12 ಲಕ್ಷ ಮೈಲುಗಲ್ಲು ತಲುಪಿದ ಹ್ಯುಂಡೈ ಐ10

Posted By: Super

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯುಂಡೈ ನೂತನ ಸ್ಪೆಷಲ್ ಅಡಿಷನ್ ಐಟೆಕ್ ಐ10 ಕಾರನ್ನು ಲಾಂಚ್ ಮಾಡುವ ಮೂಲಕ ತನ್ನ ಯಶಸ್ಸನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ.

ಜಗತ್ತಿನಾದ್ಯಂತ 12 ಲಕ್ಷ ಮಂದಿ ಹ್ಯುಂಡೈ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಹೊಂದಿದ್ದಾರೆ. ಇದರಂತೆ ಸ್ಪೆಷಲ್ ಅಡಿಷನ್ ಲಾಂಚ್ ಮಾಡುವ ನೂತನ ಮೈಲುಗಲ್ಲನ್ನು ಈ ಕೊರಿಯಾ ಮೂಲದ ಕಂಪನಿ ಆಚರಿಸಿಕೊಳ್ಳುತ್ತಿದೆ.

ದೇಶದಲ್ಲಿರುವ ಎಲ್ಲ ಹ್ಯುಂಡೈ ಶೋ ರೂಂಗಳಲ್ಲೂ ನೂತನ ಸ್ಪೆಷಲ್ ಅಡಿಷನ್ ಲಭ್ಯವಾಗಲಿದೆ. ಹ್ಯುಂಡೈ ಐ20 ಹಾಗೂ ವರ್ನಾ ಆವೃತ್ತಿಗಳಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಇದರಲ್ಲಿ ಆಳವಡಿಸಿರುವುದು ಪ್ರೀಮಿಯಂ ವೆರಿಯಂಟ್‌ಗೆ ಕಾರಣವಾಗಿದೆ.

ಅಂದ ಹಾಗೆ ಇರಾ ಹಾಗೂ ಮ್ಯಾಗ್ನಾ ಆವೃತ್ತಿಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿರುವ ಈ ವೆರಿಯಂಟ್‌ಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ವೆರಿಯಂಟ್, ದರ ಮಾಹಿತಿ

  • 1.1 ಲೀಟರ್ ಇರಾ: 424,163 ಲಕ್ಷ ರು.
  • 1.2 ಲೀಟರ್ ಮ್ಯಾಗ್ನಾ: 457,265 ಲಕ್ಷ ರು.

ಹಾಗಿದ್ದರೆ ಬನ್ನಿ ಹ್ಯುಂಡೈ ಸ್ಪೆಷಲ್ ಅಡಿಷನ್‌ನಲ್ಲಿ ಯಾವೆಲ್ಲ ವಿಶೇಷ ಫೀಚರ್ ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿ...

Hyundai 'iTech' i10 Special Edition

2007ನೇ ಇಸವಿಯಲ್ಲಿ ಹ್ಯುಂಡೈ ಐ10 ಆವೃತ್ತಿಯನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಸ್ಪೆಷಲ್ ಬಾಡಿ ಗ್ರಾಫಿಕ್ಸ್ ಹಾಗೂ iTech ಲೊಗೊ ನೂತನ ಹ್ಯುಂಡೈ ಐ10 ಕಾರನ್ನು ಮತ್ತಷ್ಟು ವಿಶೇಷವಾಗಿಸಲಿದೆ. ಪ್ರಸ್ತುತ ಕಾರು ಕ್ರೈಸ್ಟಲ್ ವೈಟ್ ಹಾಗೂ ಗಾರ್ನೈಟ್ ರೆಡ್ ಬಾಡಿ ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಹೊಸತಾದ ಇಂಟಿರಿಯರ್ ಫೀಚರ್ಸ್

ಹೊಸತಾದ ಇಂಟಿರಿಯರ್ ಫೀಚರ್ಸ್

ಡ್ಯಾಶ್‌ಬೋರ್ಡ್, ಡೋರ್ ಟ್ರಿಮ್ಸ್ ಹಾಗೂ ಎಸಿ ವೆಂಟ್‌ಗಳ ಜತೆಗೆ ಸ್ಪೆಷಲ್ ರೆಡ್ ಸೇರಿದಂತೆ ವಿವಿಧ ಬಣ್ಣದ ಸೀಟ್ ಕಾರುಗಳು ವಿಶೇಷವಾಗಿಸಲಿದೆ.

ನ್ಯೂ ಎಲೆಕ್ಟ್ರಾನಿಕ್ಸ್

ನ್ಯೂ ಎಲೆಕ್ಟ್ರಾನಿಕ್ಸ್

ಹೊಸ ಐ10 ಸ್ಪೆಷಲ್ ಅಡಿಷನ್ ಕಾರಿನ ಸ್ಟೀರಿಂಗ್ ವೀಲ್‌ನಲ್ಲೇ ಬ್ಲೂಟೂತ್ ಕಂಟ್ರೋಲ್ ಲಭ್ಯವಿರಲಿದೆ.

Hyundai 'iTech' i10 Special Edition

ಹಾಗೆಯೇ ರಿಯರ್ ವ್ಯೂ ಪಾರ್ಕಿಂಗ್ ಕ್ಯಾಮೆರಾ ಹಾಗೂ ಕ್ಯಾಬಿನ್ ರಿಯರ್ ವ್ಯೂ ಮಿರರ್‌ನಲ್ಲಿ ಎಲೆಕ್ಟ್ರೋ-ಕ್ರೊಮಿಕ್ ಫಂಕ್ಷನ್ ಹೆಚ್ಚು ವೈಶಿಷ್ಟ್ಯಕ್ಕೆ ಕಾರಣವಾಗಿದೆ.

ಹ್ಯುಂಡೈ ಐಟೆಕ್ ಐ10 ಸ್ಪೆಷಲ್ ಅಡಿಷನ್

ಹ್ಯುಂಡೈ ಐಟೆಕ್ ಐ10 ಸ್ಪೆಷಲ್ ಅಡಿಷನ್

ಹ್ಯುಂಡೈ ಐಟೆಕ್ ಐ10 ಸ್ಪೆಷಲ್ ಅಡಿಷನ್

ಹ್ಯುಂಡೈ ಐಟೆಕ್ ಐ10 ಸ್ಪೆಷಲ್ ಅಡಿಷನ್

English summary
More than 12 lakh people around the world drive the Hyundai i10 hatchback and upon reaching this milestone Hyundai Motor India is celebrating with the launch of a Special Edition Hyundai ‘iTech' i10.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark