1ರ ಸಂಭ್ರಮ; ಮಾರುತಿ ಆಲ್ಟೊ 800 ವಾರ್ಷಿಕ ಆವೃತ್ತಿ ಲಾಂಚ್

Written By:

ಈ ಬಾರಿಯ ಹಬ್ಬದ ಆವೃತ್ತಿ ದೇಶದ ಗ್ರಾಹಕರ ಪಾಲಿಗೆ ಅತಿ ವಿಶೇಷವೆನಿಸಲಿದೆ. ಯಾಕೆಂದರೆ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಲ್ಟೊ, ಇದೀಗ ವಿಶೇಷ ರೂಪ ಪಡೆದುಕೊಳ್ಳುತ್ತಿದೆ.

ಹೌದು ಕೆಲವು ದಿನಗಳ ಹಿಂದೆಯಷ್ಟೇ ಹಬ್ಬದ ಆವೃತ್ತಿಯನ್ನು ಮನಗಂಡಿದ್ದ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ, ಆಲ್ಟೊ ಕೆ10 ಮ್ಯೂಸಿಕ್ ಎಡಿಷನ್ ಲಾಂಚ್ ಮಾಡಿತ್ತು. ಇದರ ಬೆನ್ನಲ್ಲೇ ಆಲ್ಟೊ 800 ಒಂದರ ಸಂಭ್ರಮವನ್ನು ಆದ್ಧೂರಿಯಾಗಿ ಆಚರಿಸಲು ಹೊರಟಿರುವ ಮಾರುತಿ ಸುಜುಕಿ, ವಿಶೇಷವಾದ ವಾರ್ಷಿಕ ಎಡಿಷನ್ ಲಾಂಚ್ ಮಾಡಿದೆ.

ನೂತನ ಆಲ್ಟೊ 800 ವಾರ್ಷಿಕ ಪ್ಯಾಕೇಜುಗಳನ್ನು ಒಳಗೊಂಡಿರಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 3.12 ಲಕ್ಷ ರು.ಗಳಾಗಿವೆ. ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ನೂತನ ಕಾರು ಖರೀದಿ ಗ್ರಾಹಕರಿಗೆ ಆಲ್ಟೊ ವಿಶೇಷ ಆವೃತ್ತಿಯು ಕೈಗೆಟಕುವ ದರಗಳಲ್ಲಿ ಲಭ್ಯವಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಎಕ್ಸ್‌ಕ್ಲೂಸಿಕ್ 'purple haze' ಕಲರ್ ಸ್ಕೀಮ್,
  • ಬಾಡಿ ಗ್ರಾಫಿಕ್ಸ್,
  • ಸೀಟು ಕವರ್,
  • ಕಪ್ಪು ಬಣ್ಣದ ಬಿ ಪಿಲ್ಲರ್,
ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಬದಿಗಳಲ್ಲಿ ಸ್ಕ್ರಾಚ್ ಗಾರ್ಡ್,
  • ರಿಯರ್ ಪಾರ್ಸೆಲ್ ಟ್ರೇ,
  • ದೇಹ ಬಣ್ಣದ ವಿಂಗ್ ಮಿರರ್,
  • ಆಪ್ಷನಲ್ ಆಡಿಯೋ ಸಿಸ್ಟಂ
1ರ ಸಂಭ್ರಮ; ಮಾರುತಿ ಆಲ್ಟೊ 800 ವಾರ್ಷಿಕ ಆವೃತ್ತಿ ಲಾಂಚ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ತ್ರಿ ಸಿಲಿಂಡರ್ 796 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 46 ಅಶ್ವಶಕ್ತಿ (69 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

1ರ ಸಂಭ್ರಮ; ಮಾರುತಿ ಆಲ್ಟೊ 800 ವಾರ್ಷಿಕ ಆವೃತ್ತಿ ಲಾಂಚ್

2013ನೇ ಸಾಲಿನಲ್ಲಿ ಸ್ಪೆಷಲ್ ಎಡಿಷನ್ ಲಾಂಚ್ ಮಾಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಒಟ್ಟಾರೆಯಾಗಿ ಕಾರು ಮಾರುಕಟ್ಟೆ ಕುಸಿದಿರುವ ಈ ಹಂತದಲ್ಲಿ ಹಬ್ಬದ ಆವೃತ್ತಿಯು ಹೇಗೆ ಉತ್ತೇಜನ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

1ರ ಸಂಭ್ರಮ; ಮಾರುತಿ ಆಲ್ಟೊ 800 ವಾರ್ಷಿಕ ಆವೃತ್ತಿ ಲಾಂಚ್

ದೇಶದಲ್ಲಿ ಮಾರುತಿ ಸುಜುಕಿ ನಂಬಿಕೆಗ್ರಸ್ತ ಕಾರು ಬ್ರಾಂಡ್ ಆಗಿದೆ. ಹಾಗಾಗಿ ಯಾವುದೇ ಪ್ರಚಾರದ ಹೊರತಾಗಿಯೂ ಆಲ್ಟೊ ವಿಶೇಷ ಎಡಿಷನ್ ಉತ್ತಮ ಮಾರುಕಟ್ಟೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

English summary
Maruti Suzuki's high selling selling model, Alto is available in two special edition variants this festive season. Just last week the automaker came out with a limited edition model, Alto K10 Musik Edition. It has followed it up this week with an Anniversary Edition of the Alto 800. It was during last year's festive season that Maruti Suzuki launched the extensively facelifted and improved Alto 800.
Story first published: Tuesday, October 8, 2013, 8:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark