ಇಕೊಸ್ಪೋರ್ಟ್‌ಗೆ ಮಿತಿ ಮೀರಿದ ಬೇಡಿಕೆ; ಟೆರನೊಗೆ ಲಾಭ?

By Nagaraja

ಸದ್ಯ ಕಾರು ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಟ್ರೆಂಡ್ ಸುದ್ದಿಯೆಂದರೆ ಅದುವೇ ಫೋರ್ಡ್ ಇಕೊಸ್ಪೋರ್ಟ್. ಒಂದೆಡೆ ಇಕೊಸ್ಪೋರ್ಟ್ ಸೇಲ್ಸ್ ಶರವೇಗದಲ್ಲಿ ಸಾಗುತ್ತಿದ್ದರೆ ಇನ್ನೊಂದೆಡೆ ಪ್ರಸ್ತುತ ಕಾರಿನಲ್ಲಿ ಆಳವಡಿಸಲಾಗಿರುವ ಇಕೊಬೂಸ್ಟ್ ಎಂಜಿನ್ ಉತ್ಪಾದನೆಗಳ ಸಂಖ್ಯೆ 2 ದಶಲಕ್ಷ ಯುನಿಟ್‌ ದಾಟಿದೆ.

ನಿಮ್ಮ ಮಾಹಿತಿಗಾಗಿ, ದೇಶದಲ್ಲಿ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿಗೆ ಕಂಡುಬರುತ್ತಿರುವ ಭಾರಿ ಬೇಡಿಕೆಯಿಂದಾಗಿ ಕೆಲವು ನಿರ್ಧಿಷ್ಟ ವೆರಿಯಂಟ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಒಂದೆಡೆ ಇದು ಫೋರ್ಡ್ ಮೌಲ್ಯ ವೃದ್ಧಿಗೆ ಸಹಕಾರಿಯಾಗಿದ್ದರೂ ಇನ್ನೊಂದೆಡೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳನ್ನು ವಾಹನ ವಲಯ ಅಲ್ಲಗಳೆಯುತ್ತಿಲ್ಲ.

ವಿಷಯ ಏನೆಂದರೆ ಇಕೊಸ್ಪೋರ್ಟ್‌ಗೆ ಬುಕ್ ಮಾಡಿದ ಗ್ರಾಹಕರೊಬ್ಬರು ತಮ್ಮ ನೂತನ ಕಾರು ಬರಮಾಡಿಕೊಳ್ಳಲು ಕನಿಷ್ಠ 8ರಿಂದ 10ಗಳಷ್ಟು ಸಮಯ ಕಾಯಬೇಕಾಗುತ್ತದೆ. ಅಂದರೆ ಸರಿ ಸುಮಾರು ಒಂದು ವರ್ಷಕ್ಕೆ ಸಮಾನವಾಗಿದೆ. ಇದು ವೆರಿಯಂಟ್‌ಗಳಿಗೆ ವಿಭಿನ್ನವಾಗಿದ್ದರೂ ಒಟ್ಟಾರೆಯಾಗಿ ಗ್ರಾಹಕರ ಸಂಯಮವನ್ನು ಪರೀಕ್ಷೆ ಮಾಡುವಂತಾಗಿದೆ.

ಇನ್ನೊಂದೆಡೆ ಅಕ್ಟೋಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ನಿಸ್ಸಾನ್ ಟೆರನೊ, ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯ ಲಾಭ ಪಡೆಯುವ ತವಕದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಇಕೊಸ್ಪೋರ್ಟ್‌ಗೆ ನಿಕಟ ಪೈಪೋಟಿ ನೀಡುವಲ್ಲಿ ಟೆರೆನೊ ಯಶಸ್ವಿಯಾಗಲಿದೆ.

ಇಕೊಸ್ಪೋರ್ಟ್‌ಗೆ ಮಿತಿ ಮೀರಿದ ಬೇಡಿಕೆ

ಇಕೊಸ್ಪೋರ್ಟ್‌ಗೆ ಮಿತಿ ಮೀರಿದ ಬೇಡಿಕೆ

ನಾವು ಆರಂಭದಲ್ಲೇ ತಿಳಿಸಿರುವಂತೆಯೇ ಅವಕಾಶವಾದಿ ತಂತ್ರವನ್ನು ಅನುಸರಿಸುತ್ತಿರುವ ನಿಸ್ಸಾನ್ ಟೆರನೊ, ಇಕೊಸ್ಪೋರ್ಟ್ ಮಿತಿ ಮೀರಿದ ಬೇಡಿಕೆಯ ಪ್ರಯೋಜನ ಪಡೆಯುವ ತವಕದಲ್ಲಿದೆ.

ಬೇಡಿಕೆ ಕುಂದಿದ ಡಸ್ಟರ್

ಬೇಡಿಕೆ ಕುಂದಿದ ಡಸ್ಟರ್

ಇನ್ನೊಂಡೆದೆ ಮಾರುಕಟ್ಟೆಯಲ್ಲಿ ಡಸ್ಟರ್ ತನ್ನ ವರ್ಚಸ್ಸನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡಸ್ಟರ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇದು ಸಹ ಟೆರನೊಗೆ ಸಹಕಾರಿಯೆನಿಸಲಿದೆ.

ಪ್ರೀಮಿಯಂ ಲುಕ್

ಪ್ರೀಮಿಯಂ ಲುಕ್

ಹಾಗೆಯೇ ಡಸ್ಟರ್‌ಗೆ ಹೋಲಿಸಿದರೆ ಹೆಚ್ಚಿನ ಪ್ರೀಮಿಯಂ ವಿನ್ಯಾಸ ಪಡೆದುಕೊಳ್ಳುವಲ್ಲಿ ನಿಸ್ಸಾನ್ ಡಸ್ಟರ್ ಯಶಸ್ವಿಯಾಗಿದ್ದು, ಗರಿಷ್ಠ ಪ್ರಮಾಣದ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.

ಟೆರೆನೊ ನೆಗೆಟಿವ್ ಅಂಶ

ಟೆರೆನೊ ನೆಗೆಟಿವ್ ಅಂಶ

ಇಷ್ಟೆಲ್ಲ ಆದರೂ ಡಸ್ಟರ್ ತಲಹದಿಯಲ್ಲಿ ರಿ ಬ್ಯಾಡ್ಜ್ ಪಡೆದುಕೊಂಡು ಆಗಮನವಾಗಿರುವುದು ಟೆರನೊ ಹಿನ್ನಡೆಗೆ ಕಾರಣವಾಗುವ ಭೀತಿಯಿದೆ. ಹಾಗೆಯೇ ಡಸ್ಟರ್‌ಗೆ ಹೋಲಿಸಿದರೆ ದರ ಕೂಡಾ ಸ್ವಲ್ಪ ದುಬಾರಿಯೆನಿಸಿದ್ದು, ಸರ್ವೀಸ್ ಜಾಲ ಕೂಡಾ ಕಡಿಮೆಯಾಗಿದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಇಕೊಸ್ಪೋರ್ಟ್‌ನಲ್ಲಿರುವಂತಹ ಇಕೊಬೂಸ್ಟ್ ಎಂಜಿನ್ ಹಾಗೂ ಎಮರ್ಜನ್ಸಿ ಅಸಿಸ್ಟ್ ಸೇವೆಯ ಕೊರತೆ ಅನುಭವಿಸಲಿದೆ.

ಪ್ರಮುಖ ಅಂಶಗಳು

ಪ್ರಮುಖ ಅಂಶಗಳು

ಸೆಪ್ಟೆಂಬರ್ 1ರಂದೇ ಬುಕ್ಕಿಂಗ್ ಆರಂಭಿಸಿರುವ ನಿಸ್ಸಾನ್ ಟೆರನೊ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ನೂತನ ಟೆರನೊದಲ್ಲಿ 1.6 ಲೀಟರ್ ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಿಲಿವೆ.

ದರ ಮಾಹಿತಿ

ದರ ಮಾಹಿತಿ

ಇನ್ನು ದರದ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಆಟೋ ವಿಶ್ಲೇಷಕರ ಪ್ರಕಾರ ನೂತನ ಟೆರನೊ ದರ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

Most Read Articles

Kannada
English summary
Terrano Will Take Advantage Ecosport Waiting Period says automobile analysis.
Story first published: Friday, September 20, 2013, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X