ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

Written By:

ನಿಮ್ಮ ಭಾವನೆಯ ಕಾರು ಹೇಗಿರಬಹುದು? ಸಾಮಾನ್ಯಕ್ಕಿಂತ ವಿರುದ್ಧವಾಗಿ ಸ್ಟೀರಿಂಗ್ ವೀಲ್, ವೇಗವರ್ಧನೆ, ಕ್ಲಚ್ ಹಾಗೂ ಬ್ರೇಕ್ ಇಲ್ಲದ ಕಾರೊಂದನ್ನು ಊಹಿಸಲು ಸಾಧ್ಯವೇ? ಇದು ಸಾಧ್ಯ ಎನ್ನುತ್ತಿದೆ ಗೂಗಲ್.

ಹೌದು, ಸ್ಟೀರಿಂಗ್ ವೀಲ್ ಇಲ್ಲದ ಸೆಲ್ಫ್ ಡ್ರೈವಿಂಗ್ ಕಾರನ್ನು (ಸ್ವಯಂಚಾಲಿತ) ಗೂಗಲ್ ಅಭಿವೃದ್ಧಿಪಡಿಸಿದೆ. ಇದರಂತೆ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರಿನ ಮೊದಲ ಮಾದರಿಯನ್ನು ಅನಾವರಣಗೊಳಿಸಲಾಗಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಕಳೆದ ಹಲವಾರು ವರ್ಷಗಳಿಂದ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿರುವ ಗೂಗಲ್, ಕಾರಿನಲ್ಲೂ ತಂತ್ರಜ್ಞಾನ ಆಳವಡಿಸುವ ಸತತ ಪ್ರಯತ್ನದಲ್ಲಿ ತೊಡಗಿದೆ. ಈ ಮೂಲಕ ಮುಂದೊಂದು ದಿನ ಚಾಲಕರಿಲ್ಲದೆ ಸಾಮಾನ್ಯ ಕಾರಿನಂತೆ ಚಲಿಸುವ ಸೆಲ್ಫ್ ಡ್ರೈವಿಂಗ್ ಕಾರುಗಳ ಕನಸು ನನಸಾಗಲಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಕ್ಯಾಲಿಫೋರ್ನಿಯಾ ತಲಹದಿಯ ತಂತ್ರಜ್ಞಾನ ದೈತ್ಯ ಸಂತ ಕ್ಲಾರಾ ಸಹಭಾಗಿತ್ವದಲ್ಲಿ ಚೊಚ್ಚಲ ಸ್ವಯಂ ಚಾಲಿತ ಕಾರನ್ನು ಗೂಗಲ್ ಅಭಿವೃದ್ಧಿಪಡಿಸಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಈ ಮೊದಲೇ ತಿಳಿಸಿರುವಂತೆಯೇ ಇದರಲ್ಲಿ ಸ್ಟೀರಿಂಗ್ ವೀಲ್, ವೇಗವರ್ಧನೆ ಅಥವಾ ಬ್ರೇಕ್ ಇರುವುದಿಲ್ಲ. ಇದರ ಬದಲಾಗಿ ಇದರಲ್ಲಿ ಆಳವಡಿಸಲಾಗಿರುವ ಸಾಫ್ಟ್‌ವೇರ್ ಹಾಗೂ ಯಂತ್ರಗಳು ಕಾರನ್ನು ನಿಯಂತ್ರಣದಲ್ಲಿಡಲಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಕಾರಿನಲ್ಲಿರುವ ಏಕಮಾತ್ರ ನಿಯಂತ್ರಣ ಘಟಕವೆಂದರೆ ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್‌ ಆಗಿರಲಿದೆ. ಇದು ಗೂಗಲ್ ಕಾರನ್ನು ಇನ್ನಷ್ಟು ವಿಶಿಷ್ಟವಾಗಿಸಲಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಕಾರನ್ನು ಸಾಧ್ಯವಾದಷ್ಟು ಚೊಕ್ಕದಾಗಿ ವಿನ್ಯಾಸಗೊಳಿಸಲಾಗಿದ್ದು, ಇಬ್ಬರು ಪ್ರಯಾಣಿಕರಿಗೆ ಮಾತ್ರ ಪಯಣಿಸಬಹುದಾದ ಆಸನ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಪ್ರಯಾಣಿಕರ ಬಯಕೆಯಂತೆ ಕಾರು ಸಂಚರಿಸುವ ಮಾರ್ಗವನ್ನು ತೋರಿಸಲು ಒಂದು ಪರದೆಯಿರಲಿದೆ. ಹಾಗೆಯೇ ವೈಯಕ್ತಿಕ ವಸ್ತುಗಳನ್ನಿಡಲು ಸ್ಥಳಾವಕಾಶಲಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಇನ್ನು ಸುರಕ್ಷತೆಯ ಭಾಗವಾಗಿ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು ಗಂಟೆಗೆ ಗರಿಷ್ಠ 40 ಕೀ.ಮೀ. (25 ಮೈಲ್) ವೇಗತೆಯಲ್ಲಿ ಮಾತ್ರ ಸಂಚರಿಸಲಿದೆ. ಆದರೆ ಗೂಗಲ್ ಸಹ ಸ್ಥಾಪಕ ಸರ್ಜೆ ಬ್ರಿನ್ ಹೇಳುವ ಪ್ರಕಾರ ಭವಿಷ್ಯದ ಕಾರುಗಳು ಗಂಟೆಗೆ ಗರಿಷ್ಠ 160 ಕೀಮೀ. (160 ಮೈಲ್) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಕ್ಯಾಲಿಫೋರ್ನಿಯಾದ ಪಾಲೋಸ್ ವೆರ್ಡೆಸ್‌ನಲ್ಲಿ ನಡೆದ ರಿಕೋಡ್ ಕೋಡ್ ಕಾನ್ಫೆರನ್ಸ್‌ನಲ್ಲಿ ಗೂಗಲ್ ಸೆಲ್ಫ್ ಡ್ರೈವಿಂಗ್ ಮೊದಲ ಮಾದರಿಯನ್ನು (ಪ್ರೊಟೊಟೈಪ್) ಪ್ರದರ್ಶಿಸಲಾಯಿತು.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಈ ಸಂದರ್ಭದಲ್ಲಿ ಪ್ರತಿಕ್ರಿಸಿರುವ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು ಯೋಜನೆಯ ನಿರ್ದೇಶಕ ಕ್ರಿಸ್ ಉರ್ಮ್ಸನ್, "ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಲ್ಲಿ ಆಳವಡಿಸಲಾಗಿರುವ ಸೆನ್ಸಾರ್‌ಗಳು ಬ್ಲೈಂಡ್ ಸ್ಪಾಟ್‌ಗಳನ್ನು ಪತ್ತೆಹಚ್ಚಲಿದೆ. ಹಾಗೆಯೇ ಎರಡು ಫುಟ್ಬಾಲ್ ಮೈದಾನದಷ್ಟು ಗಾತ್ರದ ಸುತ್ತುಮುತ್ತಲಿನ ಪ್ರದೇಶಗಳ ಎಲ್ಲ ವಸ್ತುಗಳನ್ನು ಪತ್ತೆಹಚ್ಚಲಿದೆ. ಇದು ವಿಪರೀತ ವಾಹನ ದಟ್ಟಣೆಯ ವೇಳೆ ಸುಗಮ ಪಯಣಕ್ಕೆ ನೆರವಾಗಲಿದೆ" ಎಂದಿದ್ದಾರೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಪ್ರಸ್ತುತ 100ರಷ್ಟು ಇಂತಹ ಪ್ರೊಟೊಟೈಪ್ ಮಾದರಿಗಳನ್ನು ನಿರ್ಮಿಸುವ ಇರಾದೆಯನ್ನು ಗೂಗಲ್ ಹೊಂದಿದೆ. ಅಲ್ಲದೆ ನಿರಂತರ ಪರೀಕ್ಷಾರ್ಥ ಪ್ರಯೋಗಗಳು ಜಾರಿಯಲ್ಲಿದ್ದು, ಎಲ್ಲ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಲ್ಲಿ ಯಶಸ್ವಿಯಾದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲೇ ಗೂಗಲ್ ಸ್ವಯಂಚಾಲಿತ ಕಾರುಗಳು ರಸ್ತೆಗಳಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ.

ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು - ಆಕರ್ಷಕ ವೀಡಿಯೋ ವೀಕ್ಷಿಸಿ

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು

ಅಷ್ಟಕ್ಕೂ ಪ್ರಾಯೋಗಿಕವಾಗಿ ಸ್ವಯಂಚಾಲಿತ ಕಾರುಗಳು ಯಶಸ್ವಿ ಕಾಣಲಿದೆಯೇ? ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರಿನ ಬಗ್ಗೆ ನಿಮ್ಮ ಭಾವನೆಗಳೇನು? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ಹಂಚಿಕೊಳ್ಳಲು ಮರೆಯದಿರಿ...

 

English summary
Google has been working on self driving cars for quite some time now and the search giant has also demonstrated the still developing technology in test cars.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more