ಐದು ಲಕ್ಷಕ್ಕೊಂದು ಬಜೆಟ್ ಕಾರು; ಸಲಹೆ ನೀಡಬಲ್ಲೀರಾ?

By Nagaraja

ಹೌದು, ದೇಶದ ಮಧ್ಯಮ ವರ್ಗದ ಕುಟುಂಬವು ಪ್ರಮುಖವಾಗಿಯೂ ಸಣ್ಣ ಕಾರುಗಳನ್ನು ಆಶ್ರಯಿಸಿಕೊಂಡಿರುತ್ತಾರೆ. ಸ್ಕೂಟರ್, ಬೈಕ್‌ಗಳನ್ನು ತಮ್ಮ ಫ್ಯಾಮಿಲಿ ಪಯಣಕ್ಕಾಗಿ ಬಳಕೆ ಮಾಡುತ್ತಿದ್ದ ದೇಶದ ಗ್ರಾಹಕರೀಗ ನಿಧಾನವಾಗಿ ಎಂಟ್ರಿ ಲೆವೆಲ್ ವಾಹನಗಳತ್ತ ತಮ್ಮ ದೃಷ್ಟಿ ಹಾಯಿಸಿದ್ದಾರೆ.

ಹೊಸ ಕಾರು ಹುಡುಕು

ಅಷ್ಟಕ್ಕೂ ಮೊತ್ತ ಮೊದಲು ಕಾರು ಖರೀದಿಸಲು ಬಯಸುವ ಗ್ರಾಹಕರು ಸಹ ಸಣ್ಣ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ವರ್ಷಾರಂಭದ ಈ ಸುಸಂದರ್ಭದಲ್ಲಿ ಐದು ಲಕ್ಷ ರು.ಗಳೊಳಗೆ ಲಭ್ಯವಿರುವ ಸಣ್ಣ ಅಥವಾ ಬಜೆಟ್ ಕಾರುಗಳನ್ನು ನಾವು ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ಕಾರು ಹುಡುಕಾಟಕ್ಕೆ ನೆರವಾಗಲಿದೆಯೆಂಬ ಭರವಸೆ ನಮ್ಮದ್ದು.

5 ಲಕ್ಷದೊಳಗೆ ಲಭ್ಯವಿರುವ ಅಗ್ರ 10 ಬಜೆಟ್ ಕಾರುಗಳು

ಓದುಗರ ಗಮನಕ್ಕೆ: ಇಲ್ಲಿ ಕೊಡಲಾಗಿರುವ ನಿರ್ದಿಷ್ಟ ಮಾದರಿಗಳನ್ನು ನೇರವಾಗಿ ನಮ್ಮ ಹೊಸ ಕಾರು ಪುಟಕ್ಕೆ ಲಿಂಕ್ ಮಾಡಲಾಗಿರುತ್ತದೆ. ಅಂತಹ ನಿರ್ದಿಷ್ಠ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇಚ್ಛಿಸುವುವರು ನಾವು ನೀಡಿರುವ ಲಿಂಕ್ ಕ್ಲಿಕ್ ಮಾಡಿದರೆ ಸಾಕಾಗುತ್ತದೆ. ಕ್ಷಣ ಮಾತ್ರದಲ್ಲಿ ಹೊಸ ಕಾರು ಹುಡುಕಾಟ ಜಾಲದ ವಿಸೃತ ಪುಟ ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಅಂತೆಯೇ ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ನೀಡಿರುವ ಮಾನ್ಯತೆಯ ಪ್ರಕಾರ ಅಧಿಕೃತ ಮೈಲೇಜ್ ಹಾಗೂ ಎಕ್ಸ್ ಶೋ ರೂಂ ಬೆಲೆಗಳನ್ನು ಇಲ್ಲಿ ನೀಡಲಾಗಿರುತ್ತದೆ.

10. ನಿಸ್ಸಾನ್ ಮೈಕ್ರಾ ಆಕ್ಟಿವ್

10. ನಿಸ್ಸಾನ್ ಮೈಕ್ರಾ ಆಕ್ಟಿವ್

ಮೈಲೇಜ್ - 19.49 kmpl

ಐದು ಲಕ್ಷ ಬಜೆಟ್‌ನೊಳಗೆ ಹೊಸ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ 10ನೇ ಕ್ರಮಾಂಕದಲ್ಲಿ ಜಪಾನ್ ಮೂಲದ ನಿಸ್ಸಾನ್ ಮೈಕ್ರಾ ಆಕ್ಟಿವ್ ಕಾರನ್ನು ನಾವು ಸೂಚಿಸಲಿದ್ದೇವೆ. ಇದು 1198 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 104 ತಿರುಗುಬಲದಲ್ಲಿ 67 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ 251 ಲೀಟರ್ ಲಗ್ಗೇಜ್ ಜಾಗ ಕೂಡಾ ಹೊಂದಿರುತ್ತದೆ.

ನಿಸ್ಸಾನ್ ಮೈಕ್ರಾ ಹುಡುಕು

ಪ್ರಾರಂಭಿಕ ಬೆಲೆ: 4.13 ಲಕ್ಷ ರು.

09. ಷೆವರ್ಲೆ ಬೀಟ್

09. ಷೆವರ್ಲೆ ಬೀಟ್

ಮೈಲೇಜ್

  • ಪೆಟ್ರೋಲ್ - 18.6 kmpl
  • ಡೀಸೆಲ್ - 25.44 kmpl
  • ಆಕರ್ಷಕ ವಿನ್ಯಾಸ ಹೊಂದಿರುವ ಸಣ್ಣ ಕಾರುಗಳಲ್ಲಿ ಷೆವರ್ಲೆ ಬೀಟ್ ಕೂಡಾ ಒಂದಾಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಜೊತೆಗೆ ಎಲ್‌ಪಿಜಿ ಮಾದರಿಯಲ್ಲೂ ಲಭ್ಯವಿರುತ್ತದೆ. ಇದರ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 79 ಬಿಎಚ್‌ಪಿ (108 ಎನ್‌ಎಂ ಟಾರ್ಕ್) ಅಂತೆಯೇ 3 ಸಿಲಿಂಡರ್ ಡೀಸೆಲ್ ಎಂಜಿನ್ 58 ಬಿಎಚ್‌ಪಿ (150 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 170 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಐದು ಮಂದಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

    ಷೆವರ್ಲೆ ಬೀಟ್ ಹುಡುಕು

    ಪ್ರಾರಂಭಿಕ ಬೆಲೆ: 3.97 ಲಕ್ಷ ರು.

    08. ಹೋಂಡಾ ಬ್ರಿಯೊ

    08. ಹೋಂಡಾ ಬ್ರಿಯೊ

    ಮೈಲೇಜ್ - 18.9 kmpl

    2014ನೇ ಸಾಲಿನಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಹೋಂಡಾದ ಜನಪ್ರಿಯ ಬ್ರಿಯೊ ಕಾರು ಎಂಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎಲ್ಲ ವಿಧದ ಗ್ರಾಹಕರ ಕಣ್ಮಣ ಸೆಳೆಯುವ ವಿನ್ಯಾಸ ಹೊಂದಿರುವ ಹೋಂಡಾ ಬ್ರಿಯೊ 1198 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 87 ಬಿಎಚ್‌ಪಿ (109 ತಿರುಗುಬಲ) ಉತ್ಪಾದಿಸುತ್ತದೆ. ಅಂತೆಯೇ 175 ಲೀಟರ್ ಬೂಟ್ ಸ್ಪೇಸ್ ಇರುತ್ತದೆ.

    ಹೋಂಡಾ ಬ್ರಿಯೊ ಹುಡುಕು

    ಪ್ರಾರಂಭಿಕ ಬೆಲೆ: 4 ಲಕ್ಷ ರು.

    07. ಹ್ಯುಂಡೈ ಐ10

    07. ಹ್ಯುಂಡೈ ಐ10

    ಮೈಲೇಜ್: 19.81 kmpl

    ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಐ10 ಒಂದಾಗಿದೆ. ಇದು 1086 ಸಿಸಿ, 4 ಸಿಲಿಂಡರ್ 1.1 ಲೀಟರ್ ಐಆರ್‌ಡಿಇ2 ಪೆಟ್ರೋಲ್ ಎಂಜಿನ್‌ನಿಂದ (68 ಅಶ್ವಶಕ್ತಿ, 99 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡುತ್ತದೆ. ಇದು 225 ಲೀಟರ್ ಲಗ್ಗೇಜ್ ಜಾಗದೊಂದಿಗೆ ಟಾಪ್ ಎಂಡ್‌ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಲಭ್ಯವಿರುತ್ತದೆ.

    ಹ್ಯುಂಡೈ ಐ10 ಹುಡುಕು

    ಪ್ರಾರಂಭಿಕ ಬೆಲೆ: 3.99 ಲಕ್ಷ ರು.

     06. ಮಾರುತಿ ಸುಜುಕಿ ಸೆಲೆರಿಯೊ

    06. ಮಾರುತಿ ಸುಜುಕಿ ಸೆಲೆರಿಯೊ

    ಮೈಲೇಜ್ - 23.1 kmpl

    ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಸೆಲೆರಿಯೊದಲ್ಲಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಗ್ರಾಹಕರಿಗೆ ಹೊಸತನವನ್ನು ನೀಡುತ್ತದೆಯಲ್ಲದೆ ಮೈಲೇಜ್‌ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದು 998 ಸಿಸಿ, 3 ಸಿಲಿಂಡರ್ ಕೆ10ಬಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದ್ದು, 67 ಅಶ್ವಶಕ್ತಿ (90 ತಿರುಗುಬಲ) ಉತ್ಪಾದಿಸುತ್ತದೆ. ಪ್ರಸ್ತುತ ಕಾರಿನಲ್ಲಿ ಭರ್ಜರಿ 235 ಲೀಟರ್ ಬೂಟ್ ಸ್ಪೇಸ್ ಕೂಡಾ ಇರುತ್ತದೆ.

    ಮಾರುತಿ ಸುಜುಕಿ ಸೆಲೆರಿಯೊ ಹುಡುಕು

    ಪ್ರಾರಂಭಿಕ ಬೆಲೆ: 3.76 ಲಕ್ಷ ರು.

    05. ವ್ಯಾಗನಾರ್

    05. ವ್ಯಾಗನಾರ್

    ಮೈಲೇಜ್ - 20.51 kmpl

    ಈಗಲೂ ಗಮನಾರ್ಹ ಮಾರಾಟ ಕಾಯ್ದುಕೊಂಡಿರುವ ವ್ಯಾಗನಾರ್ ಎಲ್ಲ ಹಂತದಲ್ಲಿಯೂ ಫ್ಯಾಮಿಲಿ ಕಾರಿನ ಕೊರತೆಯನ್ನು ನೀಗಿಸುತ್ತದೆ. ಈ ಎತ್ತರದ ಹ್ಯಾಚ್ ಬ್ಯಾಕ್ ಕಾರು 998 ಸಿಸಿ, 3 ಸಿಲಿಂಡರ್ ಆಲ್ ಅಲ್ಯೂಮಿನಿಯಂ ಕೆಬಿ10 ಪೆಟ್ರೋಲ್ ಎಂಜಿನ್‌ನಿಂದ (67 ಬಿಎಚ್‌ಪಿ, 90ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡುತ್ತದೆ. ಅಂತೆಯೇ 180 ಲೀಟರ್ ಲಗ್ಗೇಜ್ ಸ್ಪೇಸ್ ಇದರಲ್ಲಿದೆ.

    ವ್ಯಾಗನಾರ್ ಹುಡುಕು

    ಪ್ರಾರಂಭಿಕ ಬೆಲೆ: 3.49 ಲಕ್ಷ ರು.

    04. ದಟ್ಸನ್ ಗೊ

    04. ದಟ್ಸನ್ ಗೊ

    ಮೈಲೇಜ್ - 20.63 kmpl

    ಕಳೆದ ವರ್ಷಾಂತ್ಯದಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಿರುವ ದಟ್ಸನ್ ಗೊ ಸುರಕ್ಷತೆ ಬಗ್ಗೆ ಆತಂಕಗಳು ಎದಿದ್ದರೂ ಪರಿಪೂರ್ಣ ಸಣ್ಣ ಕಾರು ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು 1198 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 67 ಬಿಎಚ್‌ಪಿ (104 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಲ್ಲದೆ 265 ಲೀಟರ್ ಬೂಟ್ ಸ್ಪೇಸ್ ಇದರಲ್ಲಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

    ದಟ್ಸನ್ ಗೊ ಹುಡುಕು

    ಪ್ರಾರಂಭಿಕ ಬೆಲೆ: 3.12 ಲಕ್ಷ ರು.

    03. ಹ್ಯುಂಡೈ ಇಯಾನ್

    03. ಹ್ಯುಂಡೈ ಇಯಾನ್

    ಮೈಲೇಜ್ - 21.1 kmpl

    ಮೂರನೇ ಸ್ಥಾನದಲ್ಲಿರುವ ಹ್ಯುಂಡೈ ಇಯಾನ್ 20 ವೆರಿಯಂಟ್‌ಗಳಲ್ಲಿ ಲಭ್ಯವಿದೆ ಅಂದರೆ ನಿಮ್ಮಿಂದ ನಂಬಲಸಾಧ್ಯವೇ? ದಕ್ಷಿಣ ಕೊರಿಯಾ ಮೂಲದ ಈ ಸಣ್ಣ ಕಾರು 814 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 55 ಬಿಎಚ್‌ಪಿ (75 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 215 ಲೀಟರ್ ಲಗ್ಗೇಜ್ ಸ್ಪೇಸ್ ಇದರಲ್ಲಿದೆ.

    ಹ್ಯುಂಡೈ ಇಯಾನ್ ಹುಡುಕು

    ಪ್ರಾರಂಭಿಕ ಬೆಲೆ: 2.88 ಲಕ್ಷ ರು.

    02. ಮಾರುತಿ ಸುಜುಕಿ ಆಲ್ಟೊ 800

    02. ಮಾರುತಿ ಸುಜುಕಿ ಆಲ್ಟೊ 800

    ಮೈಲೇಜ್ - 22.7 kmpl

    ದೇಶದ ವಾಹನ ಇತಿಹಾಸದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿರುವ ಮಾರುತಿ ಆಲ್ಟೊ 800 ಕಾರು 796 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿರುತ್ತದೆ. ಅಲ್ಲದೆ 69 ತಿರುಗುಬಲಲ್ಲಿ 48 ಅಶ್ವಶಕ್ತಿ ಉತ್ಪಾದಿಸುವ ಈ ಕಾರಿನಲ್ಲಿ 177 ಲೀಟರ್ ಲಗ್ಗೇಜ್ ಜಾಗವಿರುತ್ತದೆ.

    ಮಾರುತಿ ಆಲ್ಟೊ 800 ಹುಡುಕು

    ಪ್ರಾರಂಭಿಕ ಬೆಲೆ: 2.38 ಲಕ್ಷ ರು.

    01. ಟಾಟಾ ನ್ಯಾನೋ

    01. ಟಾಟಾ ನ್ಯಾನೋ

    ಮೈಲೇಜ್ - 25.4 kmpl

    ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನ ಕನಸಿನ ಕೂಸಾಗಿರುವ ಟಾಟಾ ನ್ಯಾನೋ ಅಗ್ರಸ್ಥಾನದಲ್ಲಿದ್ದು, ಇಡೀ ವಿಶ್ವದಲ್ಲೇ ಅತಿ ಅಗ್ಗದ ಕಾರೆಂಬ ಕೀರ್ತಿಗೆ ಪಾತ್ರವಾಗಿದೆ. ಇದರ 624 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ 51 ತಿರುಗುಬಲದಲ್ಲಿ 38 ಅಶ್ವಶಕ್ತಿ ಉತ್ಪಾದಿಸುತ್ತದೆ. ಅಲ್ಲದೆ 80 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಇದರಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಗೆ ಪಯಣಿಸಬಹುದಾಗಿದೆ.

    ಟಾಟಾ ನ್ಯಾನೋ ಹುಡುಕು

    ಪ್ರಾರಂಭಿಕ ಬೆಲೆ: 1.94 ಲಕ್ಷ ರು.

Most Read Articles

Kannada
English summary
In spite of so many different cars being offered, people who want to chose a car for the first time or looking for a car below INR 5 lakhs need the most help. Here in our list is top 10 small cars one can buy for under INR 5 lakhs.
Story first published: Saturday, January 3, 2015, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X