ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

Posted By:

ಹೌದು, ನೀವಿದನ್ನು ನಂಬಲೇಬೇಕು. ಭಾರತದ ಮೂಲದ ವಾಹನ ಸಂಸ್ಥೆಯಾಗಿರುವುದರಿಂದ ಹಾಗೆಯೇ ವಿದೇಶಿ ವಾಹನ ಸಂಸ್ಥೆಗಳ ವಿರುದ್ಧ ಸೆಡ್ಡು ನೀಡುವುದರಿಂದ ಸಹಜವಾಗಿಯೇ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಮೇಲೆ ಅನುಕಂಪ ಸ್ವಲ್ಪ ಜಾಸ್ತಿನೇ ಇದೆ.

ಅಪಘಾತ ಪರೀಕ್ಷೆಯಲ್ಲಿ ಎಡವಿದ ಫೋರ್ಡ್ ಇಕೊಸ್ಪೋರ್ಟ್

ಆದರೆ ಪ್ರಯಾಣಿಕರ ಸುರಕ್ಷತಾ ವಿಚಾರಕ್ಕೆ ಬಂದಾಗ ಮಾತ್ರ ನಾವಿದನ್ನು ಅವಗಣನೆ ಮಾಡಬೇಕಾಗುತ್ತದೆ. ಯಾಕೆಂದರೆ ಜರ್ಮನಿಯಲ್ಲಿ ನಡೆಸಿರುವ ಪ್ರತಿಷ್ಠಿತ ಅಪಘಾತ ಪರೀಕ್ಷೆಯಲ್ಲಿ (ಕ್ರಾಶ್ ಟೆಸ್ಟಿಂಗ್) ನ್ಯಾನೋ ಸಾಧನೆ ಬರಿ ಶೂನ್ಯ. ಇದು ವಿಶ್ವದ ಅತಿ ಅಗ್ಗದ ಕಾರೆಂಬ ಪಟ್ಟ ಕಟ್ಟಿಕೊಂಡಿರುವ ನ್ಯಾನೋ ಸುರಕ್ಷತಾ ವೈಶಿಷ್ಟ್ಯಗಳ ಮೇಲೆ ನೇರ ಬೊಟ್ಟು ಮಾಡಿ ತೋರಿಸುವಂತಿದೆ. ಕನಿಷ್ಠ ಪಕ್ಷ ಒಂದು ರೇಟಿಂಗ್ ಪಾಯಿಂಟ್ (ಸ್ಟಾರ್) ಕೂಡಾ ಗಿಟ್ಟಿಸಿಕೊಳ್ಳುವಲ್ಲಿ ನ್ಯಾನೋ ವೈಫಲ್ಯತೆ ಅನುಭವಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ವಿಶೇಷವಾಗಿಯೂ ಭಾರತ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನ್ಯಾನೋ ತಯಾರಿಸಲಾಗಿತ್ತು. ಇದೀಗ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಈ ಕಾರು ಎಷ್ಟು ಸೂಕ್ತ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ಅಪಘಾತ ಪರೀಕ್ಷೆಯಲ್ಲಿ ಅಡಾಲ್ಟ್ (ವಯಸ್ಕರು) ಸೇರಿದಂತೆ ಚೈಲ್ಡ್ ಸೇಫ್ಟಿ (ಮಕ್ಕಳು) ವಿಚಾರದಲ್ಲೂ ನ್ಯಾನೋ ಸಾಧನೆ ದೊಡ್ಡ ಸೊನ್ನೆ ಮಾತ್ರವಾಗಿದೆ. ಇನ್ನು ನ್ಯಾನೋದಲ್ಲಿ ಪ್ಯಾಸೆಂಜರ್ ಏರ್ ಬ್ಯಾಗ್ ಸೌಲಭ್ಯವಂತೂ ಇಲ್ಲ ಎಂಬುದು ಮೊದಲೇ ತಿಳಿದ ವಿಚಾರ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ಯುರೋಪ್‌ನಲ್ಲಿ ಫೋಕ್ಸ್‌ವ್ಯಾಗನ್ ಬೀಟ್ಲ್ ತರಹನೇ ಏಷ್ಯಾದಲ್ಲಿ ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದ್ದ ನ್ಯಾನೋ 2009ನೇ ಇಸವಿಯಲ್ಲಿ ಜಗತ್ತಿನ ಅತಿ ಅಗ್ಗದ ಕಾರೆಂಬ ಪಟ್ಟದೊಂದಿಗೆ ಬಿಡುಗಡೆಗೊಂಡಿತ್ತು. ಟಾಟಾ ಮೋಟಾರ್ಸ್ ಅಂದಿನ ಮುಖ್ಯಸ್ಥ ರತನ್ ಟಾಟಾ ಇದರ ಸೂತ್ರಧಾರಿಯಾಗಿದ್ದರು.