ನಮ್ಮ ನಿಮ್ಮ ನೆಚ್ಚಿನ ಮೈಲೇಜ್ ಕಾರು ಹೋಂಡಾ ಸಿಟಿ ಭರ್ಜರಿ ಲಾಂಚ್

By Nagaraja

ಕಳೆದೊಂದು ತಿಂಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ನೂತನ 2014 ಹೋಂಡಾ ಸಿಟಿ ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಮೈಲೇಜ್ ಕಾರು ಎಂದೇ ಪ್ರಖ್ಯಾತಿ ಪಡೆದಿರುವ ದೇಶದ ಈ ಅತ್ಯಂತ ಇಂಧನ ಕ್ಷಮತೆಯುಳ್ಳ ಮಿಡ್ ಸೈಜ್ ಸೆಡಾನ್ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ 7.42 ಲಕ್ಷ ರು.ಗಳಾಗಿವೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಹೋಂಡಾ ಸಿಟಿ ಇತಿಹಾಸದಲ್ಲಿ ಇದೇ ಮೊದಲ ಬಾರಿಯೆಂಬಂತೆ ದೇಶದಲ್ಲಿ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್ ಲಾಂಚ್ ಮಾಡಲಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 8.62 ರು.ಗಳಾಗಿವೆ. ಹಾಗೆಯೇ ಟಾಪ್ ವೆರಿಯಂಟ್‌ಗಾಗಿ 11.10 ಲಕ್ಷ ರು.ಗಳನ್ನು ಪಾವತಿಸಬೇಕಾಗಿದೆ.

ಎಂಜಿನ್, ಮೈಲೇಜ್

ಎಂಜಿನ್, ಮೈಲೇಜ್

ಮುಂದಿನ ತಲೆಮಾರಿನ ಹೋಂಡಾ ಸಿಟಿ ಐ-ಡಿಟೆಕ್ (i-DTEC) ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

6 ಕಲರ್ ವೆರಿಯಂಟ್

6 ಕಲರ್ ವೆರಿಯಂಟ್

ಅಂತೆಯೇ ಈ ಬಹುನಿರೀಕ್ಷಿತ ಕಾರು ಕಾರು ಕಲರ್ ವೆರಿಯಂಟ್‌ಗಳಲ್ಲಿ ಆಗಮನವಾಗಿದೆ. ಇದು ಗ್ರಾಹಕರು ತಮ್ಮ ನೆಚ್ಚಿನ ಆವೃತ್ತಿಯನ್ನು ಆಯ್ಕೆ ಮಾಡಲು ನೆರವಾಗಲಿದೆ.

ಪೆಟ್ರೋಲ್ ಆವೃತ್ತಿ ಸ್ವಲ್ಪ ವಿಳಂಬ

ಪೆಟ್ರೋಲ್ ಆವೃತ್ತಿ ಸ್ವಲ್ಪ ವಿಳಂಬ

ಈ ಪೈಕಿ ಡೀಸೆಲ್ ವೆರಿಯಂಟ್ ತಕ್ಷಣದಿಂದಲೇ ಮಾರುಕಟ್ಟೆಯಲ್ಲಿ ವಿತರಣೆಗೆ ಲಭ್ಯವಾಗಲಿದೆ. ಅದೇ ಹೊತ್ತಿಗೆ ಪೆಟ್ರೋಲ್ ವೆರಿಯಂಟ್ ಆಗಮನ ಫೆಬ್ರವರಿ ಮಧ್ಯಂತರ ಅವಧಿಯಾಗಿರಲಿದೆ.

ಬುಕ್ಕಿಂಗ್ ಪ್ರಕ್ರಿಯೆ

ಬುಕ್ಕಿಂಗ್ ಪ್ರಕ್ರಿಯೆ

ನಿಮ್ಮ ಮಾಹಿತಿಗಾಗಿ, ಹೋಂಡಾ ಸಿಟಿ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಈ ನಡುವೆ 9000ಕ್ಕೂ ಹೆಚ್ಚು ಮಂದಿ ಹೊಸ ಕಾರಿಗಾಗಿ ಬುಕ್ಕಿಂಗ್ ಮಾಡಿರುವುದಾಗಿ ಮಾಹಿತಿ ಲಭಿಸಿದೆ.

ಜಾಗತಿಕ ಅನಾವರಣ

ಜಾಗತಿಕ ಅನಾವರಣ

2013ನೇ ನವೆಂಬರ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೋಂಡಾ ಸಿಟಿ ಅನಾವರಣಗೊಳಿಸಲಾಗಿತ್ತು. ಈ ಮೂಲಕ ಹೋಂಡಾ ಸಿಟಿ ಜಾಗತಿಕ ಅನಾವರಣಕ್ಕೆ ಭಾರತವನ್ನು ಆಯ್ಕೆ ಮಾಡಿತ್ತು.

1998ರಲ್ಲಿ ಮೊದಲ ಬಾರಿ ಲಾಂಚ್

1998ರಲ್ಲಿ ಮೊದಲ ಬಾರಿ ಲಾಂಚ್

ಹೋಂಡಾ ಮೊದಲ ತಲೆಮಾರಿನ ಸಿಟಿ ಕಾರು 1998ನೇ ಇಸವಿಯಲ್ಲಿ ಲಾಂಚ್ ಆಗಿತ್ತು. ಇದು 4.3 ಲಕ್ಷ ಯುನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರಸ್ತುತ ಕಾರು ಹ್ಯುಂಡೈ ವರ್ನಾ, ಸ್ಕೋಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಆಯಾಮ

ಆಯಾಮ

ನೂತನ ಹೋಂಡಾ ಸಿಟಿ ಉದ್ದಗಲದಲ್ಲಿ (440 ಎಂಎಂ ಉದ್ದ, 1695 ಎಂಎಂ ಅಗಲ) ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆಗಿದ್ದರೂ ವೀಲ್ ಬೇಸ್ 50 ಎಂಎಂ (2600 ಎಂಎಂ) ಮತ್ತು ಎತ್ತರ 10 ಎಂಎಂಗಳಷ್ಟು (1495 ಎಂಎಂ) ಹೆಚ್ಚಳಗೊಳಿಸಲಾಗಿದೆ.

ಅಮೇಜ್ ಯಶಸ್ಸು ಸ್ಫೂರ್ತಿ

ಅಮೇಜ್ ಯಶಸ್ಸು ಸ್ಫೂರ್ತಿ

ಒಟ್ಟಿನಲ್ಲಿ ಅಮೇಜ್ ಕಾಂಪಾಕ್ಟ್ ಸೆಡಾನ್ ಯಶಸ್ಸನಿಂದ ಉತ್ಸಾಹಿತವಾಗಿರುವ ಹೋಂಡಾ ಕಾರ್ಸ್ ಇಂಡಿಯಾ, ಹೋಂಡಾ ಸಿಟಿ ಮುಖಾಂತರ ಇನ್ನಷ್ಟು ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದೆ. 2013ನೇ ಅವಧಿಯಲ್ಲಿ ಭರ್ಜರಿ ಮಾರಾಟ ಕಂಡಿದ್ದ ಹೋಂಡಾ ಅಮೇಜ್ 1,00,000 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದ್ದವು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

  • ಇ ಎಂಟಿ: 7. 42 ಲಕ್ಷ ರು.
  • ಎಸ್ ಎಂಟಿ: 8.04 ಲಕ್ಷ ರು.
  • ಎಸ್‌ವಿ ಎಂಟಿ: 8.49 ಲಕ್ಷ ರು.
  • ವಿ ಎಂಟಿ: 8.99 ಲಕ್ಷ ರು.
  • ವಿಎಕ್ಸ್ ಎಂಟಿ: 9.93 ಲಕ್ಷ ರು.
  • ಎಸ್‌ವಿ ಸಿವಿಟಿ: 9.49 ಲಕ್ಷ ರು.
  • ವಿಎಕ್ಸ್ ಸಿವಿಟಿ: 10.98 ಲಕ್ಷ ರು.
  • ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಡೀಸೆಲ್

    • ಇ ಎಂಟಿ: 8.62 ಲಕ್ಷ ರು.
    • ಎಸ್ ಎಂಟಿ: 9.24 ಲಕ್ಷ ರು.
    • ಎಸ್‌ವಿ ಎಂಟಿ: 9.66 ಲಕ್ಷ ರು.
    • ವಿ ಎಂಟಿ: 10.16 ಲಕ್ಷ ರು.
    • ವಿಎಕ್ಸ್ ಎಂಟಿ: 11.10 ಲಕ್ಷ ರು.

Most Read Articles

Kannada
English summary
2014 Honda City sedan caused quite a buzz even before it was launched in India. Offered in a choice of petrol and diesel engine options, the base petrol City price starts from Rs 7.42 lakhs, and that of base diesel starts from Rs 8.62 lakhs.
Story first published: Tuesday, January 7, 2014, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X