ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

By Nagaraja

ಅಂತೂ ಇಂತೂ ಕೊನೆಗೂ ನಮ್ಮ ದೇಶಕ್ಕೂ ಅಪಘಾತ ಪರೀಕ್ಷೆ (Crash Test)ಬಂದೇ ಬಿಟ್ಟಿದೆ. ಇದರಿಂದಾಗಿ ಕಾರು ಅಪಘಾತಗಳ ಪ್ರಮಾಣಗಳಲ್ಲಿ ಭಾರಿ ಇಳಿಕೆಯುಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಏನಿದು ಅಪಘಾತ ಪರೀಕ್ಷೆ?
ವಿದೇಶಗಳಲ್ಲಿ ಹೊಸತಾಗಿ ಬಿಡುಗಡೆಯಾಗುವ ಕಾರುಗಳಿಗೆ ಕಡ್ಡಾಯ ಅಪಘಾತ ಪರೀಕ್ಷೆ ಏರ್ಪಡಿಸಲಾಗುತ್ತದೆ. ಇದನ್ನು ಸುಲಭವಾಗಿ ವಿವರಿಸುವುದಾದರೆ ಕಾರಿನ ಗುಟಮಟ್ಟದ ಬಗ್ಗೆ ರೇಟಿಂಗ್ ನೀಡಲಾಗುತ್ತದೆ. ಸುರಕ್ಷಿತ ವಿನ್ಯಾಸ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಾಗಿದೆಯೇ ಎಂಬುದನ್ನು ಈ ಮೂಲಕ ತಿಳಿಯಬಹುದು.

ಇದರಲ್ಲಿ ಮುಂಭಾಗದ ಪ್ರಭಾವ ಪರೀಕ್ಷೆ, ಬದಿಗೊತ್ತಿದ ಪರೀಕ್ಷೆ, ಸಣ್ಣ ಅತಿಕ್ರಮಣ ಪರೀಕ್ಷೆ, ಅಡ್ಡ ಪರಿಣಾಮ ಪರೀಕ್ಷೆ, ರೋಲ್‌ಓವರ್ ಟೆಸ್ಟ್, ರೋಡ್‌ಸೈಡ್ ಹಾರ್ಡ್‌ವೇರ್ ಕ್ರಾಶ್ ಟೆಸ್ಟ್, ಓಲ್ಡ್ ವರ್ಸಸ್ ನ್ಯೂ ಮತ್ತು ಕಂಪ್ಯೂಟರ್ ಮಾಡೆಲ್‌ಗಳಂತಹ ವಿವಿಧ ಅಪಘಾತ ಪರೀಕ್ಷೆಗಳು ಪ್ರಮುಖವಾಗಿದೆ.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಸದ್ಯ ಬಂದಿರುವ ವರದಿಗಳ ಪ್ರಕಾರ ಮುಂದಿನ ವರ್ಷದಿಂದ ಭಾರತದಲ್ಲೂ ಅಪಘಾತ ಪರೀಕ್ಷೆ ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ಅಪಘಾತ ಪರೀಕ್ಷೆ ನಿಯಮ ಕಡ್ಡಾಯವಾಗಿರುವುದಿಲ್ಲ. ಆದರೂ ವಾಹನ ತಯಾರಿಕ ಸಂಸ್ಥೆಗಳು ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಗ್ಲೋಬಲ್ ಎನ್‌ಸಿಎಪಿ ನಡೆಸಿರುವ ಪರೀಕ್ಷೆಯಲ್ಲಿ ಭಾರತ ನಿರ್ಮಿತ ವಾಹನ ತಯಾರಿಕ ಸಂಸ್ಥೆಗಳ ಜನಪ್ರಿಯ ಮಾದರಿಗಳು ಅಸುರಕ್ಷಿತ ಹಾಗೂ ಅವೈಜ್ಞಾನಿಕ ಸುರಕ್ಷಾ ಮಾನದಂಡಗಳನ್ನು ಹೊಂದಿದೆ ಎಂಬುದನ್ನು ಪದೇ ಪದೇ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಇಂತಹದೊಂದು ಸ್ವಾಗತಾರ್ಹ ನಿಲುವು ಕಂಡುಬಂದಿದೆ. ಇದರಲ್ಲಿ ಭಾರತದ ಜನಪ್ರಿಯ ಟಾಟಾ ನ್ಯಾನೋ, ಮಾರುತಿ ಆಲ್ಟೊ, ಹ್ಯುಂಡೈ ಐ10, ಫೋರ್ಡ್ ಫಿಗೊ ಮತ್ತು ಫೋಕ್ಸ್‌ವ್ಯಾಗನ್ ಪೊಲೊಗಳಂತಹ ಮಾದರಿಗಳು ವೈಫಲ್ಯತೆ ಅನುಭವಿಸಿದ್ದವು.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಗ್ಲೋಬಲ್ ಎನ್‌ಸಿಎಪಿ ಗಂಟೆಗೆ 64 ಕೀ.ಮೀ. ವೇಗದಲ್ಲಿ ನಡೆಸಿರುವ ಅಪಘಾತ ಪರೀಕ್ಷೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಇಂತಹ ಮಾದರಿಗಳು ವೈಫಲ್ಯತೆ ಕಂಡಿರುವುದು ದೇಶ ರಸ್ತೆಯಲ್ಲಿ ಓಡಾಡುವ ಕಾರುಗಳ ಸುರಕ್ಷಾ ವಿನ್ಯಾಸ ಗುಣಮಟ್ಟತೆಯ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟುಹಾಕುವಂತೆ ಮಾಡಿದ್ದವು. ಇಲ್ಲಿ ಬಹುತೇಕ ಎಂಟ್ರಿ ಲೆವೆಲ್ ಕಾರುಗಳಲ್ಲಿ ಏರ್ ಬ್ಯಾಗ್ ಕೊರತೆ ಕಾಡುತ್ತಿತ್ತು.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಹಾಗಿದ್ದರೂ ಭಾರತೀಯ ಸುರಕ್ಷಾ ಮಾನದಂಡಗಳನ್ನು ಕಾಪಾಡಿಕೊಂಡು ಬಂದಿದ್ದೇವೆ ಎಂದು ವಾಹನ ತಯಾರಕ ಸಂಸ್ಥೆಗಳು ವಾದಿಸುತ್ತಲೇ ಬಂದಿದ್ದವು. ಇಲ್ಲಿ ವಾಸ್ತವಾಂಶ ಏನೆಂದರೆ ಭಾರತೀಯ ಗ್ರಾಹಕರು ಎಬಿಎಸ್ ಅಥವಾ ಏರ್‌ಬ್ಯಾಗ್‌ಗಳಂತಹ ಸುರಕ್ಷಾ ಮಾನದಂಡಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಇದಕ್ಕೆ ಹೆಚ್ಚುವರಿ ದುಡ್ಡು ತೆರಬೇಕಾಗುತ್ತದೆ. ಆದರೆ ಎಬಿಎಸ್‌ಗಳಂತಹ ಬೇಸಿಕ್ ಸುರಕ್ಷಾ ಮಾನದಂಡಗಳನ್ನು ಐಚ್ಛಿಕವಾಗಿ ನೀಡುವ ಬದಲು ಸ್ಟಾಂಡರ್ಡ್ ವೈಶಿಷ್ಟ್ಯವಾಗಿ ಕಾರುಗಳಲ್ಲಿ ಆಳವಡಿಸಿದ್ದಲ್ಲಿ ಅಪಘಾತ ಪ್ರಮಾಣಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದಾಗಿದೆ.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೊಸ ನಿಯಮ ರೂಪಿಸುವ ಸಮಿತಿಯ ಸದಸ್ಯರೂ ಆಗಿರುವ ಭಾರತೀಯ ವಾಹನ ತಯಾರಕ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಕೆ.ಕೆ. ಗಾಂಧಿ, ದೇಶದಲ್ಲಿ ಮುಂಭಾಗ ಹಾಗೂ ಬದಿಗಳಲ್ಲಿ ಅಪಘಾತ ಪರೀಕ್ಷೆ ನಡೆಯಲಿದೆ. ಇದರ ಆಧಾರದಲ್ಲಿ ನೀಡುವ ಸುರಕ್ಷಾ ರೇಟಿಂಗ್ ಅನ್ನು ಮಾರಾಟಕ್ಕೆ ಬಳಕೆ ಮಾಡಬಹುದಾಗಿದೆ. ಇವೆಲ್ಲದರ ಜೊತೆಗೆ ಚೈಲ್ಡ್ ಸೇಫ್ಟಿ ಮಾನದಂಡಗಳನ್ನು ಪರೀಕ್ಷೆ ಮಾಡಲಾಗುವುದು ಎಂದಿದ್ದಾರೆ.

ಅಂತೂ ಭಾರತದಲ್ಲಿ ಕಡ್ಡಾಯವಾಗಲಿದೆ ಅಪಘಾತ ಪರೀಕ್ಷೆ?

ಮಾತು ಮುಂದುವರಿಸಿದ ಅವರು, ಜಾಗತಿಕ ಎನ್‌ಸಿಎಪಿ ಹಾಗೂ ಭಾರತದಲ್ಲಿನ ಅಪಘಾತ ಪರೀಕ್ಷೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ ಎಂದಿದ್ದಾರೆ. ಹಾಗಿದ್ದರೂ ಜಾಗತಿಕ ಎನ್‌ಸಿಎಪಿ ನಡೆಸುವ ಅಪಘಾತ ಪರೀಕ್ಷೆಯ ವೇಗ ಗಂಟೆಗೆ 65 ಕೀ.ಮೀ. ಬದಲು ಭಾರತದಲ್ಲಿ ಗಂಟೆಗೆ 56 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಯಲಿದೆ. ಆದರೆ ಇವೆಲ್ಲಕ್ಕೂ ಮೂಲ ಸೌಕರ್ಯ ರೂಪಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

Most Read Articles

Kannada
English summary
Good news is that the first steps towards curbing this shocking death toll are beginning to see light. India is to finally introduce crash test rules for vehicles sold in the country, beginning early next year.
Story first published: Thursday, October 23, 2014, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X