ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

Written By:

ನಾವು ಕ್ರಾಸೋವರ್ ಮಾದರಿ ಬಗ್ಗೆ ಈಗಾಗಲೇ ಕೇಳಿರುತ್ತೇವೆ. ಜಾಗತಿಕ ಮಾರುಕಟ್ಟೆ ಸೇರಿದಂತೆ ಭಾರತದಲ್ಲೂ ಕ್ರಾಸೋವರ್ ಎಂಬ ನೂತನ ವಿಭಾಗ ಹೆಚ್ಚು ಜನಪ್ರಿಯತೆ ಗಿಟ್ಟಿಸತೊಡಗಿದೆ. ಹಾಗಿರುವಾಗ ಇದುವರೆಗೆ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮಾತ್ರ ಕ್ರಾಸೋವರ್ ಬಿಡುಗಡೆಯಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಯೆಂಬಂತೆ ವಿಶ್ವದ ಮುಂಚೂಣಿಯ ಸಂಸ್ಥೆಯಾಗಿರುವ ವೋಲ್ವೋ, ಚೊಚ್ಚಲ ಕ್ರಾಸೋವರ್ ಸೆಡಾನ್ ಮಾದರಿಯೊಂದನ್ನು ಪರಿಚಯಿಸಿದೆ. ಅದುವೇ ವೋಲ್ವೋ ಎಸ್60 ಕ್ರಾಸ್ ಕಂಟ್ರಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕ್ರಾಸೋವರ್ ಮಾದರಿಗಳು ಸಾಮಾನ್ಯ ಮಾದರಿಗಿಂತ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದ್ದು, ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಒಂದೇ ಸಮಯದಲ್ಲಿ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಆಫ್ ರೋಡ್ ಅನುಭವವನ್ನು ನೀಡುತ್ತದೆ. ಇಂದಿನ ಈ ಲೇಖನದಲ್ಲಿ ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್ ಮಾದರಿಯಾಗಿರುವ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ವಿಶೇಷತೆ ಬಗ್ಗೆ ಅರಿಯೋಣವೇ ಬನ್ನಿ...

To Follow DriveSpark On Facebook, Click The Like Button
ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

ನಿಮ್ಮ ಮಾಹಿತಿಗಾಗಿ ಮುಂಬರುವ 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಕ್ರಾಸೋವರ್ ಸೆಡಾನ್ ಕಾರು ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಇದು ವಿಶ್ವದ ಮೊಟ್ಟ ಮೊದಲ ಕ್ರಾಸೋವರ್ ಸೆಡಾನ್ ಕಾರು ಎನಿಸಿಕೊಳ್ಳಲಿದೆ.

ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

1997ನೇ ಇಸವಿಯಲ್ಲಿ ಕಾಣಿಸಿಕೊಂಡಿದ್ದ ವಿ70 ಕ್ರಾಸ್ ಕಂಟ್ರಿ ಈಗಿನ ಹೊಸ ಮಾದರಿಯ ಉಗಮಕ್ಕೆ ಕಾರಣವಾಗಿದೆ. ಸ್ಪೋರ್ಟಿ ಸ್ಟೈಲಿಷ್‌ನೊಂದಿಗೆ ಕ್ರಾಸ್ ಕಂಟ್ರಿಗೆ ಬೇಕಾಗಿರುವ ಎಲ್ಲ ಅಗತ್ಯಗಳನ್ನು ಪೂರೈಸುವುದೇ ಸಂಸ್ಥೆಯ ಇರಾದೆಯಾಗಿದೆ.

ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

ಹೆಚ್ಚಿನ ಆಯಾಮ ಹೊಂದಿರುವ ನೂತನ ಎಸ್60 ಕ್ರಾಸ್ ಕಂಟ್ರಿ, ಫೋರ್ ವೀಲ್ ಡ್ರೈವ್‌ನೊಂದಿಗೆ ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಫ್ರಂಟ್ ವೀಲ್ ಚಾಲನಾ ವ್ಯವಸ್ಥೆಯೊಂದಿಗೂ ಲಭ್ಯವಾಗಲಿದೆ.

ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

ಕ್ರಾಸೋವರ್ ಸೆಡಾನ್‌ನಲ್ಲಿ ಚೊಚ್ಚಲ ಪ್ರವೇಶವಾಗಿದ್ದರಿಂದ ಸದ್ಯಕ್ಕೆ ಈ ವಿಭಾಗದಲ್ಲಿ ಯಾವುದೇ ಎದುರಾಳಿಗಳಿರುವುದಿಲ್ಲ. ಹೊಸತನವನ್ನು ಹೊಂದಿರುವ ಸೆಡಾನ್ ಕಾರು ಬಯಸುವವರಿಗೆ ಇದು ಅದ್ಭುತ ಅನುಭವ ನೀಡಲಿದೆ.

ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

ಇನ್ನು ವೋಲ್ವೋ ಕ್ರಾಸ್ ಕಂಟ್ರಿ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಇದರ ಡೀಸೆಲ್ ಡಿ4 ಎಂಜಿನ್ 190 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಆಲ್ ವೀಲ್ ಡ್ರೈವ್ ಡಿ4, 2.4 ಲೀಟರ್ 5 ಸಿಲಿಂಡರ್ ವೆರಿಯಂಟ್ ಬಿಡುಗಡೆ ಮಾಡುವ ಯೋಜನೆಯು ಇದೆ.

ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್

ಒಟ್ಟಿನಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಕ್ರಾಸೋವರ್ ಸೆಡಾನ್ ಭಾರತ ಮಾರುಕಟ್ಟೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ವಿಡನ್ ಮೂಲದ ಈ ಸಂಸ್ಥೆಯು ಯಾವಾಗ ಅಧಿಕೃತ ಘೋಷಣೆ ಹೊರಡಿಸಲಿದೆ ಎಂಬುದೇ ಬಹಳ ಕುತೂಹಲವೆನಿಸಿದೆ.

English summary
Volvo will be unveiling its S60 Cross Country model to general public at the 2015 Detroit Auto Show. The manufacturer has gone ahead and decided to tease us with a few images prior to its official unveil.
 
Story first published: Friday, January 9, 2015, 14:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark