11.83 ಲಕ್ಷಕ್ಕೆ ಡಸ್ಟರ್ ಆಲ್ ವೀಲ್ ಡ್ರೈವ್ ಭರ್ಜರಿ ಎಂಟ್ರಿ

Written By:

ದೇಶದ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಡಸ್ಟರ್ 'ಆಲ್ ವೀಲ್ ಡ್ರೈವ್' (ಎಡಬ್ಲ್ಯುಡಿ) ಕಾರು ಕೊನೆಗೂ ಹಬ್ಬದ ಆವೃತ್ತಿಗೆ ಮುಂಚಿತವಾಗಿ ಭರ್ಜರಿ ಬಿಡುಗಡೆ ಕಂಡಿದೆ. ದೇಶದ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಿರುವ ಡಸ್ಟರ್‌ನ ಆಲ್ ವೀಲ್ ಡ್ರೈವ್ ಎಸ್‌ಯುವಿ 11.89 ಲಕ್ಷ ರು.ಗಳಿಂದ 12.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ನಿರಂತರವಾಗಿ ಎಲ್ಲ ಚಕ್ರಗಳನ್ನು ತೊಡಗಿಸಿಕೊಳ್ಳಲು ಡಸ್ಟರ್ ಆಲ್ ವೀಲ್ ಡ್ರೈವ್ ನೆರವಾಗಲಿದೆ. ಇದು ಟು ವೀಲ್ ಡ್ರೈವ್, ಆಟೋ ಮತ್ತು ಫೋರ್ ವೀಲ್ ಡ್ರೈವ್ ಎಂಬ ಚಾಲನಾ ಆಯ್ಕೆಗಳನ್ನು ಪಡೆಯಲಿದೆ. ಅದೇ ರೀತಿ ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆ

ಡಸ್ಟರ್ ಆಲ್ ವೀಲ್ ಡ್ರೈವ್ ವೆರಿಯಂಟ್ 1.5 ಡಿಸಿಐ ಟಿಎಚ್‌ಪಿ ಡೀಸೆಲ್‌ನಿಂದ ನಿಯಂತ್ರಿಸಲ್ಪಡಲಿದ್ದು, 110 ಪಿಎಸ್ (245 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆ

ಕೇವಲ ಆಲ್ ವೀಲ್ ಡ್ರೈವ್ ಮಾತ್ರವಲ್ಲದೆ ಡಸ್ಟರ್ ಹೊರ ಹಾಗೂ ಒಳ ವಿನ್ಯಾಸದಲ್ಲೂ ರೆನೊ ಗಮನಾರ್ಹ ಬದಲಾವಣೆ ತಂದಿದೆ. ಇದು ಹೊರಗೆ ಹಾಗೂ ಒಳಗೂ ಕಾಸ್ಮೆಟಿಕ್ ಬದಲಾವಣೆ ಮತ್ತು ಹೊಸ ಡ್ಯಾಶ್ ಬೋರ್ಡ್ ಪಡೆಯಲಿದೆ.

ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆ

ಕಳೆದ 25 ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಡಸ್ಟರ್, ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆ

ಸದ್ಯ ಡಸ್ಟರ್ ಆಲ್ ವೀಲ್ ಡ್ರೈವ್ ಆಗಮನದೊಂದಿಗೆ ಇನ್ನಷ್ಟು ಶೇಕಡಾ 5ರಷ್ಟು ಮಾರಾಟ ವೃದ್ಧಿಯನ್ನು ರೆನೊ ಗುರಿಯಿರಿಸಿಕೊಂಡಿದೆ.

ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆ

ಅದೇ ರೀತಿ ಮುಂದಿನ ವರ್ಷ ಇನ್ನೆರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ರೆನೊ ಸಂಸ್ಥೆಯು ವರ್ಷಾಂತ್ಯದಲ್ಲಿ ತನ್ನ ಮಾರಾಟ ಜಾಲವನ್ನು 175ಕ್ಕೆ ಏರಿಸಲಿದೆ.

English summary
French carmaker Renault India will launch the new Duster AWD (All-Wheel-Drive) on September 24. The new Renault Duster AWD will boost some cosmetic upgrades inside and outside.
Story first published: Wednesday, September 24, 2014, 14:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark