10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ನಾವೆಲ್ಲಾ 10 ವರ್ಷದ ಬಾಲಕರಿದ್ದಾಗ ಶಾಲೆ ಮುಗಿದ ನಂತರ ರಸ್ತೆಗಳಲ್ಲಿ ಗಿಲ್ಲಿ ದಾಂಡು, ಬುಗುರಿ ಮತ್ತು ಇನ್ನಿತರೆ ಆಟಗಳನ್ನು ಆಡುತ್ತಿದ್ದು ಇನ್ನು ನೆನಪಿದೆ. ಆದ್ರೆ ಇಲ್ಲೊಬ್ಬ ಬಾಲಕನ ಸಾಹಸವನ್ನು ನೋಡಿದ್ರೆ ನಮಗಷ್ಟೇ ಅಷ್ಟೇ ಅಲ್ಲಾ ನಿಮಗೂ ಕೂಡಾ ಒಂದೂ ಕ್ಷಣ ಮೈ ಜುಂ ಎನ್ನಿಸದೇ ಇರಲಾರದು.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಹೌದು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 10 ವರ್ಷದ ಬಾಲಕನೊಬ್ಬ ಟ್ರ್ಯಾಕ್ಟರ್ ಸ್ಟಂಟ್ ಮಾಡುವುದರಲ್ಲಿ ಭಾರೀ ಜನಪ್ರಿಯತೆ ಸಾಧಿಸುತ್ತಿದ್ದು, ಸದ್ಯ ಆ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಗಾದ್ರೆ ಆ ಬಾಲಕನ ಹೆಸರೇನು? ಹೇಗೆಲ್ಲಾ ಕಸರತ್ತು ಮಾಡ್ತಾನೆ? ಮುಂದಿನ ಸ್ಲೈಡರ್‌ಗಳತ್ತ ಸಾಗಿರಿ....

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ನೀವು ಇದನ್ನು ನಂಬಲೇಬೇಕು 6ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಈ 10 ವರ್ಷದ ರತನ್‍‍ಜೀತ್ ಸಿಂಗ್ ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಒಂದು ಪುಟ್ಟ ಗ್ರಾಮದ ಬಾಲಕ. ಆಟ ಆಡುವ ವಯಸ್ಸಿನಲ್ಲಿಯೇ ಟ್ರ್ಯಾಕ್ಟರ್‍‍ನಲ್ಲಿ ಸ್ಟಂಟ್ ಮಾಡುತ್ತ ಎಲ್ಲೆಡೆ ಸುದ್ದಿಯಾಗಿದ್ದಾನೆ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಅಚ್ಚರಿ ಅಂದ್ರೆ ಇವನ ಗಾತ್ರಕ್ಕೂ ಟ್ರ್ಯಾಕ್ಟರ್ ಗಾತ್ರಕ್ಕೂ ಹೊಲಿಕೆ ಮಾಡಿದಾಗ ಅವನ ಕಾಲುಗಳು ಸರಿಯಾಗಿ ಪ್ಯಾಡಲ್‍‍ಗಳನ್ನು ತಲುಪುದಿಲ್ಲ. ಮತ್ತೆ ಅವನ ಕೈ ಸರಿಯಾಗಿ ಸ್ಟೀರಿಂಗ್ ಅನ್ನು ನಿಯಂತ್ರಿಸಲು ಆಗಲ್ಲ. ಆದರೂ ಈ ಬಾಲಕ ಮಾಡುವ ಟ್ರ್ಯಾಕ್ಟರ್ ಸ್ಟಂಟ್ ಎಲ್ಲರನ್ನೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿವೆ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ರತನ್‍‍ಜೀತ್ ಸಿಂಗ್ ಎಲ್‍ಕೆಜಿ ಓದುತ್ತಿದ್ದಾಗಲೇ ತನ್ನ ಚಿಕ್ಕಪ್ಪ ಮಾಡುತ್ತಿದ್ದ ಟ್ರ್ಯಾಕ್ಟರ್ ಸ್ಟಂಟ್‍ ಅನ್ನು ನೋಡುತ್ತಲೇ ಅದರ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ. ನಂತರದ ದಿನಗಳಲ್ಲಿ ಈತನ ಕೂಡಾ ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಶುರು ಮಾಡಿದ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಮೊದಮೊದಲು ರತನ್‍‍ಜೀತ್ ಟ್ರ್ಯಾಕ್ಟರ್ ಸ್ಟಂಟ್ ಬಗ್ಗೆ ಭಯ ವ್ಯಕ್ತಪಡಿಸಿದ್ದ ತಂದೆ ಆನಂದ್ ಸಿಂಗ್ ಮತ್ತು ಚಿಕ್ಕಪ್ಪ ಧನಂಜಯ್ ಅವರು ತದನಂತರ ಮಗನ ಕಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸುರಕ್ಷಿತವಾಗಿ ಸ್ಟಂಟ್ ಮಾಡುವ ಬಗ್ಗೆ ಸಲಹೆ ನೀಡುತ್ತಿದ್ದಾರೆ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ರತನ್‍‍ಜೀತ್ ಸಿಂಗ್ ಒಂದು ದಿನ ತಮ್ಮದೇ ಹೊಲದಲ್ಲಿ ಟ್ರ್ಯಾಕ್ಟರ್ ಸ್ಟಂಟ್ ಮಾಡುತ್ತಿದ್ದನ್ನು ಕಂಡ ಚಿಕ್ಕಪ್ಪ ಧನಂಜಯ್, ಅಣ್ಣನ ಮಗನ ಹೆಮ್ಮೆ ವ್ಯಕ್ತಪಡಿಸಿದ್ದಲ್ಲೇ ಹೊಸ ಹೊಸ ಮಾದರಿಯಲ್ಲಿ ಸ್ಟಂಟ್ ಮಾಡುವುದನ್ನು ಹೇಳಿ ಕೊಡುತ್ತಿದ್ದಾರೆ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಈ ಬಗ್ಗೆ ಸ್ವತಃ ರತನ್‍‍ಜೀತ್ ಸಿಂಗ್ ಸಹ ಮಾತನಾಡಿದ್ದು, ಇದನೆಲ್ಲಾ ಹೇಗೆ ಕಲಿತೆ? ಎಂದು ಕೇಳಿದ್ರೆ, ನನ್ನ ಚಿಕ್ಕಪ್ಪನೇ ನಂಗೆ ಗುರು. ಅವರು ಮಾಡುತ್ತಿದ್ದ ಟ್ರ್ಯಾಕ್ಟರ್ ಸ್ಟಂಟ್‌ಗಳು ನೋಡಿ ಕಲಿತಿರುವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಟಂಟ್ ಮಾಡುವುದಾಗಿ ಹೇಳಿಕೊಂಡಿದ್ದಾನೆ.

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ರತನ್‍‍ಜೀತ್ ಸಿಂಗ್ ಎಲ್‍ಕೆಜಿ ವ್ಯಾಸಾಂಗ ಮಾಡುತ್ತಿದ್ದಾಗಲೇ ಚಿಕ್ಕಪ್ಪ ಧನಂಜಯ್ ಮಾಡುತ್ತಿದ್ದ ಸ್ಟಂಟ್‍‍ಗಳನ್ನು ನೋಡಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದು, ರತನ್‍‍ಜೀತ್ ಸಿಂಗ್‍‍ನ ಟ್ರ್ಯಾಕ್ಟರ್ ಸ್ಟಂಟ್ ನೋಡಿ ಬೆರಗಾದ ಧನಂಜಯ್ ಅವರು ತಮ್ಮ ಅಣ್ಣನ ಮಗನಿಗೆ ಮತ್ತಷ್ಟು ಟಿಪ್ಸ್‌ಗಳನ್ನು ಹೇಳಿಕೊಡುತ್ತಿದ್ದಾರೆ.

ಯುವಕರಿಂದಲೂ ಸಾಧ್ಯವಾಗದ ಟ್ರ್ಯಾಕ್ಟರ್ ಸ್ಟಂಟ್‌ಗಳನ್ನು ಮಾಡುತ್ತಿರುವ ರತನ್‍‍ಜೀತ್ ಸಿಂಗ್ ಸಾಹಸದ ವೀಡಿಯೊ ಇಲ್ಲಿದೆ ವೀಕ್ಷಿಸಿ...

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಇನ್ನು ಟ್ಯಾಕ್ಟರ್ ಸ್ಟಂಟ್ ಮಾಡುವುದಲ್ಲದೆ ಆತನಿಗೆ ಸೆನ್ಸಾರ್‍‍ನಿಂದ ಚಲಿತವಾಗುವ ಟ್ರ್ಯಾಕ್ಟರ್ ಒಂದನ್ನು ತಯಾರಿಸಬೇಕೆಂಬ ಆಶಯವಿದ್ದು, ಜೊತೆಗೆ ಕಾರ್, ಜೆಸಿಬಿ ಮತ್ತು ಕಂಟೈನರ್‍‍‍ಗಳನ್ನು ಚಲಾಯಿಸುವ ನಿಪುಣತೆಯನ್ನು ಕೂಡಾ ಈತ ಪಡೆದಿದ್ದಾನೆ ಎಂದರೆ ನೀವು ನಂಬಲೇಬೇಕು.

Most Read Articles

Kannada
Read more on tractor four wheeler
English summary
10 year old performing stunts on tractor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more