ಕಾರು ಪ್ರೇಮಿಗಳೇ ಡಸ್ಟರ್ ಸೀಮಿತ ಆವೃತ್ತಿ ಲಾಂಚ್

Posted By:

ಎರಡು ವರ್ಷಗಳ ಹಿಂದೆ ಲಾಂಚ್ ಆಗಿದ್ದ ರೆನೊ ಡಸ್ಟರ್ ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದವು. ಇದರ ಬೆನ್ನಲ್ಲೇ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ.

ದೆಹಲಿ ಆಟೋ ಎಕ್ಸ್ ಪೋ ಲೈವ್

ನೂತನ ರೆನೊ ಡಸ್ಟರ್ ಸೀಮಿತ ಆವೃತ್ತಿಯು 'ಡಸ್ಟರ್ ಅಡ್ವೆಂಚರ್' ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಇದರ ದರ 12.18 ಲಕ್ಷ ರು.ಗಳಾಗಿರಲಿದೆ. (ಆಕ್ಸೆಸರಿ ಹೊರತಾಗಿ).

ಕಾರು ಪ್ರೇಮಿಗಳೇ ಡಸ್ಟರ್ ಸೀಮಿತ ಆವೃತ್ತಿ ಲಾಂಚ್

ಇದು ಪೂರ್ಣವಾಗಿಯೂ ಸಾಹಸ ಪ್ರಿಯರ ಚಾಲನಾ ಅಗತ್ಯಗಳನ್ನು ಈಡೇರಿಸಲಿದೆ. ಅಲ್ಲದೆ ಕೆಲವೊಂದು ಎಕ್ಸ್‌ಕ್ಲೂಸಿವ್ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದೆ.

ಕಾರು ಪ್ರೇಮಿಗಳೇ ಡಸ್ಟರ್ ಸೀಮಿತ ಆವೃತ್ತಿ ಲಾಂಚ್

ನೂತನ ಡಸ್ಟರ್ ಅಡ್ವೆಂಚರ್ ಎಸ್‌ಯುವಿ ಪಿಇ 4x2, 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಎಸ್‌ಇ 4x4, 6 ಸ್ಪೇಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ.

ಕಾರು ಪ್ರೇಮಿಗಳೇ ಡಸ್ಟರ್ ಸೀಮಿತ ಆವೃತ್ತಿ ಲಾಂಚ್

ಇನ್ನುಳಿದಂತೆ ಎಬಿಎಸ್, ಲೆಥರ್ ಸ್ಟೀರಿಂಗ್ ವೀಲ್, ಹೊಂದಾಣಿಸಬಹುದಾದ ಡ್ರೈವಿಂಗ್ ಸೀಟು, ಎಲೆಕ್ಟ್ರಿಕ್ ರಿಯರ್ ವ್ಯೂ ಮಿರರ್, ಬಿಳಿ ಬಣ್ಣದ ಇಂಟಿರಿಯರ್ ಡೋರ್ ಹ್ಯಾಂಡಲ್ ಮತ್ತು ವೆಂಟ್ಸ್ ಪಡೆದುಕೊಳ್ಳಲಿದೆ.

ರೆನೊ ಕೊಲಿಯೊಸ್

ಇನ್ನು ಸಂಸ್ಥೆಯ ಪ್ರಕಾರ ನೂತನ ಡಸ್ಟರ್ ಪ್ರತಿ ಲೀಟರ್‌ಗೆ 19.01 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ರೆನೊ ಕೊಲಿಯೊಸ್

ಇನ್ನೊಂದೆಡೆ ಫ್ರಾನ್ಸ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ನೂತನ 2014 ಕೊಲಿಯೊಸ್ ಪ್ರೀಮಿಯಂ ಎಸ್‌ಯುವಿ ಕೂಡಾ ಲಾಂಚ್ ಮಾಡಿದೆ.

English summary
Renault Duster Adventure Edition launched at 2014 Auto Expo

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark