ಬಹುನಿರೀಕ್ಷಿತ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ಲಾಂಚ್

Posted By:

ಕ್ರೀಡಾ ಉತ್ಪಾದಕ ವಾಹನ (ಎಸ್‌‍ಯುವಿ) ವಿಭಾಗದಲ್ಲಿ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್‌ಗೆ ಬಿಸಿ ಮುಟ್ಟಿಸಿರುವ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಬಹುನಿರೀಕ್ಷಿತ ಟೆರನೊ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಲಾಂಚ್ ಮಾಡಿದೆ.

ದರ ಮಾಹಿತಿ: 9.58 ಲಕ್ಷ ರು. (ಎಕ್ಸ್‌ ಶೋ ರೂಂ ಚೆನ್ನೈ)

ನಿರೀಕ್ಷೆಯಂತೆಯೇ ಟೆರನೊ ಪ್ರೀಮಿಯಂ ಎಸ್‌ಯುವಿ ಭಾರತ ಮಾರುಕಟ್ಟೆ ಪ್ರವೇಶಿಸಿದರೂ ತನ್ನ ಎದುರಾಳಿಗೆ ಹೋಲಿಸಿದರೆ ಸ್ವಲ್ಪ ದುಬಾರಿ ಎನಿಸಿಕೊಂಡಿರುವುದು ಗ್ರಾಹಕರಲ್ಲಿ ನಿರಾಸೆಗೆ ಕಾರಣವಾಗುತ್ತಿದೆ. ಹಾಗಿದ್ದರೂ ಗ್ರಾಹಕರು ಬಯಸಿದ ಆಡಂಬರದ ಪಯಣವನ್ನು ಖಾತ್ರಿಪಡಿಸುವಲ್ಲಿ ಟೆರನೊ ಯಶಸ್ವಿಯಾಗಲಿದೆ ಎಂಬದು ಕಂಪನಿ ವಾದವಾಗಿದೆ.

ನಿಮ್ಮ ಮಾಹಿತಿಗಾಗಿ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ಟೆರೆನೊ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಸೆಪ್ಟೆಂಬರ್ ತಿಂಗಳಾರಂಭದಿಂದಲೇ ಆರಂಭವಾಗಿತ್ತು. ಡಸ್ಟರ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಟೆರನೊ ಡೀಸೆಲ್ ವೆರಿಯಂಟ್ ದರ 9.58 ಲಕ್ಷ ರು.ಗಳಿಂದ ಪ್ರಾರಂಭವಾಗಿ 12.44 ಲಕ್ಷ ರು.ಗಳ ವರೆಗಿದೆ.

To Follow DriveSpark On Facebook, Click The Like Button
ಪ್ರೀಮಿಯಂ ಲುಕ್

ಪ್ರೀಮಿಯಂ ಲುಕ್

ಡಸ್ಟರ್‌ಗೆ ಹೋಲಿಸಿದರೆ ವಿಶಿಷ್ಟವಾದ ಪ್ರೀಮಿಯಂ ವಿನ್ಯಾಸವನ್ನು ಟೆರನೊ ಪಡೆದುಕೊಂಡಿದೆ. ಮುಂದುಗಡೆಯಿರುವ ನೂತನ ಹೆಡ್‌ಲ್ಯಾಂಪ್, ಗ್ರಿಲ್ ಹಾಗೂ ಬಂಪರ್ ಟೆರನೊವನ್ನು ವಿಭಿನ್ನವಾಗಿಸುತ್ತದೆ.

ವಿನ್ಯಾಸ

ವಿನ್ಯಾಸ

ಹಿಂದುಗಡೆ ಆಲ್ ನ್ಯೂ ಟೈಲ್ ಗೇಟ್ ವಿನ್ಯಾಸದ ಟೈಲ್ ಲ್ಯಾಂಪ್ ಲಗತ್ತಿಸಲಾಗಿದೆ. ಹಾಗೆಯೇ ರಿಯರ್ ಬಂಪರ್ ಸಹ ಪರಿಷ್ಕೃತಗೊಳಿಸಲಾಗಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಹಾಗಿದ್ದರೂ ಡಸ್ಟರ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.5 ಲೀಟರ್ ಕೆ9ಕೆ ಡೀಸೆಲ್ ಹಾಗೂ 1.6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಒಟ್ಟು ಏಳು ವೆರಿಯಂಟ್

ಒಟ್ಟು ಏಳು ವೆರಿಯಂಟ್

ಡಸ್ಟರ್‌ಗಿಂತಲೂ 70,000 ರು.ಗಳಷ್ಟು ದುಬಾರಿಯಾಗಿರುವ ಟೆರನೊ, ಒಂದು ಪೆಟ್ರೋಲ್ ಸೇರಿದಂತೆ 6 ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ವೆರಿಯಂಟ್, ದರ ಮಾಹಿತಿ

ವೆರಿಯಂಟ್, ದರ ಮಾಹಿತಿ

ಡೀಸೆಲ್ ವೆರಿಯಂಟ್, ದರ ಮಾಹಿತಿ (ಎಕ್ಸ್‌ಇ, ಎಕ್ಸ್‌ಎಲ್, ಎಕ್ಸ್‌ವಿ)

 • ನಿಸ್ಸಾನ್ ಟೆರನೊ ಎಕ್ಸ್‌ಇ 1.5 ಲೀಟರ್ 85 ಪಿಎಸ್ - 9.58 ಲಕ್ಷ ರು.
 • ನಿಸ್ಸಾನ್ ಟೆರನೊ ಎಕ್ಸ್‌ಎಲ್ 1.5 ಲೀಟರ್ 85 ಪಿಎಸ್ - 10.65 ಲಕ್ಷ ರು.
 • ನಿಸ್ಸಾನ್ ಟೆರನೊ ಎಕ್ಸ್‌ಎಲ್ ಪ್ಲಸ್ 1.5 ಲೀಟರ್ 85 ಪಿಎಸ್ - 10.92 ಲಕ್ಷ ರು.
 • ನಿಸ್ಸಾನ್ ಟೆರನೊ ಎಕ್ಸ್‌ಎಲ್ 1.5 ಲೀಟರ್ 110 ಪಿಎಸ್ - 11.31 ಲಕ್ಷ ರು.
 • ನಿಸ್ಸಾನ್ ಟೆರನೊ ಎಕ್ಸ್‌ವಿ 1.5 ಲೀಟರ್ 110 ಪಿಎಸ್ - 1.241 ಲಕ್ಷ ರು.
 • ನಿಸ್ಸಾನ್ ಟೆರನೊ ಎಕ್ಸ್‌ವಿ ಪ್ರೀಮಿಯಂ 1.5 ಲೀಟರ್ 110 ಪಿಎಸ್ - 12.44 ಲಕ್ಷ ರು.

ಪೆಟ್ರೋಲ್ ವೆರಿಯಂಟ್, ದರ ಮಾಹಿತಿ

 • ನಿಸ್ಸಾನ್ ಟೆರನೊ ಎಕ್ಸ್‌ಎಲ್ 1.6 ಲೀಟರ್ ಪೆಟ್ರೋಲ್- 9.78 ಲಕ್ಷ ರು.

ಸುರಕ್ಷತೆ

ಸುರಕ್ಷತೆ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಕ್ಸ್‌ವಿ ಟಾಪ್ ಎಂಡ್ ವೆರಿಯಂಟ್ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಏಸಿ ಮತ್ತು ಚರ್ಮದ ಹೋದಿಕೆಯ ಸಿಟ್ಟಿಂಗ್ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಹಾಗೆಯೇ ಒಟ್ಟು ಆರು ಕಲರ್ ವೆರಿಯಂಟ್‌ಗಳಲ್ಲಿ ಟೆರನೊ ಆಗಮನವಾಗಲಿದೆ. ಅವುಗಳೆಂದರೆ

 • Pearl White,
 • Blade Silver,
 • Sapphire Black,
 • Sterling Grey,
 • Bronze Grey,
 • Fire Red
ಉತ್ತೇಜನ

ಉತ್ತೇಜನ

ನಿಸ್ಸಾನ್ ಮಾರಾಟ ಉತ್ತೇಜಿಸುವಲ್ಲಿ ಟೆರನೊ ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ಕಂಪನಿ ತಿಳಿಸಿದೆ. ಇದು ದೇಶದಲ್ಲಿ ಎಸ್‌ಯುವಿ ಸೆಗ್ಮೆಂಟ್ ವೃದ್ಧಿಗೆ ನೆರವಾಗಲಿದೆ ಎಂದಿದೆ.

ಚೆನ್ನೈ ಘಟಕದಲ್ಲಿ ತಯಾರಿ

ಚೆನ್ನೈ ಘಟಕದಲ್ಲಿ ತಯಾರಿ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮೈಕ್ರಾ, ಸನ್ನಿ ಸೆಡಾನ್ ಇವಾಲಿಯಾ ಎಂಪಿವಿಗಳಂತೆಯೇ ಟೆರನೊ ಸಹ ಚೆನ್ನೈನ ನಿಸ್ಸಾನ್ ಓರಗಡಂ ಘಟಕದಲ್ಲಿ ತಯಾರಿಯಾಗಲಿದೆ. ಈ ಮೂಲಕ ದೇಶದಲ್ಲಿ ನಿಸ್ಸಾನ್ ಉತ್ಪಾದನೆ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಲಿದೆ.

ನಿರೀಕ್ಷೆ

ನಿರೀಕ್ಷೆ

ಆರಾಮದಾಯಕತೆ, ವಿನ್ಯಾಸ ಹಾಗೂ ನಿರ್ವಹಣೆಗೆ ಟೆರನೊ ಹೆಸರುವಾಸಿಯಾಗಲಿದೆ. ಈ ನಾಲ್ಕನೇ ಜನರೇಷನ್ ಕಾರು ಮುಂದಿನ ದಿನಗಳಲ್ಲಿ ಹೇಗೆ ಮಾರುಕಟ್ಟೆಯನ್ನು ಸೊರೆಗೈಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Heating up competition in the Sports Utility Vehicles (SUVs) space, Nissan on Wednesday launched the compact SUV Terrano at a starting price of Rs 9.58 lakh.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark