ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

Written By:

ಬೆಂಗಳೂರು ತಲಹದಿಯ ಕಾರು ಬಾಡಿಗೆ ಸಂಸ್ಥೆಯಾಗಿರುವ ಝೂಮ್‌ಕಾರ್ಸ್, ಸ್ಥಾಪನೆಗೊಂಡ ಒಂದು ವರ್ಷದೊಳಗೆ ಭಾರಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಫೋರ್ಡ್ ಫಿಗೊ, ಮಹೀಂದ್ರ ಸ್ಕಾರ್ಪಿಯೊಗಳಂತಹ ಕಾರುಗಳನ್ನು ಗ್ರಾಹಕರಿಗೆ ಬಾಡಿಗೆ ನೀಡುವ ಮೂಲಕ ಆರಂಭಿಸಿದ್ದ ಈ ಸೆಲ್ಫ್-ಡ್ರೈವ್ ಸಂಸ್ಥೆಯೀಗ ಐಷಾರಾಮಿ ಬಿಎಂಡಬ್ಲ್ಯು 320ಡಿ, ಫೋರ್ಡ್ ಇಕೊಸ್ಪೋರ್ಟ್, ಫೋಕ್ಸ್‌ವ್ಯಾಗನ್ ವೆಂಟೊ, ವಿದ್ಯುತ್ ಚಾಲಿತ ರೇವಾ, ಹೋಂಡಾ ಸಿಟಿ ಹಾಗೂ ಎಕ್ಸ್‌ಯುವಿ500 ಸೇರಿದಂತೆ 125ಕ್ಕೂ ಹೆಚ್ಚು ಕಾರುಗಳನ್ನು ತನ್ನ ಜಾಲದಲ್ಲಿ ಹೊಂದಿದೆ.

ಪ್ರಸ್ತುತ ಸ್ಥಾಪಕರಾದ ಡೇವಿಡ್ ಬ್ಯಾಕ್ ಹಾಗೂ ಗ್ರೇಗ್ ಮೋರೆನ್, ನೂತನ ಯೋಜನೆಯೊಂದಿಗೆ ಮುಂದೆ ಬಂದಿದ್ದು, ದೇಣಿಗೆ ಸಂಗ್ರಹ ತಲಹದಿಯಾದ ಇಂಡಿಗೊಗೊ (Indiegogo) ಜತೆ ಸೇರಿಕೊಂಡು 1990ರ ಅಂಬಾಸಿಡರ್ ಕಸ್ಟಮೈಸ್ಡ್ ಮಾಡುವ ಅವಕಾಶವೊದಗಿಸುತ್ತಿದೆ.

ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಆಸಕ್ತರು ಇಂಡಿಗೊಗೊದ ಫಂಡ್ ಸೋರ್ಸಿಂಗ್ ವೇದಿಕೆಗೆ ಭೇಟಿಕೊಟ್ಟು ಅಲ್ಲಿ ಕೊಟ್ಟಿರುವ ಆಯ್ಕೆಯಲ್ಲಿ ನಿಮ್ಮಿಂದಾಗುವಷ್ಟು ದೇಣಿಗೆ ನೀಡಬೇಕಾಗಿದೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ಇದಕ್ಕಾಗಿ ಸಂಸ್ಥೆಯು ಕನಿಷ್ಠ 1,000 ಅಮೆರಿಕನ್ ಡಾಲರ್ ಅಂದರೆ 60,000 ರು.ಗಳಷ್ಟು ಖರ್ಚು ಅಂದಾಜಿಸುತ್ತಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಇದನ್ನು ಸಂಸ್ಥೆಯು ಸಹಾಯಾರ್ಥವಾಗಿ ಪಡೆಯುತ್ತಿಲ್ಲ. ಇದರ ಬದಲಾಗಿ ನಿಮಗೆ ಟಿ ಶರ್ಟ್ ಜತೆಗೆ ಇನ್ನಿತರ ಹಲವು ಕೊಡುಗೆಗಳು ಲಭಿಸಲಿದೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ಮೇಲೆ ಸೂಚಿಸಿರುವಂತೆಯೇ ಕನಿಷ್ಠ ನಿಧಿ ಸಂಗ್ರಹವಾದ್ದಲ್ಲಿ 1900ರ ಅಂಬಾಸಿಡರ್‌ಗೆ, ಝೂಮ್ ಹಸಿರು ಬಣ್ಣ, ಚಿರತೆ ಶೈಲಿಯ ಸೀಟು, ಗಣೇಶ ಮೂರ್ತಿ ಮುಂತಾದ ವೈಶಿಷ್ಟ್ಯಗಳನ್ನು ಕಾಣಸಿಗಬಹುದಾಗಿದೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅಂಬಾಸಿಡರ್, ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಗುರುತಿಸಿಕೊಂಡಿದೆ. ಇದರ ಜತೆಗೆ ಝೂಮ್ ಸ್ಥಾಪಕರಾಗಿರುವ ಗ್ರೇಗ್ ಹಾಗೂ ಡೇವಿಡ್ ಅವರ ಮನದಲ್ಲಿ ಇನ್ನಿತರ ಹಲವು ಯೋಚನೆಗಳಿದ್ದು, ಹೆಚ್ಚು ನಿಧಿ ಸಂಗ್ರಹವಾದ್ದಲ್ಲಿ ಗರಿಷ್ಠ ಶಬ್ದದ ಸ್ಪೀಕರ್, ಮ್ಯೂಸಿಕ್ ವೀಡಿಯೋ, ನಿಯಾನ್ ಲೈಟ್ಸ್, ಬೊನೆಟ್ ಚಾರ್ಜರ್, ರಿಮ್ಸ್ ಜತೆಗೆ ಇತರ ಇತರ ವೈಶಿಷ್ಟ್ಯಗಳನ್ನು ಲಗತ್ತಿಸುವ ಯೋಜನೆಯನ್ನು ಹೊಂದಿದ್ದಾರೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹೊಸ ಕಾರು ಖರೀದಿಯಿಂದ ಗ್ರಾಹಕರು ಹಿಂದೆ ಸರಿದರೆ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಈ ನಿಟ್ಟಿನ ಬಾಡಿಗೆ ಕಾರು ಮುಖಾಂತರ ಕಾರು ಹಂಚಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ಇನ್ನು ಗರಿಷ್ಠ 10 ಲಕ್ಷ ರು. ಸಂಗ್ರಹವಾದ್ದಲ್ಲಿ. ಮೋಡಿಫೈಡ್ ಅಂಬಾಸಿಡರ್‌ನಲ್ಲಿ ಅಮೆರಿಕ ಅಂಬಾಸಿಡರ್ ಜತೆ ಚಾಲನೆ ಮಾಡುವ ಅವಕಾಶವೂ ದೊರಕಲಿದೆ.

ಝೂಮ್‌ನಲ್ಲಿ ಅಂಬಾಸಿಡರ್ ಮೋಡಿಫೈ ಮಾಡುವ ಅವಕಾಶ

ಹಾಗೊಂದು ವೇಳೆ ಈ ಯೋಜನೆಯಲ್ಲಿ ಭಾಗಿಯಾಗಲು ನೀವು ಸಹ ಬಯಸುವುದಾದ್ದಲ್ಲಿ ಇಲ್ಲಿ ಕೊಟ್ಟಿರುವ ವೆಬ್‌ಸೈಟ್‌ಗೆ ಭೇಟಿಯಾಗಿರಿ...

English summary
Zoom, the Bangalore based car-sharing company has come up with a crazy and unconventional idea to promote their brand. Zoom co-founders David Back and Greg Moran plan to totally pimp-out a classic 1990 Hindustan Ambassador and they want your help to do it
Story first published: Thursday, April 3, 2014, 15:08 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more