ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಬೈಕ್ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಬಾಲಿವುಡ್ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಹೀಗಾಗಿ ಅತಿ ದುಬಾರಿ ಮತ್ತು ಐಷಾರಾಮಿ ಬೈಕುಗಳನ್ನು ಬಾಲಿವುಡ್ ನಟರು ಖರೀದಿಸುತ್ತಲೇ ಇರುತ್ತಾರೆ.

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇತ್ತೀಚೆಗೆ ಬಾಲಿವುಡ್ ಜನಪ್ರಿಯ ನಟ ಶಾಹಿಡ್ ಕಪೂರ್ ಅವರು ತಮ್ಮ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ರೈಡ್ ಮಾಡುವ ವೇಳೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಜನಪ್ರಿಯ ನಟ ಶಾಹಿಡ್ ಕಪೂರ್ ಅವರ ಬಳಿ ಹಲವಾರು ದುಬಾರಿ ಬೈಕ್ ಮತ್ತು ಕಾರುಗಳಿವೆ. ಇವರು ತನ್ನ ಚಿಕ್ಕ ವಯಸ್ಸಿನಲ್ಲೇ ಫಿಲ್ಮಫೇರ್‌ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಯಂಗ್‌ ಸ್ಟಾರ್‌. ಹಲವು ಸೂಪರ್ ಹಿಟ್ ಬಾಲಿವುಡ್ ಚಿತ್ರಗಳಲ್ಲಿ ನಾಯಕ ನಟನಾಗಿ ಇವರು ನಟಿಸಿದ್ದಾರೆ.

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ನಟ ಶಾಹಿದ್ ಕಪೂರ್ ಬಳಿ ​ಮರ್ಸಿಡಿಸ್ -ಎಎಂಜಿ ಎಸ್‌400, ​ಮರ್ಸಿಡಿಸ್ ಬೆಂಜ್ ಜಿಎಲ್‌ - ಕ್ಲಾಸ್‌ ಎಸ್‌ಯುವಿ​ ಮರ್ಸಿಡಿಸ್ ಬೆಂಝ್ ಎಂಎಲ್‌-ಕ್ಲಾಸ್, ​​ರೇಂಜ್‌ ರೋವರ್‌ ವೋಗ್‌ ಎಸ್‌ಯುವಿ, ಪೋರ್ಷೆ ಕಯೆನ್ನೆ ಜಿಟಿಎಸ್‌ ಮತ್ತು ಜಾಗ್ವಾರ್‌ ಎಕ್ಸ್‌ಕೆಆರ್‌-ಎಸ್‌ ನಂತರ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅದೇ ರೀತಿ ಹಾರ್ಲೆ ಡೇವಿಡ್ಸನ್‌ ಫ್ಯಾಟ್‌ಬಾಯ್‌, ಯಮಹಾ ಎಂಟಿ 01 ಮತ್ತು ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಅನ್ನು ಹೊಂದಿದ್ದಾರೆ. ನಟ ಶಾಹಿದ್ ಕಪೂರ್ ಅವರಿಗೆ ಬೈಕ್ ರೈಡಿಂಗ್ ಕ್ರೇಜ್ ಹೆಚ್ಚಿದೆ. ಅವರು ಇತ್ತೀಚೆಗೆ ತಮ್ಮ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ರೈಡ್ ಮಾಡಿದ್ದಾರೆ.

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇನ್ನು ಡುಕಾಟಿ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿತ್ತು. ಈ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕನ್ನು ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿತ್ತು.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.95 ಲಕ್ಷಗಳಾಗಿದರೆ, ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕಿನ ಬೆಲೆಯು ರೂ.13.74 ಲಕ್ಷಗಳಾಗಿದೆ.

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಸ್ಕ್ರ್ಯಾಂಬ್ಲರ್ 1100 ಪ್ರೊ ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ. ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳು ಓಷನ್ ಡ್ರೈವ್' ಎಂಬ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿದೆ. ಇನ್ನು ಈ ಬೈಕುಗಳ ಬಲಭಾಗದಲ್ಲಿ ಹೊಸ ಡ್ಯುಯಲ್ ಟೈಲ್-ಪೈಪ್, ಹೊಸ ನಂಬರ್ ಪ್ಲೇಟ್ ಹೋಲ್ಡರ್ ಮತ್ತು ಹೊಸ ಲಿವರಿ ಅನ್ನು ಪಡೆದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಈ ಎರಡು ಬೈಕುಗಳಲ್ಲಿ ಹೆಡ್‌ಲ್ಯಾಂಪ್‌ನಲ್ಲಿ ಬ್ಲ್ಯಾಕ್ ಮೆಟಲ್ 'ಎಕ್ಸ್' ರೂಪದಲ್ಲಿ ರೆಟ್ರೊ ಟಚ್ ಅನ್ನು ನೀಡಿದೆ. ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳಲ್ಲಿ 1079 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಐಷಾರಾಮಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇನ್ನು ಹೊಸ ಡುಕಾಟಿ ಬೈಕುಗಳಲ್ಲಿ ಬ್ರೇಕಿಂಗ್ ಸಿಸ್ಟಂ ಒಂದೇ ರೀತಿಯಲ್ಲಿದೆ. ಇದು 320 ಎಂಎಂ ಡಿಸ್ಕ್‌ಗಳನ್ನು ಬ್ರೆಂಬೊ ಎಂ 4.32 ಮೊನೊಬ್ಲೋಕ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ 245 ಎಂಎಂ ರೋಟರ್ ಅನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್ ಅನ್ನು ಒಳಗೊಂಡಿದೆ.

Most Read Articles

Kannada
English summary
Shahid Kapoor Riding Scrambler 1100. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X