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ಜಮರ್ನಿಯ ಎನ್‌ಸಿಎಪಿ ಕ್ರಾಶ್ ಟೆಸ್ಟಿಂಗ್ ನ್ಯಾನೋ ವೈಫಲ್ಯ ಅನುಭವಿಸಿದೆ. ಗಂಟೆಗೆ 65 ಕೀ.ಮೀ. ವೇಗದಲ್ಲಿ ಗೋಡೆ ಬಡಿದಾಕ್ಷಣ ನ್ಯಾನೋ ಮುಂಭಾಗವು ಚೂರು ಚೂರಾಗಿದೆ. ಇಲ್ಲಿ ಚಾಲಕ ಹಾಗೂ ಸಹ ಚಾಲಕನ ಜಾಗದಲ್ಲಿ ಕೃತಕ ಆಕೃತ್ತಿ ಲಗತ್ತಿಸಲಾಗಿತ್ತು.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ವರ್ಷಂಪ್ರತಿ ಜರ್ಮನಿಯ ಲ್ಯಾಂಡ್ಸ್‌ಬರ್ಗ್ ಪ್ರಯೋಗಾಲಯದಲ್ಲಿ 50ರಷ್ಟು ಕಾರುಗಳನ್ನು ಕ್ರಾಶ್ ಟೆಸ್ಟ್ ಮಾಡಲಾಗುತ್ತದೆ. ಇದೀಗ ನ್ಯಾನೋ ವೈಫಲ್ಯತೆಯು ಸಂಸ್ಥೆಯ ಯುರೋಪ್ ವರ್ಷನ್ ಎಂಟ್ರಿಗೂ ತೊಡಕಾಗಿ ಪರಿಣಮಿಸಲಿದೆ. ಅಲ್ಲದೆ ಜಾಗತಿಕ ಕಾರು ಟೆಸ್ಟ್ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿಯೂ ವಿಫಲವಾಗಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ಇಲ್ಲಿ ಪ್ರಯಾಣಿಕರು ಅಪಘಾತದಿಂದ ಪಾರಾಗುವ ಯಾವುದೇ ಲಕ್ಷ್ಮಣಗಳು ಕಾಣಿಸುತ್ತಿಲ್ಲ ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ಕಡಿಮೆ ಬೆಲೆಯಲ್ಲಿ ದೇಶಕ್ಕೆ ಕಾರು ಪರಿಚಯಿಸಲು ಹೊರಟಿದ್ದ ನ್ಯಾನೋ ಎಂಜಿನಿಯರ್‌ಗಳ ನೀತಿಯನ್ನು ಪ್ರಶ್ನಿಸುವಂತಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'

ಹಾಗಿದ್ದರೂ ಟಾಟಾ ಮೋಟಾರ್ಸ್‌ನಿಂದ ಈ ವರೆಗೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇತ್ತೀಚೆಗಷ್ಟೇ ಸಂಸ್ಥೆಯು ದೇಶದಲ್ಲಿ ಪವರ್ ಸ್ಟೀರಿಂಗ್ ನ್ಯಾನೋ ಟ್ವಿಸ್ಟ್ ಲಾಂಚ್ ಮಾಡಲಾಗಿತ್ತು. ಒಟ್ಟಿನಲ್ಲಿ ಈ ಎಲ್ಲ ಬೆಳಗಣಿಗೆಗಳು ದೇಶದಲ್ಲಿ ಕಳಪೆ ಮಟ್ಟದ ಕಾರು ನಿರ್ಮಾಣವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ವೀಡಿಯೋ ವೀಕ್ಷಿಸಿ

English summary
Array

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark