ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

Written By:

ಜಗತ್ತಿನಾದ್ಯಂತ ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ಸಮಯ ಇದೀಗ ಹತ್ತಿರ ಬಂದಿದ್ದು, ಲಂಬೊರ್ಗಿನಿ ಗಲರ್ಡೊ ಸೂಪರ್ ಕಾರಿನ ಉತ್ತರಾಧಿಕಾರಿ ಹ್ಯುರಕೇನ್ ಭರ್ಜರಿ ಪ್ರದರ್ಶನ ಕಂಡಿದೆ.

ಚಪ್ಪಟೆ ಸುಂದರಿ ಲಂಬೋರ್ಗಿನಿ ಫುಲ್ ಬಾಡಿ ಸ್ಕ್ಯಾನಿಂಗ್

ಈ ವರೆಗೆ ಟೀಸರ್ ಚಿತ್ರ ಹಾಗೂ ವೀಡಿಯೋಗಳನ್ನು ಮಾತ್ರ ಪ್ರದರ್ಶಿಸಿದ್ದ ಲಂಬೊರ್ಗಿನಿ ಹ್ಯುರಕೇನ್ ಕಾರಿನ ಫುಲ್ ಬಾಡಿ ಸ್ಕ್ಯಾನ್ ಇದೀಗ ನಡೆದಿದೆ. ಪ್ರಮುಖವಾಗಿಯೂ ಗಲರ್ಡೊ ಉತ್ತರಾಧಿಕಾರಿ ಸ್ಥಾನವನ್ನು ಹ್ಯುರಕೇನ್ ಎಲ್‌ಪಿ610-4 ವಹಿಸಲಿದೆ. 1879ನೇ ಇಸವಿಯ ಸ್ಪೇನ್‌ನ ಹೋರಾಟದ ಗೂಳಿಯಿಂದ ಹ್ಯುರಕೇನ್ ಪದವನ್ನು ಸ್ವೀಕರಿಸಲಾಗಿದೆ. ಹಾಗಿದ್ದರೆ ಲಂಬೊರ್ಗಿನಿ ಹೊಸ ಸೂಪರ್ ಕಾರಿನ ವೈಶಿಷ್ಟ್ಯಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಹ್ಯುರಕೇನ್ ಎಲ್‌ಪಿ610-4 ಎಂಬ ಹೆಸರಲ್ಲಿ ಎಲ್‌ಪಿ ಎಂಬುದು longitudinale posteriore, 610 ಎಂಬುದು ಅಶ್ವಶಕ್ತಿಯ ಸಂಕೇತವಾಗಿಯೂ ಹಾಗೆಯೇ 4 ಎಂಬುದು ಫೋರ್ ವೀಲ್ ಡ್ರೈವ್ ಎಂಬುದರ ಸಣ್ಣ ರೂಪವಾಗಿ ಬಳಕೆಯಾಗಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಅಂದ ಹಾಗೆ ಲಂಬೊರ್ಗಿನಿ ಹ್ಯುರಕೇನ್ 5.2 ಲೀಟರ್ ವಿ10 ಫೋರ್ ಸಿಲಿಂಡರ್‌ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 610 ಪಿಎಸ್ ಪವರ್ (560 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಹಾಗೆಯೇ ಲಂಬೊರ್ಗಿನಿ ಡೊಪಿಯಾ ಫ್ರಿಜಿಯಾನ್ (ಎಲ್‌ಡಿಎಫ್) ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ. ಎಲೆಕ್ಟ್ರಿಕಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಪ್ಫನಲ್ ಲಂಬೊರ್ಗಿನಿ ಡೈನಾಮಿಕ್ ಸ್ಟೀರಿಂಗ್ ಮತ್ತು ಮ್ಯಾಗೆಟೊ-ರೈಲೊಜಿಕಲ್ ಡ್ಯಾಂಪರ್ ಇತರ ಪ್ರಮುಖ ಫೀಚರ್‌ಗಳಾಗಿವೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಇನ್ನು ಮೂರು ಚಾಲನಾ ಮೋಡ್‌ಗಳಲ್ಲಿ ಹೊಸ ಸೂಪರ್ ಕಾರು ಆಗಮನವಾಗಲಿದೆ.

  • ಸ್ಟ್ರಾಡಾ,
  • ಸ್ಪೋರ್ಟ್ ಮತ್ತು
  • ಕೋರ್ಸಾ.

ನಿರ್ವಹಣೆ

ನಿರ್ವಹಣೆ

  • 0-100 km/h - 3.2 ಸೆಕೆಂಡು
  • 0-200 km/h - 9.9 ಸೆಕೆಂಡು
  • ಗರಿಷ್ಠ ವೇಗತೆ - Over 325 km/h
ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಎಲ್ಲ ಅರ್ಥದಲ್ಲಿಯೂ ನೂತನ ಲಂಬೊರ್ಗಿನಿ ಶ್ರೇಷ್ಠ ವಿನ್ಯಾಸ, ನಿರ್ವಹಣೆ ಹಾಗೂ ಗುಣಮಟ್ಟವನ್ನು ಹೊಂದಿರಲಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ನೂತನ ಲಂಬೊರ್ಗಿನಿ ಹೆಚ್ಚು ಪರಿಸರ ಸ್ನೇಹಿ ಕಾರು ಕೂಡಾ ಆಗಿರಲಿದೆ. ಇದು ಪ್ರತಿ ಕಿಲೋಮೀಟರ್‌ಗೆ 290 ಗ್ರಾಂ ಹೊಗೆಯನ್ನಷ್ಟೇ ಹೊರಸೂಸಲಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಇದು ಸ್ಟಾರ್ಟ್/ಸ್ಟಾಪ್ ಸಿದ್ಧಾಂತವನ್ನು ಪ್ರತಿಪಾದಿಸಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 8 ಕೀ.ಮೀ. ಮೈಲೇಜ್ ನೀಡಲಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಇವೆಲ್ಲದರ ಜತೆಗೆ ಅವೆಂಟಡೊರ್‌ನಲ್ಲಿರುವ ಫೈಟರ್ ಜೆಟ್ ಶೈಲಿಯ ಎಂಜಿನ್ ಇಗ್ನಿಷನ್ ಬಟನ್ ಮತ್ತು 12.3 ಇಂಚು ಮಾಹಿತಿ ಸಿಸ್ಟಂ ಹೊಂದಿರಲಿದೆ.

ಲಂಬೊರ್ಗಿನಿ ಸೂಪರ್ ಕಾರಿನ ಹೊಸ ಅವತಾರ 'ಹ್ಯುರಕೇನ್'

ಒಟ್ಟಾರೆಯಾಗಿ ಲಂಬೊರ್ಗಿನಿ ಹ್ಯುರಕೇನ್ ಸೂಪರ್ ಕಾರು ಮಾರ್ಚ್‌ನಲ್ಲಿ ಸಾಗಲಿರುವ ಜಿನೆವಾ ಮೋಟಾರು ಶೋದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದ್ದು, ಬಳಿಕ ಮಾರಾಟಕ್ಕೆ ಲಭ್ಯವಿರಲಿದೆ.

ವೀಡಿಯೋ ವೀಕ್ಷಿಸಿ

English summary
While Lamborghini is busy frustrating us with teaser videos under its mysterious Hexagon Project, the internet has other plans. The first, FULL SET of images of the Lamborghini Huracan, the Gallardo replacement were earlier leaked on Italian site, LaStampa earlier this week. However, that page has since been removed.
Story first published: Friday, December 20, 2013, 17:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark