Just In
- 1 hr ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 2 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 3 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 3 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
15 ಸಾವಿರ ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ರಸ್ತೆಗಿಳಿದ ವಿಶ್ವದ ಅತಿದೊಡ್ಡ ಮಾಡಿಫೈ ಎಸ್‌ಯುವಿ ಕಾರು
ನೀವು ಇಂತಹ ಕಾರನ್ನು ಈ ಹಿಂದೆ ನೋಡುವುದಿರಲಿ ಮನಸ್ಸಿನಲ್ಲಿ ಉಹೆ ಕೂಡಾ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತೆ. ಯಾಕೆಂದ್ರೆ ಇದು ಅಂತಿಲ್ಲ ಕಾರು ಅಲ್ಲವೇ ಅಲ್ಲ. ದೈತ್ಯಾಕಾರದ ವಿನ್ಯಾಸವನ್ನು ಹೊಂದಿರುವ ಈ ಮಾಡಿಫೈ ಕಾರಿನ ವಿಶೇಷತೆಗಳ ಬಗೆಗೆ ಎಷ್ಟು ಹೇಳಿದರೂ ಸಾಲದು.

ಹೌದು, ವಾಹನ ಉದ್ಯಮದಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳು ಉತ್ಪಾದನೆಯಾಗುತ್ತಿರುವುದಲ್ಲದೇ ವಾಹನಗಳ ಮಾಡಿಫೈ ಕ್ಷೇತ್ರದಲ್ಲೂ ಕೂಡಾ ಕ್ರಾಂತಿಕಾರಿ ಬೆಳವಣಿಗೆಗಳಾಗುತ್ತಿವೆ. ಹೊಸ ಕಾರುಗಳ ಉತ್ಪಾದನೆಗಿಂತಲೂ ಮಾಡಿಫೈ ಕ್ಷೇತ್ರವು ತನ್ನದೇ ಆದ ವೇಗದಲ್ಲಿ ಸಾಗುತ್ತಿದ್ದು, ಇದಕ್ಕೆ ತಾಜಾ ಉದಾಹರಣೆ ಅಂದ್ರೆ ನೀವು ಈ ಹಿಂದೆಂದೂ ನೋಡಿರದ ಮಾಡಿಫೈ ಕಾರೊಂದು ನಿಮಗೆ ಅಚ್ಚರಿ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾಡಿಫೈ ವಾಹನಗಳ ಬಗೆಗೆ ಯುವಜನತೆಯಲ್ಲಿ ಕ್ರೇಜ್ ಇದ್ದೆ ಇರುತ್ತೆ. ಸಾಮಾನ್ಯ ಬೈಕ್ ಎಂಜಿನ್‌ನಿಂದ ಸೂಪರ್ ಬೈಕ್‌ಗಳನ್ನಾಗಿ ಡಿಸೈನ್ ಮಾಡಿಸುವುದು, ಕಾರಿನ ಎಂಜಿನ್ ಬಳಸಿ ಕ್ರೂಸರ್ ಬೈಕ್ ತಯಾರಿಸುವುದು ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗುತ್ತಿದೆ. ಆದ್ರೆ ಇಲ್ಲೊಬ್ಬ ದುಬೈ ಶೇಕ್ ನಿರ್ಮಾಣ ಮಾಡಿರುವ ಮಾಡಿಫೈ ಎಸ್‌ಯುವಿಯೊಂದು ಸದ್ಯ ಹಲವು ವಿಶ್ವ ದಾಖಲೆಗಳಿಗೆ ಕಾರಣವಾಗಿದೆ.

ಅಂದಹಾಗೆ ಈ ಕಾರು ಸದ್ಯ ವಿಶ್ವದ ಅತಿದೊಡ್ಡ ಎಸ್‌ಯುವಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಬರೋಬ್ಬರಿ ಹತ್ತು ಚಕ್ರಗಳನ್ನು ಹೊಂದಿರುವುದಲ್ಲದೇ 24 ಟನ್ ತೂಕದೊಂದಿಗೆ ಹಲವು ಮಾಡಿಫೈ ಕಾರುಗಳ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ದುಬೈ ಮೂಲದ ಶೇಖ್ ಹಮಾದ್ ಬಿನ್ ಹಮಾದನ್ ಅಲ್ ನಹಾಯನ್ ಎಂಬಾತನೇ ಈ ಕಾರಿನ ಮಾಲೀಕನಾಗಿದ್ದು, ಅಬುದಾಬಿಯ ರಾಜಮನೆತನದ ಸದಸ್ಯನಾಗಿರುವ ಈತ ತನ್ನ 10 ವರ್ಷದ ಹಿಂದಿನ ಕನಸನ್ನು ಇದೀಗ ನನಸಾಗಿಸಿಕೊಂಡಿದ್ದಾನೆ.

ಮೊದಲೇ ರಾಜಮನೆತನದ ಹಿನ್ನೆಲೆಯಲ್ಲಿ ಹೊಂದಿರುವ ಶೇಖ್ ಹಮಾದ್ ಬಳಿ ಹತ್ತಾರು ಬಗೆಯ 50ಕ್ಕೂ ಐಷಾರಾಮಿ ಕಾರುಗಳ ಸಂಗ್ರವಿದ್ದು, ದುಬೈ ಮರಳುಗಾಡಿನಲ್ಲಿ ಅವುಗಳನ್ನು ಓಡಿಸುವುದೇ ಒಂದು ಕ್ರೇಜ್.

ದುಬೈನಲ್ಲಿ ಮಾಡಿಫೈ ವಾಹನಗಳಿಗೆ ಇರುವಷ್ಟು ಬೆಲೆ ಹೊಸ ಕಾರುಗಳಿಗೂ ಇರುವುದಿಲ್ಲ ಎಂದ್ರೆ ತಪ್ಪಾಗುವುದಿಲ್ಲ. ಇದೇ ಕಾರಣಕ್ಕೆ ಶೇಖ್ ಹಮಾದ್ ಕೂಡಾ ವಿಶ್ವದಲ್ಲೇ ಅತಿ ವಿನೂತನವಾದ ಮಾಡಿಫೈ ಎಸ್‌ಯುವಿ ಒಂದನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಈ ಕಾರನ್ನು ಸಿದ್ದಪಡಿಸಿದ್ದಾನೆ.

ಇನ್ನೊಂದು ವಿಶೇಷ ಅಂದ್ರೆ, ಈ ಮಾಡಿಫೈ ಕಾರು ನಿರ್ಮಾಣ ಮಾಡಲು ಅಮೆರಿಕದ ಜನಪ್ರಿಯ ಮಿಲಟರಿ ಟ್ರಕ್ ಓಶಾಕೊಶ್ ಬಾಡಿ ಎರವಲು ಪಡೆಯಲಾಗಿದ್ದು, ಜೀಪ್ ರ‍್ಯಾಂಗ್ಲರ್ ಮತ್ತು ಫೋರ್ಡ್ ಸೂಪರ್ ಡ್ಯೂಟಿ ಟ್ರಕ್‌ನಿಂದಲೂ ಕೆಲವು ಸ್ಪೋರ್ಟಿ ಲುಕ್ ಬೀಡಿಭಾಗಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಸದ್ಯ ವಿಶ್ವದ ಶ್ರೇಷ್ಠ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಹೊಸ ಕಾರಿಗೆ 'ಧಾಬಿಯಾನ್' ಎಂದು ಕರೆಯಲಾಗಿದ್ದು, 10.8 ಮೀಟರ್ ಉದ್ದ, 3.2-ಮೀಟರ್ ಎತ್ತರ ಮತ್ತು 2.5-ಮೀಟರ್ ಅಗಲವಾಗಿರುವ ಈ ಕಾರು ಬರೋಬ್ಬರಿ 24 ಟನ್ ತೂಕ ಹೊಂದಿದೆ.

ಎಂಜಿನ್ ಸಾಮರ್ಥ್ಯ
ಓಶಾಕೊಶ್ ಮಿಲಟರಿ ಟ್ರಕ್ ಎಂಜಿನ್ ಮಾದರಿಯನ್ನೇ ಹೊಂದಿರುವ ಧಾಬಿಯಾನ್ ಕಾರು 15.2-ಲೀಟರ್ (15,200 ಸಿಸಿ), 6-ಸಿಲಿಂಡರ್ ಇನ್‌ಲೈನ್ ವಾಟರ್ ಕೂಲ್ಡ್ ಡೀಸೆಲ್ ಎಂಜಿನ್ ಪಡೆದಿದ್ದು, ಅತಿ ಕಠಿಣ ಭೂಪ್ರದೇಶಗಳಲ್ಲೂ ಇದು ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೀಗಾಗಿ ವಿಶ್ವದಲ್ಲೇ ಅತಿ ವಿಭಿನ್ನ ಎನ್ನಿಸುವ ಧಾಬಿಯಾನ್ ಕಾರು ವಾಹನ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಸದ್ಯಕ್ಕೆ ಇದನ್ನು ಅಬುಧಾಬಿಯಲ್ಲಿ ಎಮಿರೇಟ್ಸ್ ನ್ಯಾಷನಲ್ ಆಟೋ ಮ್ಯೂಜಿಯಂನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿದೆ. ಆದ್ರೆ ಕಾರಿನ ನಿರ್ಮಾಣಕ್ಕೆ ಮಾಡಲಾದ ಖರ್ಚು ವೆಚ್ಚಗಳ ಬಗೆಗೆ ಯಾವುದೇ ಹೆಚ್ಚಿನ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ.
Source: shhamadbinhamdan