ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

Written By:

ಕಳೆದ ಕೆಲವರ್ಷಗಳಿಂದ ಜಗತ್ತಿನಾದ್ಯಂತ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇಂಧನ ಮೂಲಗಳು ಬರಿದಾಗುತ್ತಾ ಬರುತ್ತಿವೆ. ಹೀಗಾಗಿ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಸಾಕಷ್ಟು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಹರಿಯಾಣದ 13 ವರ್ಷದ ಬಾಲಕನ ಮಾಡಿರುವ ವಿನೂತನ ಆವಿಷ್ಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ವಯಸ್ಸಿಗೂ ಮೀರಿದ ಸಾಧನೆ ಮಾಡಿರುವ ಹರಿಯಾಣದ ಅವನೀತ್ ಕುಮಾರ್(13), ಇಂಧನ ಬದಲಿಗೆ ಸೋಲಾರ್ ಶಕ್ತಿ ಬಳಸಿ ಬೈಕ್ ಚಾಲನೆ ಮಾಡಬುಹುದು ಎಂಬುವುದನ್ನು ತೊರಿಸಿಕೊಟ್ಟಿದ್ದಾನೆ. ಪುಟ್ಟದಾದ ಬೈಕ್ ನಿರ್ಮಿಸಿರೋ ಅವನೀತ್, ಬೈಕ್ ಹಿಂಭಾಗದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಬೈಕ್ ಹಿಂಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿಕೊಳ್ಳಲಾಗಿದ್ದು, ಸೋಲಾರ್ ಶಕ್ತಿ ಸಂಗ್ರಹಕ್ಕೆ ಪ್ರತ್ಯೇಕ ಬಾಕ್ಸ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಬಾಕ್ಸ್‌ನಲ್ಲಿ ಸಂಗ್ರಹವಾದ ಸೋಲಾರ್ ಶಕ್ತಿಯು ಬೈಕ್ ಎಂಜಿನ್‌ಗೆ ಪೂರೈಕೆಯಾಗುವ ವ್ಯವಸ್ಥೆ ಹೊಂದಿದೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಹರಿಯಾಣದ ರೇವಾರ್ ನಿವಾಸಿಯಾಗಿರುವ ಅವನೀತ್ ಕುಮಾರ್‌, ಸೋಲಾರ್ ಶಕ್ತಿ ಬಳಕೆಯ ಬೈಕ್ ನಿರ್ಮಾಣಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾನೆ. ಇದಕ್ಕಾಗಿ ಹತ್ತಾರು ತಿಂಗಳು ಪಯತ್ನ ನಡೆಸಿದ್ದ ಅವನೀತ್, ಆಟೋ ಮೊಬೈಲ್ ಪರಿಣಿತರ ಬಳಿ ಅಗತ್ಯ ಸಲಹೆ ಪಡೆದು ಅದ್ಭುತ ಬೈಕ್ ನಿರ್ಮಿಸಿದ್ದಾನೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಸೋಲಾರ್ ಮೂಲಕ ಚಾಲನಾ ಶಕ್ತಿ ಪಡೆದಿರುವ ಈ ವಿನೂತನ ಬೈಕ್ ಸಂಪೂರ್ಣ ಮಾಲಿನ್ಯ ರಹಿತ ವಾಹನವಾಗಿದೆ. ಇದರಿಂದ ಪರಿಸರಕ್ಕೂ ಯಾವುದೇ ಧಕ್ಕೆಯಾಗುದಿಲ್ಲ. ಜೊತೆಗೆ ಪರಿಸರ ಮಾಲಿನ್ಯ ತಡೆಯಲು ಇಂತಹ ಬೈಕ್ ನಿರ್ಮಾಣ ಅವಶ್ಯಕತೆ ಕೂಡಾ ಇದೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಸದ್ಯ ಅವನೀತ್ ನಿರ್ಮಿಸಿರೋ ಸೋಲಾರ್ ಬೈಕ್ ಕುರಿತು ಆಟೋ ಉದ್ಯಮ ವಲಯದಲ್ಲೂ ಭಾರೀ ಚರ್ಚೆ ನಡೆಯುತ್ತಿದ್ದು, ಇದು ಭವಿಷ್ಯದ ಬೈಕ್ ಮಾದರಿಯಾದರೂ ಅಚ್ಚರಿ ಪಡಬೇಕಿಲ್ಲ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಕೇವಲ ಬೈಕ್ ಅಷ್ಟೇ ಅಲ್ಲದೇ ಸೋಲಾರ್ ಶಕ್ತಿ ಬಳಸಿ ಕಾರು ಚಾಲನೆ ಮಾಡುವ ಬಗ್ಗೆಯೂ ಅವನೀತ್ ಹೊಸ ಆವಿಷ್ಕಾರ ನಡೆಸಿದ್ದಾನೆ. ಇದರಿಂದ ಅವನೀತ್ ಸಾಧನೆ ಬಗ್ಗೆ ಹರಿಯಾಣ ಸರ್ಕಾರ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಇನ್ನೊಂದು ಪ್ರಮುಖ ವಿಚಾರವೆಂದರೆ ಸೋಲಾರ್ ಬೈಕ್ ಉತ್ಪಾದನೆ ಮಾಡಿರುವ ಅವನೀತ್, ಮತ್ತೊಂದು ಬಹುದೊಡ್ಡ ಕನಸು ಹೊಂದಿದ್ದಾನೆ. ಸೋಲಾರ್ ಬಳಕೆ ಮಾಡಿ ಟಾಟಾ ನ್ಯಾನೋ ಕಾರ್‌ಗಿಂತಲೂ ಅಗ್ಗದ ಕಾರು ಉತ್ಪಾದಿಸುವ ಬಗ್ಗೆ ಸಂಶೋಧನೆ ನಡೆಸಿದ್ದಾನೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಸೋಲಾರ್ ಬೈಕ್ ನಿರ್ಮಾಣದ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತ್ತಿದ್ದಂತೆ, ಅವನೀತ್ ಸಾಧನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅಲ್ಲದೇ ಇಂತಹ ಪರಿಸರ ಸ್ನೇಹಿ ಬೈಕ್ ಉತ್ಪಾದನೆ ಬಗ್ಗೆ ಬೈಕ್ ಉತ್ಪಾದನಾ ಸಂಸ್ಥೆಗಳು ಗಮನಹರಿಸಲಿ ಎಂಬ ಅಭಿಪ್ರಾಯ ಹರಿದುಬರುತ್ತಿವೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಅಷ್ಟಕ್ಕೂ ಅವನೀತ್ ನಿರ್ಮಾಣ ಮಾಡಿರುವ ಸೋಲಾರ್ ಬೈಕ್ ಅನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ. ಇದರಿಂದ ಇಂಧನ ಉಳಿತಾಯವಾಗುವುದಲ್ಲದೇ ನಿಮ್ಮ ಜೇಬಿಗೂ ಕತ್ತರಿ ಬಿಳುವುದನ್ನು ಕೂಡಾ ಕಡಿಮೆ ಮಾಡಬಹುದು.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಸೋಲಾರ್ ಶಕ್ತಿ ಉಪಯೋಗಿಸಿ ಕಾರ್ ಮತ್ತು ಬೈಕ್ ಚಾಲನೆ ಬಗೆಗೆ ಈಗಾಗಲೇ ವಿಶ್ವಮಟ್ಟದಲ್ಲೂ ಸಾಕಷ್ಟು ಸಂಶೋಧನೆ ನಡೆಯುತ್ತಿವೆ. ಜೊತೆಗೆ ಕೆಲವು ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳು ಈ ವ್ಯವಸ್ಥೆಯನ್ನು ಈಗಾಗಲೇ ಅಳವಡಿಕೆ ಮಾಡಿಕೊಳ್ಳುತ್ತಿವೆ.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ವಯಸ್ಸಿಗೂ ಮೀರಿದ ಸಾಧನೆ ಮಾಡಿರುವ ಅವನೀತ್ ವಿನೂತನ ಆವಿಷ್ಕಾರವು ಆಟೋ ಉದ್ಯಮಕ್ಕೆ ಹೊಸ ಆಯಾಮ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೊತೆಗೆ ಮುಂಬರುವ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿಗಳಿಗೆ ಭಾರೀ ಬೇಡಿಕೆ ಬರಲಿದ್ದು, ಅವನೀತ್ ಮಾಡಿದ ಆವಿಷ್ಕಾರ ಇನ್ನಷ್ಟು ಜನಪ್ರಿಯತೆ ಪಡೆಯುವುದು ಶತಸಿದ್ಧ ಎಂದರೇ ತಪ್ಪಾಗಲಾರದು.

ಸೋಲಾರ್ ಬಳಸಿ ಬೈಕ್ ಓಡಿಸಿದ 13ರ ಪೋರ..!!

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಕವಾಸಕಿ ನಿಂಜಾ 300ಎಬಿಎಸ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
A 13-year old boy from Haryana has built a bike running on solar energy. The solar panels attached on the back of the bike powers the bike.
Story first published: Monday, April 3, 2017, 13:00 [IST]
Please Wait while comments are loading...

Latest Photos