ಮಾರುತಿಯಿಂದ ಇನ್ನೋವಾ ಪ್ರತಿಸ್ಫರ್ಧಿ ರಸ್ತೆಗೆ
ಭಾರತದ ರಸ್ತೆಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಮಲ್ಟಿ ಪರ್ಪಸ್ ವೆಹಿಕಲ್ ಟೊಯೊಟಾ ಇನ್ನೋವಾಗೆ ಪ್ರತಿಸ್ಫರ್ದಿಯೊಂದನ್ನು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕಣಕ್ಕಿಳಿಸಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಮಾರುತಿ ಎರ್ಟಿಗಾ ಒಂದೆಡೆ ಸದ್ದು ಮಾಡುತ್ತಿದ್ದರೆ ಸಮರ್ಥ ಇನ್ನೋವಾ ಸವಾಲು ಹಿಮ್ಮೆಟ್ಟಿಸಲು ಸರಿಯಾದ ಮಾದರಿಯ ಕೊರತೆ ಕಾಡುತ್ತಿದೆ. ಆದರೆ ಇದೀಗ ಇವೆಲ್ಲವನ್ನು ಮೆಟ್ಟಿ ನಿಲ್ಲಲಿರುವ ಮಾರುತಿ ಅತ್ಯಮೋಘ ಎಂಪಿವಿ ಕಾರೊಂದನ್ನು ಸಿದ್ಧಪಡಿಸಲಿದೆ.
ಮಾರುಕಟ್ಟೆಯಲ್ಲಿ ಎರ್ಟಿಗಾ ಅಬ್ಬರ ಹೇಗಿತ್ತು ನೋಡಿ
ಈ ಹಿಂದೆಲ್ಲ ಸಣ್ಣ ಕಾರು ಮಾರುಕಟ್ಟೆಯತ್ತ ಮಾತ್ರ ಗಮನ ಕೇಂದ್ರಿತವಾಗಿದ್ದ ಮಾರುತಿ, ಇದೀಗ ದೇಶದ ವಿಸ್ತಾರವಾದ ಮಾರುಕಟ್ಟೆಯ ಎಲ್ಲ ಸಗ್ಮೆಂಟ್‌ನಲ್ಲೂ ತನ್ನ ಅಧಿಪತ್ಯ ಸ್ಥಾಪಿಸಲು ಹೊರಟಿದೆ.

ಆರ್‌ಎಕ್ಸ್ ಎಂಬ ಕೋಡ್ ಪಡೆದುಕೊಂಡಿರುವ ನೂತನ ಮಾರುತಿ ಎಂಪಿವಿ 2017ರ ಒಳಗಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದ ಹಾಗೆ ಮಾರುತಿಯ ಈ ನೂತನ ಕಾರು ಇನ್ನಷ್ಟೇ ನಿರ್ಮಾಣಗೊಳ್ಳಬೇಕಾಗಿದೆ. ಹಾಗಾಗಿ ಈ ಫುಲ್ ಸೈಜ್ ಕಾರಿನ ವಿನ್ಯಾಸ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಂಪಿವಿ ಪೈಕಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಇನ್ನೋವಾ ಕಾರನ್ನು ದೇಶದ ಮಧ್ಯಮ ವರ್ಗದಿಂದ ಹಿಡಿದು ರಾಜಕಾರಣಿಗಳ ವರೆಗೂ ಫೇವರಿಟ್ ಎನಿಸಿಕೊಂಡಿತ್ತು.

ನಿಮ್ಮ ಮಾಹಿತಿಗಾಗಿ, ಈಗಲೂ ದೇಶದ ಕಾರು ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳ ಪ್ರಾಬಲ್ಯ ಹೆಚ್ಚಿದ್ದರೂ ವೃದ್ಧಿದರ ಮಾತ್ರ ಕುಂಠಿತಗೊಂಡಿದೆ. ಇನ್ನೊಂದೆದೆ ಯುಟಿಲಿಟಿ ವಿಭಾಗ 2012ರ ಸಾಲಿನಲ್ಲಿ ಶೇಕಡಾ 53ರಷ್ಟು ಏರಿಕೆ ಕಂಡಿತ್ತು.

ಈ ಎಲ್ಲ ಮಾರುಕಟ್ಟೆ ಪರಿಸ್ಥಿತಿಯನ್ನು ಚೆನ್ನಾಗಿ ಅವಲೋಕಿಸುತ್ತಿರುವ ಮಾರುತಿ ಎಂಪಿವಿ ವಿಭಾಗದತ್ತವೂ ತನ್ನ ಗಮನ ಕೇಂದ್ರಿಕರಿಸಿದೆ.

ನೂತನ ಎಂಪಿವಿ ಈಗಾಗಲೇ ಮಾರುಕಟ್ಟೆಯಲ್ಲಿ ಎರ್ಟಿಗಾಕ್ಕಿಂತ ಮೇಲೆ ಗುರುತಿಸಿಕೊಳ್ಳಲಿದೆ. ಇದು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲೂ ಆಗಮನವಾಗಲಿದೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ಆರ್‌ಎಕ್ಸ್ ಕೋಡ್ ಪಡೆದುಕೊಂಡಿರುವ ಮಾರುತಿಯ ಎಂಪಿವಿ ಕಾರು ತವರೂರಾದ ಜಪಾನ್‌ನಲ್ಲಿ ಅಭಿವೃದ್ಧಿ ಹಂತದಲ್ಲಿದೆ.

ಅಷ್ಟಕ್ಕೂ ಮಾರುತಿ ನೂತನ ಕಾರು 2016 ಅಥವಾ 2017ರ ವರ್ಷಾರಂಭದಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications








