ಮಾರುತಿ ವ್ಯಾಗನಾರ್ 'ಮಾಧವನ್' ವಿಶೇಷ ಆವೃತ್ತಿ ಲಾಂಚ್

Posted By:

ದಕ್ಷಿಣ ಭಾರತದ ಖ್ಯಾತ ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟ ಪ್ರಸ್ತುತ ಬಾಲಿವುಡ್ ರಂಗದಲ್ಲಿ ಸಕ್ರಿಯವಾಗಿರುವ ಮಾಧವನ್ ಹಸ್ತಾಕ್ಷರ ಹೊಂದಿರುವ ವ್ಯಾಗನಾರ್ ವಿಶೇಷ ಆವೃತ್ತಿಯನ್ನು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಲಾಂಚ್ ಮಾಡಿದೆ.

ಇತ್ತೀಚೆಗಷ್ಟೇ ಮಾರುತಿ ವ್ಯಾಗನಾರ್ ನೂತನ ಆವೃತ್ತಿಯಾಗಿರುವ ಸ್ಟಿಂಗ್ರೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದರ ಬೆನ್ನಲ್ಲೇ ಹಬ್ಬದ ಆವೃತ್ತಿಯ ಸಂಭ್ರಮದಲ್ಲಿರುವ ದೇಶದ ಗ್ರಾಹಕರಿಗಾಗಿ ಮಾಧವನ್ ಸ್ಪೆಷಲ್ ಎಡಿಷನ್ ವ್ಯಾಗನಾರ್ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ.

ನಿಮ್ಮ ಮಾಹಿತಿಗಾಗಿ, ಮಾಧವನ್ ಮಾರುತಿ ವ್ಯಾಗನಾರ್‌ನ ಪ್ರಚಾರ ರಾಯಭಾರಿ ಕೂಡಾ ಆಗಿದ್ದಾರೆ. ಪ್ರಸ್ತುತ ಮಾಧವನ್ ಹಸ್ತಾಕ್ಷರ ಹೊಂದಿರುವ ವಿಶೇಷ ಆವೃತ್ತಿಯ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೆ ದಿನಪತ್ರಿಕೆಗಳಲ್ಲಿ ಈಗಾಗಲೇ ಜಾಹೀರಾತು ಪ್ರಕಟಗೊಂಡಿರುವುದಾಗಿ ಆಟೋ ಮೂಲಗಳು ತಿಳಿಸಿವೆ.

ಮಾಧವನ್ ಹಸ್ತಾಕ್ಷರ

ಮಾಧವನ್ ಹಸ್ತಾಕ್ಷರ

ಇದು ಕೇವಲ ಮಾಧವನ್ ಸಹಿ ಹೊಂದಿರುವ ವಿಶೇಷ ಆವೃತ್ತಿ ಎಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಈ ಹಸ್ತಾಕ್ಷರ ವಿಶೇಷ ಎಡಿಷನ್ ಮೂಲಕ ಗ್ರಾಹಕರಿಗಾಗಿ 45,000 ರು. ವರೆಗೆ ಉಳಿತಾಯ ಮಾಡುವ ಅವಕಾಶವನ್ನು ಮಾರುತಿ ಒದಗಿಸುತ್ತಿದೆ.

ಸ್ಮಾರ್ಟ್ ಫೀಚರ್ಸ್

ಸ್ಮಾರ್ಟ್ ಫೀಚರ್ಸ್

  • ಕೆನ್‌ವುಡ್ ಡ್ಯುಯಲ್ ಡಿನ್ ಆಡಿಯೋ ಸಿಸ್ಟಂ (USB & AUX),
  • ಸಿಗ್ನೇಚ್ಛರ್ ಆರ್ಟ್ ಲೆಥರ್ ಸೀಟು ಕವರ್,
  • ರಿಯರ್ ಪಾರ್ಕಿಂಗ್ ಸೆನ್ಸಾರ್ ಜತೆ ಡಿಜಿಟಲ್ ಡಿಸ್‌ಪ್ಲೇ,
  • ಬ್ಲೂಟೂತ್ ಕಿಟ್,
  • ಡೋರ್ ಸಿಲ್ ಗಾರ್ಡ್,
  • ಮಾಧವನ್ ಸಹಿ ಮತ್ತು ರಿಯರ್ ಗ್ರಾಫಿಕ್ಸ್
ಉಳಿತಾಯ

ಉಳಿತಾಯ

ನೂತನ ವ್ಯಾಗನಾರ್ ಮಾಧವನ್ ಸಹಿ ವಿಶೇಷ ಆವೃತ್ತಿಯ ವೈಶಿಷ್ಟ್ಯಗಳಿಗಾಗಿ ಹೆಚ್ಚುವರಿ ರು. 32,000 ತಗುಲಲಿದೆ. ಹಾಗಿದ್ದರೂ ನೀವು 20,000 ರು. ಮಾತ್ರ ಪಾವತಿಸಿದರೆ ಸಾಕು. ಈ ಮೂಲಕ ರು. 12,000 ಉಳಿತಾಯ ಮಾಡಬಹುದಾಗಿದೆ.

ಬಾಡಿ ಗ್ರಾಫಿಕ್ಸ್

ಬಾಡಿ ಗ್ರಾಫಿಕ್ಸ್

ಕಾರಿನ ಹಿಂಭಾಗದಲ್ಲಿ ಬಾಡಿ ಗ್ರಾಫಿಕ್ಸ್ ಜತೆ ಮಾಧವನ್ ಸಹಿ ಇರಲಿದೆ. ಇದರ ಜತೆಗೆ ರು. 5,100 ವರೆಗೆ ಡಿಸ್ಕೌಂಟ್ ವೋಚರ್ ಹಾಗೆಯೇ ಶೇಕಡಾ 0.5ರಷ್ಟು ಬಡ್ಡಿದರ ಸೇವ್ ಮಾಡಬಹುದಾಗಿದೆ.

ಮಾರುತಿ ಸ್ಟಿಂಗ್ರೇ

ಮಾರುತಿ ಸ್ಟಿಂಗ್ರೇ

ಪ್ರಸ್ತುತ ಆಫರ್ ವ್ಯಾಗನಾರ್ ಎಡಿಷನ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಅಂದರೆ ಇದೀಗಷ್ಟೇ ಲಾಂಚ್ ಆಗಿರುವ ಸ್ಟಿಂಗ್ರೇ ಆವೃತ್ತಿಗೆ ಇದು ಅನ್ವಯವಾಗುವುದಿಲ್ಲ.

English summary
The Maruti Suzuki Wagon R Madhavan Signature Edition has just been introduced in the country. While the carmaker has not released an official statement about this special edition and there is no mention about it on their website either, we notice that an advertisement has already made its way onto today’s newspaper.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more