ಯಾವೆಲ್ಲ ಕಾರು, ಬೈಕುಗಳಿಗೆ ದರ ಕಡಿತ ಘೋಷಣೆ?

Written By:

ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರು ಹಾಗೂ ಎಸ್‌ಯುವಿಗಳ ಮೇಲಿನ ಅಬಕಾರಿ ಸುಂಕಗಳನ್ನು ಕಡಿತಗೊಳಿಸಿರುವ ಬೆನ್ನಲ್ಲೇ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ದರ ಕಡಿತವನ್ನು ಘೋಷಿಸಿದೆ. ಹಾಗಿದ್ದರೂ ಕಾರು ಕಂಪನಿಗಳು ಘೋಷಿಸಿರುವ ದರ ಕಡಿತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಈ ನಿಟ್ಟಿನಲ್ಲಿ ಡ್ರೈವ್ ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ. ಲೋಕಸಭೆಯಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಮಂಡಿಸಿರುವ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನ ಮುಖ್ಯಾಂಶಗಳು

 • ಮೋಟಾರು ಸೈಕಲ್, ಸ್ಕೂಟರ್ ಮತ್ತು ಸಣ್ಣ ಕಾರುಗಳಿಗ ಮೇಲಿನ ಅಬಕಾರಿ ಸುಂಕ ಶೇಕಡಾ 12ರಿಂದ 8ಕ್ಕೆ ಇಳಿಕೆ,
 • ಮಿಡಿಯಂ ಸೈಜ್ ಕಾರುಗಳ ಅಬಕಾರಿ ಸುಂಕ ಶೇಕಡಾ 24ರಿಂದ 20ಕ್ಕೆ ಇಳಿಕೆ,
 • ದೊಡ್ಡ ಕಾರುಗಳ ಮೇಲಿನ ಅಬಕಾರಿ ಸುಂಕ ಶೇಕಡಾ 27ರಿಂದ 24ಕ್ಕೆ ಇಳಿಕೆ,
 • ಕ್ರೀಡಾ ಬಳಕೆಯ ವಾಹನಗಳ ಮೇಲಿನ ಅಬಕಾರಿ ಸುಂಕ ಶೇಕಡಾ 30ರಿಂದ 24ಕ್ಕೆ ಇಳಿಕೆ.

ಈ ದರ ಕಡಿತದ ನೀತಿಯ ಆಧಾರದಲ್ಲಿ ಗ್ರಾಹಕರಿಗೆ ಗರಿಷ್ಠ ಪ್ರಯೋಜನವನ್ನು ನೀಡಲು ಮುಂದಾಗಿರುವ ದೇಶದ ಅಗ್ರಗಣ್ಯ ಕಾರು ಕಂಪನಿಗಳು ದರ ಇಳಿಕೆಯನ್ನು ಘೋಷಿಸಿದೆ. ಈ ಮೂಲಕ ಕುಸಿದತ್ತದಲ್ಲಿರುವ ಕಾರು ಮಾರಾಟಕ್ಕೆ ಉತ್ತೇಜಿಸುವ ನಿರೀಕ್ಷೆಯಲ್ಲಿದೆ.

ಹೀರೊ ಮೊಟೊಕಾರ್ಪ್

ಹೀರೊ ಮೊಟೊಕಾರ್ಪ್

ಕೇವಲ ಕಾರು ಮಾತ್ರವಲ್ಲ. ಪ್ರಯಾಣಿಕ್ ಬೈಕ್ ದರಗಳಲ್ಲೂ ಇಳಿಕೆ ಕಂಡುಬಂದಿದೆ. ಇದರಂತೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಶೇಕಡಾ 2ರಿಂದ 5ರಷ್ಟು ದರ ಇಳಿಕೆಗೊಳಿಸಿದೆ. ಅಂದರೆ ಗರಿಷ್ಠ 4,500 ರು. ವರೆಗೆ ದರ ಇಳಿಕೆಗೊಳಿಸಿದೆ.

ಹೋಂಡಾ ಮೋಟಾರುಸೈಕಲ್

ಹೋಂಡಾ ಮೋಟಾರುಸೈಕಲ್

ಹೀರೊ ನೀತಿ ಅನುಸರಿಸಿರುವ ಹೋಂಡಾ ಮೋಟಾರುಸೈಕಲ್ ಸಹ ಗರಿಷ್ಠ 7600 ರು.ಗಳ ವರೆಗೆ ದರ ಇಳಿಕೆಗೊಳಿಸಿದೆ. ಅಂದರೆ ಡ್ರಿಯೋ ನಿಯೋ ಆವೃತ್ತಿಗೆ ರು. 1600 ವರೆಗೂ ಹಾಗೆಯೇ ಸಿಬಿಆರ್250ಆರ್ ಮಾದರಿಗೆ ರು. 7600ರಷ್ಟು ದರ ಕಡಿತಗೊಂಡಿದೆ.

ಹೋಂಡಾ ಕಾರ್ಸ್

ಹೋಂಡಾ ಕಾರ್ಸ್

 • ಬ್ರಿಯೊ - 3.99 ಲಕ್ಷ ರು.ಗಳಿಂದ 5.99 ಲಕ್ಷ ರು.
 • ಅಮೇಜ್ ಪೆಟ್ರೋಲ್ - 4.99 ಲಕ್ಷ ರು.ಗಳಿಂದ 7.55 ಲಕ್ಷ ರು.
 • ಅಮೇಜ್ ಡೀಸೆಲ್ - 5.97 ಲಕ್ಷ ರು.ಗಳಿಂದ 7.49 ಲಕ್ಷ ರು.
 • ಸಿಟಿ ಪೆಟ್ರೋಲ್ - 7.19 ಲಕ್ಷ ರು.ಗಳಿಂದ 10.80 ಲಕ್ಷ ರು.
 • ಸಿಟಿ ಡೀಸೆಲ್ - 8.37 ಲಕ್ಷ ರು.ಗಳಇಂದ 10.9 ಲಕ್ಷ ರು.
 • ಸಿಆರ್-ವಿ - 20.5 ಲಕ್ಷ ರು.ಗಳಿಂದ 24.36 ಲಕ್ಷ ರು.
ಹ್ಯುಂಡೈ

ಹ್ಯುಂಡೈ

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಸಹ ಇಯಾನ್‌ನಿಂದ ಆರಂಭಸಿ ದುಬಾರಿ ಸಾಂಟಾಫೆ ವರೆಗಿನ ಆವೃತ್ತಿಗಳಿಗೆ ರು. 10,000ದಿಂದ ರು. 1.35 ಲಕ್ಷ ರು.ಗಳ ವರೆಗೆ ದರ ಕಡಿತಗೊಳಿಸಿದೆ.

ಮಹೀಂದ್ರ

ಮಹೀಂದ್ರ

ಅದೇ ರೀತಿ ಮಾದರಿಗೆ ಅನುಗುಣವಾಗಿ ಮಹೀಂದ್ರ ಪ್ರಯಾಣಿಕ ಕಾರುಗಳ ದರ ರು. 13,000ದಿಂದ ರು. 49,000 ವರೆಗೆ ಇಳಿಕೆಯುಂಟಾಗಿದೆ. ಹಾಗೆಯೇ ಪ್ರೀಮಿಯಂ ಸ್ಯಾಂಗ್ಯೊಂಗ್ ಎಸ್‌ಯುವಿ ಕಾರಿನ ದರವನ್ನು ಬರೋಬ್ಬರಿ 92,000 ರು.ಗಳಷ್ಟು ಕಡಿತಗೊಳಿಸಿದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿಯು ಸಹ ತನ್ನೆಲ್ಲ ರೇಂಜ್ ಕಾರುಗಳಿಗೆ ರು. 8502ರಿಂದ ರು. 30,984 ವರೆಗೆ ದರ ಕಡಿತಗೊಳಿಸಿದೆ. ಹಾಗೆಯೇ ಇದೀಗಷ್ಟೇ ಲಾಂಚ್ ಆಗಿರುವ ಸೆಲೆರಿಯೊ ದರ 3.76 ಲಕ್ಷ ರು.ಗಳಿಂದ ಆರಂಭವಾಗಲಿದೆ.

