ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

Written By:

ನವೆಂಬರ್ ತಿಂಗಳ ಮಾರಾಟದಲ್ಲಿ ದೇಶಿಯ ಪ್ರಯಾಣಿಕ ಕಾರು ಮಾರುಕಟ್ಟೆಯು ಶೇಕಡಾ 8.15ರಷ್ಟು ಕುಸಿತ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 1,55,535 ಯುನಿಟ್ ಮಾರಾಟವಾಗಿದ್ದರೆ ಈ ಬಾರಿ 1,42,849 ಯುನಿಟ್‌ಗಳಿಗೆ ಸೀಮಿತ ಗೊಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಭಾರತ ವಾಹನ ತಯಾರಕರ ಒಕ್ಕೂಟ (ಸಿಯಾಮ್) ವರದಿ ಪ್ರಕಾರ, ಮೋಟಾರು ಸೈಕಲ್ (ಬೈಕ್) ಮಾರಾಟವು ಶೇಕಡಾ 1.44ರಷ್ಟು ವರ್ಧನೆ ದಾಖಲಿಸಿದೆ. ನವೆಂಬರ್ ತಿಂಗಳಲ್ಲಿ 8,80,016 ಯುನಿಟ್ ಮಾರಾಟ ದಾಖಲಿಸಿಕೊಂಡರೆ ಕಳೆದ ಬಾರಿಯಿದು 8.67,508 ಯುನಿಟ್ ಮಾತ್ರವಾಗಿತ್ತು.

ಅದೇ ಹೊತ್ತಿಗೆ ದ್ವಿಚಕ್ರ ವಾಹನ (ಬೈಕ್ ಹಾಗೂ ಸ್ಕೂಟರ್) ಮಾರಾಟವು ಶೇಕಡಾ 5.55ರಷ್ಟು ಹೆಚ್ಚಳಗೊಂಡಿದೆ. ಕಳೆದ ಬಾರಿ 11,75,441 ಯುನಿಟ್‌ಗಳಿದ್ದ ಮಾರಾಟವು 12,40,732 ಯುನಿಟ್‌ಗಳಿಗೆ ತಲುಪಿದೆ.

ಇನ್ನು ಒಟ್ಟಾರೆ ವಾಣಿಜ್ಯ ವಾಹನಗಳ ಮಾರಾಟವು ಶೇಕಡಾ 28.78ರಷ್ಟು ಕುಸಿತ ಕಂಡಿರುವುದಾಗಿ ಸಿಯಾಮ್ ಉಲ್ಲೇಖಿಸಿದೆ. ಕಳೆದ ಬಾರಿ 61,403ರಷ್ಟಿದ್ದ ವಾಣಿಜ್ಯ ವಾಹನಗಳ ಮಾರಾಟವು ಈ ಬಾರಿ 43,730 ಯುನಿಟ್‌ಗಳಿಗೆ ಕುಸಿತ ಕಂಡಿದೆ.

ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

ಅಂದ ಹಾಗೆ ನವೆಂಬರ್ ತಿಂಗಳ ಮಾರಾಟದಲ್ಲಿ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ದೇಶಿಯ ಮಾರಾಟದಲ್ಲಿ ಶೇಕಡಾ 4.22ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ 74,793 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿದ್ದರೆ ಈ ಬಾರಿ 71,649 ಯುನಿಟ್‌ಗಳಿಗಷ್ಟೇ ಸೀಮಿತಗೊಂಡಿದೆ.

ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

ಅದೇ ರೀತಿ ದೇಶದ ನಂ.2 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ಸ್ ಸಹ ಶೇಕಡಾ 3.66ರಷ್ಟು ಕುಸಿತ ದಾಖಲಿಸಿದೆ. ಇಲ್ಲೂ 34,698 ಯುನಿಟ್‌ಗಳಿದ್ದ ಮಾರಾಟವು ಈ ಬಾರಿ ನವೆಂಬರ್ ತಿಂಗಳಲ್ಲಿ 33,427ಕ್ಕೆ ಇಳಿಕೆ ಕಂಡಿದೆ.

ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

ಇನ್ನೊಂದೆಡೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕಾರು ಮಾರುಕಟ್ಟೆಯಲ್ಲಿ ಶೇಕಡಾ 41.57ರಷ್ಟು ಹೀನಾಯ ಕುಸಿತ ಕಂಡಿದೆ. ಕಳೆದ ಬಾರಿ 13,538ರಷ್ಟಿದ್ದ ಮಾರಾಟವು 7910 ಸಂಖ್ಯೆ ಬಂದು ತಲುಪಿದೆ.

ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

ಇಷ್ಟೆಲ್ಲ ಹಿನ್ನಡೆಯ ಸುದ್ದಿಯ ನಡುವೆಯೂ ಹೋಂಡಾ ಕಾರ್ಸ್ ಇಂಡಿಯಾ ನವೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 3.66ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ. ಒಟ್ಟು 9310 ಯುನಿಟ್ ಮಾರಾಟ ದಾಖಲಿಸಿಕೊಂಡಿರುವ ಹೋಂಡಾ, ಕಳೆದ ಬಾರಿಗಿಂತಲೂ (3,711) ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

ಕುಸಿತದತ್ತ ಮುಖ ಮಾಡಿದ ಕಾರು ಮಾರುಕಟ್ಟೆ

ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಹ ದೇಶಿಯ ಮಾರಾಟದಲ್ಲಿ 30.46ರಷ್ಟು ಕುಸಿತ ಕಂಡು 16,249 ಯುನಿಟ್‌ಗಳಿಗೆ ಬಂದು ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 23,369 ಯುನಿಟ್ ಮಾರಾಟ ಕಂಡುಕೊಂಡಿತ್ತು.

ಇತರ ಗಮನಾರ್ಹ ಅಂಶಗಳು

ಇತರ ಗಮನಾರ್ಹ ಅಂಶಗಳು

ಕಾರು ಮಾರಾಟ ನವೆಂಬರ್

ರಫ್ತು- ಶೇ. 19.11ರಷ್ಟು ಕುಸಿತ

ಉತ್ಪಾದನೆ- ಶೇ. 8.22ರಷ್ಟು ಕುಸಿತ

English summary
Domestic passenger car sales in India declined 8.15 per cent to 1,42,849 units in November this year as compared to 1,55,535 units sold in the same month last year.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark