ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

Written By:

ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಅತಿ ಶೀಘ್ರದಲ್ಲೇ ದೇಶಕ್ಕೆ ಎರಡು ಸುಂದರ ಕಾರುಗಳು ಪ್ರವೇಶಿಸಲಿದೆ. ಅಷ್ಟೇ ಯಾಕೆ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಪಾಲಿಗಿದು ನಿಜಕ್ಕೂ ಗೇಮ್ ಚೇಂಜರ್ ಆಗಿರಲಿದೆ.

ಆದರೆ ಪ್ರಸಕ್ತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಕಮ್ ಬ್ಯಾಕ್ ಮಾಡುವುದು ಟಾಟಾಗೆ ಅಂದುಕೊಂದಷ್ಟು ಸುಲಭವಲ್ಲ. ಯಾಕೆಂದರೆ ಬೆಳೆದು ಬರುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ವೃದ್ಧಿಸುತ್ತಿದೆ. ಅದರಲ್ಲೂ ಪ್ರಮುಖವಾಗಿಯೂ ಎಂಟ್ರಿ ಲೆವೆಲ್ ಸೆಗ್ಮೆಂಟ್‌ಗಳಲ್ಲಿ ದೇಶದ ಅಗ್ರ ಕಾರು ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಈಗಾಗಲೇ ಅಧಿಪತ್ಯ ಸಾಧಿಸಿವೆ. ಹಾಗಿರಬೇಕಾದರೆ ಟಾಟಾ ತನ್ನ ಟ್ಯಾಕ್ಸಿ ಅಪಖ್ಯಾತಿಯನ್ನು ಹೇಗೆ ನೀಗಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಹಾಗೆ ನೋಡಬೇಕಾದರೆ ಹಿಂದಿನ ಟಾಟಾ ಆವೃತ್ತಿಗಳಿಗೆ ಹೋಲಿಸಿದರೆ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಸಂಪೂರ್ಣ ಭಿನ್ನವಾಗಿರಲಿದೆ. ಇದು ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಗ್ರಾಹಕರಿಗೆ ಹೊಸ ಅನುಭವ ನೀಡುವಲ್ಲಿ ಕಟುಬದ್ಧವಾಗಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಈ ಹಿಂದೆ ಜರುಗಿದ 2014 ಆಟೋ ಎಕ್ಸ್ ಪೋದ ಸಂಪೂರ್ಣ ಪ್ರಯೋಜನ ಗಿಟ್ಟಿಸಿಕೊಂಡಿದ್ದ ಸ್ವದೇಶಿ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಆಕರ್ಷಕ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿತ್ತು. ಅಲ್ಲದೆ ಪ್ರತ್ಯೇಕ ವೆಬ್‌ಸೈಟ್ ಸಹ ತೆರೆದುಕೊಂಡಿತ್ತು. ಈ ಮೂಲಕ ಬಿಡುಗಡೆಗೂ ಮುನ್ನವೇ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ಟಾಟಾ ಸಂಸ್ಥೆ ಮುನ್ನಡೆದಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಇಲ್ಲಿ ಗಮನಾರ್ಹ ವಿಷಯವೆಂದರೆ ಟಾಟಾ ಬೋಲ್ಟ್‌ನಲ್ಲಿ ನೂತನ 1.2 ಲೀಟರ್ ಎಂಪಿಎಫ್‌ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೋಟ್ರಾನ್ ಎಂಜಿನ್ ಬಳಕೆಯಾಗಲಿದೆ. ಇದು ಪ್ರತಿ ನಿಮಿಷಕ್ಕೆ 5000 ಆವರ್ತನಕ್ಕೆ 83 ಅಶ್ವಶಕ್ತಿ ಹಾಗೆಯೇ ಪ್ರತಿ ನಿಮಿಷಕ್ಕೆ 1750-3500 ಆವರ್ತನಕ್ಕೆ 140 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಎಫ್ ಟ್ರಾನಿಕ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಬೋಲ್ಟ್, ಎಬಿಎಸ್, ಇಪಿಎಸ್, ಸ್ಪೀಡ್ ಸೆನ್ಸಿಟಿವ್ ಪವರ್ ಸ್ಟೀರಿಂಗ್ ಹಾಗೂ ಆಕ್ಟಿವ್ ರಿಟರ್ನ್ ಫಂಕ್ಷನ್‌ಗಳಂತಹ ಸೌಲಭ್ಯಗಳನ್ನು ಪಡೆಯಲಿದೆ. ಹಾಗೆಯೇ ನೆಕ್ಸ್ಟ್ ಜನರೇಷನ್ ಹರ್ಮನ್ ಮಾಹಿತಿ ಮನರಂಜನಾ ಸಿಸ್ಟಂ ಪ್ರಮುಖವಾಗಿರಲಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಇನ್ನು ಬೋಲ್ಟ್ ಹಾಗೂ ಜೆಸ್ಟ್ ಡಿಸೈನ್ ವಿಚಾರದಲ್ಲಿ ಬ್ರಿಟನ್‌ನಲ್ಲಿ ಸ್ಥಿತಗೊಂಡಿರುವ ಯುರೋಪಿಯನ್ ಆರ್ ಆಂಡ್ ಡಿ ಸೆಂಟರ್ ಪ್ರಮುಖ ಪಾತ್ರ ನಿಭಾಯಿಸಲಿದೆ. ಅಲ್ಲದೆ ಕೇವಲ ದೇಶಿಯ ಮಾರುಕಟ್ಟೆಗಷ್ಟೇ ಸೀಮಿತವಾಗದೇ ಜಾಗತಿಕ ಬ್ರಾಂಡ್ ಆಗಿ ವೃದ್ಧಿಸುವ ಯೋಜನೆಯನ್ನು ಟಾಟಾ ಹೊಂದಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಟಾಟಾ ಬೋಲ್ಟ್ ಹಾಗೂ ಜೆಸ್ಟ್ ಸೆಡಾನ್ ಆವೃತ್ತಿಗಳು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದರ ಡೀಸೆಲ್ ಎಂಜಿನ್ 1.3 ಲೀಟರ್ ಕ್ವಾಡ್ರಾಜೆಟ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗರಿಷ್ಠ 90 ಅಶ್ವಶಕ್ತಿ (200 ಎನ್‌ಎಂ) ಉತ್ಪಾದಿಸಲಿದೆ.

ಟಾಟಾ ಪಾಲಿಗೆ ಗೇಮ್ ಚೇಂಜರ್ ಆದಿತೇ ಬೋಲ್ಟ್, ಜೆಸ್ಟ್?

ಒಟ್ಟಿನಲ್ಲಿ ಟಾಟಾದ ಹೊಸ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಜ್ಞಾನವು ಹೇಗೆ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ದೊರಕಲಿದೆ.

Story first published: Saturday, May 24, 2014, 16:32 [IST]
Please Wait while comments are loading...

Latest Photos