ನಿಸ್ಸಾನ್

ನಿಸ್ಸಾನ್

 • ಇವಾಲಿಯಾ - 8.42 ಲಕ್ಷ ರು.ಗಳಿಂದ 10.21 ಲಕ್ಷ ರು.
 • ಮೈಕ್ರಾ ಆಕ್ಟಿವ್ - 3.37 ಲಕ್ಷ ರು.ಗಳಿಂದ 4.71 ಲಕ್ಷ ರು.
 • ಮೈಕ್ರಾ - 4.82 ಲಕ್ಷ ರು.ಗಳಿಂದ 7.03 ಲಕ್ಷ ರು.
 • ಸನ್ನಿ - 6.28 ಲಕ್ಷ ರು.ಗಳಿಂದ 9.54 ಲಕ್ಷ ರು.
 • ಟೆರನೊ - 9.52 ಲಕ್ಷ ರು.ಗಳಿಂದ 12.30 ಲಕ್ಷ ರು.
 • ಟಿಯಾನಾ - 21.14 ಲಕ್ಷ ರು.ಗಳಿಂದ 24.89 ಲಕ್ಷ ರು.
ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್

 • ಸಿ ಕ್ಲಾಸ್ ದರ 39.90 ಲಕ್ಷ ರು.ಗಳಿಂದ 39.35 ಲಕ್ಷ ರು.ಗಳಿಗೆ ಇಳಿಕೆ
 • ಇ ಕ್ಲಾಸ್ ದರ 47.66 ಲಕ್ಷ ರು.ಗಳಿಂದ 46.90 ಲಕ್ಷ ರು.ಗಳಿಗೆ ಇಳಿಕೆ
 • ಜಿಎಲ್ ಕ್ಲಾಸ್ ದರ 74 ಲಕ್ಷ ರು.ಗಳಿಂದ 72 ಲಕ್ಷ ರು.ಗಳಿಗೆ ಇಳಿಕೆ
ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್

 • ಪೊಲೊ - ರು. 18,000ರಿಂದ 31.000 ರು. ವರೆಗೆ ಇಳಿಕೆ
 • ವೆಂಟೊ - ರು. 14,500ರಿಂದ 31,000 ರು. ವರೆಗೆ ಇಳಿಕೆ
 • ಜೆಟ್ಟಾ - ರು. 38,000ರಿಂದ 51.000 ರು. ವರೆಗೆ ಇಳಿಕೆ.
ಆಡಿ

ಆಡಿ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ ತನ್ನ ಕ್ಯೂ7 ಎಸ್‌ಯುವಿ ಕಾರಿನ ದರ 82.11 ಲಕ್ಷ ರು. ಎಕ್ಸ್ ಶೋ ರೂಂ ದರಗಳಿಂತ 78.28 ಲಕ್ಷ ರು.ಗಳಿಗೆ ಇಳಿಕೆ ಘೋಷಿಸಿದೆ.

ಡಿಎಸ್‌ಕೆ ಹ್ಯೊಸಂಗ್

ಡಿಎಸ್‌ಕೆ ಹ್ಯೊಸಂಗ್

ಇದೀಗಷ್ಟೇ ಡಿಎಸ್‌ಕೆ ಹ್ಯೊಸಂಗ್ ಅಕ್ವಿಲಾ 250 ಬೆಂಗಳೂರಿಗೆ ಭರ್ಜರಿ ಎಂಟ್ರಿ ಕೊಟ್ಟಿತ್ತು. ಅಂದ ಹಾಗೆ ಇಲ್ಲಿದೆ ನೋಡಿ ಡಿಎಸ್‌ಕೆ ಪರಿಷ್ಕೃತ ದರ ಪಟ್ಟಿ

 • ಅಕ್ವಿಲಾ 250 - 2.70 ಲಕ್ಷ ರು.
 • ಜಿಟಿ250 ಆರ್ - 2.80 ಲಕ್ಷ ರು.
 • ಜಿಟಿ 650 ಎನ್ - 4.04 ಲಕ್ಷ ರು.
 • ಜಿಟಿ650 ಆರ್ - 4.87 ಲಕ್ಷ ರು.
 • ಅಕ್ವಿಲಾ ಪ್ರೊ 650 - 5.35 ಲಕ್ಷ ರು.
 • ಎಸ್‌ಟಿ 7 - 6.10 ಲಕ್ಷ ರು.
English summary
Manufacturers have started announcing their revised prices for their products. While the prices reduced are small for two wheelers, they increase as the value of the vehicle goes up.We have compiled the new reduced prices announced by manufacturers in the image slider for your convenience.
Story first published: Saturday, February 22, 2014, 16:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark