ಹ್ಯುಂಡೈನಿಂದ ಕಾಂಪಾಕ್ಟ್ ಸೆಡಾನ್, ಮಿನಿ ಎಸ್‌ಯುವಿ ಆಗಮನ

By Nagaraja

ಇತ್ತೀಚೆಗಷ್ಟೇ ಗ್ರಾಂಡ್ ಐ10 ಹ್ಯಾಚ್‌‍ಬ್ಯಾಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ನಿಕಟ ಭವಿಷ್ಯದಲ್ಲೇ ಗ್ರಾಂಡ್ ಐ10 ಕಾಂಪಾಕ್ಟ್ ಸೆಡಾನ್ ಹಾಗೂ ಕ್ರೀಡಾ ಬಳಕೆಯ ವಾಹನಗಳನ್ನು (ಎಸ್‌ಯುವಿ) ಲಾಂಚ್ ಮಾಡುವುದಾಗಿ ಘೋಷಿಸಿದೆ.

ಹೆಚ್ಚಿನ ಮಾಹಿತಿಗಾಗಿ: ಮುಂಬರುವ ಹ್ಯುಂಡೈ ಕಾರುಗಳು

ಸಬ್ ಫೋರ್ ಮೀಟರ್ ಸೆಗ್ಮೆಂಟ್...
ದೇಶದಲ್ಲಿ ನಾಲ್ಕು ಮೀಟರ್ ಪರಿಮಿತಿಯೊಳಗಿರುವ ಕಾರುಗಳಿಗೆ ತೆರಿಗೆ ವಿನಾಯಿತಿ ದೊರಕುವ ಹಿನ್ನಲೆಯಲ್ಲಿ ನೂತನ ಗ್ರಾಂಡ್ 10 ಕಾಂಪಾಕ್ಟ್ ಕಾರನ್ನು ಹ್ಯುಂಡೈ ಮೇಲೆ ಸೂಚಿಸಲಾಗಿರುವ ಮಾನದಂಡಗಳಲ್ಲಿ ಉತ್ಪಾದಿಸಲಿದೆ. ಇದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಹಾಗೂ ನಿಕಟ ಪ್ರತಿಸ್ಪರ್ಧಿಗಳ ವಿರುದ್ಧ ಪೈಪೋಟಿ ನೀಡಲು ಸಹಕಾರಿಯಾಗಲಿದೆ.

ಕಾಂಪಾಕ್ಟ್ ಸೆಡಾನ್

ಕಾಂಪಾಕ್ಟ್ ಸೆಡಾನ್

ಸದ್ಯ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್ ಹಾಗೂ ಟಾಟಾ ಇಂಡಿಗೊ ಇಸಿಎಸ್ ಉತ್ತಮ ಮಾರಾಟ ಕಾಯ್ದುಕೊಂಡಿದೆ. ಈ ಪಟ್ಟಿಗೀಗ ನೂತನ ಹ್ಯುಂಡೈ ಕಾಂಪಾಕ್ಟ್ ಸೆಡಾನ್ ಕಾರು ಸೇರ್ಪಡೆಯಾಗಲಿದೆ.

ಅಸೆಂಟ್ ಬದಲಿ ಕಾರು

ಅಸೆಂಟ್ ಬದಲಿ ಕಾರು

ಈ ಹಿಂದೆ ನಿಲುಗಡೆಗೊಂಡಿದ್ದ ಅಸೆಂಟ್ ಸ್ಥಾನದಲ್ಲಿ ಕಾಣಿಸಿಕೊಳ್ಳಲಿರುವ ನೂತನ ಗ್ರಾಂಡ್ ಐ10 ಕಾರು, ಎಂಟ್ರಿ ಲೆವೆಲ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಹಾಗೆಯೇ ಫ್ಲೂಯಿಡಿಕ್ ವಿನ್ಯಾಸ ಹೊಂದಿರುವ ವರ್ನಾ ಕೆಳಗಡೆ ಗುರುತಿಸಿಕೊಳ್ಳಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್

ಸದ್ಯ ಲಭ್ಯವಿರುವ ಮಾಹಿತಿಯಂತೆ ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಸೇರಿದಂತೆ ಟೆರ್ಬೊ ಡೀಸೆಲ್ ಎಂಜಿನ್‌ ಆಯ್ಕೆಗಳಲ್ಲಿ ಆಗಮನವಾಗಲಿದೆ. ಹಾಗಿದ್ದರೂ ಅಸೆಂಟ್ ರೀತಿಯಲ್ಲಿ ಎಲ್‌ಪಿಜಿ ಹಾಗೂ ಸಿಎನ್‌ಜಿ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

ಮಿನಿ ಎಸ್‌ಯುವಿ

ಮಿನಿ ಎಸ್‌ಯುವಿ

ಈ ನಡುವೆ ಗ್ರಾಂಡ್ ಐ10 ತಲಹದಿಯಲ್ಲಿಯೇ ಕಾಂಪಾಕ್ಟ್ ಎಸ್‌ಯುವಿ ಉತ್ಪಾದಿಸುವ ಕುರಿತಾಗಿಯೂ ಹ್ಯುಂಡೈ ಚಿಂತನೆಯಲ್ಲಿದೆ. ಈಗಾಗಲೇ ತವರೂರಿನಲ್ಲಿ ಹಲವು ಬಾರಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿರುವ ಈ ಮಿನಿ ಎಸ್‌ಯುವಿ ಫೋರ್ಡ್‌ನ ಜನಪ್ರಿಯ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗೆ ಕಠಿಣ ಪ್ರತಿಸ್ಪರ್ಧಿಯೆನಿಸಲಿದೆ.

ಕಾಂಪಾಕ್ಟ್ ಎಸ್‌ಯುವಿ

ಕಾಂಪಾಕ್ಟ್ ಎಸ್‌ಯುವಿ

ಹೆಕ್ಸಾ ಸ್ಪೇಸ್ ಫಾರ್ಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2014ರಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಹ್ಯುಂಡೈ ಎಂಪಿವಿ

ಹ್ಯುಂಡೈ ಎಂಪಿವಿ

ಏತನ್ಮಧ್ಯೆ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಉತ್ಪಾದನೆ ಸದ್ಯದಲ್ಲೇ ಉಂಟಾಗಲಿದೆಯೇ ಎಂಬುದಕ್ಕೆ ಹ್ಯುಂಡೈನಿಂದ ಸ್ಪಷ್ಟತೆ ಬಂದಿಲ್ಲ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಎಂಪಿವಿಗೆ ಎದುರಾಳಿಯಾಗಲಿದೆ. ಮೂಲಗಳ ಪ್ರಕಾರ ಹ್ಯುಂಡೈ ಎಂಪಿವಿ ಇಂಡೋನೇಷ್ಯಾ ಹಾದಿಯಾಗಿ ಭಾರತ ಪ್ರವೇಶ ಪಡೆಯಲಿದೆ.

Most Read Articles

Kannada
English summary
Wait till April 2014 and joining Suzuki Swift DZire, Honda Amaze, Tata Indigo eCS among others, will be a Hyundai i10 Grand based compact sedan. This was confirmed by a senior executive from Hyundai India, HT reports.
Story first published: Tuesday, September 10, 2013, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X