿಯಂ ಏಕ್ಸ್ ಶೋ ರೂ ದರ 9.74 ಲಕ್ಷ ರು.ಗಳಾಗಿವೆ. ಅಂದರೆ ಬಿಡುಗಡೆ ದರಗಿಂತಲೂ 75,000 ರು.ಗಳಷ್ಟು ದುಬಾರಿಯಾಗಿದೆ.

    ಫೋರ್ಡ್ ಇಕೊಸ್ಪೋರ್ಟ್ ದರಗಳಲ್ಲಿ 2ನೇ ಬಾರಿಗೆ ಏರಿಕೆ

    ಫೋರ್ಡ್ ಇಕೊಸ್ಪೋರ್ಟ್1.5 ಲೀಟರ್ ಪೆಟ್ರೋಲ್, 1.0 ಲೀಟರ್ ಇಕೊಬೂಸ್ಟ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

    ಫೋರ್ಡ್ ಇಕೊಸ್ಪೋರ್ಟ್ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಫೋರ್ಡ್ ಇಕೊಸ್ಪೋರ್ಟ್ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

    • 1.5ಪಿ ಆಂಬಿಯಂಟ್, 5.59, 6.19
    • 1.5ಪಿ ಟ್ರೆಂಡ್, 6.49, 7.14
    • 1.5ಪಿ ಟೈಟಾನಿಯಂ, 7.51, 8.1
    • ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

      ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

      ಇಕೊಬೂಸ್ಟ್

      • 1.0 ಲೀಟರ್ ಟೈಟಾನಿಯಂ, 7.89, 8.5
      • 1.0 ಲೀಟರ್ ಟೈಟಾನಿಯಂ (ಒಪ್ಷನ್), 8.45, 9.04
      • ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

        ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

        ಆಟೋಮ್ಯಾಟಿಕ್

        • 1.5ಪಿ ಟೈಟಾನಿಂಯ ಎಟಿ, 8.45, 9.04
        • ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

          ವೆರಿಯಂಟ್, ಲಾಂಚ್ ದರ, ಪರಿಷ್ಕೃತ ದರ (ಲಕ್ಷಗಳಲ್ಲಿ)

          ಡೀಸೆಲ್

          • 1.5ಡಿ ಆಂಬಿಯಂಟ್ 6.69, 7.38
          • 1.5 ಡಿ ಟ್ರೆಂಡ್ 7.61, 8.25
          • 1.5 ಡಿ ಟೈಟಾನಿಯಂ 8.62, 9.21
          • 1.5 ಡಿ ಟೈಟಾನಿಯಂ (ಒ) 8.99, 9.74

Most Read Articles

Kannada
English summary
The disastrous launch of the Ford EcoSport continues as the American manufacturer has hiked prices of the model yet again. Ford EcoSport was launched in June last year at an extremely competitive starting price, following plenty of hype and advertising that lasted months.
Story first published: Monday, January 13, 2014, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X